Urvashi Rautela: 24 ಕ್ಯಾರೆಟ್ ಚಿನ್ನದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಊರ್ವಶಿ ರೌಟೇಲಾ; ಹೀಗಿತ್ತು ನೆಟ್ಟಿಗರ ಪ್ರತಿಕ್ರಿಯೆ-entertainment news urvashi rautela celebrated birthday by cutting 24 carat gold cake netizens reacted rmy ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Urvashi Rautela: 24 ಕ್ಯಾರೆಟ್ ಚಿನ್ನದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಊರ್ವಶಿ ರೌಟೇಲಾ; ಹೀಗಿತ್ತು ನೆಟ್ಟಿಗರ ಪ್ರತಿಕ್ರಿಯೆ

Urvashi Rautela: 24 ಕ್ಯಾರೆಟ್ ಚಿನ್ನದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಊರ್ವಶಿ ರೌಟೇಲಾ; ಹೀಗಿತ್ತು ನೆಟ್ಟಿಗರ ಪ್ರತಿಕ್ರಿಯೆ

Urvashi Rautela: ನಟಿ ಕಂ ಮಾಡೆಲ್ ಊರ್ವಶಿ ರೌಟೇಲಾ ತಮ್ಮ 30ನೇ ವರ್ಷದ ಹುಟ್ಟುಹಬ್ಬಕ್ಕೆ 24 ಕ್ಯಾರೆಟ್ ಚಿನ್ನ ಲೇಪಿತ ಕೇಕ್ ಕತ್ತರಿಸುವ ಮೂಲಕ ಸುದ್ದಿಯಾಗಿದ್ದಾರೆ. ಕೇಕ್ ಬೆಲೆ, ಇದನ್ನ ಯಾರು ಗಿಫ್ಟ್ ಮಾಡಿದ್ದು ಅದರ ವಿವರ ಇಲ್ಲಿದೆ.

ನಟಿ ಕಂ ಮಾಡೆಲ್ ಊರ್ವಶಿ ರೌಟೇಲಾ ತಮ್ಮ 30ನೇ ವರ್ಷದ ಹುಟ್ಟುಹಬ್ಬಕ್ಕೆ 24 ಕ್ಯಾರೆಟ್ ಚಿನ್ನ ಲೇಪಿತ ಕೇಕ್ ಕತ್ತರಿಸುವ ಮೂಲಕ ಸುದ್ದಿಯಾಗಿದ್ದಾರೆ.
ನಟಿ ಕಂ ಮಾಡೆಲ್ ಊರ್ವಶಿ ರೌಟೇಲಾ ತಮ್ಮ 30ನೇ ವರ್ಷದ ಹುಟ್ಟುಹಬ್ಬಕ್ಕೆ 24 ಕ್ಯಾರೆಟ್ ಚಿನ್ನ ಲೇಪಿತ ಕೇಕ್ ಕತ್ತರಿಸುವ ಮೂಲಕ ಸುದ್ದಿಯಾಗಿದ್ದಾರೆ.

Urvashi Rautela Birthday: ಕ್ರಿಕೆಟ್ ಸ್ಟೇಡಿಯಂನಲ್ಲಿ ಚಿನ್ನದ ಪೋನ್‌ ಕಳೆದುಕೊಂಡು ಸುದ್ದಿಯಾಗಿದ್ದ ಬಾಲಿವುಡ್‌ನ ಮೋಹಕತಾರೆ ಖ್ಯಾತಿಯ ನಟಿ ಕಂ ಮಾಡೆಲ್ ಊರ್ವಶಿ ರೌಟೇಲಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸಿನಿಮಾಗಳಿಗಿಂತ ಖಾಸಗಿ ವಿಡಿಯೊಗಳನ್ನು ಹರಿಬಿಡುವ ಮೂಲಕ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಊರ್ವಶಿ ಇಂದು (ಫೆಬ್ರವರಿ 25) ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈಕೆಯ ಬರ್ತಡೇಯಲ್ಲಿ ಅಂತ ವಿಶೇಷ ಏನಿರಬಹುದು ಅಂತ ನೀವು ಅಂದುಕೊಳ್ಳಬಹುದು. ಈ ಚಂದುಳ್ಳ ಚೆಲುವಿ ಏನೇ ಮಾಡಿದ್ರು ತುಂಬಾ ವಿಭಿನ್ನವಾಗಿ ಮಾಡುತ್ತಾರೆ. ಊರ್ವಶಿ ರೌಟೇಲಾ 24 ಕ್ಯಾರೆಟ್ ಚಿನ್ನದ ಕೇಕ್ ಕತ್ತರಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ಕೇಕ್‌ನ ಬೆಲೆ ಬರೋಬ್ಬರಿ 3 ಕೋಟಿ ರೂಪಾಯಿ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಕೇಕ್ ಕತ್ತರಿಸುತ್ತಿರುವ ವಿಡಿಯೊ ಹಾಗೂ ಫೋಟೊಗಳನ್ನು ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಖುದ್ದು ಊರ್ವಶಿಯೇ ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಮ್‌ನಲ್ಲಿ ಈ ಫೋಟೊಗಳನ್ನ ಹಂಚಿಕೊಂಡಿದ್ದಾಳೆ.

