ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live January 9, 2025: ಟಿಆರ್‌ಪಿಯಲ್ಲಿ ಗೂಳಿಯಂತೆ ನುಗ್ಗಿದ ಅಮೃತಧಾರೆ, ಅಣ್ಣಯ್ಯನ ಓಟವೂ ಸಣ್ಣದೇನಲ್ಲ; ರೇಸ್‌ನಿಂದ ಹಿಂದೆ ಸರಿದ ಲಕ್ಷ್ಮೀ ನಿವಾಸ ಧಾರಾವಾಹಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 09 Jan 202503:12 PM IST
ಮನರಂಜನೆ News in Kannada Live:ಟಿಆರ್‌ಪಿಯಲ್ಲಿ ಗೂಳಿಯಂತೆ ನುಗ್ಗಿದ ಅಮೃತಧಾರೆ, ಅಣ್ಣಯ್ಯನ ಓಟವೂ ಸಣ್ಣದೇನಲ್ಲ; ರೇಸ್‌ನಿಂದ ಹಿಂದೆ ಸರಿದ ಲಕ್ಷ್ಮೀ ನಿವಾಸ ಧಾರಾವಾಹಿ
- Kannada Serial TRP: ಕನ್ನಡದ ಕಿರುತೆರೆಯಲ್ಲಿ 53ನೇ ವಾರದ ಟಿಆರ್‌ಪಿ ರೇಟಿಂಗ್ ಹೊರಬಿದ್ದಿದೆ. ಈ ಸಲ ಘಟಾನುಘಟಿ ಧಾರಾವಾಹಿಗಳೇ ರೇಸ್‌ನಿಂದ ಹಿಂದೆ ಸರಿದಿವೆ. ಅಗ್ರಸ್ಥಾನದಲ್ಲಿ ಇರುತ್ತಿದ್ದ ಲಕ್ಷ್ಮೀ ನಿವಾಸ ಸೀರಿಯಲ್ ಕುಸಿತ ಕಂಡರೆ, ಅಮೃತಧಾರೆ ಪುಟಿದೆದ್ದಿದೆ. ಬಿಗ್ ಬಾಸ್ ಹೇಗಿದೆ, ಸರಿಗಮಪ ಟಿಆರ್‌ಪಿ ಎಷ್ಟಿದೆ? ಇಲ್ಲಿದೆ ವಿವರ.
Thu, 09 Jan 202501:32 PM IST
ಮನರಂಜನೆ News in Kannada Live:Friday Release: ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಿವು, ಶರಣ್ ಛೂ ಮಂತರ್‌ನಿಂದ ರಾಮ್ ಚರಣ್ ಗೇಮ್ ಚೇಂಜರ್‌ವರೆಗೆ
- Friday Release Movies: ಈ ವಾರ ಮೂರು ಕನ್ನಡದ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಅದರೊಟ್ಟಿಗೆ ಗೇಮ್ ಚೇಂಜರ್ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಬಗ್ಗೆ ಜನರು ಹೆಚ್ಚು ಕುತೂಹಲ ಇಟ್ಟುಕೊಂಡಿದ್ದಾರೆ.
Thu, 09 Jan 202501:09 PM IST
ಮನರಂಜನೆ News in Kannada Live:Actor Kishore: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿ, ಮಾರ್ಚ್ 1-8ಕ್ಕೆ ಚಿತ್ರೋತ್ಸವ
- BIFFES: ಬೆಂಗಳೂರಿನಲ್ಲಿ 2025ರ ಮಾರ್ಚ್ 1 ರಿಂದ 8ರವರೆಗೆ ನಡೆಯಲಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ದಕ್ಷಿಣ ಭಾರತ ಹಾಗೂ ಕನ್ನಡದ ಜನಪ್ರಿಯ ನಟ ಕಿಶೋರ್ ನೇಮಕಗೊಂಡಿದ್ದಾರೆ.
