ಶೀಘ್ರದಲ್ಲೇ ಅನೌನ್ಸ್ ಆಗಲಿದೆ ಫ್ಯಾಮಿಲಿ ಮ್ಯಾನ್‌ ಸೀಸನ್‌ 3 ಬಿಡುಗಡೆ ದಿನಾಂಕ; ಇಲ್ಲೇ ಇದೆ ನೋಡಿ ಟ್ರೈಲರ್‌
ಕನ್ನಡ ಸುದ್ದಿ  /  ಮನರಂಜನೆ  /  ಶೀಘ್ರದಲ್ಲೇ ಅನೌನ್ಸ್ ಆಗಲಿದೆ ಫ್ಯಾಮಿಲಿ ಮ್ಯಾನ್‌ ಸೀಸನ್‌ 3 ಬಿಡುಗಡೆ ದಿನಾಂಕ; ಇಲ್ಲೇ ಇದೆ ನೋಡಿ ಟ್ರೈಲರ್‌

ಶೀಘ್ರದಲ್ಲೇ ಅನೌನ್ಸ್ ಆಗಲಿದೆ ಫ್ಯಾಮಿಲಿ ಮ್ಯಾನ್‌ ಸೀಸನ್‌ 3 ಬಿಡುಗಡೆ ದಿನಾಂಕ; ಇಲ್ಲೇ ಇದೆ ನೋಡಿ ಟ್ರೈಲರ್‌

ಅಮೆಜಾನ್‌ ಪ್ರೈಮ್‌ನಲ್ಲಿ ಫ್ಯಾಮಿಲಿ ಮ್ಯಾನ್‌ ಸೀಸನ್‌ 3 ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಬಿಗ್ ಅಪ್ಡೇಟ್‌ ನೀಡಿದೆ. ಜನರ ನಿರೀಕ್ಷೆಯನ್ನು ಈಡೇರಿಸಲು ಫ್ಯಾಮಿಲಿ ಮ್ಯಾನ್‌ ಸೀಸನ್‌ 3 ಬರುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಟ್ರೈಲರ್ ಕೂಡ ರಿಲೀಸ್‌ ಆಗಿದೆ.

ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ ಫ್ಯಾಮಿಲಿ ಮ್ಯಾನ್‌ ಸೀಸನ್‌ 3
ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ ಫ್ಯಾಮಿಲಿ ಮ್ಯಾನ್‌ ಸೀಸನ್‌ 3

2019 ರಲ್ಲಿ, ಮನೋಜ್ ಬಾಜಪೇಯಿ ಮುಖ್ಯ ಪಾತ್ರದಲ್ಲಿ ನಟಿಸಿದ ದಿ ಫ್ಯಾಮಿಲಿ ಮ್ಯಾನ್ ತುಂಬಾ ಜನಪ್ರಿಯತೆ ಗಳಿಸಿತ್ತು ಫ್ಯಾಮಿಲಿ ಮ್ಯಾನ್ ಸೀಸನ್ 1 ಓಟಿಟಿಗೂ ಕಾಲಿಟ್ಟಿತ್ತು. ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅಮೆಜಾನ್‌ನಲ್ಲಿ ಪ್ರಸಾರವಾಗುತ್ತಿದ್ದ ಈ ಫ್ಯಾಮಿಮ್ಯಾನ್‌ ವೆಬ್‌ಸಿರೀಸ್‌ ನೋಡಲು ಜನ ತುದಿಗಾಲಲ್ಲಿ ಕಾಯುತ್ತಿದ್ದರು. 2021ರಲ್ಲಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಬಿಡುಗಡೆಯಾಗಿತ್ತು ಆಗಲೂ ಜನರಿಂದ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಮನೋಜ್ ಬಾಜಪೇಯಿ ಅದರಲ್ಲಿ ಮತ್ತೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರದಲ್ಲಿ ಜನರು ಮತ್ತಷ್ಟು ಸರಣಿಗಳನ್ನು ನೋಡಲು ಇಷ್ಟಪಟ್ಟಿದ್ದರು. ಇದಕ್ಕಿರುವ ಬೇಡಿಕೆಯನ್ನು ಗಮನಿಸಿ ಇದೀಗ ಫ್ಯಾಮಿಲಿ ಮ್ಯಾನ್ ಸೀಸನ್ 3ರನ್ನು ತರಲು ಆಲೋಚನೆ ನಡೆಯುತ್ತಿದೆ. ಖಂಡಿತ ಫ್ಯಾಮಿಲಿ ಮ್ಯಾನ್ 3 ಬಂದೇ ಬರುತ್ತದೆ ಟ್ರೇಲರ್ ಮೂಲಕ ಸೂಚನೆ ನೀಡಿದ್ದಾರೆ.

