Actresses: ಮದುವೆಯಿಂದ ದೂರ ಉಳಿದ ಖ್ಯಾತ ನಟಿಯರು...ಇನ್ನೂ ಯಾರೆಲ್ಲಾ ಇದ್ದಾರೆ ನೋಡಿ..?
- ಜೀವನದ ಪ್ರಮುಖ ಘಟ್ಟಗಳಲ್ಲಿ ಮದುವೆ ಕೂಡಾ ಒಂದು. ಕೆಲವರಿಗೆ ಮದುವೆ ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇಲ್ಲದವರೂ ಇದ್ದಾರೆ. ಇತರರ ಜೀವನ ನೋಡಿ ಮದುವೆಯಿಂದ ದೂರ ಉಳಿದಿರುವವರೂ ಇದ್ದಾರೆ. ಖ್ಯಾತ ಸಿನಿಮಾ ನಟಿಯರು ಕೂಡಾ ಈ ಲಿಸ್ಟ್ನಲ್ಲಿದ್ದಾರೆ. ಇವರಲ್ಲಿ ಹಲವರು ವಿವಿಧ ಕಾರಣಗಳಿಂದ ಇಂದಿಗೂ ಮದುವೆಯಾಗದೆ ದೂರ ಉಳಿದಿದ್ದಾರೆ.
- ಜೀವನದ ಪ್ರಮುಖ ಘಟ್ಟಗಳಲ್ಲಿ ಮದುವೆ ಕೂಡಾ ಒಂದು. ಕೆಲವರಿಗೆ ಮದುವೆ ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇಲ್ಲದವರೂ ಇದ್ದಾರೆ. ಇತರರ ಜೀವನ ನೋಡಿ ಮದುವೆಯಿಂದ ದೂರ ಉಳಿದಿರುವವರೂ ಇದ್ದಾರೆ. ಖ್ಯಾತ ಸಿನಿಮಾ ನಟಿಯರು ಕೂಡಾ ಈ ಲಿಸ್ಟ್ನಲ್ಲಿದ್ದಾರೆ. ಇವರಲ್ಲಿ ಹಲವರು ವಿವಿಧ ಕಾರಣಗಳಿಂದ ಇಂದಿಗೂ ಮದುವೆಯಾಗದೆ ದೂರ ಉಳಿದಿದ್ದಾರೆ.
(1 / 11)
ಚಿತ್ರರಂಗದ ಅನೇಕ ನಟಿಯರು ಇಂದಿಗೂ ಮದುವೆಯಾಗದೆ ಉಳಿದಿದ್ದಾರೆ. ಅದರಲ್ಲಿ ಕೆಲವರಿಗೆ 50 ವರ್ಷ ದಾಟಿದ್ದರೆ, ಇನ್ನೂ ಕೆಲವರು 40 ರ ಆಸುಪಾಸಿನಲ್ಲಿದ್ದಾರೆ. ಅಭಿಮಾನಿಗಳಂತೂ ಇವರ ಮದುವೆ ನೋಡಲು ಕಾಯುತ್ತಿದ್ದಾರೆ.
(2 / 11)
ಲಕ್ಷ್ಮಿ ಗೋಪಾಲಸ್ವಾಮಿ ಕರ್ನಾಟಕಕ್ಕೆ ಸೇರಿದ ಇವರು ಸಿನಿಮಾ ನಟಿಯಾಗಿ ಮಾತ್ರವಲ್ಲದೆ, ಭರತನಾಟ್ಯೆ ಕಲಾವಿದೆಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಕನ್ನಡ, ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರಿಗೆ 52 ವರ್ಷ. ಪೂರ್ವಾಪರ, ವಿಷ್ಣುಸೇನಾ, ನಮ್ಮೆಜಮಾನ್ರು , ಆಪ್ತರಕ್ಷಕ ಸೇರಿ ಕನ್ನಡದಲ್ಲಿ ಗುರುತಿಸಿಕೊಂಡಿರುವ ಇವರು ಕೂಡಾ ಅವಿವಾಹಿತೆ.
(3 / 11)
ಶೋಭನಾ ಇವರು ಮೂಲತ: ಕೇರಳದವರು. ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿರುವ ಶೋಭನಾ ಕನ್ನಡದಲ್ಲಿ ಅಂಬರೀಶ್ ಜೊತೆಗೆ ಗಿರಿಬಾಲೆ, ವಿಷ್ಣುವರ್ಧನ್ ಜೊತೆ ಶಿವಶಂಕರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಹೆಸರಾಗಿರುವ ಶೋಭನಾ ಕೂಡಾ ಭರತನಾಟ್ಯ ಕಲಾವಿದೆ. 52 ವರ್ಷದ ಶೋಭನಾ ಇನ್ನೂ ಮದುವೆಯಾಗಿಲ್ಲ.
