Entertainment News in Kannada Live September 4, 2024: ಮಲಯಾಳಂನ AMR ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲಂಸ್‌-entertainment news in kannada today live september 4 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live September 4, 2024: ಮಲಯಾಳಂನ Amr ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲಂಸ್‌

ಮಲಯಾಳಂನ AMR ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲಂಸ್‌(linkedin Profile Photo)

Entertainment News in Kannada Live September 4, 2024: ಮಲಯಾಳಂನ AMR ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲಂಸ್‌

03:39 PM ISTSep 04, 2024 09:09 PM HT Kannada Desk
  • twitter
  • Share on Facebook
03:39 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Wed, 04 Sep 202403:39 PM IST

ಮನರಂಜನೆ News in Kannada Live:ಮಲಯಾಳಂನ AMR ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲಂಸ್‌

  • ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗಿರುವ ಮಲಯಾಳಂನ ಎಆರ್‌ಎಂ ಚಿತ್ರಕ್ಕೀಗ ಹೊಂಬಾಳೆ ಫಿಲಂಸ್‌ ಸಾಥ್‌ ನೀಡಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ವಿತರಣೆ ಮಾಡಲಿದೆ. ಸೆ. 12ರಂದು ಟೊವಿನೋ ಥಾಮಸ್‌ ಅವರ ಎಆರ್‌ಎಂ  ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. 
Read the full story here

Wed, 04 Sep 202412:33 PM IST

ಮನರಂಜನೆ News in Kannada Live:Shalivahana Shake: ತೆರೆಗೆ ಬರಲು ರೆಡಿಯಾಯ್ತು ಟೈಮ್‌ ಲೂಪ್‌ ಪರಿಕಲ್ಪನೆಯ ಶಾಲಿವಾಹನ ಶಕೆ ಸಿನಿಮಾ

  • ಶೀರ್ಷಿಕೆ ಮೂಲಕವೇ ಗಮನ ಸೆಳೆಯುತ್ತಿರುವ 'ಶಾಲಿವಾಹನ ಶಕೆ' ಚಿತ್ರ ಇದೀಗ, ಟ್ರೈಲರ್ ಮೂಲಕ ನೋಡುಗರ ಮುಂದೆ ಬಂದಿದೆ. ಈ ಹಿಂದೆ ಒಂದು ಕಥೆ ಹೇಳ್ಲಾ, ವಾವ್ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ.
Read the full story here

Wed, 04 Sep 202411:15 AM IST

ಮನರಂಜನೆ News in Kannada Live:ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ಕೌಟುಂಬಿಕ ಕಥೆ ದೃಷ್ಟಿಬೊಟ್ಟು; ಹೊಸ ಧಾರಾವಾಹಿಯಲ್ಲಿ ರೌಡಿ ದತ್ತನಾಗಿ ವಿಜಯ್‌ ಸೂರ್ಯ ರಗಡ್‌ ಎಂಟ್ರಿ

  • ಕಲರ್ಸ್‌ ಕನ್ನಡವಾಹಿನಿಯಲ್ಲಿ ಸೆಪ್ಟೆಂಬರ್‌ 9ರಿಂದ ಹೊಸ ಧಾರಾವಾಹಿ ಶುರುವಾಗಲಿದೆ ಅದೇ ದೃಷ್ಟಿಬೊಟ್ಟು. ಈ ಸೀರಿಯಲ್‌ ಮೂಲಕ ಕಲರ್ಸ್‌ಗೆ ಮರಳಿದ್ದಾರೆ ನಟ ವಿಜಯ ಸೂರ್ಯ. ಇತ್ತೀಚೆಗಷ್ಟೇ ಸ್ಟಾರ್‌ ಸುವರ್ಣದಲ್ಲಿ ಇವರ ನಮ್ಮ ಲಚ್ಚಿ ಸೀರಿಯಲ್‌ ಮುಕ್ತಾಯವಾಗಿತ್ತು. 
Read the full story here

Wed, 04 Sep 202410:14 AM IST

ಮನರಂಜನೆ News in Kannada Live:ಕನ್ನಡ ಚಿತ್ರೋದ್ಯಮದಲ್ಲಿಯೂ ನಟಿಯರಿಗೆ ಲೈಂಗಿಕ ಕಿರುಕುಳ! ಕೂಡಲೇ ನ್ಯಾಯಮೂರ್ತಿ ಸಮಿತಿ ರಚಿಸಿ ಎಂದ FIRE

  • Film Industry for Rights and Equality: ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ FIRE ಸಂಸ್ಥೆಯು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ.
Read the full story here