Thu, 09 Jan 202512:30 PM IST
ಮನರಂಜನೆ News in Kannada Live:Pushpa 2: ಪುಷ್ಪ 2 ಸಿನಿಮಾಕ್ಕೆ ಹೊಸ ದೃಶ್ಯ ವೈಭವಗಳ ಸೇರ್ಪಡೆ, ಅಲ್ಲು ಅರ್ಜುನ್ ನಟನೆಯ ಸಿನಿಮಾ ಮರುಬಿಡುಗಡೆ
- ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಸಿನಿಮಾ ಎಲ್ಲೆಡೆ ಸುದ್ದಿಯಲ್ಲಿದೆ. ಅಷ್ಟೇ ಅಲ್ಲ, ತನ್ನ ಕಲೆಕ್ಷನ್ ವಿಚಾರವಾಗಿ ಹಲವು ದಾಖಲೆಗಳನ್ನು ಪುಡಿಗಟ್ಟಿದೆ. ಹೀಗಿರುವಾಗ ಇನ್ನೂ 20 ನಿಮಿಷ ಹೆಚ್ಚುವರಿ ದೃಶ್ಯ ಸೇರ್ಪಡೆಯೊಂದಿಗೆ ಸಿನಿಮಾ ಮತ್ತೆ ಬಿಡುಗಡೆಯಾಗಲಿದೆ.
Thu, 09 Jan 202511:48 AM IST
ಮನರಂಜನೆ News in Kannada Live:ನಾಲ್ಕು ವಾರಗಳ ಕಾಲ ಒಟಿಟಿ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಸಿನಿಮಾ ಇದು; ಈ ಒಟಿಟಿಯಲ್ಲಿ ವೀಕ್ಷಿಸಿ ‘ಡಿಸ್ಲ್ಯಾಚ್’
ಒಟಿಟಿ ಕ್ರೈಮ್ ಥ್ರಿಲ್ಲರ್: ಮನೋಜ್ ಬಾಜಪೇಯಿ ಅಭಿನಯದ 'ಡಿಸ್ಪ್ಯಾಚ್' ಸಿನಿಮಾ ಬಿಡುಗಡೆಯಾಗಿ ಈಗ ಒಟಿಟಿಗೂ ಆಗಮನಿಸಿದೆ. ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಯಾವ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎಂಬ ಮಾಹಿತಿಗಾಗಿ ಪೂರ್ತಿ ಓದಿ.
Thu, 09 Jan 202509:51 AM IST
ಮನರಂಜನೆ News in Kannada Live:ಚಂದನವನದ ತಾರೆಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು ‘ಛೂ ಮಂತರ್’ ಪ್ರೀ ರಿಲೀಸ್ ಕಾರ್ಯಕ್ರಮ; ನಾಳೆಯೇ ಸಿನಿಮಾ ಬಿಡುಗಡೆ
- ಶರಣ್ ಅಭಿನಯದ ಚಿತ್ರ ‘ಛೂಮಂತರ್’ ನಾಳೆ ಜನವರಿ 10ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಈಗಾಗಲೇ ನಡೆದಿದ್ದು ಶರಣ್ ಸಿನಿಮಾ ಹಾಗೂ ಚಿತ್ರತಂಡದ ಬಗ್ಗೆ ಮಾತನಾಡಿದ್ದಾರೆ.
Thu, 09 Jan 202509:28 AM IST
ಮನರಂಜನೆ News in Kannada Live:ಬಿಗ್‌ಬಾಸ್ ಫಿನಾಲೆ ಟಿಕೆಟ್‌ಗೆ ಹರಕೆಯ ಕುರಿ ಆದ್ರಾ ಧನರಾಜ್? ಧನು ಗೌತಮಿಗಿಂತ ವೀಕಾ ಎಂದು ಪ್ರಶ್ನಿಸಿದ ರಜತ್
- Bigg Boss Kannada 11: ಬಿಗ್‌ಬಾಸ್ ಕನ್ನಡ ಸೀಸನ್ 11ರ ಇಂದಿನ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಫಿನಾಲೆ ಟಿಕೆಟ್ ಆಟದಲ್ಲಿ ಉಳಿದವರು ಧನರಾಜ್‌ರನ್ನು ಹರಕೆಯ ಕುರಿ ಮಾಡಿರುವುದನ್ನು ಈ ಪ್ರಮೋದಲ್ಲಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ ಗೌತಮಿ ಮತ್ತು ಮಂಜು ಬಗ್ಗೆಯೂ ಚರ್ಚೆಯಾಗಿರುವುದು ಪ್ರೊಮೊದಲ್ಲಿ ಕಾಣಿಸಿದೆ.
