Radhika Kumarswamy: ನಾವ್ ಖುಷಿಯಾಗಿರ್ಬೇಕು ಅಂದ್ರೆ ನೀವು ಆರೋಗ್ಯವಾಗಿರ್ಬೇಕು..ಸ್ವೀಟಿಗೆ ಫ್ಯಾನ್ಸ್ ಹೀಗೆ ಹೇಳಿದ್ದೇಕೆ..?
ಕನ್ನಡ ಸುದ್ದಿ  /  ಮನರಂಜನೆ  /  Radhika Kumarswamy: ನಾವ್ ಖುಷಿಯಾಗಿರ್ಬೇಕು ಅಂದ್ರೆ ನೀವು ಆರೋಗ್ಯವಾಗಿರ್ಬೇಕು..ಸ್ವೀಟಿಗೆ ಫ್ಯಾನ್ಸ್ ಹೀಗೆ ಹೇಳಿದ್ದೇಕೆ..?

Radhika Kumarswamy: ನಾವ್ ಖುಷಿಯಾಗಿರ್ಬೇಕು ಅಂದ್ರೆ ನೀವು ಆರೋಗ್ಯವಾಗಿರ್ಬೇಕು..ಸ್ವೀಟಿಗೆ ಫ್ಯಾನ್ಸ್ ಹೀಗೆ ಹೇಳಿದ್ದೇಕೆ..?

ರಾಧಿಕಾ ಕುಮಾರಸ್ವಾಮಿ ಇನ್​​​ಸ್ಟಾಗ್ರಾಮ್​ ಖಾತೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅವರು ಮಸ್ತ್ ಡ್ಯಾನ್ಸ್ ಮಾಡುತ್ತಿದ್ದಾರೆ. ಜೊತೆಗೆ ಅವರ ಕೊರಿಯೋಗ್ರಾಫರ್ ಕೂಡಾ ಇದ್ದಾರೆ. ಆದರೆ ಡ್ಯಾನ್ಸ್ ಮಾಡುವ ಭರದಲ್ಲಿ ರಾಧಿಕಾ ಕಾಲುಜಾರಿ ಬಿದ್ದಿದ್ದಾರೆ.

<p>ರಾಧಿಕಾ ಕುಮಾರಸ್ವಾಮಿ</p>
ರಾಧಿಕಾ ಕುಮಾರಸ್ವಾಮಿ

ಸ್ಯಾಂಡಲ್​​ವುಡ್ ಸ್ವೀಟಿ, ರಾಧಿಕಾ ಕುಮಾರಸ್ವಾಮಿ ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದಿದ್ದರೂ ನಿರ್ಮಾಪಕಿಯಾಗಿ ಸಕ್ರಿಯರಾಗಿದ್ದಾರೆ. ನಟನೆಯಿಂದ ದೂರ ಉಳಿದಿದ್ದರು ರಾಧಿಕಾ ಫಿಟ್ನೆಸ್ ಕಡೆ ಗಮನ ಹರಿಸುವುದನ್ನು ಮಾತ್ರ ಬಿಟ್ಟಿಲ್ಲ. ಈಗಲೂ ಯೊಗ ಮಾಡ್ತಾರೆ, ಜಿಮ್​​​ನಲ್ಲಿ ವರ್ಕೌಟ್ ಮಾಡ್ತಾರೆ, ಡ್ಯಾನ್ಸ್ ಮಾಡ್ತಾರೆ.

ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಾಧಿಕಾ ಹೆಸರಿನಲ್ಲಿ ಅಭಿಮಾನಿಗಳು ಕೂಡಾ ಸೋಷಿಯಲ್ ಮೀಡಿಯಾ ಖಾತೆ ತೆರೆದಿದ್ದಾರೆ. ಇತ್ತೀಚೆಗೆ ಫ್ಯಾನ್ಸ್ ಇನ್​​​ಸ್ಟಾಗ್ರಾಮ್​​​ ಪೇಜ್​​​​ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದನ್ನು ನೋಡಿ ಕೆಲವು ಅಭಿಮಾನಿಗಳು ಮೇಡಂ ದಯವಿಟ್ಟು ಜಾಗ್ರತೆಯಿಂದಿರಿ. ನಾವ್ ಖುಷಿಯಾಗಿರಬೇಕು ಎಂದರೆ ನೀವು ಆರೋಗ್ಯವಾಗಿರಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಇನ್​​​ಸ್ಟಾಗ್ರಾಮ್​ ಖಾತೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಅವರು ಮಸ್ತ್ ಡ್ಯಾನ್ಸ್ ಮಾಡುತ್ತಿದ್ದಾರೆ. ಜೊತೆಗೆ ಅವರ ಕೊರಿಯೋಗ್ರಾಫರ್ ಕೂಡಾ ಇದ್ದಾರೆ. ಆದರೆ ಡ್ಯಾನ್ಸ್ ಮಾಡುವ ಭರದಲ್ಲಿ ರಾಧಿಕಾ ಕಾಲುಜಾರಿ ಬಿದ್ದಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಮೇಡಂ ಜಾಗ್ರತೆ ನೀವು ಹೀಗೆ ಜಾರಿ ಬಿದ್ದು ಏನಾದ್ರೂ ಆದ್ರೆ ನಮಗೆ ಬೇಜಾರಾಗುತ್ತೆ. ನಾವು ಖುಷಿಯಿಂದ ಇರ್ಬೇಕು ಅಂದ್ರೆ, ನೀವು ಆರೋಗ್ಯವಾಗಿರಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. 2019 ರಲ್ಲಿ ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಚಿತ್ರೀಕರಣದ ಸಮಯದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಆಗ ಅವರು ಸುಮಾರು 1 ತಿಂಗಳ ಕಾಲ ರೆಸ್ಟ್​​​​​​ನಲ್ಲಿದ್ದರು. ಈಗ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಧಿಕಾ ಕಾಲು ಜಾರಿ ಬಿದ್ದಿರುವುದನ್ನು ನೋಡಿ ಕೆಲವು ಅಭಿಮಾನಿಗಳು, ನಿಮ್ಮ ಆರೋಗ್ಯದ ಕಡೆ ಗಮನ ನೀಡಿ ಎಂದು ಹೇಳುತ್ತಿದ್ದಾರೆ.