Wed, 04 Sep 202409:26 AM IST

ಮನರಂಜನೆ News in Kannada Live:ಐಸಿ- 814 ವೆಬ್‌ಸರಣಿಯ ಕಥೆ ಸರಿಯಿಲ್ಲ, ಕಂದಹಾರ್‌ ಹೈಜಾಕ್‌ ಸಂದರ್ಭ ವಿಮಾನದಲ್ಲಿದ್ದ ಕ್ಯಾಬಿನ್‌ ಸಿಬ್ಬಂದಿ ಮುಖ್ಯಸ್ಥಅನಿಲ್‌ ಶರ್ಮಾ ಬೇಸರ

  • IC-814 row: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ IC 814: The Kandahar Hijack ವೆಬ್‌ಸರಣಿ ವಿವಾದದ ಸಂದರ್ಭದಲ್ಲಿ 1999ರಲ್ಲಿ ಕಂದಹಾರ್‌ ಹೈಜಾಕ್‌ ಆದ ಸಂದರ್ಭದಲ್ಲಿ ವಿಮಾನದಲ್ಲಿ ಕ್ಯಾಬಿನ್‌ ಸಿಬ್ಬಂದಿ ಮುಖ್ಯಸ್ಥ ಅನಿಲ್‌ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೆಬ್‌ ಸರಣಿಯಲ್ಲಿ ಘಟನೆಯನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Read the full story here

Wed, 04 Sep 202409:19 AM IST

ಮನರಂಜನೆ News in Kannada Live:Seetha Rama Serial: ಡಾ. ಅನಂತಲಕ್ಷ್ಮೀ ಮುಂದೆ ಸೀತೆಯ ಒಡಲ ಸತ್ಯ ಅನಾವರಣ! ಸಿಹಿ ಹುಟ್ಟಿನ ರಹಸ್ಯ ಬಯಲು

  • ಸಿಹಿ ಹುಟ್ಟಿನ ರಹಸ್ಯ ನನ್ನೊಳಗೇ ಇರಲಿ ಎಂದು ಸೀತಾ ಆ ಒಡಲ ಗುಟ್ಟನ್ನು ಒಳಗಿಟ್ಟುಕೊಂಡೇ ಬಂದಿದ್ದಳು. ಇದೀಗ ಆ ಗುಟ್ಟ ದೇಸಾಯಿ ಮನೆ ಮಂದಿ ಮುಂದೆ ಗೊತ್ತಾಗುವ ಸಮಯ ಬಂದಿದೆ
Read the full story here

Wed, 04 Sep 202407:52 AM IST

ಮನರಂಜನೆ News in Kannada Live:ಫೋಟೋದಲ್ಲೂ ನಿನ್ನನ್ನು ಒಂಟಿಯಾಗಿ ಬಿಡೊಲ್ಲ; ಹೆಂಡತಿ ಬರ್ತ್‌ಡೇಗೆ ವಿಶ್‌ ಮಾಡಿ ಪ್ರೀತಿಯ ಮಳೆ ಸುರಿಸಿದ ದುಲ್ಕರ್‌ ಸಲ್ಮಾನ್‌

  • ನಟ ದುಲ್ಮರ್‌ ಸಲ್ಮಾನ್‌ ಪತ್ನಿ ಅಮಲ್‌ ಸುಫಿಯಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪತ್ನಿ ಜೊತೆಗಿನ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ದುಲ್ಕರ್‌ ಸಲ್ಮಾನ್‌, ಫೋಟೋದಲ್ಲೂ ನಿನ್ನನ್ನು ಒಂಟಿಯಾಗಿರಲು ಬಿಡುವುದಿಲ್ಲ ಎಂದು ವಿಶೇಷ ಸಾಲುಗಳನ್ನು ಬರೆದು ವಿಶ್‌ ಮಾಡಿದ್ದಾರೆ. 

Read the full story here

Wed, 04 Sep 202406:58 AM IST

ಮನರಂಜನೆ News in Kannada Live:IC 814 ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ ವಿವಾದ; ಕೊನೆಗೂ ಉಗ್ರರ ನಿಜವಾದ ಹೆಸರನ್ನು ಸೇರಿಸಲು ಒಪ್ಪಿದ ನೆಟ್‌ಫ್ಲಿಕ್ಸ್‌

