Entertainment News in Kannada Live November 28, 2024: ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಹೊಸಬರ ಸಿನಿಮಾಗಳದ್ದೇ ಕಾರುಬಾರು; ಒಂದಲ್ಲ ಎರಡಲ್ಲ 8 ಸಿನಿಮಾಗಳ ಬಿಡುಗಡೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 28 Nov 202405:40 PM IST
- ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ನಟನೆಯ ಮೇಘ ಸಿನಿಮಾದ ಜತೆಗೆ ಪ್ರಮೋದ್ ಶೆಟ್ಟಿ ಅವರ ಜಲಂಧರ ಸಿನಿಮಾ ಈ ವಾರ ತೆರೆಗೆ ಬರುತ್ತಿವೆ. ಜತೆಗೆ ನಾ ನಿನ್ನ ಬಿಡಲಾರೆ, ಅನಾಥ, ತಮಟೆ, ಲಕ್ ಚಿತ್ರ ಸೇರಿ ಒಟ್ಟು ಕನ್ನಡದ 8 ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿವೆ.
Thu, 28 Nov 202402:54 PM IST
- Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಮತ್ತಿತರ ಆರೋಪಿಗಳ ರೆಗ್ಯುಲರ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿಂದು ನಡೆಯಿತು.
Thu, 28 Nov 202402:22 PM IST
- Comedy Khiladigalu Sanju Basayya Love story: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ- ಪಲ್ಲವಿ ಬಳ್ಳಾರಿ ಜೋಡಿಯ ಲವ್‌ಸ್ಟೋರಿ ಸಿನಿಮಾವನ್ನೂ ಮೀರಿಸುವಂತಿದೆ. ಮನೆಯ ಮಂದಿಯನ್ನು ಎದುರು ಹಾಕಿಕೊಂಡು, ರಿಜಿಸ್ಟರ್ ಮದುವೆ ಆಗಿ, ಈಗ ಎರಡೂ ಕುಟುಂಬದ ಜತೆ ಅಷ್ಟೇ ಖುಷಿಯಾಗಿದೆ ಈ ಜೋಡಿ. ಆ ಪ್ರೇಮ್ ಕಹಾನಿ ಬಗ್ಗೆ ಈ ಜೋಡಿ ಹೇಳಿಕೊಂಡಿದೆ.
Thu, 28 Nov 202401:01 PM IST
- UI The Movie: ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ UI ಸಿನಿಮಾ ಡಿ 20ರಂದು ಬಿಡುಗಡೆ ಆಗಲಿದೆ. ಆದರೆ, ಪ್ರಚಾರ ವಿಚಾರದಲ್ಲಿ ಮಾತ್ರ ಅದ್ಯಾಕೋ ಈ ಸಿನಿಮಾದಿಂದ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಅದೆಲ್ಲದಕ್ಕೂ ವಾರ್ನರ್ ಉತ್ತರ ಕೊಟ್ಟಿದೆ. ಏನಿದು ವಾರ್ನರ್?
Thu, 28 Nov 202411:21 AM IST
- Kannada Serial TRP: ಬಿಗ್ ಬಾಸ್ ಏಪಿಸೋಡ್‌ಗೆ ಭರ್ಜರಿ ಟಿಆರ್‌ಪಿ ಸಿಗುತ್ತಿದೆ. ವಾರದ ಐದು ದಿನಗಳ ಬದಲು, ಕಿಚ್ಚನ ವಾರಾಂತ್ಯದ ಎರಡು ದಿನಕ್ಕೆ ಹೆಚ್ಚಿನ ಬೇಡಿಕೆ ಇದೆ. ಅದರಂತೆ ಟಿಆರ್‌ಪಿಯಲ್ಲೂ ಒಳ್ಳೆಯ ರೇಟಿಂಗ್ ಪಡೆದುಕೊಳ್ಳುತ್ತಿದೆ.
Thu, 28 Nov 202409:49 AM IST
- ಬಿಡುಗಡೆಯಾಗಿ ಆರು ತಿಂಗಳ ನಂತರ ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ಚಲನಚಿತ್ರ ‘ಲಿಟಲ್ ಹಾರ್ಟ್ಸ್’ ಇನ್ನೊಂದು ಒಟಿಟಿಗೆಯಲ್ಲಿ ಬಿಡುಗಡೆಯಾಗಲಿದೆ. ಈ ವಾರಾಂತ್ಯಕ್ಕೆ ನೋಡು ಈ ಸಿನಿಮಾ ಬೆಸ್ಟ್
Thu, 28 Nov 202409:24 AM IST
- Yuva Rajkumar: ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ನಟನೆಯ ಎರಡನೇ ಸಿನಿಮಾದ ಮುಹೂರ್ತ ನೆರವೇರಿದೆ. ರೋಹಿತ್ ಪದಕಿ ನಿರ್ದೇಶನದ ಚಿತ್ರಕ್ಕೆ ಎಕ್ಕ ಎಂಬ ಶೀರ್ಷಿಕೆ ಇಟ್ಟಿರುವುದು ಈ ಹಿಂದೆಯೇ ಬಹಿರಂಗವಾಗಿದೆ. ಈಗ ಈ ಸಿನಿಮಾದ ಬಗ್ಗೆಯೇ ಇಡೀ ತಂಡ ಬಂದಷ್ಟು ಮಾಹಿತಿ ಹಂಚಿಕೊಂಡಿದೆ.
