Entertainment News in Kannada Live November 5, 2024: ಬಿಟಿಎಸ್ ಸಿನಿಮಾ ಟ್ರೈಲರ್ ರಿಲೀಸ್; ನವೆಂಬರ್ 8ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗುತ್ತಿದೆ ಹೊಸಬರ ಸಿನಿಮಾ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 05 Nov 202404:36 PM IST
ಹೊಸಬರೇ ಸೇರಿ ತಯಾರಿಸಿರುವ ಬಿಟಿಎಸ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾ ನವೆಂಬರ್ 8 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿದೆ. ಸಿನಿಮಾ ನಿರ್ದೇಶನ ಮಾಡಿರುವವರೇ ಚಿತ್ರಕ್ಕೆ ಬಂಡವಾಳ ಕೂಡಾ ಹಾಕಿದ್ದಾರೆ.
Tue, 05 Nov 202404:31 PM IST
- Dimsole Kannada Movie: ಹೊಸಬರ ಉತ್ಸಾಹಿ ತಂಡವೊಂದು ಇದೀಗ ಅತ್ಯಾಕರ್ಷಕ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಮೂಲಕ ಆಗಮಿಸಿದೆ. ಕರಾವಳಿ ಭಾಗದವರೇ ಸೇರಿ ಮಾಡಿರುವ ಈ ಚಿತ್ರಕ್ಕೆ ದಿಂಸೋಲ್ ಎಂದು ಟೈಟಲ್ ಇಟ್ಟಿದೆ. ಇಲ್ಲಿದೆ ಈ ಸಿನಿಮಾದ ಹೆಚ್ಚಿನ ಮಾಹಿತಿ.
Tue, 05 Nov 202402:31 PM IST
- ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಖ್ಯಾತಿಯ ಜಗಪ್ಪ ಮತ್ತು ಸುಶ್ಮಿತಾ ದಂಪತಿ ಇನ್ನೇನು ಶೀಘ್ರದಲ್ಲಿ ಡಿವೋರ್ಸ್ ನೀಡಲಿದೆ ಎಂಬ ಸುದ್ದಿ, ಸೋಷಿಯಲ್ ಮೀಡಿಯಾದಲ್ಲಿ ಈ ಹಿಂದೆ ವೈರಲ್ ಆಗಿತ್ತು. ಆ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ ಜಗಪ್ಪ.
Tue, 05 Nov 202412:41 PM IST
ಸುಕು ಪೂರ್ವಜ್ ನಿರ್ಮಾಣ ಮಾಡಿ , ನಿರ್ದೇಶಿಸುತ್ತಿರುವ ಕಿಲ್ಲರ್ ಸಿನಿಮಾದಲ್ಲಿ ಜ್ಯೋತಿ ರೈ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರತಂಡ ಜ್ಯೋತಿ ಫಸ್ಟ್ ಲುಕ್ ಹಾಗೂ ಪ್ರೋಮೋ ರಿಲೀಸ್ ಮಾಡಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಜ್ಯೋತಿ, ಧಾರಾವಾಹಿಗಳಿಂದ ದೂರವಾಗಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Tue, 05 Nov 202412:25 PM IST
- Rudhra Garuda Purana: ನಟ ರಿಷಿ ಅಭಿನಯದ ರುದ್ರ ಗರುಡ ಪುರಾಣ ಚಿತ್ರದ ಕಣ್ಮುಂದೆ ಬಂದು.. ಎಂಬ ಸಾಹಿತ್ಯವುಳ್ಳ ಮೊದಲ ಹಾಡು ಬಿಡುಗಡೆ ಆಗಿದೆ. ನಂದೀಶ್ ನಿರ್ದೇಶನದ ಈ ಸಿನಿಮಾ ಈ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.