  • IC 814 ದಿ ಕಂದಹಾರ್‌ ಹೈಜಾಕ್‌ ವೆಬ್‌ ಸೀರೀಸ್‌ ವಿವಾದ ಕೊನೆಗೂ ತಣ್ಣಗಾಗಿದೆ. ವೆಬ್‌ ಸರಣಿಯಲ್ಲಿ ಪಾಕಿಸ್ತಾನಿ ಉಗ್ರರಿಗೆ ಹಿಂದೂಗಳ ಹೆಸರಿಟ್ಟಿದ್ದನ್ನು ಕೇಂದ್ರ ಖಂಡಿಸಿತ್ತು. ಇದೀಗ ಸರ್ಕಾಋದ ಸಮನ್ಸ್‌ಗೆ ಉತ್ತರಿಸಿರುವ ನೆಟ್‌ಫ್ಲಿಕ್ಸ್‌ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌, ಉಗ್ರರ ನಿಜ ಹೆಸರನ್ನು ಸೇರಿಸಲು ಒಪ್ಪಿದ್ದಾರೆ. 

Read the full story here

Wed, 04 Sep 202405:05 AM IST

ಮನರಂಜನೆ News in Kannada Live:ಕೊನೆಗೂ ಅಮ್ಮನ ಕೈಲಿ ಸಿಕ್ಕಿಬಿದ್ದ ತಾಂಡವ್‌, ಮಗನಿಗೆ ತಕ್ಕ ಶಾಸ್ತಿ ಮಾಡ್ತಾಳಾ ಕುಸುಮಾಂಬೆ? ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 3ರ ಎಪಿಸೋಡ್‌. ಮದುವೆ ಮನೆಗೆ ಬರುವ ತಾಂಡವ್‌ ಅಲ್ಲಿ ಕುಸುಮಾ ಇರುವುದನ್ನು ನೋಡಿ ತಪ್ಪಿಸಿಕೊಂಡು ಓಡುತ್ತಾನೆ. ಅವನ ಹಿಂದೆಯೇ ಓಡುವ ಕುಸುಮಾ ತಾಂಡವ್‌ ಬಟ್ಟೆ ಹಿಡಿದುಕೊಳ್ಳುತ್ತಾಳೆ. ತಾಂಡವ್‌ ಅಮ್ಮನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. 

Read the full story here

Wed, 04 Sep 202405:04 AM IST

ಮನರಂಜನೆ News in Kannada Live:Annayya Serial: ಶುರುವಾಯ್ತು ಶಿವಣ್ಣನಿಗೆ ಪ್ರೀತಿ, ಪಾರು ಗುಂಗಲ್ಲೇ ಕಳೆದೋದ ಅಣ್ಣಯ್ಯ, ಮಾವಯ್ಯನಿಗೆ ಬಂತು ಅನುಮಾನ

  • Zee Kannada Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಜೊತೆ ಸೇರೋಕೆ ಶಿವು ಸಿದ್ಧವಾಗಿದ್ದಾನೆ. ಅವಳ ಮನಸಿನ ಭಾವನೆ ಈಗ ಅವನಿಗೆ ಅರ್ಥವಾಗಿದೆ. ಅವರಿಬ್ಬರ ನಡವಳಿಕೆ ಮಾವನಿಗೆ ಅನುಮಾನ ತರಿಸಿದೆ. 
Read the full story here

Wed, 04 Sep 202403:23 AM IST

ಮನರಂಜನೆ News in Kannada Live:ವರ್ಕೌಟ್ ಆಯ್ತು ಪಿಂಕ್ ಪ್ಲಾನ್‌, ಒಟ್ಟಿಗೆ ಕೂತ್ರು ವೀರು–ಶ್ರಾವಣಿ, ವಿಜಯಾಂಬಿಕಾ ಪಾಡು ಕೇಳೋರಿಲ್ಲ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode September 3rd: ಅಕ್ಕ–ದೊಡ್ಡಪ್ಪ ಒಟ್ಟಿಗೆ ಕುಳಿತುಕೊಳ್ಳಲಿ ಎಂದು ಪಿಂಕಿ ಮಾಡಿದ್ಲು ಮಾಸ್ಟರ್ ಪ್ಲಾನ್‌. ಕಾಂತಮ್ಮ– ಸುಂದರ ತಿಂಡಿ ಅವಾಂತರಕ್ಕೆ ವಿಜಯಾಂಬಿಕಾ ಸುಸ್ತೋ ಸುಸ್ತು. ಸಾಮಾನ್ಯರಂತೆ ನೆಲದಲ್ಲಿ ಕೂತು ಸುಬ್ಬು ಮನೆಯಿಂದ ತಂದ ಊಟ ತಿಂದ ಮಿನಿಸ್ಟರ್ ಕುಟುಂಬ. ಸಾಗುತ್ತಿದೆ ಸಾಲಿಗ್ರಾಮದತ್ತ ಪಯಣ.
Read the full story here

