Entertainment News in Kannada Live September 3, 2024: ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ ಪ್ರವಾಸದ ಅನುಭವ ನೀಡಲಿದ್ದಾರೆ ದೀಪಿಕಾದಾಸ್‌- ಇಲ್ಲಿದೆ ಪಾರು ಪಾರ್ವತಿ ಅಪ್‌ಡೇಟ್‌-entertainment news in kannada today live september 3 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 3, 2024: ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ ಪ್ರವಾಸದ ಅನುಭವ ನೀಡಲಿದ್ದಾರೆ ದೀಪಿಕಾದಾಸ್‌- ಇಲ್ಲಿದೆ ಪಾರು ಪಾರ್ವತಿ ಅಪ್‌ಡೇಟ್‌

ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ ಪ್ರವಾಸದ ಅನುಭವ ನೀಡಲಿದ್ದಾರೆ ದೀಪಿಕಾದಾಸ್‌- ಇಲ್ಲಿದೆ ಪಾರು ಪಾರ್ವತಿ ಅಪ್‌ಡೇಟ್‌

Entertainment News in Kannada Live September 3, 2024: ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ ಪ್ರವಾಸದ ಅನುಭವ ನೀಡಲಿದ್ದಾರೆ ದೀಪಿಕಾದಾಸ್‌- ಇಲ್ಲಿದೆ ಪಾರು ಪಾರ್ವತಿ ಅಪ್‌ಡೇಟ್‌

01:44 PM ISTSep 03, 2024 07:14 PM HT Kannada Desk
  • twitter
  • Share on Facebook
01:44 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 03 Sep 202401:44 PM IST

ಮನರಂಜನೆ News in Kannada Live:ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡ ಪ್ರವಾಸದ ಅನುಭವ ನೀಡಲಿದ್ದಾರೆ ದೀಪಿಕಾದಾಸ್‌- ಇಲ್ಲಿದೆ ಪಾರು ಪಾರ್ವತಿ ಅಪ್‌ಡೇಟ್‌

  • ಬಿಗ್‌ಬಾಸ್‌ ಕನ್ನಡ ಖ್ಯಾತಿಯ ದೀಪಿಕಾ ದಾಸ್‌ ನಟನೆಯ ಪಾರು ಪಾರ್ವತಿ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ. ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಾಖಂಡದ ಸಾಹಸ ಪ್ರಯಾಣದ ಅನುಭವನ್ನು ನೀಡುವ ಭರವಸೆ ನೀಡಿದೆ ಚಿತ್ರತಂಡ.
Read the full story here

Tue, 03 Sep 202401:26 PM IST

ಮನರಂಜನೆ News in Kannada Live:Biggest Flop Movie: ಬಜೆಟ್ 45 ಕೋಟಿ, ಬಂದಿದ್ದು 45 ಸಾವಿರ; ವಿಶ್ವದಲ್ಲಿ ಇದಕ್ಕಿಂತ ಫ್ಲಾಪ್ ಸಿನಿಮಾ ಮತ್ತೊಂದಿಲ್ಲ!

  • Biggest Flop Movie: ಭಾರತದಲ್ಲೇ ಇದಕ್ಕಿಂತ ಫ್ಲಾಪ್ ಸಿನಿಮಾ ಮತ್ತೊಂದಿಲ್ಲ. 45 ಕೋಟಿ ರೂಪಾಯಿ ಬಜೆಟ್​​ನಲ್ಲಿ ಚಿತ್ರವನ್ನು ನಿರ್ಮಿಸಲಾಗಿತ್ತು. ಆದರೆ ಗಳಿಸಿದ್ದು 45 ಸಾವಿರ ರೂಪಾಯಿ. ಚಿತ್ರಮಂದಿರಕ್ಕೆ ಬಿಡುಗಡೆಯಾಗಿ 10 ತಿಂಗಳಾದರೂ ಒಟಿಟಿಗೂ ಬಿಡುಗಡೆಯಾಗಿಲ್ಲ ಎಂಬುದೇ ಅಚ್ಚರಿ.
Read the full story here

Tue, 03 Sep 202412:33 PM IST

ಮನರಂಜನೆ News in Kannada Live:ಚಂದನ್‌ ಶೆಟ್ಟಿ ಖರೀದಿಸಿದ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು? ಈ ಮರಿಯಾನೆ ಬೆಲೆ 60 ಲಕ್ಷ ರೂಪಾಯಿ

