ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live November 18, 2024: ಭೈರತಿ ರಣಗಲ್‌ನಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಹಿತಾಳಿಗೆ ಏನು ಪಾತ್ರ? ತನ್ನವರನ್ನು ಕೊಲ್ಲುವ ರಣಭೀಕರ ಕಟುಕನೆದುರು ನಿಂತ ಪುಟಾಣಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 18 Nov 202412:15 PM IST
ಮನರಂಜನೆ News in Kannada Live:ಭೈರತಿ ರಣಗಲ್‌ನಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಹಿತಾಳಿಗೆ ಏನು ಪಾತ್ರ? ತನ್ನವರನ್ನು ಕೊಲ್ಲುವ ರಣಭೀಕರ ಕಟುಕನೆದುರು ನಿಂತ ಪುಟಾಣಿ
- Bhairathi Ranagal: ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾದಲ್ಲಿ ನಮ್ಮಮ್ಮ ಸೂಪರ್‌ಸ್ಟಾರ್, ಗಿಚ್ಚಿ ಗಿಲಿಗಿಲಿ ಟೆಲಿವಿಷನ್ ಶೋಗಳಲ್ಲಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿರುವ ಬಾಲ ಕಲಾವಿದೆ ಮಹಿತಾಳ ಪಾತ್ರವೇನು? ಆಕೆಯ ನಟನೆ ಹೇಗಿತ್ತು? ತಿಳಿಯೋಣ ಬನ್ನಿ.
Mon, 18 Nov 202411:08 AM IST
ಮನರಂಜನೆ News in Kannada Live:Uma Dasgupta Death: ಈ ಸಲ ಅವರ ಸಾವಿನ ಸುದ್ದಿ ಸುಳ್ಳಾಗಲಿಲ್ಲ! ಕ್ಯಾನ್ಸರ್‌ನಿಂದ ಕಣ್ಮುಚ್ಚಿದ ನಟಿ ಉಮಾ ದಾಸ್‌ಗುಪ್ತಾ
- Uma Dasgupta Death: 70ರ ಇಳಿವಯಸ್ಸಿನ ಬೆಂಗಾಲಿ ನಟಿ ಉಮಾ ದಾಸ್ ಗುಪ್ತಾ ಕ್ಯಾನ್ಸರ್ ಎದುರು ಶರಣಾಗಿ, ಜೀವ ಕಳೆದುಕೊಂಡಿದ್ದಾರೆ. ಸತ್ಯಜಿತ್ ರೇ ಅವರ ಕಲ್ಟ್ ಕ್ಲಾಸಿಕ್ “ಪಥೇರ್ ಪಾಂಚಾಲಿ” ಸಿನಿಮಾದಲ್ಲಿ ಉಮಾ ಅವರು, ದುರ್ಗಾ ಹೆಸರಿನ ಪಾತ್ರದಲ್ಲಿ ನಟಿಸಿ ಗಮನಸೆಳೆದಿದ್ದರು.
Mon, 18 Nov 202410:02 AM IST
ಮನರಂಜನೆ News in Kannada Live:Emergency: ಕಂಗನಾ ರಣಾವತ್ 'ಎಮರ್ಜೆನ್ಸಿʼ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಪ್ರಕಟ, ಇಂದಿರಾ ಗಾಂಧಿ ಅವತಾರದಲ್ಲಿ ಬಿಜೆಪಿ ಸಂಸದೆ
- ಕಂಗನಾ ರಣಾವತ್ "ಎಮರ್ಜೆನ್ಸಿ" ಸಿನಿಮಾದ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಸಿಬಿಎಫ್‌ಸಿ ಪ್ರಮಾಣಪತ್ರ ನೀಡದೆ ಇರುವ ಕಾರಣ ಇದು ಬಿಡುಗಡೆಯಾಗಿಲ್ಲ. ಇದೀಗ ಎಮರ್ಜೆನ್ಸಿ ಸಿನಿಮಾದ ಹೊಸ ಬಿಡುಗಡೆ ದಿನಾಂಕ ಪ್ರಕಟವಾಗಿದೆ.
