ಕನ್ನಡ ಸುದ್ದಿ  /  Entertainment  /  Famous Actress Recreated Bahubali Scene And Dedicated To Rajamouli

Baahubali Scene Recreated: ಕಂದನ ಪಾದ ಹಣೆ ಮೇಲಿಟ್ಟುಕೊಂಡು ರಾಜಮೌಳಿಗೆ ಫೋಟೋ ಅರ್ಪಿಸಿದ ಖ್ಯಾತ ನಟಿ..ಯಾರಿದು?

ಮುದ್ದು ಕಂದನ ಪಾದವನ್ನು ತಲೆ ಮೇಲಿರಿಸಿಕೊಂಡು 'ಬಾಹುಬಲಿ' ಚಿತ್ರದ ದೃಶ್ಯವನ್ನು ಮರುಸೃಷ್ಟಿಸಿರುವ ನಟಿ ಕಾಜಲ್ ಅಗರ್​​​ವಾಲ್​​​​​ ಈ ಫೋಟೋವನ್ನು ಖ್ಯಾತ ಟಾಲಿವುಡ್ ನಿರ್ದೇಶಕ ರಾಜಮೌಳಿಗೆ ಅರ್ಪಿಸಿದ್ದಾರೆ.

ಬಾಹುಬಲಿ ದೃಶ್ಯ ಮರುಸೃಷ್ಟಿಸಿದ ಕಾಜಲ್ ಅಗರ್​​ವಾಲ್
ಬಾಹುಬಲಿ ದೃಶ್ಯ ಮರುಸೃಷ್ಟಿಸಿದ ಕಾಜಲ್ ಅಗರ್​​ವಾಲ್

ಬಹುಭಾಷಾ ನಟಿ ಕಾಜಲ್ ಅಗರ್​​ವಾಲ್ ಸದ್ಯಕ್ಕೆ ತಾಯ್ತನ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಿಂದಲೂ ತಮ್ಮ ಸಕ್ಸಸ್, ಕರಿಯರ್, ವೈಯಕ್ತಿಕ ಜೀವನ, ಮದುವೆ, ಮಗು ಎಲ್ಲಾ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಬಂದಿರುವ ಕಾಜಲ್ ಅಗರ್​ವಾಲ್ ತಾವು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವ ಸುಳಿವು ಕೂಡಾ ನೀಡಿದ್ದಾರೆ.

ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿರುವ ಕಾಜಲ್ ಅಗರ್​​ವಾಲ್ ತಮ್ಮ ಕಂದನಿಗೆ ನೀಲ್ ಎಂದು ಹೆಸರಿಟ್ಟಿದ್ದಾರೆ. ಕಂದನೊಂದಿಗೆ ಇರುವ ಕೆಲವೊಂದು ಫೋಟೋಗಳನ್ನು ಕೂಡಾ ಕಾಜಲ್ ಅಗರ್​​ವಾಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಮತ್ತೊಂದು ಹೊಸ ಫೋಟೋವನ್ನು ಅವರು ಹಂಚಿಕೊಂಡಿದ್ದು ಇದು ವೈರಲ್ ಆಗುತ್ತಿದೆ. ಮುದ್ದು ಕಂದನ ಪಾದವನ್ನು ತಲೆ ಮೇಲಿರಿಸಿಕೊಂಡು 'ಬಾಹುಬಲಿ' ಚಿತ್ರದ ದೃಶ್ಯವನ್ನು ಮರುಸೃಷ್ಟಿಸಿದ್ದಾರೆ. ಅಲ್ಲದೆ ಈ ಫೋಟೋವನ್ನು ಖ್ಯಾತ ಟಾಲಿವುಡ್ ನಿರ್ದೇಶಕ ರಾಜಮೌಳಿ ಅವರಿಗೆ ಅರ್ಪಿಸಿದ್ದಾರೆ. ''ರಾಜಮೌಳಿ ಸರ್​​​​, ನಿಮಗೆ ಇದು ನೀಲ್ ಮತ್ತು ನನ್ನ ಸಮರ್ಪಣೆ'' ಎಂದು ಕ್ಯಾಪ್ಷನ್ ನೀಡಿದ್ದಾರೆ. ಎಸ್​.ಎಸ್. ರಾಜಮೌಳಿ ನಿರ್ದೇಶನದಲ್ಲಿ 2009 ರಲ್ಲಿ ತೆರೆ ಕಂಡ 'ಮಗಧೀರ' ಚಿತ್ರದಲ್ಲಿ ಕಾಜಲ್ ಅಗರ್​ವಾಲ್ ನಟಿಸಿದ್ದರು.

