Entertainment News in Kannada Live November 7, 2024: Bigg Boss Kannada: ಹನುಮಂತನ ಆಟ ನೋಡಿ ಕಂಗಾಲಾದ ಸ್ಪರ್ಧಿಗಳು; ತ್ರಿವಿಕ್ರಂ ಹೊಡೆತಕ್ಕೆ ಜಾರಿ ಬಿದ್ದ ಧನರಾಜ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 07 Nov 202403:04 PM IST
- ಬಿಗ್ ಬಾಸ್ ಮನೆಯ ಟಾಸ್ಕ್ ಆದ ನಂತರ ಎಲ್ಲರ ಮನೋಭಾವ ಬದಲಾಗಿದೆ. ಹನುಮಂತ ಆಡಿದ ಆಟ ನೋಡಿ ಹಲವಾರು ಜನ ಕಂಗಾಲಾಗಿದ್ದಾರೆ. ಹೀಗಿರುವಾಗ ಮನೆಯವರ ಅಭಿಪ್ರಾಯ ಯಾವ ರೀತಿ ಬದಲಾಗಿದೆ ಎಂಬುದನ್ನು ನೀವೇ ಗಮನಿಸಿ.
Thu, 07 Nov 202402:59 PM IST
ಅನೀಶ್ ತೇಜೇಸ್ವರ್ ಹಾಗೂ ಮಿಲನಾ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ನವೆಂಬರ್ 22 ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಸಿನಿಮಾ ತಂಡ ಮೊದಲ 3 ದಿನಗಳು 99 ರೂ. ಟಿಕೆಟ್ ಬೆಲೆ ನಿಗದಿಪಡಿಸಿದೆ.
Thu, 07 Nov 202411:52 AM IST
Citadel Honey Bunny Review: ಬಹುನಿರೀಕ್ಷಿತ ಒಟಿಟಿ ಶೋ ಸಿಟಾಡೆಲ್ ಹನಿ ಬನ್ನಿ ವೆಬ್‌ಸಿರೀಸ್ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಗೂಢಚಾರಿ ಕಥೆಯ ಹಿನ್ನೆಲೆಯಲ್ಲಿ ಸಾಗುವ ಈ ವೆಬ್‌ಸಿರೀಸ್, ಆ ನಿರೀಕ್ಷೆ ಮಟ್ಟವನ್ನು ಮುಟ್ಟಲು ಕೊಂಚ ಹೆಣಗಾಡಿದೆ. ಸರಳವಾಗಿ ಊಹಿಸಬಲ್ಲ ಕಥೆಯಲ್ಲಿ, ಆಕ್ಷನ್ ಮಾತ್ರ ಅಬ್ಬರಿಸಿದೆ.
Thu, 07 Nov 202411:20 AM IST
- ಮಠ, ಎದ್ದೇಳು ಮಂಜುನಾಥ, ರಂಗನಾಯಕ ಸಿನಿಮಾಗಳಲ್ಲಿ ಜಗ್ಗೇಶ್‌ಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಗುರುಪ್ರಸಾದ್ ಇತ್ತೀಚೆಗೆ ಸ್ವಹತ್ಯೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಜಗ್ಗೇಶ್ ನೀಡಿರುವ ಹೇಳಿಕೆಗಳು ಟೀಕೆಗೆ ಒಳಗಾಗಿತ್ತು. ಇದೀಗ ತನ್ನನ್ನು ಟೀಕಿಸುವವರನ್ನು ಬ್ಲಾಕ್ ಮಾಡಲು ಆರಂಭಿಸಿದ್ದಾರೆ ಜಗ್ಗೇಶ್.
Thu, 07 Nov 202410:38 AM IST
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್ ಮತ್ತೆ ಮತ್ತೆ ಟ್ರೋಲ್ ಆಗುತ್ತಲೇ ಇದ್ದಾರೆ. ಆನೆ ಆಗೋಗೆ ಯೋಗ ಬೇಕು ಎಂದೆಲ್ಲಾ ಟ್ವೀಟ್ ಮಾಡಿದ ಜಗ್ಗೇಶ್‌ಗೆ ಜನರು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶ್ವಾನ ಆಗಲು ಕೂಡಾ ಯೋಗ್ಯತೆ ಬೇಕು ಎಂದಿದ್ದಾರೆ.
Thu, 07 Nov 202409:36 AM IST
- Shiva rajkumars health Condition: ನಟ ಶಿವರಾಜ್‌ಕುಮಾರ್ ಅನಾರೋಗ್ಯದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದೆ. ಈಗಾಗಲೇ ಟ್ರೀಟ್‌ಮೆಂಟ್ ನಡೀತಿದೆ. ಇನ್ನೇನು ಅಮೆರಿಕಾದಲ್ಲಿಯೂ ಒಂದು ತಿಂಗಳು ಚಿಕಿತ್ಸೆ ನಡೆಯಲಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಭೈರತಿ ರಣಗಲ್ ಸಿನಿಮಾ ಮುಗಿಸಿ, ಬಳಿಕ ಚಿಕಿತ್ಸೆಗೆ ವಿದೇಶಕ್ಕೆ ತೆರಳಲಿದ್ದಾರೆ.
