ಕನ್ನಡ ಸುದ್ದಿ  /  Entertainment  /  F0r Regn Movie Audio Rights Sold For A Whopping Price

For Regn Audio Rights: ಪೃಥ್ವಿ- ಮಿಲನಾ ನಟಿಸಿದ 'F0R REGN' ಸಿನಿಮಾಕ್ಕೆ ಸಿಕ್ತು ದಸರಾ ಹಬ್ಬದ ಉಡುಗೊರೆ!

ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ ನಾಯಕಿಯಾಗಿ ನಟಿಸಿರುವ "F0R REGN". (ಫಾರ್ ರಿಜಿಸ್ಟರೇಷನ್) ಚಿತ್ರದ ಆಡಿಯೋ ಹಕ್ಕನ್ನು ಆಡಿಯೋ ಸಂಸ್ಥೆಯೊಂದು ದೊಡ್ಡ ಮೊತ್ತಕ್ಕೆ ಖರೀದಿಸಿದೆ.

ಪೃಥ್ವಿ- ಮಿಲನಾ ನಟಿಸಿದ 'F0R REGN' ಸಿನಿಮಾಕ್ಕೆ ಸಿಕ್ತು ದಸರಾ ಹಬ್ಬದ ಉಡುಗೊರೆ!
ಪೃಥ್ವಿ- ಮಿಲನಾ ನಟಿಸಿದ 'F0R REGN' ಸಿನಿಮಾಕ್ಕೆ ಸಿಕ್ತು ದಸರಾ ಹಬ್ಬದ ಉಡುಗೊರೆ!

ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ ನಾಯಕಿಯಾಗಿ ನಟಿಸಿರುವ "F0R REGN". (ಫಾರ್ ರಿಜಿಸ್ಟ್ರೇಷನ್ ) ಚಿತ್ರದ ಆಡಿಯೋ ಹಕ್ಕನ್ನು ಜಂಕಾರ್ ಮ್ಯೂಸಿಕ್ ಸಂಸ್ಥೆ ಭಾರೀ ಮೊತ್ತ‌ ನೀಡಿ ಖರೀದಿಸಿದೆ.

ಈ ಚಿತ್ರದಲ್ಲಿ ಆರು ಹಾಡುಗಳಿದ್ದು, ಬಹದ್ದೂರ್ ಚೇತನ್ ಕುಮಾರ್, ಕವಿರಾಜ್ ಹಾಗೂ ನಾಗಾರ್ಜುನ ಶರ್ಮ ಬರೆದಿದ್ದಾರೆ. ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ ಹಾಗೂ ವಾಸುಕಿ ವೈಭವ್ ಹಾಡಿದ್ದಾರೆ. ಆರ್.ಕೆ.ಹರೀಶ್ ಈ ಚಿತ್ರದ ಸಂಗೀತ ನಿರ್ದೇಶಕರು.

ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು, ಉಡುಪಿ, ಮಂಗಳೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ನಡೆದಿದೆ.

"ದಿಯಾ" ಹಾಗೂ "ಲವ್ ಮಾಕ್ಟೇಲ್" ಚಿತ್ರಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಜೋಡಿಯ ಈ ಚಿತ್ರದ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ. ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿಶ್ಚಲ್ ಫಿಲಂಸ್ ಮೂಲಕ ಎನ್ .ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ.

IPL_Entry_Point