Thu, 28 Nov 202408:49 AM IST
- Manada Kadalu: ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್, ಕರಟಕ ದಮನಕ ಸಿನಿಮಾ ಬಳಿಕ ಇದೀಗ ಇನ್ನೊಂದು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಹೊಸಬರನ್ನೇ ಕರೆತಂದಿರುವ ಭಟ್ಟರು, ಮುಂಗಾರು ಮಳೆ ಸಿನಿಮಾ ನಿರ್ಮಾಪಕ ಇ ಕೃಷ್ಣಪ್ಪ ಜತೆ ಈ ಚಿತ್ರ ಮಾಡುತ್ತಿರುವುದು ಇನ್ನೊಂದು ವಿಶೇಷ.
Thu, 28 Nov 202408:18 AM IST
- Chandana Ananthakrishna Wedding: ಲಕ್ಷ್ಮೀ ನಿವಾಸ ಧಾರಾವಾಹಿಯ ಜಾಹ್ನವಿ ಅಲಿಯಾಸ್ ಚಂದನಾ ಅನಂತಕೃಷ್ಣ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಉದ್ಯಮಿ ಪ್ರತ್ಯಕ್ಷ್ ಜತೆಗೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಮದುವೆಗೆ, ಗಣ್ಯರು, ಸಿನಿಮಾ ರಂಗದ ಆಪ್ತರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
Thu, 28 Nov 202407:35 AM IST
- ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಶ್ರೀಮಂತಿಕೆಯನ್ನ ಬೆಳ್ಳಿತೆರೆಗೆ ತರುವ ಹೊಸ ಪ್ರಯತ್ನ ‘ಹರಿದಾಸರ ದಿನಚರಿ’ ಸಿನಿಮಾ. ಪ್ರಸಿದ್ಧ ಗಾಯಕ ಡಾ.ವಿದ್ಯಾಭೂಷಣರು ಸಿನಿಮಾದಲ್ಲಿ ಪುರಂದರ ದಾಸರಾಗಿ ಅಭಿನಯಿಸಿದ್ದಾರೆ.
Thu, 28 Nov 202406:23 AM IST
- ಕಾಂತಾರ ಸಿನಿಮಾ ಹಿಟ್ ಆಗಿರುವ ಕಾರಣ ರಿಷಬ್ ಶೆಟ್ಟಿಗೆ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿದೆ. ಇದೀಗ 'ಜೈ ಹುನುಮಾನ್' ಸಿನಿಮಾದ ನಂತರ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Thu, 28 Nov 202405:46 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 27ರ ಎಪಿಸೋಡ್‌ನಲ್ಲಿ ಭಾವನಾ ಈ ಮನೆಯ ಅದೃಷ್ಟ ದೇವತೆ, ಅವಳು ಕಾಲು ಇಟ್ಟ ಕಡೆ ಗೆಲುವು ದೊರೆಯುತ್ತದೆ ಎಂದು ಗುರುಗಳು ಹೇಳಿದ ಮಾತು ಕೇಳಿ ಜವರೇಗೌಡ ಆಶ್ಚರ್ಯ ವ್ಯಕ್ತಪಡಿಸುತ್ತಾನೆ.
Thu, 28 Nov 202405:42 AM IST
- Amruthadhare Serial Today Episode: ಅಮೃತಧಾರೆ ಧಾರಾವಾಹಿಯ ಗುರುವಾರದ (ನವೆಂಬರ್ 28) ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ. ಗೌತಮ್ ಭಾಗ್ಯಮ್ಮಳನ್ನು ನೋಡದೆ ಇದ್ದರೂ ಆಕೆಯನ್ನು ನೋಡಿದ ಲಕ್ಷ್ಮಿಕಾಂತ್ ಈ ವಿಚಾರವನ್ನು ಶಕುಂತಲಾಳಿಗೆ ತಿಳಿಸಿದ್ದಾನೆ.