Tue, 05 Nov 202412:24 PM IST
- ಅಣ್ಣಯ್ಯ ಹಾಗೂ ಪಾರು ಮದುವೆ ಎಪಿಸೋಡ್ ನೀವೆಲ್ಲರೂ ಖಂಡಿತ ನೋಡಿರ್ತೀರಾ. ಆದ್ರೆ ಮದುವೆ ಶೂಟಿಂಗ್ ಮಾಡುವಾಗ ಅದರ ಹಿಂದೆ ಎಷ್ಟೆಲ್ಲ ಪ್ರಯತ್ನ ಇರುತ್ತದೆ. ಧಾರಾವಾಹಿಯಲ್ಲಿ ಅಭಿನಯಿಸುವ ಕಲಾವಿದರ ಸರ್ಕಸ್ ಹೇಗಿರುತ್ತದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
Tue, 05 Nov 202411:06 AM IST
- ನಿರ್ದೇಶಕ ಗುರುಪ್ರಸಾದ್ ಸಾವಿನ ಬಳಿಕ ನಟ ಜಗ್ಗೇಶ್ ಆಡಿದ ಮಾತುಗಳಿಗೆ ಸೋಷಿಯಲ್ ಮೀಡಿಯಾ ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಈ ನಡುವೆ ಇದೇ ಜಗ್ಗೇಶ್ ಮಾತಿಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಹುಚ್ಚ ವೆಂಕಟ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ.
Tue, 05 Nov 202410:31 AM IST
- Thalapathy 69: ದಳಪತಿ ವಿಜಯ್ ವೃತ್ತಿ ಬದುಕಿನ ಕೊನೇ ಚಿತ್ರ ದಳಪತಿ 69 ಸಿನಿಮಾದಲ್ಲಿ ಅಭಿನಯಿಸಲು ಪಡೆದ ಸಂಭಾವನೆ ಎಷ್ಟು ಎಂದು ತಿಳಿದರೆ ನೀವು ಶಾಕ್ ಆಗ್ತೀರಾ. ಶಾರುಕ್ ಖಾನ್ ಹಾಗೂ ರಜನಿಕಾಂತ್ ಕೂಡ ಇದುವರೆಗೆ ಇಷ್ಟು ಸಂಭಾವನೆ ಪಡೆದಿಲ್ಲ.
Tue, 05 Nov 202410:12 AM IST
- OTT Releases This Week: ಥಿಯೇಟರ್‌ಗಳಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳೀಗ ಒಟಿಟಿಯತ್ತ ಮುಖ ಮಾಡಿವೆ. ಆ ಪೈಕಿ ಒಟಿಟಿ ವೀಕ್ಷಕರ ಕಣ್ಣಿದ್ದಿದ್ದು ದೇವರ, ವೆಟ್ಟೈಯನ್ ಮತ್ತು ಎಆರ್‌ಎಂ ಸಿನಿಮಾಗಳ ಮೇಲೆ. ಈಗ ಅದೇ ಬಹುನಿರೀಕ್ಷಿತ ಸಿನಿಮಾಗಳು ಒಟಿಟಿಗೆ ಲಗ್ಗೆ ಇಡುತ್ತಿವೆ.
Tue, 05 Nov 202409:26 AM IST
- ರಾಮಾಚಾರಿ ಧಾರಾವಾಹಿಯಲ್ಲಿ ಚಾರುವನ್ನು ಕಾಪಾಡಲು ಅವಳನ್ನು ಅಣ್ಣಾಜಿ ಮನೆಯಿಂದ ಕರೆದುಕೊಂಡು ಹೋಗಲು ರಾಮಾಚಾರಿ ಬಂದಿದ್ದಾನೆ. ಮುರಾರಿ ಅವನಿಗೆ ಸಹಾಯ ಮಾಡುತ್ತಿದ್ದಾನೆ. ಆದರೆ ಅಣ್ಣಾಜಿಗೆ ಅನುಮಾನ ಬಂದಿದೆ.