  • Chandan Shetty New Car Details: ಕನ್ನಡ ನಟ, ಗಾಯಕ ಚಂದನ್‌ ಶೆಟ್ಟಿ ಹೊಸ ಕಾರು ಖರೀದಿಸಿದ್ದಾರೆ. ಟೊಯೊಟಾ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ (ಎಟಿ) ಎಂಬ ಈ ಕಾರಿನ ಬೆಂಗಳೂರು ಆನ್‌ರೋಡ್‌ ದರ ಎಷ್ಟು? ಇದರ ವಿಶೇಷಗಳೇನು? ಎಂಜಿನ್‌ ಹೇಗಿದೆ, ಪವರ್‌ ಎಷ್ಟಿದೆ? ಇತ್ಯಾದಿ ವಿವರ ಇಲ್ಲಿದೆ.
Read the full story here

Tue, 03 Sep 202411:22 AM IST

ಮನರಂಜನೆ News in Kannada Live:ಯಲಾಕುನ್ನಿ ಮೇರಾ ನಾಮ್‌ ವಜ್ರಮುನಿ ಸಿನಿಮಾದ ಶೂಟಿಂಗ್‌ ಮುಕ್ತಾಯ, ವಜ್ರಮುನಿಯಾದ ಕೋಮಲ್‌ ಕುಮಾರ್‌

  • Yella Kunni My Name is Vajramuni: ದಿವಂಗತ ವಜ್ರಮುನಿ ಲುಕ್‌ನಲ್ಲಿ ತೆರೆಮೇಲೆ ಬರಲು ನಟ ಕೋಮಲ್‌ ರೆಡಿಯಾಗಿದ್ದಾರೆ. "ಯಲಾಕುನ್ನಿ" ಮೇರಾ ನಾಮ್ ವಜ್ರಮುನಿ ಸಿನಿಮಾದ ಶೂಟಿಂಗ್‌ ಮುಕ್ತಾಯಗೊಂಡಿದೆ. ಕೋಮಲ್‌ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.
Read the full story here

Tue, 03 Sep 202410:42 AM IST

ಮನರಂಜನೆ News in Kannada Live:ಕಿರುತೆರೆಯಲ್ಲಿ ನೋಡಿ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024 ಸಂಭ್ರಮ, ಯಾವ ಚಾನೆಲ್‌, ಯಾವಾಗ ಪ್ರಸಾರ? ಇಲ್ಲಿದೆ ವಿವರ

  • ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2024 ಕಾರ್ಯಕ್ರಮವು ಇದೇ ಸೆಪ್ಟೆಂಬರ್‌ 8ರಂದು ಸ್ಟಾರ್ ಸುವರ್ಣ ಪ್ಲಸ್‌ನಲ್ಲಿ ಮಧ್ಯಾಹ್ನ 3-5 ಗಂಟೆಗೆ ಪ್ರಸಾರವಾಗಲಿದೆ. ಕನ್ನಡ ಮಾತ್ರವಲ್ಲದೆ ಸ್ಟಾರ್ ಮಾ ಮೂವೀಸ್, ವಿಜಯ್ ಸೂಪರ್, ಏಷ್ಯಾನೆಟ್ ಮೂವೀಸ್‌ನಲ್ಲೂ ಕಮರ್ ಫಿಲ್ಮ್ ಫ್ಯಾಕ್ಟರಿಯ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
Read the full story here

Tue, 03 Sep 202409:47 AM IST

ಮನರಂಜನೆ News in Kannada Live:ಕಿರುತೆರೆಯಲ್ಲಿ ಹೊಸ ಧಾರಾವಾಹಿ ಹಬ್ಬ: ನೀನಾದೆ ನಾ ಹೊಸ ಅಧ್ಯಾಯ ಆರಂಭಿಸಿದ ಕಾವೇರಿ ಕನ್ನಡ ಮೀಡಿಯಂ ನಿರ್ದೇಶಕ

  • Neenade Na Kannada Serial: ಸ್ಟಾರ್‌ ಸುವರ್ಣವಾಹಿನಿಯಲ್ಲಿ ಇದೇ ಸೋಮವಾರದಿಂದ ನೀನಾದೆ ನಾ ಧಾರಾವಾಹಿಯ ಹೊಸ ಅಧ್ಯಾಯ ಆರಂಭವಾಗಲಿದೆ. ನಾಯಕನಾಗಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಶಿವು ಅಭಿನಯಿಸುತ್ತಿದ್ದಾರೆ. ಹಳೆ ನಾಯಕ ನಾಯಕಿ ಹೊಸ ಕಥೆಯೊಂದಿಗೆ ಬರಲಿದ್ದಾರೆ.
Read the full story here

Tue, 03 Sep 202407:59 AM IST

ಮನರಂಜನೆ News in Kannada Live:ಆಂಧ್ರ ಪ್ರದೇಶ, ತೆಲಂಗಾಣ ಪ್ರವಾಹ ಪೀಡಿತರಿಗೆ ಹಣ ಸಹಾಯ ಮಾಡಿದ ಜ್ಯೂ. ಎನ್‌ಟಿಆರ್‌; ತೆಲುಗು ಸ್ಟಾರ್‌ ನಟ ಕೊಟ್ಟಿದ್ದೆಷ್ಟು?

  • ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜನರು ಪ್ರವಾಹದಿಂದ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಜೊತೆ ಕೈ ಜೋಡಿಸಿರುವ ತೆಲುಗು ಸ್ಟಾರ್‌ ನಟ ಜ್ಯೂನಿಯರ್‌ ಎನ್‌ಟಿಆರ್‌, ಆಂಧ್ರ, ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ್ದಾರೆ. 

Read the full story here

Tue, 03 Sep 202407:34 AM IST

ಮನರಂಜನೆ News in Kannada Live:ಕನ್ನಡದಲ್ಲಿ ಶ್ರೀ ಗಣೇಶನ ಶ್ಲೋಕಗಳು: ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ, ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ

  • ಕನ್ನಡದಲ್ಲಿ ಗಣೇಶನ ಶ್ಲೋಕಗಳು: ಯಾವುದೇ ಸಿನಿಮಾ ಆರಂಭವಾಗುವ ಮುನ್ನ ಗಣೇಶನ ಸ್ತುತಿಸಲಾಗುತ್ತದೆ. ಯಾವುದೇ ಕೆಲಸ ಆರಂಭಕ್ಕೂ ಮುನ್ನ ಗಣಪತಿಯನ್ನು ಪ್ರಾರ್ಥಿಸಲಾಗುತ್ತದೆ. "ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ, ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ" ಗಣೇಶ ಶ್ಲೋಕಗಳು ಇಲ್ಲಿವೆ.
Read the full story here

Tue, 03 Sep 202407:15 AM IST

ಮನರಂಜನೆ News in Kannada Live:BoycottNetflix; ಐಸಿ814 ಕಂದಹಾರ್ ಹೈಜಾಕ್ ವೆಬ್​ ಸೀರೀಸ್ ವಿವಾದ; ನಿರ್ದೇಶಕನ ವಿರುದ್ಧ ಕೊತಕೊತ ಕುದಿಯುತ್ತಿದ್ದಾರೆ ಹಿಂದೂಗಳು

  • Boycott Netflix: ಅನುಭವ್ ಸಿನ್ಹಾ ನಿರ್ದೇಶನದ ಐಸಿ814 ವೆಬ್​ಸಿರೀಸ್ ನೆಟ್​ಫ್ಲಿಕ್ಸ್​​ನಲ್ಲಿ​ ದೊಡ್ಡ ವಿವಾದಕ್ಕೆ ಗುರಿಯಾಗಿದ್ದು, ಹಿಂದೂಗಳನ್ನು ಭಯೋತ್ಪಾದಕಂತೆ ಬಿಂಬಿಸಿರುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.

Read the full story here

Tue, 03 Sep 202405:48 AM IST

ಮನರಂಜನೆ News in Kannada Live:ಲಾಫಿಂಗ್ ಬುದ್ಧ ಯಶಸ್ಸಿನ ಬೆನ್ನಲ್ಲೇ ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗ ಮಾಡಿದ ಪ್ರಮೋದ್‌ ಶೆಟ್ಟಿ

  • ಪ್ರಮೋದ್‌ ಶೆಟ್ಟಿ ನಟನೆಯ ಲಾಫಿಂಗ್‌ ಬುದ್ಧ ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಪ್ರಮೋದ್‌ ಶೆಟ್ಟಿ ನಟನೆಯ ಮುಂಬರುವ ಚಿತ್ರ ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗದ ಕುರಿತು ಹೊಸ ಅಪ್‌ಡೇಟ್‌ ದೊರಕಿದೆ.
Read the full story here

Tue, 03 Sep 202405:05 AM IST

ಮನರಂಜನೆ News in Kannada Live:ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ ಖುಷಿಗೊಂಡ ದುಬೈ ಕನ್ನಡಿಗರು, ಅಬುದಾಬಿಯಲ್ಲೂ ಪ್ರದರ್ಶನಗೊಂಡ ಗಣೇಶ್‌ ಸಿನಿಮಾ

  • Krishnam Pranaya Sakhi: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ವಿಶೇಷ ಪ್ರದರ್ಶನ ಅಬುದಾಭಿ ಮತ್ತು ದುಬೈನಲ್ಲಿ ನಡೆದಿದೆ. ದುಬೈ ಕನ್ನಡಿಗರು ಚಿತ್ರತಂಡದ ಜತೆ ಈ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.
Read the full story here

