Entertainment News in Kannada Live November 4, 2024: ಬದುಕಿನಲ್ಲಿ ರಿಸ್ಕ್ ಬೇಕು, ಆದರೆ ಅದು ಲೆಕ್ಕಾಚಾರದ ರಿಸ್ಕ್ ಆಗಿರಬೇಕು; ನಿರ್ದೇಶಕ ಗುರುಪ್ರಸಾದ್ ಬಗ್ಗೆ ದೀಪಾ ಹಿರೇಗುತ್ತಿ ಬರಹ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 04 Nov 202405:21 PM IST
- ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರ್ಥಿಕ ಸಮಸ್ಯೆಯೇ ಆ ಸಾವಿಗೆ ಕಾರಣ ಎಂಬುದು ಮೇಲ್ನೋಟಕ್ಕೆ ಪೊಲೀಸ್ ವರದಿ ಪ್ರಕಾರ ತಿಳಿದಿದೆ. ಈ ನಡುವೆ ಸಿನಿಮಾ ಕ್ಷೇತ್ರದಲ್ಲಿನ ರಿಸ್ಕ್ ಬಗ್ಗೆ ಬರಹಗಾರ್ತಿ ದೀಪಾ ಹಿರೇಗುತ್ತಿ ವಿಶೇಷ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ. ಇಲ್ಲಿದೆ ಆ ಬರಹ.
Mon, 04 Nov 202403:48 PM IST
ಭಯೋತ್ಪಾದಕರ ಜೊತೆಗಿನ ಹೋರಾಟದಲ್ಲಿ ವೀರ ಮರಣವನ್ನಪ್ಪಿದ ಮೇಜರ್ ಮುಕುಂದ್ ವರದರಾಜನ್ ಬಯೋಪಿಕ್ ಅಮರನ್ ಸಿನಿಮಾ ಅಮರನ್ 4 ನೇ ದಿನ 21.55 ಕೋಟಿ ರೂ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ದೇಶಾದ್ಯಂತ ಒಟ್ಟು 95.60 ಕೋಟಿ ರೂ ಕಲೆಕ್ಷನ್ ಮಾಡಿದೆ.
Mon, 04 Nov 202403:26 PM IST
- Freedom at Midnight Web Series OTT Release: ದೇಶದ ವಿಭಜನೆಯ ಸಮಯದಲ್ಲಿ ನಡೆದ ಘಟನೆಗಳನ್ನು ಆಧರಿಸಿದ ಆಸಕ್ತಿದಾಯಕ ಫ್ರೀಡಂ ಅಟ್ ಮಿಡ್‌ನೈಟ್ ವೆಬ್ ಸರಣಿಯ ಒಟಿಟಿ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ವಿಶೇಷ ಏನೆಂದರೆ ಕನ್ನಡದಲ್ಲಿಯೂ ಈ ಸಿರೀಸ್ ಬಿಡುಗಡೆ ಆಗಲಿದೆ.
Mon, 04 Nov 202401:37 PM IST
- ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಮದುವೆ ದಿನಾಂಕ ಹೊರಬಿದ್ದಿದೆ. ಹೈದ್ರಾಬಾದ್‌ನಲ್ಲಿ ಅವರಿಬ್ಬರೂ ಮದುವೆಯಾಗಲಿದ್ದಾರೆ. ಇನ್ನು ಮದುವೆಗೆ ಯಾರೆಲ್ಲ ಬರಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
Mon, 04 Nov 202401:10 PM IST
- Bigg Boss Kannada 11 TRP: ನವೆಂಬರ್ ಮೊದಲ ವಾರದ ಟಿಆರ್‌ಪಿಯಲ್ಲಿ ಬಿಗ್ ಬಾಸ್‌ನ ವಾರಾಂತ್ಯದ ಎರಡು ಏಪಿಸೋಡ್‌ಗಳು ದಾಖಲೆಯ ಟಿಆರ್‌ಪಿ ಪಡೆದುಕೊಂಡಿವೆ. ಹಾಗಾದರೆ, ವಾರದ ಕಥೆ ಕಿಚ್ಚನ ಜೊತೆಯ ಎರಡು ಏಪಿಸೋಡ್‌ಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ವಿವರ.