Mon, 18 Nov 202409:27 AM IST
ಮನರಂಜನೆ News in Kannada Live:ಅನಿಮಲ್ ಚಿತ್ರದಿಂದ ಪ್ರೇರಿತರಾದ್ರಾ ಟೈಗರ್ ಶ್ರಾಫ್? ಬಾಘಿ 4 ಸಿನಿಮಾ ಮೂಲಕ ಬಾಲಿವುಡ್‌ಗೆ ಹಾರಿದ ಕನ್ನಡದ ನಿರ್ದೇಶಕ ಎ ಹರ್ಷ
- ಕನ್ನಡದ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳನ್ನು ನಿರ್ದೇಶಿಸಿದ್ದ ಎ ಹರ್ಷ, ಈಗ ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಬಾಲಿವುಡ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಟೈಗರ್ ಶ್ರಾಫ್ ಜತೆಗೆ ಬಾಘಿ 4 ಸಿನಿಮಾ ಘೋಷಣೆ ಮಾಡಿದ್ದಾರೆ. ಇಂದು (ನ. 18) ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ.
Mon, 18 Nov 202407:44 AM IST
ಮನರಂಜನೆ News in Kannada Live:Martin OTT: ಮಾರ್ಟಿನ್ ಚಿತ್ರಕ್ಕೆ ಗಾಯದ ಮೇಲೆ ಬರೆ! ಧ್ರುವ ಸರ್ಜಾ ಸಿನಿಮಾಕ್ಕೆ ವಿದೇಶಿ ಒಟಿಟಿ ವೀಕ್ಷರಿಂದ ಮುಂದುವರಿದ ಕಟು ಟೀಕೆ
- Martin OTT Review: ಮಾರ್ಟಿನ್ ಸಿನಿಮಾ ಬಿಡುಗಡೆಯಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗಿಂತ ನೆಗೆಟಿವ್ ವಿಚಾರಗಳೇ ಹೆಚ್ಚು ಹೈಲೈಟ್ ಆಗಿದ್ದವು. ಪರಭಾಷಿಕರೂ ಈ ಸಿನಿಮಾ ಬಗ್ಗೆ ಕಟುವಾಗಿಯೇ ವಿಮರ್ಶೆ ನೀಡಿದ್ದರು. ಈಗ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಅಲ್ಲಿಯೂ ಅದೇ ಟೀಕೆಗಳು ಮುಂದುವರಿದಿವೆ.
Mon, 18 Nov 202407:28 AM IST
ಮನರಂಜನೆ News in Kannada Live:ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ದರ್ಶನ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಬಿಡುಗಡೆ, ಡಿಬಾಸ್ ಅಭಿಮಾನಿಗಳಿಗೆ ಹಬ್ಬ
- ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆನ್ನು ನೋವಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ಅಭಿಮಾನಗಳಿಗೆ ಖುಷಿಯಾಗುವಂತೆ ಚಿತ್ರಮಂದಿರಗಳಲ್ಲಿ ನವೆಂಬರ್ 22ರಂದು ದರ್ಶನ್ ಅಭಿನಯದ ಚಿತ್ರವೊಂದು ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ.
Mon, 18 Nov 202406:22 AM IST
ಮನರಂಜನೆ News in Kannada Live:ದರ್ಶನ್ ನಟನೆಯ ಐತಿಹಾಸಿಕ ಚಿತ್ರಕ್ಕೀಗ ಮರು ಬಿಡುಗಡೆ ಭಾಗ್ಯ; ಹೊಸ ತಂತ್ರಜ್ಞಾನದೊಂದಿಗೆ ಬರ್ತಿದೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’
- Actor Darshan Thoogudeepa: ದರ್ಶನ್ ನಟನೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. 2012ರಲ್ಲಿ ಅದ್ದೂರಿಯಾಗಿ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿದ್ದ ಈ ಚಿತ್ರವೀಗ, ಅತ್ಯಾಧುಕಿನ ತಂತ್ರಜ್ಞಾನದ ಲೇಪನದೊಂದಿಗೆ ಮತ್ತೆ ಇದೇ ವಾರ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ.