ತೆಲುಗು, ತಮಿಳು ಭಾಷೆಗಳಲ್ಲಿ ಟಾಪ್ ಹೀರೋಯಿನ್ ಆಗಿ ಧೂಳೆಬ್ಬಿಸಿದ್ದ ಈ ಚೆಲುವೆ 2020ರಲ್ಲಿ ಮದುವೆಯಾಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಅನೇಕ ನಾಯಕಿಯರು ಮದುವೆಯ ನಂತರವೂ ನಟನೆಯನ್ನು ಮುಂದುವರೆಸುತ್ತಾರೆ. ಆದರೆ ಸದ್ಯಕ್ಕೆ ಕಾಜಲ್ ಅಗರ್​​ವಾಲ್ ನಟನೆಯಿಂದ ವಿರಾಮ ತೆಗೆದುಕೊಂಡು ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಕಳೆದ ಏಪ್ರಿಲ್​​​​ನಲ್ಲಿ ಮಗುವಿಗೆ ಜನ್ಮ ನೀಡಿರುವ ಕಾಜಲ್ ಅಗರ್​ವಾಲ್​ ಸದ್ಯಕ್ಕೆ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆಪ್ತ ಮೂಲಗಳ ಮಾಹಿತಿ ಪ್ರಕಾರ, ಇನ್ನು ಕೆಲವೇ ದಿನಗಳಲ್ಲಿ ಕಾಜಲ್ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

<p>ಕಾಜಲ್ ಅಗರ್​​ವಾಲ್ ಇನ್​​​ಸ್ಟಾಗ್ರಾಮ್ ಸ್ಟೋರಿ</p>
ಕಾಜಲ್ ಅಗರ್​​ವಾಲ್ ಇನ್​​​ಸ್ಟಾಗ್ರಾಮ್ ಸ್ಟೋರಿ

2020 ರಲ್ಲಿ ತಮ್ಮ ಧೀರ್ಘಕಾಲದ ಸ್ನೇಹಿತ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದ ಕಾಜಲ್, ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಪ್ರಾಜೆಕ್ಟ್​​​​ಗಳನ್ನು ಮುಗಿಸಿ ವೈಯಕ್ತಿಕ ಜೀವನದ ಕಡೆಗೆ ಗಮನ ನೀಡಿದರು. ಮದುವೆಯಾದ ನಂತರ ಕೂಡಾ ನಾನು ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಕಾಜಲ್ ಹೇಳಿದ್ದರೂ, ಆಕೆ ಸಿನಿಮಾ ರಂಗದಿಂದ ದೂರ ಉಳಿದು ಪತಿ ಗೌತಮ್ ಕಿಚ್ಲು ಬ್ಯುಸ್ನೆಸ್​​​​ಗೆ ಸಹಾಯ ಮಾಡುತ್ತಾರೆ ಎಂದು ಆಪ್ತ ಮೂಲಗಳಿಂದ ಮಾಹಿತಿ ದೊರೆತಿತ್ತು. ಗರ್ಭಿಣಿಯಾದ ನಂತರ ತಾವು ಒಪ್ಪಿಕೊಂಡಿದ್ದ 3-4 ಸಿನಿಮಾಗಳಿಂದ ಕಾಜಲ್ ಹೊರ ಬಂದಿದ್ದರು.

ಪಂಜಾಬಿ ಕುಟುಂಬಕ್ಕೆ ಸೇರಿದ ಕಾಜಲ್ ಅಗರ್​​ವಾಲ್ ಹೆಸರು ಮಾಡಿದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ. 2004 ರಲ್ಲಿ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಕಾಜಲ್ ಅಗರ್​ವಾಲ್ ಅದೇ ವರ್ಷ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದರು. ಚಂದಮಾಮಾ, ಮಗಧೀರ, ಆರ್ಯ 2, ಡಾರ್ಲಿಂಗ್ , ಮಿ. ಪರ್ಫೆಕ್ಟ್, ಸಿಂಗಂ, ನಾಯಕ್, ಎವುಡು, ಜನತಾ ಗ್ಯಾರೇಜ್, ಕೈದಿ ನಂ 150 ಸೇರಿ ಕಾಜಲ್ ಅಗರ್​​ವಾಲ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಕಮಲ್ ಹಾಸನ್ ಅವರ 'ಇಂಡಿಯನ್ 2' ರ ಚಿತ್ರೀಕರಣಕ್ಕೆ ಕಾಜಲ್ ಹಾಜರಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ 3-4 ಸಿನಿಮಾಗಳಿಗೆ ಈ ಚೆಲುವೆ ಸಹಿ ಹಾಕಿದ್ದಾರೆ.

IPL_Entry_Point