Mon, 04 Nov 202412:33 PM IST
- ಅಣ್ಣಯ್ಯ ಹಾಗೂ ಪಾರು ಮಧ್ಯ ಒಂದು ಹೊಂದಾಣಿಕೆ ಮೂಡಿದೆ. ಅಣ್ಣಯ್ಯ ಮಾಡಿದ ಯಾವ ಕೆಲಸವನ್ನೂ ಈಗ ಪಾರು ತಿರಸ್ಕಾರ ಮಾಡೋದಿಲ್ಲ. ಆದರೆ ವೀರಭದ್ರನಿಗೆ ಮಾತ್ರ ಇವರಿಬ್ಬರು ಸುಖದಿಂದ ಇರೋದು ಇಷ್ಟವಿಲ್ಲ.
Mon, 04 Nov 202411:35 AM IST
- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ರುಕ್ಕು ಇಬ್ಬರೂ ಒಂದಾಗಿದ್ದಾರೆ. ಆದರೆ ಇತ್ತ ಮನೆಯವರಿಗೆ ಆತಂಕ ಆಗುತ್ತಿದೆ. ಚಾರು ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ ಎಂದು ಮುರಾರಿಗೆ ಮಾತ್ರ ಗೊತ್ತಿದೆ. ಆದರೆ ಈಗ ಅಲ್ಲಿಗೆ ರಾಮಾಚಾರಿ ಕೂಡ ಬಂದಿದ್ದಾನೆ.
Mon, 04 Nov 202410:44 AM IST
- ಉದಯ ಟಿವಿಯಲ್ಲಿ ಇಂದಿನಿಂದ (ನವೆಂಬರ್ 4) ಹೊಸ ಧಾರಾವಾಹಿ ನಾತಿಚರಾಮಿ ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಹಿರಿತೆರೆಗಿಂತ ಕಿರುತೆರೆಯೇ ವೇಗವಾಗಿ ಮುನ್ನುಗ್ಗುತ್ತಿರುವ ಸದ್ಯದ ವಾತಾವರಣದಲ್ಲಿ ಹೊಸ ಧಾರಾವಾಹಿ ನಾತಿಚರಾಮಿ ಹೇಗೆ ವೀಕ್ಷಕರನ್ನು ಸೆಳೆಯಲು ತಯಾರಾಗಿದೆ ಎಂದು ನಿರ್ದೇಶಕ ರಾಮ್ ಜಯಶೀಲ್ ವೈದ್ಯ HT ಜೊತೆ ಮಾತುಕತೆ ನಡೆಸಿದ್ದಾರೆ.
Mon, 04 Nov 202410:27 AM IST
- Kannada Serial TRP Ratings: 43ನೇ ವಾರದ ಟಿಆರ್‌ಪಿ ಹೊರಬಿದ್ದಿದೆ. ಈ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಕನ್ನಡದ ಯಾವ ಸೀರಿಯಲ್ ಟಾಪ್, ಯಾವುದು ಕೊನೇ, ರಿಯಾಲಿಟಿ ಶೋಗಳ ಕಥೆ ಏನು? ಇಲ್ಲಿದೆ ವಿವರ.
Mon, 04 Nov 202410:14 AM IST
ಸಂಗೀತ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಮೈಸೂರು ಪ್ಲಾನೆಟ್ ಅರ್ತ್ ಅಕ್ವೇರಿಯಂ ಹಾಗೂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಅಕ್ವೇರಿಯಂನಲ್ಲಿ ಇಗ್ವಾನ ಅನಕೊಂಡ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಪ್ರತಾಪ್ ತಮ್ಮ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.
