Entertainment News in Kannada Live November 2, 2024: Amaran OTT Update: 2 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಮಾರಾಟವಾಯ್ತು ಶಿವಕಾರ್ತಿಕೇಯನ್ ಸಾಯಿ ಪಲ್ಲವಿ ಅಮರನ್ ಸಿನಿಮಾ;ಸ್ಟ್ರೀಮಿಂಗ್ ಯಾವಾಗ?
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 02 Nov 202404:00 PM IST
Amaran OTT Update: ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಿರುವ ಅಮರನ್ ಸಿನಿಮಾ ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ಸಾಯಿ ಪಲ್ಲವಿ, ಶಿವಕಾರ್ತಿಕೇಯನ್ ನಟನೆಯ ಈ ಸಿನಿಮಾ ಬಹುಶ: ನವೆಂಬರ್ ಕೊನೆಯ ವಾರ ಒಟಿಟಿಗೆ ಬರುವ ಸಾಧ್ಯತೆ ಇದೆ.
Sat, 02 Nov 202402:58 PM IST
- Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಈ ವಾರದ ಪಂಚಾಯ್ತಿ ನಡೆಸಿಕೊಡಲು ಸ್ವತಃ ಕಿಚ್ಚ ಸುದೀಪ್ ಬಂದಿದ್ದಾರೆ. ಮೋಕ್ಷಿತಾ ಹಾಗೂ ಉಗ್ರಂ ಮಂಜು ಅವರ ವಿಚಾರವಾಗಿ ಈ ವಾರ ಮಾತುಕತೆ ನಡೆದಿದೆ. ಮೋಕ್ಷಿತಾ ಬದಲಾಗಿದ್ದು ಯಾಕೆ ಎಂಬ ವಿಚಾರವನ್ನು ಇಲ್ಲಿ ಚರ್ಚೆ ಮಾಡಲಾಗುತ್ತಿದೆ.
Sat, 02 Nov 202401:26 PM IST
- Bagheera Box office Collection Day 2: ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ಅದ್ಧೂರಿಯಾಗಿ ಮೂಡಿಬಂದಿರುವ ಬಘೀರ ಚಿತ್ರದಲ್ಲಿ ನಟ ಶ್ರೀಮುರಳಿ ಎರಡು ಶೇಡ್‌ಗಳಲ್ಲಿ ನಟಿಸಿದ್ದಾರೆ. ಈಗ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಕಮಾಲ್ ಮಾಡುತ್ತಿದೆ. ಹಾಗಾದರೆ, ಎರಡನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ಇಲ್ಲಿದೆ ವಿವರ.
Sat, 02 Nov 202412:24 PM IST
- ಕನ್ನಡದ ನಟಿ ಸ್ವಾತಿ ಕೊಂಡೆ ಈಗ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಮ ರಾಜ್ಯ, ಕಟ್ಟು ಕಥೆ ಮತ್ತು ಕಮರೊಟ್ಟು ಚೆಕ್ ಪೋಸ್ಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಈ ನಟಿ ಈಗ ತಮಿಳು ಚಿತ್ರ ಮೇಯಳಗನ್‌ನಲ್ಲೂ ಅಭಿನಯಿಸಿದ್ದಾರೆ.
Sat, 02 Nov 202411:16 AM IST
- ಭುಲ್ ಭುಲೈಯಾ 3 ಬಾಕ್ಸ್ ಆಫೀಸ್ ಕಲೆಕ್ಷನ್ ಭರ್ಜರಿಯಾಗಿದೆ. ಎರಡೇ ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಭರ್ಜರಿ ಕಲೆಕ್ಷನ್ ಮಾಡಿದ ಭೂಲ್ ಭುಲಯ್ಯ 3 ಗಲ್ಲಾಪೆಟ್ಟಿಯಲ್ಲಿ 50 ಕೋಟಿಗೂ ಹೆಚ್ಚು ಹಣ ಗಳಿಸಿದೆ.
