Entertainment News in Kannada Live September 5, 2024: ಮನದ ಕಡಲು ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಲೈಟ್ ಮ್ಯಾನ್ ಸಾವು; ನಿರ್ದೇಶಕ ಯೋಗರಾಜ್ ಭಟ್ ಸೇರಿ ಹಲವರ ವಿರುದ್ಧ ಕೇಸ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 05 Sep 202405:14 PM IST
- ಮನದ ಕಡಲು ಸಿನಿಮಾ ಶೂಟಿಂಗ್ ವೇಳೆ ಲೈಟ್ ಮ್ಯಾನ್ ಮೋಹನ್ ಕುಮಾರ್ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚಿತ್ರದ ನಿರ್ದೇಶಕರಾಗಿರುವ ಯೋಗರಾಜ್ ಭಟ್ ಮತ್ತು ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Thu, 05 Sep 202401:39 PM IST
- ಈ ವಾರ ಅಂದರೆ ಸೆಪ್ಟೆಂಬರ್ 6 ರಂದು ಹಿಂದಿ ಸಿನಿಮಾಗಳ ಜತೆಗೆ ಹಾಲಿವುಡ್‌ನ ಆಕ್ಷನ್ ಸಿನಿಮಾಗಳೂ ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಚಿತ್ರಗಳು ಮತ್ತು ವೆಬ್‌ಸರಣಿಗಳ ವೀಕ್ಷಣೆ ಯಾವ ಒಟಿಟಿಯಲ್ಲಿ? ಇಲ್ಲಿದೆ ಮಾಹಿತಿ.
Thu, 05 Sep 202401:04 PM IST
- ನಟ ಕೋಮಲ್ ಕುಮಾರ್ ಇದೀಗ ಹೊಸ ಅವತಾರದ ಮೂಲಕ ಆಗಮಿಸಿದ್ದಾರೆ. ತನಿಷಾ ಕುಪ್ಪಂಡ ನಿರ್ಮಾಣ ಮಾಡುತ್ತಿರುವ ಕೋಣ ಚಿತ್ರದಲ್ಲಿ ಮಂತ್ರವಾದಿಯಾಗಿ ಕೋಮಲ್ ಎದುರಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿರುವ ಈ ಸಿನಿಮಾವನ್ನು ತನಿಷಾ ಕುಪ್ಪಂಡ ನಿರ್ಮಾಣ ಮಾಡುತ್ತಿದ್ದಾರೆ,
Thu, 05 Sep 202411:50 AM IST
- ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ರಾಮ್ ಪೋತಿನೇನಿ ಕಾಂಬಿನೇಷನ್‌ನ ಡಬಲ್ ಇಸ್ಮಾರ್ಟ್ ಸಿನಿಮಾ ಒಟಿಟಿಗೆ ಆಗಮಿಸಿದೆ. ಚಿತ್ರಮಂದಿರಗಳಲ್ಲಿ ನೀರಸ ಪ್ರದರ್ಶನ ಕಂಡಿದ್ದ ಈ ಚಿತ್ರ ಒಟಿಟಿಯಲ್ಲಿ ಹೇಗೆ ಪ್ರತಿಕ್ರಿಯೆ ಸಿಗಬಹುದೆಂದು ಕಾದು ನೋಡಬೇಕಿದೆ.
Thu, 05 Sep 202410:43 AM IST
- ಸ್ಯಾಂಡಲ್‌ವುಡ್‌ನಲ್ಲಿಯೂ ಕೇರಳ ಮಾದರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಹೇಮಾ ಸಮಿತಿ ರೀತಿಯಲ್ಲಿಯೇ ಕನ್ನಡ ಚಿತ್ರೋದ್ಯಮಕ್ಕೂ ಒಂದು ಕಮಿಟಿ ಬೇಕು ಎಂದು FIRE ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
Thu, 05 Sep 202409:06 AM IST
2022 ರಲ್ಲಿ ತೆರೆ ಕಂಡ ಬಹುನಿರೀಕ್ಷಿತ ಸಿನಿಮಾ ಸಾಮ್ರಾಟ್ ಪೃಥ್ವಿರಾಜ್ ಹೀನಾಯ ಸೋಲು ಕಂಡಿತ್ತು. ಸಿನಿಮಾ ಆರಂಭವಾದಾಗಿನಿಂದ ರಿಲೀಸ್ ಆಗುವರೆಗೂ ಬಹಳ ಕ್ರೇಜ್ ಸೃಷ್ಟಿಸಿದ್ದ 300 ಕೋಟಿ ಬಜೆಟ್‌ನ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸೋತಿದ್ದು ಚಿತ್ರತಂಡ, ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಅಕ್ಷಯ್ ಕುಮಾರ್ ಕೂಡಾ ಟೀಕೆಗಳಿಂದ ನೊಂದು ಅತ್ತಿದ್ದರು.