Tue, 05 Nov 202408:55 AM IST
- Donald Trump Filmography: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧಿ ಡೊನಾಲ್ಡ್ ಟ್ರಂಪ್ ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಹಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾಹೀರಾತುಗಳಲ್ಲಿಯೂ ಕಂಡಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋಗಳ ಹೋಸ್ಟ್ ಕೂಡ ಆಗಿದ್ದರು. ಇಲ್ಲಿವೆ ನೋಡಿ ಟ್ರಂಪ್ ಫಿಲ್ಮೋಗ್ರಾಫಿ.
Tue, 05 Nov 202407:41 AM IST
ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದಲ್ಲಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟಿಸಿರುವ ಮೇಜರ್ ಮುಕುಂದ್ ವರದರಾಜನ್ ಸಿನಿಮಾ ಅಮರನ್ ಸಿನಿಮಾ ನೋಡಿ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರತಂಡ ರಜನಿಕಾಂತ್‌ಗಾಗಿ ವಿಶೇಷ ಶೋ ಏರ್ಪಡಿಸಿತ್ತು.
Tue, 05 Nov 202407:04 AM IST
- Kollywood Actor Suriya: ತಮಿಳು ನಟ ಸೂರ್ಯ ನಟನೆಯ ಕಂಗುವ ಸಿನಿಮಾ ನವೆಂಬರ್ 14ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿಯೂ ಡಬ್ ಆಗಿರುವ ಈ ಚಿತ್ರದ ಪ್ರಚಾರಕ್ಕೆ ಇತ್ತೀಚೆಗಷ್ಟೇ ನಟ ಸೂರ್ಯ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ತಮ್ಮಿಷ್ಟದ ಕನ್ನಡದ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ.
Tue, 05 Nov 202406:34 AM IST
- Ghaati Glimpse: ಅನುಷ್ಕಾ ಶೆಟ್ಟಿ 'ಘಾಟಿ' ಸಿನಿಮಾ ಮೂಲಕ ನಿಮ್ಮ ಮುಂದೆ ಬರಲಿದ್ದಾರೆ. ಈ ಬಾರಿ ಅವರ ಹುಟ್ಟು ಹಬ್ಬದ ದಿನದಂದೇ ಅಂದರೆ ಇದೇ ನವೆಂಬರ್ 7ರಂದು ನಿಮಗೆ ಈ ಚಿತ್ರದ ಮೊದಲ ನೋಟ ಕಾಣಸಿಗಲಿದೆ.
Tue, 05 Nov 202406:31 AM IST
ನರ್ತನ್ ಕಥೆ ಬರೆದು ನಿರ್ದೇಶನ ಮಾಡಿರುವ ಶಿವರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಚಿತ್ರವನ್ನು ಗೀತಾ ಶಿವರಾಜ್‌ಕುಮಾರ್ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ಭೈರತಿ ರಣಗಲ್ ಆಗಿ ಶಿವರಾಜ್‌ಕುಮಾರ್ ಅಬ್ಬರಿಸಿದ್ದಾರೆ. ಸಿನಿಮಾ ನವೆಂಬರ್ 15ಕ್ಕೆ ರಿಲೀಸ್ ಆಗಲಿದೆ.
Tue, 05 Nov 202405:56 AM IST
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಬೇಕು ಎಂದೆ ಅನ್ಯಾಯ ಮಾಡುತ್ತಿದ್ದಾಳೆ. ಅವಳು ಮಾಡಿದ ಅನ್ಯಾಯ ಯಾರಿಗೂ ಗೊತ್ತಾಗುತ್ತಿಲ್ಲ. ತಾನು ಸಾಕ್ಷಿ ಸಮೇತ ಕಾವೇರಿಯನ್ನು ಹಿಡಿದು ಹಾಕಬೇಕು ಎಂದು ಲಕ್ಷ್ಮೂ ಅಂದುಕೊಂಡಿದ್ದಾಳೆ.