ಅಂದಹಾಗೆ ನಟಿ ಊರ್ವಶಿ ರೌಟೇಲಾಗೆ ಈ ಕೇಕ್ ಅನ್ನು ಸ್ಟಾರ್ ಪಾಪ್ ಗಾಯ ಯೋಯೋ ಹನಿ ಸಿಂಗ್ ಅವರು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಈಕೆ ಲವ್ ಡೋಸ್ 2 ರ ಭಾಗವಾಗಿ ಯೋಯೋ ಹನಿ ಸಿಂಗ್ ಜೊತೆಗೆ ವಿಗ್ರಿಯನ್ ಹೀರಾನ್ ಎಂಬ ವಿಡಿಯೊ ಹಾಡಿನಲ್ಲಿ ಮೈಬಳಕಿಸುತ್ತಿದ್ದಾರೆ. ಈ ಹಾಡನ್ನು ದುಬೈನಲ್ಲಿ ಚಿತ್ಕೀರಿಸಲಾಗುತ್ತಿದ್ದು, ಈ ತಂಡ ಸದ್ಯ ದುಬೈನಲ್ಲಿದ್ದೇ ಅಲ್ಲೇ ನಟಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ವಾಲ್ತೇರು ವೀರಣ್ಯ, ಬ್ರೋ, ಸ್ಕಂದ ಸೇರಿದಂತೆ ಹಲವು ಸಿನಿಮಾಗಳ ವಿಶೇಷ ಹಾಡಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಐಟಂ ಸಾಂಗ್ಸ್ ಮೂಲಕ ಈಕೆ ಕೋಟಿ ಕೋಟಿ ಸಂಪಾದನೆ ಮಾಡುತ್ತಾಳೆ. ಸದ್ಯದಲ್ಲೇ ಬ್ಲಾಕ್‌ರೋಸ್ ಎಂಬ ತೆಲುಗಿನ ಚಿತ್ರದ ಮೂಲಕ ನಾಯಕಿಯಾಗಿ ತೆರೆಯ ಮೇಲೆ ಬರಲಿದ್ದಾರೆ. ಸದ್ಯ ಚಿತ್ರೀಕರಣದ ಹಂತದಲ್ಲಿರುವ ಲವ್ ಡೋಸ್ 2 ಹಾಡು ಮಾರ್ಚ್ 15 ರಂದು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

2014ರಲ್ಲಿ ಜನಪ್ರಿಯ ಪಾಪ್ ಗಾಯಕ ಯೋಯೋ ಹನಿ ಸಿಂಗ್ ಅವರ ಲವ್ ಡೋಸ್ ಆಲ್ಬಂ ಮೂಲಕ ಮೊದಲ ಬಾರಿಗೆ ಗಮನ ಸೆಳೆದಿದ್ದರು. ಆ ನಂತರ ಒಂದರ ನಂತರ ನಂತರ ಖಾಸಗಿ ವಿಡಿಯೊ ಸಾಂಗ್ಸ್ ಮೂಲಕ ಪಡ್ಡೆಹುಡುಗು ನಿದ್ದೆಗೆಡಿಸಿದ್ದಲ್ಲದೆ, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಫೋಟೊ ಶೋಟ್‌ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಲ್‌ಛಲ್ ಎಬ್ಬಿಸುತ್ತಾರೆ. ಈಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ಮಾಡೆಲ್‌ಗಳಲ್ಲಿ ಅಗ್ರ ಸ್ಥಾನವನ್ನೂ ಪಡೆದಿದ್ದಾರೆ. ಸದ್ಯ ಬಾಲಿವುಡ್, ಟಾಲಿವುಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಪಾಗಲ್‌ಪತಿ, ಹೇಟ್ ಸ್ಟೋರಿ, 2023ರಲ್ಲಿ ಬಿಡುಗಡೆಯಾಗಿದ್ದ ಸ್ಕಂದ ಸೇರಿದಂತೆ ಹಲವು ಸಿನಿಮಾಗಳನ್ನು ನಟಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

mysore-dasara_Entry_Point