Entertainment News in Kannada Live October 17, 2024: 'ದೇವರು ರುಜು ಮಾಡಿದನು' ಹೊಸ ಸಿನಿಮಾ ಜೊತೆಗೆ ಹೊಸ ನಾಯಕ ವಿರಾಜ್‌ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ನಿರ್ದೇಶಕ ಸಿಂಪಲ್ ಸುನಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 17 Oct 202404:39 PM IST
ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ, ಚಮಕ್, ಅವತಾರ ಪುರುಷ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ನಿರ್ದೇಶಕ ಸಿಂಪಲ್ ಸುನಿ ಇದೀಗ ಹೊಸ ಸಿನಿಮಾದೊಂದಿಗೆ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ. ಚಿತ್ರಕ್ಕೆ 'ದೇವರು ರುಜು ಮಾಡಿದನು' ಎಂದು ಹೆಸರಿಟ್ಟಿದ್ದಾರೆ.
Thu, 17 Oct 202403:39 PM IST
- ಕರ್ನಾಟಕದಲ್ಲಿ ತಮಿಳಿನ ವೆಟ್ಟೈಯನ್ ಮತ್ತು ಕನ್ನಡದ ಮಾರ್ಟಿನ್ ಸಿನಿಮಾಗಳ ಅಬ್ಬರ ಈ ವಾರವೂ ಮುಂದುವರಿದಿದೆ. ಹೀಗಿರುವಾಗಲೇ ಮತ್ತೊಂದು ಶುಕ್ರವಾರ ಬಂದೇ ಬಿಟ್ಟಿದೆ. ಈ ವಾರ (ಅ.18) ಬಹುತೇಕ ಹೊಸಬರ ಸಿನಿಮಾಗಳೇ ಚಿತ್ರಮಂದಿರಕ್ಕೆ ಆಗಮಿಸುತ್ತಿವೆ.
Thu, 17 Oct 202412:13 PM IST
- ಜೀ ಕನ್ನಡವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಕೊನೆಗೂ ಗೌತಮ್ ದಿವಾನ್ ತನ್ನ ಮನಸ್ಸಿನ ಮಾತು ಕೇಳಿದ್ದಾರೆ. ಸಿಎಫ್‌ಒ ಹುದ್ದೆಗೆ ಜೈದೇವ್ ಸೂಕ್ತವಲ್ಲ ಎಂದುಕೊಂಡಿದ್ದಾರೆ. ಆತ ಸಂಪೂರ್ಣವಾಗಿ ಸರಿಯಾದ್ರೆ ಮುಂದೆ ನನ್ನ ಸೀಟು ಬಿಟ್ಟುಕೊಡಲು ರೆಡಿ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
Thu, 17 Oct 202412:10 PM IST
- Chetan Ahimsa: ರಾಜ್ಯದ ಎಲ್ಲ ಎಸ್‌ಟಿ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಘೋಷಣೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದಾರೆ.
Thu, 17 Oct 202410:21 AM IST
- Bigg Boss Kannada 11 TRP: ಟಿಆರ್‌ಪಿ ವಿಚಾರದಲ್ಲಿ ಬಿಗ್ ಬಾಸ್ ಕನ್ನಡ 11ರ ಸೀಸನ್ ವೀಕ್ಷಕರಿಂದ ಹೆಚ್ಚೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮ ಎನಿಸುತ್ತಿದೆ. ಆರಂಭದಿಂದ ಹಿಡಿದು, ಇದೀಗ ಮೂರನೇ ವಾರದ ಟಿಆರ್‌ಪಿಯಲ್ಲಿಯೂ ಏರಿಕೆ ಕಂಡಿದೆ. ಅದರಲ್ಲೂ ಕಿಚ್ಚನ ವಾರಾಂತ್ಯದ ಏಪಿಸೋಡ್‌ಗಳು ದಾಖಲೆ ಬರೆಯುತ್ತಿವೆ.
Thu, 17 Oct 202408:43 AM IST
- Bombat Bhojana 5: ಹೊಸ ಕಾನ್ಸೆಪ್ಟ್ ಜತೆಗೆ ಮತ್ತಷ್ಟು ವಿಶೇಷತೆಗಳೊಂದಿಗೆ ಬೊಂಬಾಟ್ ಭೋಜನ ಕಾರ್ಯಕ್ರಮ ಹೊತ್ತು ಬಂದಿದ್ದಾರೆ ಸಿಹಿಕಹಿ ಚಂದ್ರು. ಬೊಂಬಾಟ್ ಭೋಜನದ ಗಾಡಿ ರಾಜ್ಯಾದ್ಯಂತ ಸಂಚರಿಸಿ ನಿಮ್ ಊರಿಗೆ, ನಿಮ್ ಕೇರಿಗೆ, ನಿಮ್ ಗಲ್ಲಿಗಳಿಗೂ ಬರಲಿದೆ.