Sat, 02 Nov 202410:50 AM IST
- Rashmika Mandanna Deepavali: ರಶ್ಮಿಕಾ ಮಂದಣ್ಣ ಈ ಸಲವೂ ಹೈದರಾಬಾದ್‌ನ ವಿಜಯ್ ದೇವರಕೊಂಡ ಕುಟುಂಬದ ಜತೆಗೆ ಅವರ ಮನೆಯಲ್ಲಿಯೇ ದೀಪಾವಳಿಯನ್ನು ಆಚರಿಸಿದ್ದಾರೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ.
Sat, 02 Nov 202409:55 AM IST
- Bigg Boss Kannada Season 11: ಬಿಗ್ ಬಾಸ್ ವೇದಿಕೆಯಲ್ಲಿ ವಾರದ ಕಥೆ ಈ ಬಾರಿ ಕಿಚ್ಚನ ಜೊತೆಯೇ ನಡೆಯಲಿದೆ. ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯದಂತ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾಗದ ಭಾರ ಎಂದು ಬಿಗ್ ಬಾಸ್ ಹೇಳಿದ್ದಾರೆ
Sat, 02 Nov 202409:49 AM IST
ಸುಕುಮಾರ್ ನಿರ್ದೇಶನದಲ್ಲಿ ಅಲ್ಲುಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪುಷ್ಪ 2 ಚಿತ್ರದಿಂದ ಹೊಸ ಅಪ್‌ಡೇಟ್ ಹೊರ ಬಿದ್ದಿದೆ. ಚಿತ್ರದಲ್ಲಿ ಸ್ಟೈಲಿಷ್ ಸ್ಟಾರ್ ಜೊತೆ ಕಿಸ್ ಬ್ಯೂಟಿ ಶ್ರೀಲೀಲಾ ಸ್ಪೆಷಲ್ ಹಾಡಿನಲ್ಲಿ ಇರಲಿದ್ದಾರಂತೆ. ಹಾಗಾದ್ರೆ ಸಮಂತಾ ರೀತಿ ಶ್ರೀಲೀಲಾ ಮ್ಯಾಜಿಕ್ ಮಾಡ್ತಾರಾ ಎಂಬ ಕುತೂಹಲ ಸಿನಿಪ್ರಿಯರಿಗೆ ಕಾಡುತ್ತಿದೆ.
Sat, 02 Nov 202409:38 AM IST
- Devara OTT Streaming Update: ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆದರೆ, ಇನ್ನಷ್ಟೇ ಅದು ಅಧಿಕೃತವಾಗಬೇಕಿದ್ದು, ಕೊರಟಾಲ ಶಿವ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.
Sat, 02 Nov 202409:05 AM IST
ನವೆಂಬರ್ 2 ರಿಂದ ಜೀ ಕನ್ನಡ ವಾಹಿನಿಯಲ್ಲಿ ಜೀ ಎಂಟರ್‌ಟೈನರ್ಸ್ ಎಂಬ ಹೊಸ ರಿಯಾಲಿಟಿ ಶೋ ಆರಂಭವಾಗುತ್ತಿದೆ. ಪ್ರತಿ ಶನಿವಾರ , ಭಾನುವಾರ 9 ರಿಂದ 10.30ವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ವಿವಿಧ ಧಾರಾವಾಹಿ ತಂಡಗಳು ವೀಕ್ಷಕರನ್ನು ರಂಜಿಸಲು ಬರುತ್ತಿವೆ.
Sat, 02 Nov 202408:46 AM IST
OTT Horror Movies Release This Week: ಈ ವಾರ ಒಟಿಟಿಯಲ್ಲಿ 7 ಹಾರರ್ ಸಿನಿಮಾಗಳು ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಿವೆ. ಅವುಗಳಲ್ಲಿ ನಾಲ್ಕು ಸಿನಿಮಾಗಳು ಒಂದೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗಿವೆ. ಹಾರರ್ ಮಿಶ್ರಿತ ಸೈನ್ಸ್ ಫಿಕ್ಷನ್, ಟ್ರೈಮ್ ಟ್ರಾವೆಲಿಂಗ್ ಎಳೆಯ ಸಿನಿಮಾಗಳೂ ಈ ವಾರ ನಿಮ್ಮನ್ನು ಹಿಡಿದಿಟ್ಟುಕೊಳ್ಳಲಿವೆ.
