Entertainment News in Kannada Live January 8, 2025: Thurrraaa Song: ಮನದ ಕಡಲು ಸಿನಿಮಾ ತುರ್ರಾ ಹಾಡು ಬಿಡುಗಡೆ; ಯೋಗರಾಜ್ ಭಟ್ಟರ ಶೈಲಿಯಲ್ಲೇ ಇದೆ ಮಜವಾದ ಹಾಡು
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 08 Jan 202512:05 PM IST
- ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರ ‘ಮನದ ಕಡಲು’ ತುರ್ರಾ ಹಾಡು ಬಿಡುಗಡೆ ಮಾಡಿದೆ. ಈ ಹಾಡಿನ ಸಾಹಿತ್ಯ ಕೇಳಿದವರು ಯೋಗರಾಜ್ ಭಟ್‌ರ ಶೈಲಿ ಇದರಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ. ಹಾಡನ್ನು ಅರ್ಥ ಮಾಡಿಕೊಳ್ಳುವುದು ಒಂದು ಸಾಹಸವೇ ಎಂಬಂತೆ ಸಾಹಿತ್ಯವಿದೆ.
Wed, 08 Jan 202510:53 AM IST
- ಸಂದರ್ಶನ-ಪದ್ಮಶ್ರೀ ಭಟ್: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ಮಾನಸಾ ಮನೋಹರ್ ಸಂದರ್ಶನದಲ್ಲಿ ತಮ್ಮ ದಾಂಪತ್ಯದ ಬಗ್ಗೆ ಕೆಲವು ವಿಷಯ ಹಂಚಿಕೊಂಡಿದ್ದಾರೆ. ನಮ್ಮ ಕತೆಯನ್ನು ಸಿನಿಮಾ ಮಾಡಿದ್ರೆ ಮೆನಿಫೆಸ್ಟೇಷನ್ ಅಂತ ಹೆಸರಬೇಕು ಎಂದಿದ್ದಾರೆ.
Wed, 08 Jan 202507:39 AM IST
- Annayya Serial: ಶಿವು ಪ್ರೀತಿ ಮಾಡ್ತಾ ಇರೋದು ತನ್ನನ್ನೇ ಎಂದು ಅರ್ಥ ಮಾಡಿಕೊಂಡ ಪಾರು, ಅವನ ಬಾಯಿಂದಲೇ ಅವಳ ಪ್ರಶ್ನೆಗೆ ಉತ್ತರ ಬಯಸುತ್ತಿದ್ದಾಳೆ. ಆದರೆ ಶಿವು ಮಾತ್ರ ಪಾರು ಕೇಳಿದ ಪ್ರಶ್ನೆಗೆ ತತ್ತರಿಸಿ ಹೋಗಿದ್ದಾನೆ. ಉತ್ತರಿಸದೆ ಸುಮ್ಮನೆ ಮೌನವಾಗಿದ್ದಾನೆ.
Wed, 08 Jan 202507:34 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 7ರ ಎಪಿಸೋಡ್‌ನಲ್ಲಿ ಅಜ್ಜಿಯನ್ನು ನೋಡಲು ಸಿದ್ದೇಗೌಡ ಜೊತೆ ಭಾವನಾ ಆಸ್ಪತ್ರೆಗೆ ಹೋಗುವಾಗ ರೇಣುಕಾ ತಡೆಯುತ್ತಾಳೆ. ತಾಯಿ ವರ್ತನೆಗೆ ಬೇಸರಗೊಂಡ ಸಿದ್ದೇಗೌಡ, ರೇಣುಕಾ ಮಾತನ್ನು ಕೇಳದೆ ಭಾವನಾಳನ್ನು ಕರೆದೊಯ್ಯುತ್ತಾನೆ.
Wed, 08 Jan 202505:50 AM IST
- Rachita Ram: ರಚಿತಾ ರಾಮ್ ತಾವು ಹಿಂದೆ ಪಡೆಯುತ್ತಿದ್ದ ಸಂಭಾವನೆ ಹಾಗೂ ಈಗ ಪಡೆಯುತ್ತಿರುವ ಸಂಭಾವನೆಯ ಬಗ್ಗೆ ಮಾತಾಡುತ್ತಾ. ಒಂದು ದಿನ ಕಷ್ಟ ಅಂತ ಬಂದ್ರೆ ದೇವಸ್ಥಾನದ ಪ್ರಸಾದ ಬೇಕಾದ್ರೂ ತಿಂದು ಬದುಕುವೆ, ಯಾರ ಜತೆಗೂ ಹೋಗಿ ಇರೋದಿಲ್ಲ ಎಂದಿದ್ದಾರೆ.
Wed, 08 Jan 202505:18 AM IST
Wed, 08 Jan 202505:07 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 7ರ ಎಪಿಸೋಡ್‌ನಲ್ಲಿ ಕುಸುಮಾ ಬಗ್ಗೆ ಶ್ರೇಷ್ಠಾ ಹೇಳಿದ ದೂರು ಕೇಳಿ ತಾಂಡವ್ ಕೋಪಗೊಳ್ಳುತ್ತಾನೆ. ಮೊದಲೇ ಭಾಗ್ಯಾ ವಿಚಾರಕ್ಕೆ ಸಿಟ್ಟಾಗಿರುವ ತಾಂಡವ್, ನೀನು ಈ ಮನೆ ಸೊಸೆಯಾಗಬೇಕೆಂದರೆ ಅಮ್ಮ ಹೇಳಿದ ಎಲ್ಲಾ ಕೆಲಸ ಮಾಡಲೇಬೇಕು ಎಂದು ಕಂಡಿಷನ್ ಮಾಡುತ್ತಾನೆ.
Wed, 08 Jan 202504:02 AM IST
- ‘ಪುಷ್ಪ 2’ ಚಿತ್ರವು ಬರೀ ತೆಲುಗು ಚಿತ್ರರಂಗವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಹಲವು ಹಿಂದಿನ ದಾಖಲೆಗಳನ್ನು ಪುಡಿ ಮಾಡಿರುವುದಷ್ಟೇ ಅಲ್ಲ, ಹೊಸ ದಾಖಲೆಗಳನ್ನು ಹುಟ್ಟುಹಾಕಿದೆ. ಇಷ್ಟಕ್ಕೂ ಅಂಥದ್ದೇನು ಮಾಡಿದೆ ‘ಪುಷ್ಪ 2’. ಸುಕುಮಾರ್ ನಿರ್ದೇಶನದ ಈ ಚಿತ್ರ ಮಾಡಿದ ಐದು ಹೊಸ ದಾಖಲೆಗಳನ್ನು ಒಮ್ಮೆ ನೋಡಿಕೊಂಡು ಬರೋಣ ಇಂದಿನ ಸಿನಿ ಸ್ಮೃತಿ ಅಂಕಣದಲ್ಲಿ.