Thu, 07 Nov 202409:31 AM IST
ನವೆಂಬರ್ 8, ಶುಕ್ರವಾರ ರುಕ್ಮಿಣಿ ವಸಂತ್ ನಟನೆಯ ಅಪ್ಪುಡೋ ಇಪ್ಪುಡೋ ಎಪ್ಪುಡೋ, ಬಿಟಿಎಸ್ ಕನ್ನಡ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳು ತೆರೆ ಕಾಣುತ್ತಿವೆ. ಈ ವಾರ ಕನ್ನಡದಲ್ಲಿ ಯಾವುದೇ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ.
Thu, 07 Nov 202408:44 AM IST
- Bagheera Success Meet: ಅಕ್ಟೋಬರ್ 31ರಂದು ಬಿಡುಗಡೆಯಾದ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಈಗ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಇತ್ತ ಚಿತ್ರಕ್ಕೆ ಸಿಕ್ಕ ಪಾಸಿಟಿವ್ ರೆಸ್ಪಾನ್ಸ್ ನೋಡಿ ಚಿತ್ರತಂಡವೂ ಖುಷಿಯಲ್ಲಿದೆ. ಆ ಖುಷಿಯಲ್ಲಿಯೇ ಸಕ್ಸಸ್ ಮೀಟ್ ಮಾಡಿ, ಕಲೆಕ್ಷನ್ ಎಷ್ಟು ಎಂಬ ವಿವರವನ್ನೂ ನೀಡಿದೆ.
Thu, 07 Nov 202408:00 AM IST
- Ghaati Movie: ನಟಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಸಮಯದಲ್ಲಿ ಘಾಟಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಕ್ರಿಶ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯ ರಕ್ತಸಿಕ್ತ, ಸ್ಮೋಕಿಂಗ್ ಲುಕ್ ನೋಡಿ ಅಭಿಮಾನಿಗಳು "ಕ್ವೀನ್" "ಲೇಡಿ ರೆಬಲ್‌ಸ್ಟಾರ್" ಎಂದು ಉದ್ಘರಿಸಿದ್ದಾರೆ.
Thu, 07 Nov 202407:42 AM IST
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಲ್ಲು ಅರ್ಜುನ್ ವಿರುದ್ಧ ದಾಖಲಾದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸ್ ವಜಾಗೊಂಡಿದೆ. ಬುಧವಾರ ಆಂಧ್ರ ಪ್ರದೇಶ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸದ್ದು ಸ್ಟೈಲಿಷ್ ಸ್ಟಾರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.
Thu, 07 Nov 202406:42 AM IST
- The Buckingham Murders OTT: ನಟಿ ಕರೀನಾ ಕಪೂರ್ ಪಾಲಿಗೆ 'ದಿ ಬಕಿಂಗ್‌ಹ್ಯಾಮ್ ಮರ್ಡರ್ಸ್' ಚಿತ್ರ ತುಂಬ ವಿಶೇಷ. ಏಕೆಂದರೆ ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದರು ಕರೀನಾ. ಈಗ ಇದೇ ಸಿನಿಮಾ ಚಿತ್ರಮಂದಿರಗಳ ಬಳಿಕ ಒಟಿಟಿಗೆ ಆಗಮಿಸುತ್ತಿದೆ.
Thu, 07 Nov 202405:37 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 6ರ ಎಪಿಸೋಡ್‌ನಲ್ಲಿ ತನ್ನಿಂದಲೇ ಸಿದ್ದೇಗೌಡ್ರುನನ್ನು ಮನೆಯವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಭಾವನಾಗೆ ಬೇಸರವಾಗುತ್ತದೆ. ಈಗಲಾದರೂ ಭಾವನಾ ನನ್ನ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿದು ಸಿದ್ದೇಗೌಡ ಖುಷಿಯಾಗುತ್ತಾನೆ.
Thu, 07 Nov 202405:34 AM IST
Bold OTT: ಹೊಸದಾಗಿ ಮದುವೆಯಾದ ದಂಪತಿ ತಮ್ಮ ಮೊದಲ ರಾತ್ರಿಯ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡುತ್ತಾರೆ. ಆ ಸಿಡಿ ಮಿಸ್ ಆಗುತ್ತದೆ. ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸಿರುವ ಬೋಲ್ಡ್ ಚಿತ್ರ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಒಟಿಟಿಗೆ ಆಗಮಿಸಲಿದೆ. ಇದು ಡಿಸೆಂಬರ್ 6 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
Thu, 07 Nov 202405:06 AM IST
- Bigg boss Kannada 11: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ವಿಚಾರದಲ್ಲಿ ಸ್ಪರ್ಧಿಗಳು ಕೊಂಚ ಗರಂ ಆಗಿದ್ದಾರೆ. ಅರ್ಹರಲ್ಲದ ಸ್ಪರ್ಧಿಗಳ ಹೆಸರು ಸೂಚಿಸುವಂತೆ ಬಿಗ್ ಬಾಸ್ ಕೋರಿದ್ದಾರೆ. ಆ ಪೈಕಿ ಎಲ್ಲರೂ ಧನರಾಜ್ ಆಚಾರ್ ಹೆಸರನ್ನೇ ಹೇಳಿದ್ದಾರೆ.