Mon, 18 Nov 202405:58 AM IST
ಮನರಂಜನೆ News in Kannada Live:ಸುಳ್ಳಿನ ಕಾಲ ಎಷ್ಟೇ ಸುದೀರ್ಘವಾದರೂ, ಸತ್ಯ ಅದನ್ನು ಬದಲಾಯಿಸಬಲ್ಲದು: ದಿ ಸಾಬರಮತಿ ರಿಪೋರ್ಟ್ ಸಿನಿಮಾ ಬಗ್ಗೆ ಪ್ರಧಾನಿ ಮೋದಿ ಮಾತು
- Vikrant Massey On PM Modi: ದಿ ಸಾಬರಮತಿ ರಿಪೋರ್ಟ್ ಸಿನಿಮಾ ವಿಮರ್ಶಕರಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದಿತ್ತು. ಈಗ ಇದೇ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸತ್ಯಾಂಶ ಹೊರ ಬರುತ್ತಿದೆ. ಜನ ಸಾಮಾನ್ಯರು ನೋಡುವಂತಾಗಿದೆ ಎಂದಿದ್ದಾರೆ.
Mon, 18 Nov 202405:40 AM IST
ಮನರಂಜನೆ News in Kannada Live:Bigg Boss Kannada 11: ಕಾರ್ತಿಕ ದೀಪಂ ವಿಲನ್ ಕನ್ನಡ ಬಿಗ್‌ಬಾಸ್‌ಗೆ ಎಂಟ್ರಿ, ಶೋಭಾ ಶೆಟ್ಟಿ ಬಗ್ಗೆ ಈ 10 ವಿಷಯ ನಿಮಗೆ ತಿಳಿದಿರಲಿ
- Bigg Boss Kannada 11: ಬಿಗ್‌ಬಾಸ್ ಕನ್ನಡ ಸಿಸನ್ 11ಗೆ ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಶೋಭಾ ಶೆಟ್ಟಿ ಯಾರು? ಇವರು ಯಾವೆಲ್ಲ ಕನ್ನಡ ಮತ್ತು ತೆಲುಗು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಇವರು ಓದಿರುವುದೇನು? ಪುನೀತ್ ರಾಜ್‌ಕುಮಾರ್ ಜತೆ ಇವರು ನಟಿಸಿದ ಸಿನಿಮಾ ಯಾವುದು? ತಿಳಿಯೋಣ ಬನ್ನಿ.
Mon, 18 Nov 202405:00 AM IST
ಮನರಂಜನೆ News in Kannada Live:7 ಕೋಟಿ ಬಜೆಟ್, 75 ಕೋಟಿ ಗಳಿಕೆ ಕಂಡ ಮಲಯಾಳಂನ ಸೂಪರ್‌ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಒಟಿಟಿಗೆ ಆಗಮನ
- Kishkindha Kaandam OTT: ಬ್ಲಾಕ್ ಬಸ್ಟರ್ ಮಲಯಾಳಂ ಮಿಸ್ಟರಿ ಥ್ರಿಲ್ಲರ್ ಚಿತ್ರ ಕೆಲವೇ ಗಂಟೆಗಳಲ್ಲಿ ಒಟಿಟಿಗೆ ಆಗಮಿಸಲಿದೆ. ಕೇವಲ 7 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 75 ಕೋಟಿ ರೂ.ಗಳನ್ನು ಗಳಿಸಿದೆ. ಈಗ ಕನ್ನಡದಲ್ಲಿಯೇ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.