Thu, 17 Oct 202407:58 AM IST
ಪ್ರಿಯಾಂಕಾ ಉಪೇಂದ್ರ ಅಭಿನಯದ ಉಗ್ರಾವತಾರಂ ತೆಲುಗು ಸಿನಿಮಾ ಟ್ರೈಲರ್ ಇತ್ತೀಚೆಗೆ ಹೈದಾರಾಬಾದ್‌ನಲ್ಲಿ ರಿಲೀಸ್ ಆಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ, ನನಗೆ ಹೈದರಾಬಾದ್ ಲಕ್ಕಿ ಸಿಟಿ, ಉಪೇಂದ್ರ ಅವರನ್ನು ಮೊದಲ ಬಾರಿ ಭೇಟಿ ಆಗಿದ್ದು ಇಲ್ಲೇ ಎಂದು ಮುತ್ತಿನ ನಗರಿ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
Thu, 17 Oct 202407:12 AM IST
- ರಾಧಿಕಾ ಆಪ್ಟೆ ಮತ್ತು ಪತಿ ಬೆನೆಡಿಕ್ಟ್ ಟೇಲರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬಿಎಫ್‌ಐ ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರಾಧಿಕಾ ತನ್ನ ಪ್ರೆಗ್ನೆನ್ಸಿ ವಿಚಾರ ಬಹಿರಂಗಪಡಿಸಿದ್ದಾರೆ.
Thu, 17 Oct 202406:03 AM IST
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಬಘೀರ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾವನ್ನು ಡಾ ಸೂರಿ ನಿರ್ದೇಶನ ಮಾಡಿದ್ದಾರೆ.
Thu, 17 Oct 202406:03 AM IST
- ಸಲ್ಮಾನ್ ಖಾನ್‌ನ ಮಾಜಿ ಪ್ರೇಯಸಿ ನಟಿ ಸೋಮಿ ಆಲಿ ಅವರು ಲಾರೆನ್ಸ್ ಬಿಷ್ಣೋಯ್‌ಗೆ ಸೂಪರ್‌ಸ್ಟಾರ್‌ನ ಹಿಂದಿನ ಕೃತ್ಯಗಳನ್ನು ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ. ಬನ್ನಿ ಈ ಕುರಿತು ಝೂಮ್ ಕಾಲ್‌ನಲ್ಲಿ ಮಾತನಾಡೋಣ ಎಂದಿದ್ದಾರೆ.
Thu, 17 Oct 202404:48 AM IST
- ಕನ್ನಡ ರಾಜ್ಯೋತ್ಸವ ಹತ್ತಿರದಲ್ಲಿದೆ. ನವೆಂಬರ್ 1ರಂದು ಎಲ್ಲೆಲ್ಲೂ ಕನ್ನಡದ ಕಹಳೆ ಮೊಳಗಲಿದೆ. ಕನ್ನಡ ಹಬ್ಬ ಹತ್ತಿರದಲ್ಲಿರುವಾಗಲೇ ಕನ್ನಡದ ಪ್ರಮುಖ ರಿಯಾಲಿಟಿ ಶೋ ಬಿಗ್‌ಬಾಸ್ ಹೊಸ ಅಧ್ಯಾಯ ಮಾತ್ರ ಇಂಗ್ಲಿಷ್‌ಮಯವಾಗಿರುವುದು ಕನ್ನಡಪ್ರಿಯರಿಗೆ ಬೇಸರತರಿಸಿದೆ. ಇತ್ತೀಚೆಗೆ ರೂಪೇಶ್ ರಾಜಣ್ಣ ಈ ಕುರಿತು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು.
Thu, 17 Oct 202404:21 AM IST
- Seetha Rama Serial October 16th Episode: ಒಡಲ ಸತ್ಯವನ್ನು ರಾಮನ ಮುಂದೆ ಹೇಳಿಕೊಂಡಿದ್ದಾಳೆ ಸೀತಾ. ಆದರೆ, ಈ ಇಬ್ಬರ ಪ್ರಸ್ತಕ್ಕೆ ಭಾರ್ಗವಿ ಅಡ್ಡಗಾಲಾಗಿದ್ದಾಳೆ. ಹಾಲಿನಲ್ಲಿ ನಿದ್ದೆ ಮಾತ್ರೆ ಹಾಕಿ ಮೊದಲ ರಾತ್ರಿಯನ್ನು ಹಾಳು ಮಾಡಿದ್ದಾಳೆ. ಸೀತಾ ಇರೋ ಸತ್ಯ ಹೇಳಿದರೂ, ರಾಮ್ ಕಿವಿಗೆ ಅದ್ಯಾವುದು ಕೇಳಿಸಿಲ್ಲ!