Wed, 04 Sep 202403:22 AM IST

ಮನರಂಜನೆ News in Kannada Live:ಕಪಾಳ ಮೋಕ್ಷದ ಬಳಿಕ ಜೈದೇವ್‌ಗೆ ಶಿಕ್ಷೆ ನೀಡಿದ ಗೌತಮ್‌ ದಿವಾನ್‌, ಭೂಮಿಕಾ ನೀಡಿದ ಗಿಫ್ಟ್‌ ನೋಡಿ ಡುಮ್ಮಸಾರ್‌ ಭಾವುಕ- ಅಮೃತಧಾರೆ ಧಾರಾವಾಹಿ

  • ಅಮೃತಧಾರೆ ಧಾರಾವಾಹಿ ಬುಧವಾರದ ಸಂಚಿಕೆ: ಝೀ ಕನ್ನಡ ವಾಹಿನಿಯ ಅಮೃತಧಾರೆಯಲ್ಲಿ ಗೌತಮ್ ಜೈದೇವ್‌ಗೆ ಗೃಹಬಂಧನದ ಶಿಕ್ಷೆ ನೀಡಿದ್ದಾನೆ. ಮನೆಯಿಂದ ಹೊರಕ್ಕೆ ಹೋಗದೆ ಮಲ್ಲಿಯನ್ನು ನೋಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾನೆ. ಇನ್ನೊಂದೆಡೆ ಭೂಮಿಕಾಳಿಗೆ ಗೌತಮ್‌ ನಿರ್ಧಾರದ ಕುರಿತು ಅನುಮಾನ ಹೆಚ್ಚಾಗುತ್ತಿದೆ.
Read the full story here

Wed, 04 Sep 202402:07 AM IST

ಮನರಂಜನೆ News in Kannada Live:ಕರ್ನಾಟಕದಲ್ಲಿ ನಿಮಗೆ ತುಳು ಬರಲ್ವ? ಎಂದ ತುಳುವೆದಿ ರಕ್ಷಿತಾ ಶೆಟ್ಟಿ ಕಿವಿಹಿಂಡಿದ ನೆಟ್ಟಿಗರು, ಫನ್ನಿ ವಿಡಿಯೋಗೆ ಗರಂಗರಂ ಪ್ರತಿಕ್ರಿಯೆ

  • Rakshita Tulu Talks Viral Video: ಕರ್ನಾಟಕದಲ್ಲಿ ಕನ್ನಡ ರಾಷ್ಟ್ರ ಭಾಷೆ ಎಂದ ಆಟೋ ಚಾಲಕನಿಗೆ, ನಮ್ಮ ಮಂಗಳೂರಲ್ಲಿ ತುಳು ರಾಷ್ಟ್ರ ಭಾಷೆ ಎಂದು ತುಳುವೆದಿ ರಕ್ಷಿತಾ ಶೆಟ್ಟಿ ಹೇಳಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರಕ್ಷಿತಾ ಶೆಟ್ಟಿಯ ಬೆಂಗಳೂರು ಜರ್ನಿಯ ವ್ಲಾಗ್‌ನ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Read the full story here

Wed, 04 Sep 202401:10 AM IST

ಮನರಂಜನೆ News in Kannada Live:Monika Shergill: ಸರಕಾರದ ಸಮನ್ಸ್‌ಗೆ ಉತ್ತರಿಸಿದ ನೆಟ್‌ಫ್ಲಿಕ್ಸ್‌ ಮುಖ್ಯಸ್ಥೆ ಮೋನಿಕಾ ಶೇರ್ಗಿಲ್‌ ಯಾರು? ಐಸಿ 814 ದಿ ಕಂದಹಾರ್‌ ವಿವಾದ

  • Who is Monika Shergill?: ಐಸಿ-814 ದಿ ಕಂದಹಾರ್‌ ಹೈಜಾಕ್‌ ವೆಬ್‌ಸರಣಿ ಪ್ರಸಾರಕ್ಕೆ ಸಂಬಂಧಪಟ್ಟಂತೆ ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ಮುಖಸ್ಥೆ ಮೋನಿಕಾ ಶೇರ್ಗಿಲ್‌ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಮನ್ಸ್‌ಗೆ ಉತ್ತರ ನೀಡಿದ್ದಾರೆ. ಕಥೆಹೇಳುವುದನ್ನು ಇಷ್ಟಪಡುವ ಈ ಮೋನಿಕಾ ಶೇರ್ಗಿಲ್‌ ಎಂಬ ಪ್ರತಿಭಾನ್ವಿತೆ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.
Read the full story here