Sat, 02 Nov 202407:54 AM IST
ನವೆಂಬರ್ 1 ರಂದು ಸಿಂಗಂ ಅಗೇನ್ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡೇಂಜರ್ ಲಂಕಾ ಪಾತ್ರದಲ್ಲಿ ನಟಿಸಿರುವ ಅರ್ಜುನ್ ಕಪೂರ್ ಸಿನಿಮಾ ಹಾಗೂ ವೈಯಕ್ತಿಕ ಗೆಲುವಿವಾಗಿ ಬರಿಗಾಲಿನಲ್ಲಿ ಮುಂಬೈ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ.
Sat, 02 Nov 202406:47 AM IST
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸಿನಿಮಾಗಳಿಗೆ ಒಟಿಟಿಯಲ್ಲಿ ಭಾರೀ ಡಿಮ್ಯಾಂಡ್ ಶುರುವಾಗಿದೆ. ಇದರಿಂದ ಪ್ರಭಾಸ್ ಸಿನಿಮಾ ನಿರ್ಮಾಪಕರಿಗೆ ಲಾಭದ ಮೇಲೆ ಲಾಭ ಬರುತ್ತಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದಲ್ಲೂ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚುತ್ತಿದೆ.
Sat, 02 Nov 202406:36 AM IST
- ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ 45 ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಮಂಗಳೂರು ಭಾಷೆಯಲ್ಲೇ ಇರುವ ಅವರ ಡೈಲಾಗ್ ಜನರ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
Sat, 02 Nov 202405:41 AM IST
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಸ್ಪತ್ರೆ ಮಾತ್ರ ಯಾಕೋ ಆಸ್ಪತ್ರೆಯಂತಿಲ್ಲ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಲಕ್ಷ್ಮಿಯಂತು ಈಗ ಸೀತೆಯಾಗಿ ಬದಲಾಗಿದ್ದಾಳೆ.
Sat, 02 Nov 202405:06 AM IST
- ರಾಮಾಚಾರಿ ಧಾರಾವಾಹಿ: ರಾಮಾಚಾರಿ ಹಾಗೂ ಚಾರು ಇಬ್ಬರೂ ಸೇರಿ ಮಾಡಿದ ಉಪಾಯದಂತೆ ಚಾರು ಈಗ ರುಕ್ಕು ಹುಡುಕಿಕೊಂಡು ಅಣ್ಣಾಜಿ ಮನೆಗೆ ಬಂದಿದ್ದಾಳೆ. ಬಂದು ಹೊರ ಹೋಗಲಾಗದೆ ಕಷ್ಟಪಡುತ್ತಿದ್ದಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
Sat, 02 Nov 202404:34 AM IST
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 1ರ ಎಪಿಸೋಡ್‌ನಲ್ಲಿ ಅಪ್ಪ ಶ್ರೀನಿವಾಸ್ ಬ್ಯಾಂಕ್ ಪಾಸ್‌ಬುಕ್‌ನಲ್ಲಿ 25 ಲಕ್ಷ ರೂ. ಹಣ ನೋಡಿ ಸಂತೋಷ್ ಗಾಬರಿಯಾಗುತ್ತಾನೆ. ಮತ್ತೊಂದೆಡೆ ಜಾಹ್ನವಿಗೆ ಜಯಂತ್ ತಂದುಕೊಟ್ಟಿದ್ದ ಮೊಲ ಕಾಣೆಯಾಗುತ್ತದೆ.