Mon, 04 Nov 202409:16 AM IST
- Actor Jaggesh: ನಿರ್ದೇಶಕ ಗುರುಪ್ರಸಾದ್ ಸಾವಿನ ಬೆನ್ನಲ್ಲೇ ನಟ ಜಗ್ಗೇಶ್, ಮಾಧ್ಯಮಗಳ ಮುಂದೆ ಸಾಕಷ್ಟು ಮಾತನಾಡಿದ್ದಾರೆ. ಈಗ ಆ ಮಾತುಗಳೇ ಅವರಿಗೇ ಮುಳುವಾಗಿವೆ. ಸಾವಿನ ಮನೆಯಲ್ಲಿ ಇಂಥ ಮಾತು ಬೇಕಿತ್ತಾ? ಸತ್ತಿದ್ದು ಕೇವಲ ಗುರುಪ್ರಸಾದ್ ಮಾತ್ರವಲ್ಲ ನಟ ಜಗ್ಗೇಶ್ ವ್ಯಕ್ತಿತ್ವವೂ ಕೂಡ ಎಂದು ಜಗ್ಗೇಶ್ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Mon, 04 Nov 202408:00 AM IST
ನಿರ್ದೇಶಕ ಗುರುಪ್ರಸಾದ್ ಜೊತೆ ಹೆಚ್ಚು ಒಡನಾಟ ಇಲ್ಲದಿದ್ದರೂ ನಟ ದುನಿಯಾ ವಿಜಯ್ ಅವರ ಅಂತ್ಯಸಂಸ್ಕಾರದ ಸಮಯದಲ್ಲಿ ಕುಟುಂಬಕ್ಕೆ ಬಹಳ ಸಹಾಯ ಮಾಡಿದ್ದಾರೆ. ಆಂಬ್ಯುಲೆನ್ಸ್ ಕೆಟ್ಟಿದ್ದರಿಂದ ಬೇರೊಂದು ವಾಹನ ತರಿಸಿ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳಿಸಿದ್ದಾರೆ. ವಿಜಯ್ ಸಹಾಯಕ್ಕೆ ಕುಟುಂಬದವರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Mon, 04 Nov 202407:48 AM IST
- ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಜೂನಿಯರ್ ಡಾಕ್ಟರ್ ಮೂಲಕ ಲಕ್ಷ್ಮೀಗೆ ಎಲ್ಲ ವಿಚಾರ ಗೊತ್ತಾಗಿದೆ. ತಾನು ತಪ್ಪು ಮಾಡದೇ ಇದ್ದರೂ ಕಾವೇರಿ ತನ್ನ ಮೇಲೆ ಆರೋಪ ಹೋರಿಸಿದ್ದಾಳೆ ಎನ್ನುವ ವಿಚಾರ ಲಕ್ಷ್ಮೀಗೀಗ ಮನದಟ್ಟಾಗಿದೆ.
Mon, 04 Nov 202406:56 AM IST
ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ,ಭಾನುವಾರ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಸ್ಪರ್ಧಿಗಳ ಪರ್ಫಾಮೆನ್ಸ್ ಗಮನ ಸೆಳೆಯುತ್ತಿದೆ. ಕಳೆದ ವಾರ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಕಂಠಿ ಮಾಡಿದ ಡ್ಯಾನ್ಸ್ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ವೇದಿಕೆ ಮೇಲೆ ರವಿಚಂದ್ರನ್ ಅವರನ್ನೇ ನೋಡಿದಂತೆ ಆಯ್ತು ಎಂದು ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ.
Mon, 04 Nov 202405:53 AM IST
- ಬಿಗ್ ಬಾಸ್ ಮನೆಯಲ್ಲಿ ಆಗುವ ಜಗಳದಿಂದ ಹೊತ್ತಿಕೊಳ್ಳುವ ಬೆಂಕಿಗೆ ಈಗ ಬಿಗ್ ಬಾಸ್ ತುಪ್ಪ ಸುರಿದಿದ್ದಾರೆ. ಮನೆಯಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಅನುಮಾನ ಬರುವಂತೆ ಆಗಿದೆ. ಮೋಕ್ಷಿತಾ ಹಾಗೂ ತ್ರಿವಿಕ್ರಂ ನಡುವೆ ಈಗ ಇನ್ನಷ್ಟು ಜಗಳ ಆರಂಭವಾಗಿದೆ.