ರಾಧಿಕಾ ಬಹಳ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಬಂದವರು. ಸೃಜನ್ ಲೋಕೇಶ್ ಜೊತೆ 'ನೀಲ ಮೇಘ ಶಾಮ' ಚಿತ್ರದಲ್ಲಿ ನಟಸುವ ಮೂಲಕ ಚಿತ್ರರಂಗಕ್ಕೆ ಬಂದ ರಾಧಿಕಾ ಆಗ ತಾನೇ 9ನೇ ತರಗತಿ ಪಾಸಾಗಿದ್ದರು. ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ ವಿಜಯ್ ರಾಘವೇಂದ್ರ ಜೊತೆ ನಟಿಸಿದ್ದ 'ನಿನಗಾಗಿ' ಸಿನಿಮಾ ತೆರೆಗೆ ಬಂತು. ರಿಲೀಸ್ ಆದ ಮೊದಲ ಚಿತ್ರದಲ್ಲೇ ರಾಧಿಕಾ ಎಲ್ಲರ ಕೇಂದ್ರ ಬಿಂದುವಾಗಿದ್ದರು.

'ನಿನಗಾಗಿ' ಚಿತ್ರದ ನಂತರ ರಾಧಿಕಾ ಮತ್ತೆ ಹಿಂತಿರುಗಿ ನೋಡೇ ಇಲ್ಲ. ತವರಿಗೆ ಬಾ ತಂಗಿ, ಪ್ರೇಮಕೈದಿ, ಮಣಿ, ತಾಯಿ ಇಲ್ಲದ ತಬ್ಬಲಿ, ಮಸಾಲ, ಆಟೋ ಶಂಕರ್, ಮಂಡ್ಯ, ಅಣ್ಣ ತಂಗಿ, ಹಠವಾದಿ, ಅನಾಥರು ಸೇರಿ ಅನೇಕ ಸಿನಿಮಾಗಳಲ್ಲಿ ರಾಧಿಕಾ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು, ತೆಲುಗು ಚಿತ್ರರಂಗದಲ್ಲೂ ಈ ಚೆಲುವೆ ಗುರುತಿಸಿಕೊಂಡಿದ್ದಾರೆ. ನವಶಕ್ತಿ ವೈಭವ ಚಿತ್ರದ ನಂತರ ಮದುವೆ, ಮಗು, ಸಂಸಾರ ಎಂದು ಬ್ಯುಸಿಯಾದ ಈ ಮಂಗಳೂರು ಹುಡುಗಿ 4 ವರ್ಷಗಳ ನಂತರ ಮತ್ತೆ 'ಸ್ವೀಟಿ ನನ್ನ ಜೋಡಿ' ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಇಷ್ಟೆಲ್ಲಾ ಖ್ಯಾತರಾದ ರಾಧಿಕಾ ಕುಮಾರಸ್ವಾಮಿಗೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿದ್ದರೂ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರಲಿಲ್ಲ. ರಾಧಿಕಾ ಹೆಸರಿನಲ್ಲಿ ಅನೇಕ ಸೋಷಿಯಲ್ ಮೀಡಿಯಾ ಖಾತೆಗಳಿವೆ. ಎಲ್ಲವೂ ಅಭಿಮಾನಿಗಳು ನಿರ್ವಹಿಸುತ್ತಿರುವ ಖಾತೆಗಳು. ಇತ್ತೀಚೆಗೆ ಅವರು ವೈಯಕ್ತಿಕ ಫೇಸ್​​​​​ ಬುಕ್ ಖಾತೆ ತೆರೆದಿದ್ದಾರೆ.

Whats_app_banner