Thu, 09 Jan 202507:41 AM IST
ಮನರಂಜನೆ News in Kannada Live:‘ಸಂಜು ವೆಡ್ಸ್ ಗೀತಾ 2’ ಜ 10ರಂದು ಬಿಡುಗಡೆಯಾಗೋದು ಅನುಮಾನ; ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟನೆಯ ಸಿನಿಮಾಕ್ಕೆ ಸಂಕಷ್ಟ
- ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ ' ಸಂಜು ವೆಡ್ಸ್ ಗೀತಾ 2" ಜನವರಿ 10 ಅಂದರೆ ನಾಳೆ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಈ ಸಿನಿಮಾ ಬಿಡುಗಡೆ ಆಗುತ್ತಾ? ಇಲ್ವಾ? ಎಂಬ ಪ್ರಶ್ನೆ ಮೂಡಿದೆ.
Thu, 09 Jan 202506:19 AM IST
ಮನರಂಜನೆ News in Kannada Live:Annayya Serial: ಹೆಣ್ಣಿನ ಮಹತ್ವ ತಿಳಿಸಿದ ಅಣ್ಣಯ್ಯನ ಒಳ್ಳೆ ಮನಸ್ಸಿಗೆ ಕರಗಿ ಹೋದ ಪಾರು; ಶಿವು ಬದುಕಲ್ಲಿ ಚಿಗುರೊಡೆಯುತಿದೆ ಪ್ರೀತಿ
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ನ್ಯಾಯ ಪಂಚಾಯ್ತಿ ನಡೆಯುತ್ತಿದೆ. ವೀರಭದ್ರನ ಎದುರೇ ಅಣ್ಣಯ್ಯ ತುಂಬಾ ಮಾತಾಡಿದ್ದಾನೆ. ಪಾರು ಕೂಡ ಶಿವು ಪಕ್ಕದಲ್ಲೇ ನಿಂತಿದ್ದಾಳೆ. ಹೆಣ್ಣಿನ ಮಹತ್ವದ ಬಗ್ಗೆ ಶಿವು ಮಾತನಾಡಿದ್ದಾನೆ.
Thu, 09 Jan 202504:53 AM IST
ಮನರಂಜನೆ News in Kannada Live:Seetha Rama Serial: ಸಿಹಿಯ ಹೊಸ ಲೋಕಕ್ಕೆ ಸುಬ್ಬಿಯ ಪದಾರ್ಪಣೆ; ಕಿಲಾಡಿ ಜೋಡಿಯೀಗ ಬೆಸ್ಟ್ ಫ್ರೆಂಡ್ಸ್
- Seetha Rama Serial Today Episode: ಜೀ ಕನ್ನಡದ ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಸಿಹಿ ಮತ್ತು ಸುಬ್ಬಿ ಒಂದಾಗಿದ್ದಾರೆ. ಯಾರಿಗೂ ಕಾಣದ ಸಿಹಿ, ಸುಬ್ಬಿಗೆ ಮಾತ್ರ ಕಾಣಿಸುತ್ತಿರುವುದು, ಆಕೆಗೂ ಅಚ್ಚರಿ ತಂದಿದೆ. ಇದರ ಜತೆಗೆ ನಾವಿಬ್ಬರೂ ಫ್ರೆಂಡ್ಸ್ ಆಗೋಣ್ವಾ ಎಂದ ಸಿಹಿ, ಸುಬ್ಬಿಯತ್ತ ಕೈ ಚಾಚಿದ್ದಾಳೆ. ಸುಬ್ಬಿಯೂ ಅಳುಕಿನಲ್ಲಿಯೇ ಸಿಹಿಯತ್ತ ಕೈವೊಡ್ಡಿದ್ದಾಳೆ.