Thu, 05 Sep 202408:50 AM IST
- Tata Curvv vs Grand Vitara: ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಟಾಟಾ ಕರ್ವ್ ಎಂಬ ಕೂಪೆ ವಿನ್ಯಾಸದ ಎಸ್‌ಯುವಿಯನ್ನು ಪರಿಚಯಿಸಿದೆ. ಮಧ್ಯಮ ಗಾತ್ರದ ಎಸ್‌ಯುವಿ ಬಯಸುವವರಿಗೆ ಇದು ಸೂಕ್ತವಾಗಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿ ಗ್ರಾಂಡ್ ವಿಟಾರಾದಂತಹ ಪ್ರತಿಸ್ಪರ್ಧಿಗಳು ಇದ್ದಾರೆ.
Thu, 05 Sep 202408:36 AM IST
- ಜನ ಸಾಮಾನ್ಯರೂ ವಿದೇಶಿ ಪ್ರವಾಸ ಮಾಡಬೇಕು, ಕಡಿಮೆ ಖರ್ಚಿನಲ್ಲಿಯೇ ದೇಶ ವಿದೇಶ ಸುತ್ತಬೇಕು ಎಂಬ ಉದ್ದೇಶದಿಂದ ಶುರುವಾದ ಕಂಪನಿ ಗೋ ಪ್ರವಾಸ. ಈ ಗೋ ಪ್ರವಾಸ ಸಂಸ್ಥೆಯ ಜತೆಗೆ ಯೂಟ್ಯೂಬರ್ ಡಾ. ಬ್ರೋ ಸಹ ಕೈ ಜೋಡಿಸಿದ್ದಾರೆ. ಈಗ ಇದೇ ಸಂಸ್ಥೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಆಸಕ್ತಿ ಇದ್ದರೆ ನೀವೂ ಅರ್ಜಿ ಸಲ್ಲಿಸಬಹುದು.
Thu, 05 Sep 202406:35 AM IST
- ಕಾಲಿವುಡ್ ನಟ ದಳಪತಿ ವಿಜಯ್ ನಟನೆಯ ಗೋಟ್ ಸಿನಿಮಾಕ್ಕೆ ಚೆನ್ನೈಗಿಂತಲೂ ಬೆಂಗಳೂರಿನಲ್ಲಿಯೇ ಕ್ರೇಜ್ ಹೆಚ್ಚಾದಂತಿದೆ. 1200ಕ್ಕೂ ಅಧಿಕ ಶೋಗಳು, ಬೆಳಗಿನ 4 ಗಂಟೆ ಶೋಗಳು ಈ ಚಿತ್ರಕ್ಕೆ ಸಿಕ್ಕಿವೆ. ಟಿಕೆಟ್ ದರ ಚೆನ್ನೈಗಿಂತಲೂ 10 ಪಟ್ಟು ಅಧಿಕ. ಈ ಎಲ್ಲ ಬೆಳವಣಿಗೆಗಳೇ ಇದೀಗ ಕನ್ನಡಿಗರ ಕಣ್ಣು ಕೆಂಪಗಾಗಿಸಿವೆ.
Thu, 05 Sep 202406:13 AM IST
- Renuka Swamy Photos: ಚಿತ್ರದುರ್ಗದ ರೇಣುಕಾಸ್ವಾಮಿ ಸಾಯುವ ಮುನ್ನ ಅಂಗಲಾಚುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಂದು ಫೋಟೋದಲ್ಲಿ ಪ್ರಾಣಭಿಕ್ಷೆ ಬೇಡುತ್ತಿದ್ದರೆ, ಇನ್ನೊಂದು ಫೋಟೋದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವ ಚಿತ್ರಣವಿದೆ.
Thu, 05 Sep 202405:49 AM IST
- ನಟಿ ಪ್ರಣಿತಾ ಸುಭಾಷ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ಸಮಯದಲ್ಲಿ ಮಿಲನಾ ನಾಗರಾಜ್ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕಂದಮ್ಮಗಳ ಕಿಲಕಿಲ ಕೇಳಿಸುತ್ತಿದೆ.
Thu, 05 Sep 202404:56 AM IST
- Amruthadhaare Serial: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ನಾನಾ ಬೆಳವಣಿಗೆಗಳು ಆಗಿವೆ. ಒಂದೆಡೆ ಅಪೇಕ್ಷಾ ಮತ್ತು ಪಾರ್ಥರ ಜಗಳವನ್ನು ಭೂಮಿಕಾ ನೋಡಿದ್ದಾಳೆ. ಇನ್ನೊಂದೆಡೆ ಆನಂದ್‌ಗೆ ಅಪಘಾತ ಮಾಡಿದ್ದು ಜೈದೇವ್ ಎಂಬ ಗುಮಾನಿ ಅಪರ್ಣಾಳಿಗೆ ಬಂದಿದೆ.
Thu, 05 Sep 202404:24 AM IST
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್ 4ರ ಎಪಿಸೋಡ್. ಅಪ್ಪ ಅಮ್ಮನ ಬಳಿ ನಾಟಕೀಯವಾಗಿ ಮಾತನಾಡುವ ಶ್ರೇಷ್ಠಾ, ಭಾಗ್ಯಾ, ಕುಸುಮಾ ಇಬ್ಬರನ್ನೂ ಮದುವೆ ಮನೆಯಿಂದ ಕಳಿಸುವಂತೆ ಬ್ಲಾಕ್ ಮೇಲ್ ಮಾಡುತ್ತಾಳೆ.