ಈ ವರ್ಷ ಅಂದರೆ 2024ರಲ್ಲಿ ಇದು ಬಿಡುಗಡೆ ಆಗದೇ ಇದ್ದರೂ 2025ರಲ್ಲಿ ಜನರ ನಿರೀಕ್ಷೆಯನ್ನು ಇಡೇರಿಸಲು ಟೀಮ್ ರೆಡಿಯಾಗಿದೆ. ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಿಸಿದ ನಂತರದಲ್ಲಿ ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ (ರಾಜ್ ಮತ್ತು ಡಿಕೆ) ಅವರು ಫರ್ಜಿ, ಗನ್ಸ್, ಗುಲಾಬ್ಸ್‌ನಂತ ಸರಣಿಗಳನ್ನು ಬಿಡುಗಡೆ ಮಾಡಿದರು. ವಿಶೇಷವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಹಿಂದಿ ಭಾಷೆಯ ಈ ಥ್ರಿಲ್ಲರ್ ಸರಣಿ ದಿ ಫ್ಯಾಮಿಲಿ ಮ್ಯಾನ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.

ಮನೋಜ್ ಬಾಜ್ಪೇಯಿ ಹೊರತುಪಡಿಸಿ, ಈ ಸರಣಿಯಲ್ಲಿ ಪ್ರಿಯಾಮಣಿ, ಶರೀಬ್ ಹಶ್ಮಿ ಮತ್ತು ಶ್ರೇಯಾ ಧನ್ವಂತರಿ ಕಾಣಿಸಿಕೊಳ್ಳಲಿದ್ದಾರೆ. ವರದಿಯ ಪ್ರಕಾರ, ದಾಸ್ವಿ ನಟಿ ನಿಮ್ರತ್ ಕೌರ್ ಕೂಡ ಈ ಸರಣಿಯ ಪಾತ್ರವರ್ಗಕ್ಕೆ ಸೇರಿಕೊಂಡಿದ್ದಾರೆ, ಆದರೆ ಅದರ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ. ಆದರೆ ಅಭಿಮಾನಿಗಳಂತು ತುಂಬಾ ಕಾತರದಿಂದ ಸೀಸನ್‌ ಮೂರಕ್ಕಾಗಿ ಕಾಯುತ್ತಿದ್ದಾರೆ. ಅಭಿಮಾನಿಗಳ ಆಸೆ ಇಡೇರಿದಲು ರಾಜ್, ಡಿಕೆ ರೆಡಿಯಾಗಿದ್ದಾರೆ.

ಸಸ್ಪೆನ್ಸ್‌ ಥ್ರಿಲರ್ ಸಿನಿಮಾಗಳನ್ನು ಇಷ್ಟಪಡುವವರು ತುಂಬಾ ಇಷ್ಟಪಟ್ಟು ಈ ಸರಣಿಯನ್ನು ನೋಡುತ್ತಾರೆ. ಈ ಹಿಂದೆ ಕೂಡ ಇದೇ ರೀತಿಯ ಕಥೆಗಳಿರುವ ಸರಣಿಗಳನ್ನು ಶೂಟ್‌ ಮಾಡಲಾಗಿತ್ತು. ಇನ್ನಷ್ಟು ಮತ್ತಷ್ಟು ಆಸಕ್ತಿದಾಯಕ ಸಂಗತಿಗಳ ಒಳನೋಡ ಬಿಚ್ಚಿಡುವ ಟ್ರೈಲರ್ ಈಗಾಗಲೇ ಬಿಡಗಡೆಯಾಗಿದೆ. ಈ ಬಾರಿಯೂ ನೀವು ಅಮೆಜಾನ್‌ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸರಣಿಯನ್ನು ವೀಕ್ಷಿಸಬಹುದು.

Whats_app_banner