Mon, 18 Nov 202404:57 AM IST
ಮನರಂಜನೆ News in Kannada Live:ಶ್ರೇಷ್ಠಾ-ತಾಂಡವ್ ಪ್ರೀತಿಯನ್ನು ಕಣ್ಣಾರೆ ಕಂಡು ಮಳೆನೀರಿಗಿಂತ ಕಣ್ಣೀರ ಧಾರೆಯಲ್ಲಿ ಮಿಂದು ನೊಂದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 17ರ ಎಪಿಸೋಡ್‌ನಲ್ಲಿ ತನ್ನ ಮುಂದೆ ಶ್ರೇಷ್ಠಾಗೆ ಐ ಲವ್ ಯೂ ಹೇಳಿದ್ದಲ್ಲದೆ, ತನ್ನನ್ನು ದಡ್ಡಿ ಎಂದು ಹೀಯಾಳಿಸುವುದನ್ನು ನೋಡಿ ಭಾಗ್ಯಾಗೆ ದುಃಖವಾಗುತ್ತದೆ. ಆ ನೋವಿನಿಂದಲೇ ಭಾಗ್ಯಾ ಅಲ್ಲಿಂದ ಹೋಗುತ್ತಾಳೆ. ಇಷ್ಟು ದಿನ ಕಣ್ಮುಂದೆ ಇಷ್ಟೆಲ್ಲಾ ನಡೆದರೂ ನನಗೆ ಯಾರೂ ಏನೂ ಹೇಳಲಿಲ್ಲ ಎಂದು ಅಳುತ್ತಾಳೆ.
Mon, 18 Nov 202404:29 AM IST
ಮನರಂಜನೆ News in Kannada Live:Bigg Boss Kannada 11: ಬಿಗ್ ಬಾಸ್ ಅಂಗಳಕ್ಕೆ ಹೊಸ ಆಟಗಾರರ ಎಂಟ್ರಿ; ಬೆಳ್‌ಬೆಳಗ್ಗೆ ನಿದ್ದೆಗಣ್ಣಲ್ಲೇ ಬೆಚ್ಚಿದ ಮನೆ ಮಂದಿ
- Bigg boss Kannada 11: ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್, ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. ಎಲ್ಲರೂ ಹಾಸಿಗೆಯಲ್ಲಿ ನಿದ್ದೆಯಲ್ಲಿದ್ದಾಗಲೇ ಇವರ ಎಂಟ್ರಿಯಾಗಿದೆ. ಶಾಕ್‌ನಲ್ಲಿಯೇ ಗಾರ್ಡನ್ ಏರಿಯಾಗೆ ಬಂದ ಉಳಿದ ಸ್ಪರ್ಧಿಗಳಿಗೆ ಅಚ್ಚರಿ ಕಾದಿತ್ತು. ಇತ್ತ ಅಡುಗೆ ಮನೆಗೆ ಬಂದ ಶೋಭಾ ಶೆಟ್ಟಿ ಸಹ ಇನ್ನುಳಿದ ಸ್ಪರ್ಧಿಗಳ ಕಣ್ಣಿಗೆ ಬಿದ್ದರು.
Mon, 18 Nov 202404:16 AM IST
ಮನರಂಜನೆ News in Kannada Live:ಮನೆ ಕೆಲಸಕ್ಕೆ ಬಂದವಳು ತಂಗಿಯೆಂದು ಗೌತಮ್‌ಗೆ ತಿಳಿದಿಲ್ಲ, ಸುಧಾಳಿಗೂ ಅಣ್ಣನ ಮನೆಯೆಂಬ ಅರಿವಿಲ್ಲ- ಅಮೃತಧಾರೆ ಧಾರಾವಾಹಿ ಇಂದಿನ ಕಥೆ
- ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಮನೆಗೆ ತಂಗಿ ಸುಧಾಳ ಪ್ರವೇಶವಾಗಿದೆ. ಆದರೆ, ಗೌತಮ್ ಮತ್ತು ಸುಧಾಳಿಗೆ ತಾವು ಸಹೋದರ ಸಹೋದರಿ ಎಂದು ತಿಳಿದಿಲ್ಲ. ಈಕೆಯನ್ನು ಯಾವುದೋ ಕೆಲಸಕ್ಕೆ ಈ ಮನೆಗೆ ಆಗುಂತಕ ಕಳುಹಿಸಿದ್ದಾನೆ.