Mon, 04 Nov 202404:58 AM IST
Guruprasad death: ನಿರ್ದೇಶಕ ಗುರುಪ್ರಸಾದ್ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದ ನಟ ಜಗ್ಗೇಶ್‌ಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮತ್ತೊಬ್ಬರ ಸಾವಿನಲ್ಲಿ ವಿಕೃತಿ ಮೆರೆಯಬೇಡ, ನೀನು ರೌಡಿನಾ, 25 ವರ್ಷಗಳ ಹಿಂದೆಯೇ ನಿನ್ನ ಬಗ್ಗೆ ಗೊತ್ತಿತ್ತು ಎಂದು ಗರಂ ಆಗಿದ್ದಾರೆ
Mon, 04 Nov 202404:21 AM IST
- Bigg Boss Kannada 11: ಯಾವಾಗಲು ಬಿಗ್ ಬಾಸ್ ಮನೆಯಲ್ಲಿ ಅನ್ಯೂನ್ಯವಾಗಿ ಇರ್ತಾ ಇದ್ದ ಧರ್ಮ ಹಾಗೂ ಅನುಷಾ ಇವರಿಬ್ಬರ ನಡುವೆ ಅಸಮಾಧಾನ ಉಂಟಾಗಿದೆ. ಬಿಗ್ ಬಾಸ್ ಮನೆಯ ಕ್ಯಾಪ್ಟನ್ಸಿ ಟಾಸ್ಕ್ ಆಡುವಾಗ ಆದ ಒಂದು ಸಣ್ಣ ಬದಲಾವಣೆ ಇದಕ್ಕೆ ಕಾರಣವಾಗಿದೆ.
Mon, 04 Nov 202403:29 AM IST
Director Guruprasad: ಮಠ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ತೆರೆ ಕಂಡಿದ್ದ ರಂಗನಾಯಕ ಸಿನಿಮಾ ಸೋಲು ಕಂಡಿತ್ತು. ಹಣಕಾಸು, ಸಿನಿಮಾ ವಿಚಾರಕ್ಕೆ ಡ್ರಿಪ್ರೆಷನ್‌ನಲ್ಲಿದ್ದ ಗುರುಪ್ರಸಾದ್ ಪ್ರತಿದಿನ ನಿದ್ರೆಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
Mon, 04 Nov 202401:51 AM IST
Bigg Boss Kannada 11: ಐದನೇ ವಾರ ಮಾನಸಾ ಬಿಗ್‌ಬಾಸ್ ಕನ್ನಡ 11 ಶೋನಿಂದ ಹೊರ ಬಂದಿದ್ದಾರೆ. ಮನೆಯಿಂದ ಮಗು ಹೊರ ಹೋದಂತೆ ಆಯ್ತು ಎಂದು ತ್ರಿವಿಕ್ರಮ್ ಬೇಸರ ವ್ಯಕ್ತಪಡಿಸಿದರೆ, ಮಾನಸಾ ಪತಿ ಸಂತೋಷ್, ಹಳ್ಳಿಯಿಂದ ಬಂದು ಅವಳು ಬಿಗ್‌ಬಾಸ್‌ಗೆ ಹೋಗಿ ಬಂದಿದ್ದೇ ದೊಡ್ಡ ಸಾಧನೆ. ಅವಳ ಮಾತಿನಿಂದ ಯಾರಿಗಾದರೂ ಬೇಸರ ಆದಲ್ಲಿ ಕ್ಷಮಿಸಿ ಎಂದು ಸಾರಿ ಕೇಳಿದರು.