Tue, 05 Nov 202405:00 AM IST
- 1964ರಲ್ಲಿ ತೆರೆಕಂಡ ಚಿನ್ನದ ಗೊಂಬೆ ಎಂಬ ಸಿನಿಮಾದ ಹಾಡು "ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ" ಕಿರುತೆರೆ ಪ್ರೇಕ್ಷಕರಿಗೆ ಮತ್ತೆ ನೆನಪಾಗಿದೆ. ಏಕೆಂದರೆ, ಅಮೃತಧಾರೆ ಧಾರಾವಾಹಿಯಲ್ಲಿ ಅಮ್ಮನ ನೆನಪಿನಲ್ಲಿರುವ ಗೌತಮ್‌ಗೆ ಭೂಮಿಕಾ ಇದೇ ಹಾಡಿನ ಮೂಲಕ ಲಾಲಿಹಾಡು ಹಾಡಿದ್ದಾರೆ.
Tue, 05 Nov 202404:27 AM IST
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಅನುಮಾನ ಆರಂಭವಾಗಿದೆ. ಹಲವು ವರ್ಷಗಳಿಂದ ಅಪ್ಪನನ್ನು ನೋಡಿಕೊಂಡು ಬಂದ ಅವಳಿಗೆ ಈಗ ಅಪ್ಪನ ನಡವಳಿಕೆ ಸರಿ ಎನಿಸುತ್ತಿಲ್ಲ.
Tue, 05 Nov 202404:21 AM IST
- ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ ಗ್ಯಾಂಗ್ ಧನ್ಯಾಳ ಕಥೆ ಮುಗಿಸಿದೆ. ಸಾಯುವ ಮುನ್ನ ಆಕೆ ಡುಮ್ಮಸರ್‌ಗೆ "ನಿಮ್ಮ ಅಮ್ಮ ಮತ್ತು ತಂಗಿ ಬದುಕಿದ್ದಾರೆ" ಎಂಬ ಸತ್ಯ ತಿಳಿಸಿದ್ದಾಳೆ. ತಂಗಿಯ ಗುರುತು ಹಿಡಿಯಲು ಡುಮ್ಮಸರ್‌ಗೆ ಸುಧಾಳ ಎಡಗಾಲಿನ ಅದೃಷ್ಟ ಮಚ್ಚೆ ನೆರವಾಗುವ ಸೂಚನೆಯಿದೆ.
Tue, 05 Nov 202403:22 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 4ರ ಎಪಿಸೋಡ್‌ನಲ್ಲಿ ಭಾಗ್ಯಾ ಪಟ ಪಟ ಇಂಗ್ಲೀಷ್‌ನಲ್ಲಿ ಮಾತನಾಡಿ ತನ್ನನ್ನು ಆಡಿಕೊಂಡವರ ಬಾಯಿ ಮುಚ್ಚಿಸುತ್ತಾಳೆ. ಹೆಂಡತಿ ಇಷ್ಟು ಚೆನ್ನಾಗಿ ಇಂಗ್ಲೀಷ್ ಮಾತನಾಡುವುದನ್ನು ನೋಡಿದ ತಾಂಡವ್ ಪೆಚ್ಚುಮೋರೆ ಹಾಕಿ ನಿಲ್ಲುತ್ತಾನೆ.
Tue, 05 Nov 202402:12 AM IST
Bigg Boss Kannada 11: ನಿಮ್ಮ ಮದುವೆ ಯಾವಾಗ, ಹುಡುಗಿ ಹೆಸರು ಏನು ಎಂದು ಗೌತಮಿ ಜಾಧವ್ ಕೇಳು ಪ್ರಶ್ನೆಗೆ ಸರಿಗಮಪ ಖ್ಯಾತಿಯ ಗಾಯಕ ಹನುಮಂತು ಹಾಡಿನ ಮೂಲಕ ಉತ್ತರಿಸುತ್ತಾರೆ. ಬಿಗ್‌ಬಾಸ್‌ನಿಂದ ಹೊರ ಹೋಗುತ್ತಿದ್ದಂತೆ ಮದುವೆ ಆಗ್ತೀನಿ ಎನ್ನುತ್ತಾರೆ.