Thu, 05 Sep 202403:46 AM IST
- It’s baby girl: ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣರಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.
Thu, 05 Sep 202403:20 AM IST
ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಗೋಟ್ ಸಿನಿಮಾ ತೆರೆ ಕಂಡಿದೆ. ಸಿನಿಮಾ ಬಗ್ಗೆ ಎಕ್ಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೂ ತೆರೆ ಕಂಡ ವಿಜಯ್ ಅಭಿನಯದ ಸಿನಿಮಾಗಳಲ್ಲಿ ಇದು ಬೆಸ್ಟ್ ಎನ್ನುತ್ತಿದ್ದಾರೆ.
Thu, 05 Sep 202403:12 AM IST
- ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಗೋಟ್) ಸಿನಿಮಾದ ಸಹ ನಟ ವಿಜಯ್ ಕುರಿತು ಹಿಂದೂಸ್ತಾನ್ ಟೈಮ್ಸ್‌ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ನಟ ಪ್ರೇಮ್‌ಜಿ ಮಾತನಾಡಿದ್ದಾರೆ. ನಟ ವಿಜಯ್ 2026ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
Thu, 05 Sep 202403:02 AM IST
- Kannada Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಮಾಸ್ತಿಕೊಪ್ಪಲ ಉತ್ಸವ ನಡೆಯುತ್ತಿದೆ. ಎಲ್ಲರೂ ಜಾತ್ರೆಯಲ್ಲಿ ಸಂಭ್ರಮದಲ್ಲಿದ್ದರೆ, ಒಳಗೊಳಗೆ ಹಲವಾರು ಸಂಚುನಡೆಯುತ್ತಿದೆ. ಅಲ್ಲಿ ಏನಾಗಿದೆ ಎಂಬ ಮಾಹಿತಿ ಇಲ್ಲೇ ಇದೆ ಗಮನಿಸಿ.
Thu, 05 Sep 202402:52 AM IST
- Shravani Subramanya Kannada Serial Today Episode September 4th: ಸುಬ್ಬು, ಶ್ರಾವಣಿ, ವಂದನಾ, ಕಾಂತಮ್ಮ ಎಲ್ಲರೂ ಜಾಲಿ ಮೂಡ್‌ನಲ್ಲಿದ್ರೆ, ವಿಜಯಾಂಬಿಕಾ ಮಾತ್ರ ಸಾಲಿಗ್ರಾಮದಲ್ಲಿ ತನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಾಳೆ. ಗಾಡಿ ಪಂಕ್ಚರ್ ಆಗಿ ಸುಬ್ಬು ಜೊತೆ ಉಳಿದ ಶ್ರಾವಣಿ ಸಿಕ್ಕ ಜೋಗತಿ ಭವಿಷ್ಯ ನುಡಿವ ಜೋಗತಿ ಸುಬ್ಬು ಕೈ ನೋಡಿ ಸ್ತಬ್ಧಳಾಗುತ್ತಾಳೆ.
Thu, 05 Sep 202402:32 AM IST
- ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ವಿಮರ್ಶೆ: ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಇಬ್ಬನಿ ತಬ್ಬಿದ ಇಳೆಯಲಿ ಒಂದು ನವಿರಾದ, ಹೃದಯಸ್ಪರ್ಶಿ ಪ್ರೇಮಕಥೆಯನ್ನು ಹೊಂದಿದೆ. ಪರಿಚಿತ ಕಥೆಯನ್ನು ಹೊಸತನದೊಂದಿಗೆ ಹೇಳಿರುವ ರೀತಿ ಆಪ್ತವಾಗಿದೆ. ಈ ವರ್ಷ ವಿಹಾನ್ ಮತ್ತು ಅಂಕಿತಾ ಪ್ರೇಕ್ಷಕರ ಹೃದಯದಲ್ಲಿ ಸ್ಥಾನಪಡೆಯುವ ಸೂಚನೆ ಇದೆ.
Thu, 05 Sep 202401:12 AM IST
- Ibbani tabbida ileyali Kannada Movie: ಸೆಪ್ಟೆಂಬರ್ 5ರಿಂದ ಚಿತ್ರಮಂದಿರಗಳಲ್ಲಿ ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿರುವ ಇಬ್ಬನಿ ತಬ್ಬಿದ ಇಳೆಯಲಿ ಎಂಬ ಪ್ರೇಮಕಾವ್ಯ ಆರಂಭವಾಗಲಿದೆ.ಈ ಸಿನಿಮಾದಲ್ಲಿ ಚಂದ್ರಜಿತ್ ಬೆಳ್ಯಪ್ಪ ನಿರ್ದೇಶನವಿರುವ ಈ ಸಿನಿಮಾದಲ್ಲಿ ವಿಹಾನ್, ಅಂಕಿತಾ, ಅಮರ್ ಮತ್ತು ಮಯೂರಿ ನಟರಾಜ್ ನಟಿಸಿದ್ದಾರೆ.