Tue, 03 Sep 202404:33 AM IST

ಮನರಂಜನೆ News in Kannada Live:ಮನೆಯಿಂದ ತಪ್ಪಿಸಿಕೊಂಡು ಮದುವೆ ಹಾಲ್‌ ಸೇರಿದ ತಾಂಡವ್‌, ಸುಂದ್ರಿಯನ್ನು ನೋಡೇಬಿಟ್ಲು ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 2ರ ಎಪಿಸೋಡ್‌. ಮನೆಯಲ್ಲಿ ಬಂಧಿಯಾಗಿದ್ದ ತಾಂಡವ್‌ ತಪ್ಪಿಸಿಕೊಂಡು ಮದುವೆ ಹಾಲ್‌ಗೆ ಬರುತ್ತಾನೆ. ಇತ್ತ ಶ್ರೇಷ್ಠಾ ತಂದೆ ತಾಯಿಯೊಂದಿಗೆ ಭಾಗ್ಯಾ, ಕುಸುಮಾ ಕೂಡಾ ಮದುವೆ ಮನೆಗೆ ಬರುತ್ತಾರೆ. 

Read the full story here

Tue, 03 Sep 202404:19 AM IST

ಮನರಂಜನೆ News in Kannada Live:ಜೈದೇವ್‌ನನ್ನು ಗೃಹಬಂಧನದಲ್ಲಿರಿಸಿದ ಗೌತಮ್‌ ದಿವಾನ್‌, ಕ್ಲಬ್‌ನಲ್ಲಿ ಆಡಿ 10 ಲಕ್ಷ ರೂ ಕಳೆದುಕೊಂಡ ಅಪೇಕ್ಷಾ- ಅಮೃತಧಾರೆ ಧಾರಾವಾಹಿ

  • Amruthadhaare Serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಸೆಪ್ಟೆಂಬರ್‌ 3ರ ಎಪಿಸೋಡ್‌ನಲ್ಲಿ ಸಾಕಷ್ಟು ಹೊಸ ಬೆಳವಣಿಗೆಗಳು ನಡೆದಿವೆ. ಜೈದೇವ್‌ಗೆ ಕಪಾಳಮೋಕ್ಷ ಮಾಡಿರುವ ಗೌತಮ್‌ ಆತನಿಗೆ ಗೃಹಬಂಧನದ ಶಿಕ್ಷೆ ನೀಡಿದ್ದಾನೆ. ಇನ್ನೊಂದೆಡೆ ಕ್ಲಬ್‌ನಲ್ಲಿ ಆಡಿ ಅಪೇಕ್ಷಾ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ.
Read the full story here

Tue, 03 Sep 202403:20 AM IST

ಮನರಂಜನೆ News in Kannada Live:ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಹಿಂದೂಗಳ ಹೆಸರು; ವಿವಾದ ಸೃಷ್ಟಿಸಿದ IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿ

  • ಆಗಸ್ಟ್‌ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿದ್ದ IC 814-ದಿ ಕಂದಹಾರ್‌ ಹೈಜಾಕ್‌ ವೆಬ್‌ ಸರಣಿ ಹೆಚ್ಚು ವೀಕ್ಷಣೆ ಪಡೆದಿದೆ. ಅದಕ್ಕಿಂತ ಹೆಚ್ಚಾಗಿ ಈ ಸರಣಿ ವಿವಾದ ಸೃಷ್ಟಿಸಿದೆ. ಅನುಭವ್‌ ಸಿನ್ಹಾ ನಿರ್ದೇಶನದ ಈ ಸೀರೀಸ್‌ನಲ್ಲಿ ಹರ್ಕತ್‌ ಉಲ್‌ ಮುಜಾಹಿದ್ದೀನ್ ಭಯೋತ್ಪಾದಕರಿಗೆ ಹಿಂದೂಗಳ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. 

Read the full story here

Tue, 03 Sep 202402:56 AM IST

ಮನರಂಜನೆ News in Kannada Live:ಸಾಲಿಗ್ರಾಮದ ದಾರಿಯಲ್ಲಿ ಸುಬ್ಬು–ಶ್ರಾವಣಿ ಕುಟುಂಬ, ಕಡಿಮೆಯಾಗಿಲ್ಲ ವಿಜಯಾಂಬಿಕಾ ಜಂಭ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode September 2nd: ವೀರೇಂದ್ರ–ಪದ್ಮನಾಭ ಕುಟುಂಬದಲ್ಲಿ ಸಾಲಿಗ್ರಾಮಕ್ಕೆ ಹೋಗುವ ಸಂಭ್ರಮ, ಸುಬ್ಬು ಮನೆಗೆ ಕಳುಹಿಸುವ ಕಾರಿನಲ್ಲಿ ವಿಜಯಾಂಬಿಕಾ. ಮದುವೆ ಮಾತುಕತೆ ಮಾಡಿ, ಆದಷ್ಟು ಬೇಗ ಮದುವೆ ಕಾರ್ಯಗಳು ಸುಸೂತ್ರವಾಗಿ ನಡೆಯಬೇಕು ಅಂದ್ರು ಇಂದ್ರಮ್ಮ.
Read the full story here