ಲಾಂಗ್ ಹಿಡಿದು ರೀಲ್ಸ್ ಮಾಡಿದ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ರಜತ್ ಮೇಲೆ FIR
ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ವಿರುದ್ಧ ಬಸವೇಶ್ವರ ನಗರ ಪೊಲೀಸರು ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಕಾರಣ ಇವರಿಬ್ಬರೂ ಮಾಡಿದ ರೀಲ್ಸ್. ಹಾಗಾದ್ರೆ ಆ ರೀಲ್ಸ್‌ನಲ್ಲಿ ಏನಿತ್ತು ನೋಡಿ.

ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಈ ಹಿಂದೆ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಲಾಂಗ್ ಹಿಡಿದುಕೊಂಡು ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಈ ವಿಡಿಯೋವನ್ನು ಸಾಕಷ್ಟು ಜನ ಇಷ್ಟಪಟ್ಟಿದ್ದರು ಇನ್ನು ಕೆಲವರು ವಿರೋಧಿಸಿದ್ದರು. ಕೆಲವರಿಗೆ ವಿಡಿಯೋ ತುಂಬಾ ಹಿಡಿಸಿದ್ದು, ನಮ್ಮಲ್ಲೇ ಇಂತಹ ಕಲಾವಿದರಿದ್ದಾರೆ. ವಿಲನ್ ಪಾತ್ರವನ್ನು ನಿಭಾಯಿಸಬಲ್ಲ ಇವರಿಗೆಲ್ಲ ಅವಕಾಶ ಸಿಗಬೇಕು ಎಂದೆಲ್ಲ ಕಾಮೆಂಟ್ ಮಾಡಿದವರೂ ಇದ್ದಾರೆ. ಇನ್ನು ವಿಡಿಯೋದಲ್ಲಿ ರಜತ್ ತೊಟ್ಟ ಬಟ್ಟೆಯ ಮೇಲೆ ಡಿ ಬಾಸ್ ಎಂದು ಬರೆದಿತ್ತು. ಅದನ್ನು ಕಂಡ ಇನ್ನೊಂದಷ್ಟು ಜನ ಜೈ ಡಿ ಬಾಸ್ ಎನ್ನುತ್ತಾ ಕಾಮೆಂಟ್ ಮಾಡಿದ್ದರು.
ಲಾಂಗ್ ಹಿಡಿದು ವಿಡಿಯೋ ಮಾಡಿದ ರಜತ್ ಹಾಗೂ ವಿನಯ್ ಗೌಡ
ಆದರೆ ವಿಡಿಯೋ ಮಾಡಿದ ರಜತ್ ಹಾಗೂ ವಿನಯ್ ಗೌಡ ವಿರುದ್ಧ ದೂರು ದಾಖಲಾಗಿದೆ. ರೀಲ್ಸ್‌ನಲ್ಲಿ ಇವರಿಬ್ಬರು ಲಾಂಗ್ ಹಿಡಿದುಕೊಂಡ ಕಾರಣ ಇದು ಸಾಮಾಜಿಕ ಶಾಂತಿಯನ್ನು ಹಾಳು ಮಾಡುತ್ತದೆ ಎಂದು ಹೇಳಲಾಗಿದ್ದು. ಇವರಿಬ್ಬರ ಮೇಲೆ FIR ದಾಖಲಿಸಲಾಗಿದೆ. ಬಸವೇಶ್ವರ ನಗರ ಪೊಲೀಸರು ಈ ಕುರಿತು ದೂರನ್ನು ದಾಖಲು ಮಾಡಿದ್ದಾರೆ.
ಬಿಗ್ ಬಾಸ್ 10ರ ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ 11ರ ಸ್ಪರ್ಧಿ ರಜತ್ ಇಬ್ಬರೂ ಒಂದೇ ರೀತಿಯ ಅಭಿರುಚಿ ಇರುವ ಕಲಾವಿದರಾದ ಕಾರಣ ಇಬ್ಬರು ಒಟ್ಟಾಗಿ ರೀಲ್ಸ್ ಮಾಡಿದ್ದಾರೆ. ರೀಲ್ಸ್ ಮಾಡುವ ಭರಾಟೆಯಲ್ಲಿ ಲಾಂಗ್ ಹಿಡಿದಿರುವುದು ತಪ್ಪಾಗಿದೆ. ಕೈಯಲ್ಲಿ ನಕಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಈ ರೀತಿ ರೀಲ್ಸ್ ಮಾಡುವುದು ಕಾನೂನು ಬಾಹಿರ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ ಎಂದು ಹೇಳಲಾಗಿದೆ. ಆದರೆ, FIR ಆದ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಮಾರಕಾಸ್ತ್ರಗಳನ್ನು ಬಳಸುವಂತಿಲ್ಲ
ಈ ಹಿಂದೆ ಡ್ರೋನ್ ಪ್ರತಾಪ್ ಕೂಡ ಇಂತದ್ದೇ ಒಂದು ಬೇರೆ ಸಮಸ್ಯೆಯನ್ನು ರೀಲ್ಸ್‌ನಿಂದ ಅನುಭವಿಸಿದ್ದರು. ಕೃಷಿ ಹೊಂಡದಲ್ಲಿ ಸ್ಪೋಟ ಮಾಡಿ ವಿವಾದವಾಗಿತ್ತು. ಒಟ್ಟಿನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಇನ್ನಷ್ಟು ಜನಪ್ರಿಯತೆ ಗಳಿಸುವಲ್ಲಿ ಎಡವುತ್ತಿರುವುದು ಎದ್ದು ತೋರುತ್ತಿದೆ. ಯಾವುದೇ ಮಾರಕಾಸ್ತ್ರಗಳನ್ನು ಬಳಲಿ ರೀಲ್ಸ್ ಮಾಡುವಂತಿಲ್ಲ ಎಂಬ ಸೂಚನೆ ಇದೆ. ಗನ್, ಚಾಕು, ಚೂರಿ, ಕತ್ತಿ, ಲಾಂಗ್, ಬಾಂಬ್ ಹೀಗೆ ಯಾವುದನ್ನೂ ರೀಲ್ಸ್ ಹುಚ್ಚಾಟಕ್ಕಾಗಿ ಬಳಸುವಂತಿಲ್ಲದಿದ್ದರೂ ಕೆಲವರು ಇಂದಿಗೂ ಮತ್ತದೇ ತಪ್ಪು ಮಾಡುತ್ತಿರುತ್ತಾರೆ.

ವಿಭಾಗ