Sat, 02 Nov 202404:28 AM IST
- ಅಣ್ಣಯ್ಯ ಧಾರಾವಾಹಿ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಅಣ್ಣಯ್ಯ ಹಾಗೂ ಪಾರು ಇಬ್ಬರೂ ತಂಗಿಯರ ಜೊತೆಗೂಡಿ ಸಿನಿಮಾಕ್ಕೆ ಹೋಗಿದ್ದಾರೆ. ಅಲ್ಲಿ ಆಗುವ ಕಥೆಯೇ ಬೇರೆ.
Sat, 02 Nov 202403:26 AM IST
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 1ರ ಎಪಿಸೋಡ್‌ನಲ್ಲಿ ತಾಂಡವ್ ತನಗಾಗಿ ತಂದ ಡ್ರೆಸ್ ಧರಿಸಲು ಭಾಗ್ಯಾ ಬಹಳ ಮುಜುಗರ ಪಡುತ್ತಾಳೆ. ನಿನಗೆ ಫ್ಯಾಷನ್ ಸೆನ್ಸ್ ಇಲ್ಲ ಅದಕ್ಕೆ ಭಾವ ನಿನ್ನ ಗುಗ್ಗು, ಎಮ್ಮೆ ಅನ್ನೋದು ಎಂದು ಪೂಜಾ ರೇಗುತ್ತಾಳೆ. ತಂಗಿ ಮಾತಿಗೆ ಭಾಗ್ಯಾ ಕಣ್ಣೀರಿಡುತ್ತಾಳೆ.
Sat, 02 Nov 202403:03 AM IST
Singham Again box office collection day 1: ಅಜಯ್ ದೇವಗನ್ ನಟನೆಯ ಸಿಂಗಂ ಅಗೇನ್ ಸಿನಿಮಾವು ನವೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಕ್‌ನಿಲ್ಕ್.ಕಾಂ ಪ್ರಕಾರ ಈ ಸಿನಿಮಾ ಮೊದಲ ದಿನವೇ 43 ಕೋಟಿ ರೂಪಾಯಿ ಗಳಿಕೆ ಮಾಡಿದೆ.
Sat, 02 Nov 202402:39 AM IST
- Bhairathi Ranagal Song Lyrics: ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಭೈರತಿ ರಣಗಲ್ ಸಿನಿಮಾದ ಮೂರನೇ ಹಾಡು "ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ" ಬಿಡುಗಡೆಯಾಗಿದೆ. ಶಿವರಾಜ್ ಕುಮಾರ್ ನಟನೆಯ ಈ ಸಿನಿಮಾದ ಹಾಡಿನ ಲಿರಿಕ್ಸ್ ಇಲ್ಲಿದೆ. ಈ ಭೈರತಿ ರಣಗಲ್ ಸಿನಿಮಾದ ಹಾಡಿನಲ್ಲೇ ಕಥೆಯ ಕುರಿತು ಮಹಾ ಸುಳಿವು ಕೂಡ ಇದೆ.
Sat, 02 Nov 202402:32 AM IST
ತಾವು ಮದುವೆ ಆಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡ ನಂತರ ನಟ ಡಾಲಿ ಧನಂಜಯ್ ತಮ್ಮ ಭಾವೀ ಪತ್ನಿ ಡಾ ಧನ್ಯತಾ ಬಗ್ಗೆ ಕವಿತೆ ಕೂಡಾ ಬರೆದಿದ್ದಾರೆ. ಮುಂದಿನ ವರ್ಷ ಫೆಬ್ರವರಿ 16ರಂದು ಮೈಸೂರಿನಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.
Sat, 02 Nov 202401:34 AM IST
ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ದೀಪಾವಳಿ ವಿಶೇಷವಾಗಿ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮಗಳಿಗೆ ದುವಾ ರಣವೀರ್ ಸಿಂಗ್ ಎಂದು ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಆ ಪದದ ಅರ್ಥವೇನು ಎಂಬುದನ್ನೂ ವಿವರಿಸಿದ್ದಾರೆ.