Thu, 07 Nov 202404:51 AM IST
- Kamal Haasan Birthday: ಕಮಲ್ ಹಾಸನ್‌ಗೆ ಇಂದು 70 ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಯಸ್ಸಲ್ಲೂ ಹರೆಯದವರು ನಾಚುವಂತೆ ಸದೃಢವಾಗಿರುವ ಈ ಪ್ರತಿಭಾನ್ವಿತ ಹಿರಿಯ ನಟನ ವರ್ಕೌಟ್, ವ್ಯಾಯಾಮ, ಡಯೆಟ್ ಇತ್ಯಾದಿಗಳ ವಿವರ ಇಲ್ಲಿದೆ.
Thu, 07 Nov 202404:41 AM IST
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 6ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಬಂದ ಲಕ್ಕಿ ಡಿಪ್ ಟಿಕೆಟನ್ನು ಯಾರಿಗೂ ಗೊತ್ತಾಗದಂತೆ ತನ್ನ ಬಳಿ ಇಟ್ಟುಕೊಳ್ಳುವ ತಾಂಡವ್, ಶ್ರೇಷ್ಠಾ ಜೊತೆ ಗಂಡ ಹೆಂಡತಿಯಂತೆ ಟ್ರಪ್ ಹೋಗುವ ಪ್ಲ್ಯಾನ್ ಮಾಡುತ್ತಾನೆ.
Thu, 07 Nov 202404:23 AM IST
- Happy Birthday Kamal Haasan: ಕಮಲ್ ಹಾಸನ್ ಭಾರತದ ಲೆಜೆಂಡರಿ ನಟ, ನಿರ್ದೇಶಕ, ಬರಹಗಾರ. ವಿವಿಧ ಸಿನಿಮಾಗಳಲ್ಲಿ ಅಭಿಮಾನಿಗಳು ಸದಾ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ಇವರು ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ 2898 ಎಡಿಯ ಯಾಸ್ಕಿನ್ ಅವತಾರದಿಂದ ಚಾಚಿ 420ಯವರೆಗೆ ಒಂದಕ್ಕಿಂತ ಒಂದು ಭಿನ್ನ ಅವತಾರಗಳಲ್ಲಿ ಕಾಣಿಸಿದ್ದಾರೆ.
Thu, 07 Nov 202404:09 AM IST
OTT Movies Releases This Week: ಕ್ರೈಮ್ ಥ್ರಿಲ್ಲರ್, ಮರ್ಡರ್ ಮಿಸ್ಟರಿ, ಫ್ಯಾಂಟಸಿ, ಆಕ್ಷನ್, ಕಾಮಿಡಿ ಸಿನಿಮಾಗಳು, ವೆಬ್ ಸರಣಿಗಳು ಸೇರಿ ಇನ್ನೂ 8 ವಿಶೇಷ ಸಿನಿಮಾಗಳು ಈ ವಾರ ಒಟಿಟಿಗೆ ಆಗಮಿಸುತ್ತಿವೆ. ಒಟ್ಟಾರೆಯಾಗಿ ಈ ವಾರ 26 ಕಂಟೆಂಟ್‌ಗಳು ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮ್ ಆಗಲಿವೆ.
Thu, 07 Nov 202402:52 AM IST
ನಿಖಿಲ್ ಸಿದ್ದಾರ್ಥ್ ಜೊತೆ ನಾಯಕಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಮೊದಲ ತೆಲುಗು ಸಿನಿಮಾ ಅಪ್ಪುಡೋ ಇಪ್ಪುಡೋ ಎಪ್ಪುಡೋ ಸಿನಿಮಾ ನವೆಂಬರ್ 8 ಶುಕ್ರವಾರ ರಿಲೀಸ್‌ಗೆ ಸಿದ್ದವಾಗಿದೆ. ಚಿತ್ರವನ್ನು ಬಿವಿಎಸ್‌ಎನ್ ಪ್ರಸಾದ್ ನಿರ್ಮಿಸಿದ್ದು ಸುಧೀರ್ ವರ್ಮಾ ನಿರ್ದೇಶನ ಮಾಡಿದ್ದಾರೆ.
Thu, 07 Nov 202401:58 AM IST
ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಾಗ ನಟ ಜಗ್ಗೇಶ್ ಅವರ ವಿರುದ್ಧ ಮಾತನಾಡಿದ್ದರು. ಈ ವಿಚಾರಕ್ಕೆ ಜಗ್ಗೇಶ್ ಟ್ರೋಲ್ ಆಗಿದ್ದರು. ಈಗ ಜಗ್ಗೇಶ್, ತಮ್ಮನ್ನು ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯಿಸಿ ಆನೆಯನ್ನು ನೋಡಿ ನಾಯಿಗಳು ಬೊಗಳುತ್ತವೆ, ಆದರೆ ಆನೆ ಆಗಲು ಯೋಗ ಬೇಕು ಎಂದಿದ್ದಾರೆ.