Thu, 28 Nov 202405:09 AM IST
- ಅಣ್ಣಯ್ಯ ಧಾರಾವಾಹಿಯಲ್ಲಿ ಒಂದೊಂದೇ ಸತ್ಯ ಈಗ ಹೊರಬರುತ್ತಿದೆ. ಅಣ್ಣಯ್ಯನಿಗೆ ಅಮ್ಮ ಇಲ್ಲ. ತಂಗಿಯರನ್ನೆಲ್ಲ ಅವನೊಬ್ಬನೇ ಸಾಕಿದ್ದಾನೆ ಎಂದು ಎಲ್ಲರೂ ಅಂದುಕೊಂಡಿರುವಾಗ ಸತ್ಯವೊಂದು ವೀರಭದ್ರನ ಬಾಯಿಂದ ಹೊರಬಿದ್ದಿದೆ.
Thu, 28 Nov 202404:06 AM IST
Lucky Bhaskar Ott Update: ದುಲ್ಕರ್ ಸಲ್ಮಾನ್ , ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಲಕ್ಕಿ ಭಾಸ್ಕರ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 31 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು.
Thu, 28 Nov 202403:46 AM IST
- ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಚಾರು ಈಗ ಹೊಸ ಉಪಾಯ ಮಾಡಿದ್ದಾರೆ. ಎಲ್ಲವೂ ರಾಮಾಚಾರಿ ಹೇಳದಂತೆಯೇ ನಡೆಯುತ್ತಿದೆ. ಆದರೆ ಮದುವೆ ಮನೆಯಲ್ಲಿ ಮದುವೆ ಗಂಡು ಕಾಣೆಯಾಗಿದ್ದಾನೆ.
Thu, 28 Nov 202403:19 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 27ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಹೆದರಿ ತಾಂಡವ್ ಸುಮ್ಮನೆ ಶಾಪಿಂಗ್‌ಗೆ ಹೋಗುತ್ತಾನೆ. ಅಲ್ಲಿ ಶ್ರೇಷ್ಠಾ ಜೊತೆ ಮಾತನಾಡುವಾಗ ಭಾಗ್ಯಾ ಫೋನ್ ಕಸಿದುಕೊಂಡು ಆರೋಗ್ಯ ಹೇಗಿದೆ ಎಂದು ವಿಚಾರಿಸುತ್ತಾಳೆ. ಮನೆಗೆ ಹೋಗಿ ನಾಳಿನ ಕಾರ್ಯಕ್ರಮಕ್ಕೆ ಮನೆ ಕ್ಲೀನ್ ಮಾಡಲು ಸಹಾಯ ಮಾಡುವಂತೆ ಸುಂದ್ರಿ, ಪೂಜಾ ಬಳಿ ಮನವಿ ಮಾಡುತ್ತಾಳೆ.
Thu, 28 Nov 202403:03 AM IST
- ಯೋಗರಾಜ್ ಭಟ್‌ರ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾ 'ಮನದ ಕಡಲು' ತೆರೆ ಕಾಣಲು ರೆಡಿಯಾಗುತ್ತಿದೆ. ‘ಮುಂಗಾರು ಮಳೆ’ ಮತ್ತು ‘ಮೊಗ್ಗಿನ ಮನಸ್ಸು’ ಚಿತ್ರಗಳ ನಂತರ ಈ ಬಾರಿ ಸಹ ಹೊಸ ಕುದುರೆಗಳ ಜೊತೆಗೆ ಸಿನಿಮಾ ಮಾಡೋಣ ಎಂದು ಇ. ಕೃಷ್ಣಪ್ಪ ಮೊದಲೇ ಹೇಳಿದ್ದರಂತೆ.
Thu, 28 Nov 202402:30 AM IST
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಈ ವಾರ ಆಟ ಜೋರಾಗೆ ಇದೆ ಮೋಕ್ಷಿತಾ, ಉಗ್ರಂ ಮಂಜು ಹಾಗೂ ಗೌತಮಿ ನಡುವೆ ಗಲಾಟೆ ಆಗಿದೆ. ಮೊದಲು ಇದನ್ನೆಲ್ಲ ಆರಂಭ ಮಾಡಿದ್ದು ಯಾರು ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದು ಹೋಗಿದೆ.
Thu, 28 Nov 202401:15 AM IST
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಲ್ಲಿದ್ದಾಳೆ. ಲಾಯರ್ ಬಂದು ಸತ್ಯ ಹೇಳುವಂತೆ ಪದೇ ಪದೇ ಒತ್ತಾಯ ಮಾಡುತ್ತಿದ್ದಾರೆ. ಆದರೆ ಕಾವೇರಿ ಮಾತ್ರ ಇಷ್ಟು ದಿನ ಆದ್ರೂ ಸತ್ಯ ಹೇಳಿರಲಿಲ್ಲ. ಈಗೇನ್ಮಾಡಿದ್ದಾಳೆ ನೋಡಿ.