Thu, 09 Jan 202504:38 AM IST
ಮನರಂಜನೆ News in Kannada Live:Amruthadhaare: ಹೆತ್ತವರಲ್ಲಿ ಒರಟಾಗಿ ಮಾತನಾಡಿದ ಅಪೇಕ್ಷಾಗೆ ಗೌತಮ್ ಮಾತಿನೇಟು, ಜೀವನ್-ಮಹಿಮಾ ಗೃಹ ಪ್ರವೇಶ- ಅಮೃತಧಾರೆ ಇಂದಿನ ಕಥೆ
- Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಕೆಲವೊಂದು ಬೆಳವಣಿಗೆಗಳು ನಡೆದಿವೆ. ವಿಶೇಷವಾಗಿ ಹೆತ್ತವರಲ್ಲಿ ಒರಟಾಗಿ ಮಾತನಾಡಿದ ಅಪೇಕ್ಷಾಗೆ ಗೌತಮ್ ದಿವಾನ್ ಕಣ್ತೇರೆಸುವ ಪ್ರಯತ್ನ ಮಾಡಿದ್ದಾರೆ.
Thu, 09 Jan 202503:25 AM IST
ಮನರಂಜನೆ News in Kannada Live:ಶ್ರಾವಣಿ–ಸುಬ್ಬು ಜೊತೆ ದೇವಸ್ಥಾನಕ್ಕೆ ಹೊರಟ ಅಜ್ಜಿ; ಫಾರ್ಮ್‌ಹೌಸ್‌ನಲ್ಲಿದ್ದ ವ್ಯಕ್ತಿ ಮುಂದೆ ವಿಜಯಾಂಬಿಕಾ ದರ್ಪ; ಶ್ರಾವಣಿ ಸುಬ್ರಹ್ಮಣ್ಯ
- ಕೆಲಸದ ನಿಮಿತ್ತ ಮನೆಯಿಂದ ಹೊರ ಹೊರಟ ಮಿನಿಸ್ಟರ್ ವೀರೇಂದ್ರ. ಸುಬ್ಬು ಹಾಗೂ ಶ್ರಾವಣಿಯನ್ನು ಹರಕೆ ತೀರಿಸಲು ದೇವಸ್ಥಾನಕ್ಕೆ ಕರೆ ತಂದ ಅಜ್ಜಿ. ಶ್ರಾವಣಿಗೆ ಮದುವೆಗೆ ಹೇಳದಂತೆ ಶ್ರೀವಲ್ಲಿಯನ್ನು ತಡೆದ ವಿಶಾಲಾಕ್ಷಿ. ಫಾರ್ಮ್‌ಹೌಸ್‌ನಲ್ಲಿ ಕೂಡಿ ಹಾಕಿದ್ದ ವ್ಯಕ್ತಿ ಮುಂದೆ ವಿಜಯಾಂಬಿಕಾ ದರ್ಪ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 8ರ ಸಂಚಿಕೆಯ ವಿವರ.
Thu, 09 Jan 202502:04 AM IST
ಮನರಂಜನೆ News in Kannada Live:Lakshmi Baramma Serial: ಮಕ್ಕಳಾಗಲಿ ಎಂದು ಹರಕೆ ಕಟ್ಟಿದ ಲಕ್ಷ್ಮೀ, ವೈಷ್ಣವ್; ಕೀರ್ತಿ ಬಗ್ಗೆ ಸತ್ಯ ತಿಳಿದುಕೊಳ್ಳಲು ಚಿಂಗಾರಿ ಸಾಹಸ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿಂಗಾರಿ ಸತ್ಯ ತಿಳಿದುಕೊಳ್ಳಲು ಬಂದಿದ್ದಾಳೆ. ಇತ್ತ ವೈಷ್ಣವ್ ಹಾಗೂ ಲಕ್ಷ್ಮೀ ಮಕ್ಕಳಾಗಲಿ ಎಂದು ದೇವಸ್ಥಾನದಲ್ಲಿ ಹರಕೆ ಕಟ್ಟಿದ್ದಾರೆ. ಇನ್ನೂ ಏನೆಲ್ಲ ಆಗಿದೆ ಎಂಬುದನ್ನು ನೀವೇ ನೋಡಿ