Thu, 17 Oct 202404:15 AM IST
ತೆಲುಗು ನಟ ಅಲ್ಲು ಅರ್ಜುನ್ ನೋಡಲು ಅಭಿಮಾನಿಯೊಬ್ಬರು ದೂರದ ಉತ್ತರ ಪ್ರದೇಶದಿಂದ 1600 ಕಿಮೀ ಸೈಕಲ್ ತುಳಿದು ಹೈದರಾಬಾದ್‌ಗೆ ಬಂದಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಯನ್ನು ಸ್ಟೈಲಿಷ್ ಸ್ಟಾರ್ ಪ್ರೀತಿಯಿಂದ ಮಾತನಾಡಿಸಿ ನೆನಪಿನ ಕಾಣಿಕೆಯನ್ನೂ ನೀಡಿದ್ದಾರೆ.
Thu, 17 Oct 202403:53 AM IST
- ಅಜ್ಜಿ ಊರಿಂದ ತನ್ನೂರಿಗೆ ಹೊರಟ ಶ್ರಾವಣಿಗೆ ಅಜ್ಜಿ ಕೊಟ್ಟ ಕಾರಿನಲ್ಲಿ ಸುಬ್ಬು ಜೊತೆ ಪ್ರಯಾಣ ಮಾಡುವ ಬಯಕೆ. ವಿಜಯಾಂಬಿಕಾಗೆ ನಂದಿನಿ ಟ್ರಂಕ್ ಶ್ರಾವಣಿ ನೋಡಿದರೆ ಎಂಬ ಭಯ. ವರದ–ವರಲಕ್ಷ್ಮೀ ಮನೆಯಲ್ಲಿ ಮದುವೆ ತಯಾರಿ ಜೋರು. ಜಾಲಿರೈಡ್‌ನಲ್ಲಿರುವ ಸುಬ್ಬು–ಶ್ರಾವಣಿಯನ್ನ ಹಿಂಬಾಲಿಸುತ್ತಿರುವ ರೌಡಿಗಳು. ಅಕ್ಟೋಬರ್ 16ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Thu, 17 Oct 202403:19 AM IST
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 16ರ ಎಪಿಸೋಡ್‌ನಲ್ಲಿ ಅಮ್ಮನೇ ಶ್ರೇಷ್ಠಾಳನ್ನು ಕಟ್ಟಿ ಹಾಕಿರುವುದು ಎಂಬ ವಿಷಯ ತಾಂಡವ್‌ಗೆ ತಿಳಿಯುತ್ತದೆ. ಭಾಗ್ಯಾಗೆ ವಿಚಾರ ಹೇಳಿದರೆ ಇಬ್ಬರನ್ನೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಸುವುದಾಗಿ ಕುಸುಮಾ ವಾರ್ನ್ ಮಾಡುತ್ತಾಳೆ.
Thu, 17 Oct 202402:02 AM IST
ಇತ್ತೀಚಿನ ದಿನಗಳಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಂತೆ ಬಹಳಷ್ಟು ಮಂದಿ ಹಾರರ್ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಿದ್ದಾರೆ. ಅದರಲ್ಲೂ ಮಲಯಾಳಂ ಹಾರರ್ ಸಿನಿಮಾಗಳು ಬಹಳ ಫೇಮಸ್ ಆಗುತ್ತಿವೆ. ನೀವೂ ಕೂಡಾ ಹಾರರ್ ಸಿನಿಮಾಪ್ರಿಯರಾಗಿದ್ದಲ್ಲಿ ಒಟಿಟಿಯಲ್ಲಿ ಈ ಟಾಪ್ 5 ಹಾರರ್ ಚಿತ್ರಗಳನ್ನು ಮಿಸ್ ಮಾಡಬೇಡಿ.
Thu, 17 Oct 202412:43 AM IST
ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಅತಿರೇಕ ವರ್ತನೆ ನೋಡುಗರಿಗೆ ಮುಜುಗರ ತರಿಸಿದೆ. ಇದರ ನಡುವೆ ಉಗ್ರಂ ಮಂಜು ಹಾಗೂ ಜಗದೀಶ್ ಇಬ್ಬರೂ ತುಟಿಗೆ ತುಟಿ ಒತ್ತುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಬಹುಶ: ಇದನ್ನು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಮಾಡಿರಬಹುದು ಎನ್ನಲಾಗುತ್ತಿದೆ.