(4 / 11)
ಸಿತಾರಾ ನಾಯರ್ ಸಿತಾರಾ ಕನ್ನಡ ಚಿತ್ರಪ್ರೇಮಿಗಳಿಗೆ ಬಹಳ ಪರಿಚಿತ. ಇವರು ಕೂಡಾ ಕೇರಳಕ್ಕೆ ಸೇರಿದವರು. ಇವರಿಗೆ ಇಗ 49 ವರ್ಷ. ತಮಿಳು, ತೆಲುಗು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಸಿತಾರಾ ಕೂಡಾ ಅವಿವಾಹಿತೆ. ಕನ್ನಡದಲ್ಲಿ ಸಿತಾರಾ ಹಾಲುಂಡ ತವರು, ಶ್ರಾವಣ ಸಂಜೆ, ಕರುಳಿನ ಕುಡಿ, ಬಂಗಾರದ ಕಳಸ, ಜೇನುಗೂಡು, ಮಿ ಐರಾವತ, ಬೃಹಸ್ಪತಿ, ಅಮ್ಮ ಐ ಲವ್ ಯು ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
(5 / 11)
ನಗ್ಮಾ ಕುರುಬನ ರಾಣಿ, ರವಿಮಾಮ ಚಿತ್ರದ ನಾಯಕಿ ನಗ್ಮಾ ಖ್ಯಾತ ನಟಿ ಜ್ಯೋತಿಕಾ ಅವರ ಸಹೋದರಿ. 47 ವರ್ಷದ ನಗ್ಮಾ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಮೊದಲ ಹೆಸರು ನಂದಿತಾ ಅರವಿಂದ ಮೊರಾರ್ಜಿ. ನಗ್ಮಾ ಕೂಡಾ ಮದುವೆಯಾಗಿಲ್ಲ.
(6 / 11)
ಟಬು ಖ್ಯಾತ ಬಾಲಿವುಡ್ ನಟಿ ಟಬು ಸಿನಿಪ್ರಿಯರಿಗೆ ಬಹಳ ಚಿರಪರಿಚಿತ. ಟಬುಗೆ ಈಗ 51 ವರ್ಷ ವಯಸ್ಸು. ಬಹಳಷ್ಟು ಸಿನಿಮಾಗಳಲ್ಲಿ ಪ್ರೀತಿ, ಮದುವೆ, ತಾಯಿ ಪಾತ್ರದಲ್ಲಿ ನಟಿಸಿರುವ ಟಬು ಇಂದಿಗೂ ಅವಿವಾಹಿತೆಯಾಗಿ ಉಳಿದುಕೊಂಡಿದ್ದಾರೆ.
(7 / 11)
ಅಮಿಷಾ ಪಟೇಲ್ ಕಹೋನಾ ಪ್ಯಾರ್ ಹೈ ಎಂದು ಕುಣಿದಾಡಿದ ಅಮಿಷಾ ಪಟೇಲ್ಗೆ 47 ವರ್ಷ. ಆಕೆ ಕೂಡಾ ಇಂದಿಗೂ ಅವಿವಾಹಿತೆಯಾಗಿ ಉಳಿದಿದ್ದಾರೆ.
(8 / 11)
ರೇಖಾ ಬಾಲಿವುಡ್ ಎವರ್ ಗ್ರೀನ್ ಸುಂದರಿ ರೇಖಾಗೆ ಈಗ 67 ವರ್ಷ ವಯಸ್ಸು. ಚಿತ್ರರಂಗದಲ್ಲಿ ಮೇರುನಟಿಯಾಗಿ ಹೆಸರು ಮಾಡಿರುವ ರೇಖಾ ಬಾಲಿವುಡ್ ಖ್ಯಾತ ನಟನನ್ನು ಪ್ರೀತಿಸಿ, ಅವರಿಂದ ದೂರಾದ ಬಳಿಕ ಮದುವೆ ಬೇಡವೆಂದು ದೂರ ಉಳಿದಿದ್ದಾರೆ.
(9 / 11)
ಸುಷ್ಮಿತಾ ಸೇನ್ 46 ವರ್ಷದ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಕೆಲವು ದಿನಗಳ ಕಾಲ ತಮಗಿಂತ ಕಿರಿಯವರಾದ ರೋಹ್ಮನ್ ಜೊತೆ ರಿಲೇಷನ್ಶಿಪ್ನಲ್ಲಿದ್ದರು. ಆದರೆ ಇದೀಗ ಅವರ ಹೆಸರು ಮಾಜಿ ಚೇರ್ಮನ್ ಲಲಿತ್ ಮೋದಿ ಜೊತೆ ಕೇಳಿಬರುತ್ತಿದೆ. ಮದುವೆಯಾಗಿಲ್ಲದಿದ್ದರೂ ಸುಷ್ಮಿತಾ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ.
(10 / 11)
ಭಾವನಾ ರಾಮಣ್ಣ'ಚಂದ್ರಮುಖಿ ಪ್ರಾಣಸಖಿ' ಖ್ಯಾತಿಯ ಭಾವನಾ ರಾಮಣ್ಣ ಭರತನಾಟ್ಯ ಕಲಾವಿದೆ ಕೂಡಾ ಹೌದು. ಈಕೆ ಕೂಡಾ ಅವಿವಾಹಿತೆ. ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಭಾವನಾ ಬಿಜೆಪಿಯಿಂದ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ.
ಇತರ ಗ್ಯಾಲರಿಗಳು