ಕೇರಳದ ಜಸ್ಟಿಸ್‌ ಹೇಮಾ ಸಮಿತಿ ಮಾದರಿಯಲ್ಲಿ ನಮಗೂ ಒಂದು ಸಮಿತಿ ಬೇಕು; ಸಿಎಂ ಸಿದ್ದರಾಮಯ್ಯಗೆ FIRE ಸದಸ್ಯರಿಂದ ಮನವಿ-fire requested to create a committee like keralas hema committee for the safety of women in kannada film industry mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕೇರಳದ ಜಸ್ಟಿಸ್‌ ಹೇಮಾ ಸಮಿತಿ ಮಾದರಿಯಲ್ಲಿ ನಮಗೂ ಒಂದು ಸಮಿತಿ ಬೇಕು; ಸಿಎಂ ಸಿದ್ದರಾಮಯ್ಯಗೆ Fire ಸದಸ್ಯರಿಂದ ಮನವಿ

ಕೇರಳದ ಜಸ್ಟಿಸ್‌ ಹೇಮಾ ಸಮಿತಿ ಮಾದರಿಯಲ್ಲಿ ನಮಗೂ ಒಂದು ಸಮಿತಿ ಬೇಕು; ಸಿಎಂ ಸಿದ್ದರಾಮಯ್ಯಗೆ FIRE ಸದಸ್ಯರಿಂದ ಮನವಿ

ಸ್ಯಾಂಡಲ್‌ವುಡ್‌ನಲ್ಲಿಯೂ ಕೇರಳ ಮಾದರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಹೇಮಾ ಸಮಿತಿ ರೀತಿಯಲ್ಲಿಯೇ ಕನ್ನಡ ಚಿತ್ರೋದ್ಯಮಕ್ಕೂ ಒಂದು ಕಮಿಟಿ ಬೇಕು ಎಂದು FIRE ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿಯೂ ನಿವೃತ್ತ ನ್ಯಾಯಮೂರ್ತಿ ಹೇಮಾ ಸಮಿತಿ ರೀತಿಯಲ್ಲಿಯೇ ಕನ್ನಡ ಚಿತ್ರೋದ್ಯಮಕ್ಕೂ ಒಂದು ಕಮಿಟಿ ಬೇಕು ಎಂದು ಇಂದು (ಸೆ. 05) FIRE ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿಯೂ ನಿವೃತ್ತ ನ್ಯಾಯಮೂರ್ತಿ ಹೇಮಾ ಸಮಿತಿ ರೀತಿಯಲ್ಲಿಯೇ ಕನ್ನಡ ಚಿತ್ರೋದ್ಯಮಕ್ಕೂ ಒಂದು ಕಮಿಟಿ ಬೇಕು ಎಂದು ಇಂದು (ಸೆ. 05) FIRE ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

Kannada Film Industry: ನ್ಯಾಯಮೂರ್ತಿ ಹೇಮಾ ಸಮಿತಿ ನೀಡಿದ ವರದಿ ಮಲಯಾಳಿ ಇಂಡಸ್ಟ್ರಿಯಲ್ಲಿ ಭಾರೀ ಸಂಚಲನ ಮೂಡಿಸಿದ್ದು ಗೊತ್ತಿರುವ ಸಂಗತಿ. ಮಲಯಾಳಿ ಚಿತ್ರೋದ್ಯಮದಲ್ಲಿ ತಮ್ಮ ಮೇಲಾದ ಕೆಟ್ಟ ಅನುಭವಗಳನ್ನು ಒಬ್ಬರಾದ ಮೇಲೊಬ್ಬರು ಹೇಳಿಕೊಳ್ಳುತ್ತಲೇ ಇದ್ದಾರೆ. ಸಿನಿಮಾ ಅವಕಾಶಕ್ಕಾಗಿ ಮಲಯಾಳಿ ಸ್ಟಾರ್‌ ನಟರಿಂದಲೇ ಲೈಂಗಿಕ ಕಿರುಕುಳ ಎದುರಿಸಿದ್ದೇವೆ ಎಂದೂ ನೇರವಾಗಿಯೇ ಸಾಕಷ್ಟು ನಟಿಯರು ಮಾಧ್ಯಮಗಳ ಮುಂದೆ ಬಾಯಿ ಬಿಟ್ಟಿದ್ದಾರೆ. ಪೊಲೀಸ್‌ ಠಾಣೆಗೂ ದೂರು ನೀಡಿದ್ದಾರೆ. ಈ ನಡುವೆ ಸ್ಯಾಂಡಲ್‌ವುಡ್‌ನಲ್ಲಿಯೂ ನಿವೃತ್ತ ನ್ಯಾಯಮೂರ್ತಿ ಹೇಮಾ ಸಮಿತಿ ರೀತಿಯಲ್ಲಿಯೇ ಕನ್ನಡ ಚಿತ್ರೋದ್ಯಮಕ್ಕೂ ಒಂದು ಕಮಿಟಿ ಬೇಕು ಎಂದು ಇಂದು (ಸೆ. 05) FIRE ಸದಸ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ವರದಿ ಮಾಡಲು ಮತ್ತು ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಸುರಕ್ಷತೆಗೆ ಅಗತ್ಯ ನೀತಿಗಳನ್ನು ರೂಪಿಸಲು ಕೇರಳ ಮಾದರಿಯ ಸಮಿತಿಯನ್ನು ರಚಿಸುವಂತೆ FIRE (ಫಿಲ್ಮಂ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ) ಸಂಸ್ಥೆ ಎರಡು ದಿನಗಳ ಹಿಂದಷ್ಟೇ ಸಿಎಂಗೆ ಪತ್ರ ಬರೆದಿತ್ತು. ಇದೀಗ ಸಿಎಂ ಅವರ ಬೆಂಗಳೂರಿನ ಕಾವೇರಿ ನಿವಾಸಕ್ಕೆ ತೆರಳಿದ ಫೈರ್‌ನ ಸದಸ್ಯರಾದ, ಚೇತನ್‌ ಅಹಿಂಸಾ, ನೀತು ಶೆಟ್ಟಿ, ಶ್ರುತಿ ಹರಿಹರನ್‌, ಸಂಗೀತಾ ಭಟ್‌, ಹಿರಿಯ ಪತ್ರಕರ್ತೆ ವಿಜಯಮ್ಮ ಸೇರಿ ಇನ್ನೂ ಹಲವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಮನವಿ ನೀಡಿದ ಬಳಿಕ ಮಾತನಾಡಿದ ನಟಿ ಶ್ರುತಿ ಹರಿಹರನ್‌, ಸಿಎಂ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆಯಾಗಲಿ ಎಂದೂ ಸಿಎಂ ಹೇಳಿದ್ದಾರೆ. ಒಂದು ವೇಳೆ ಇದು ಅನುಷ್ಠಾನಕ್ಕೆ ಬಂದರೆ, ಚಿತ್ರೋದ್ಯಮದಲ್ಲಿ ಮಹಿಳೆಯರು ನಿರಾಳವಾಗಿ ಕೆಲಸ ಮಾಡಬಹುದಾಗಿದೆ ಎಂದಿದ್ದಾರೆ ಶ್ರುತಿ ಹರಿಹರನ್.‌ ಕನ್ನಡ ಚಿತ್ರರಂಗಕ್ಕೂ ಇಂಥ ಸಮಿತಿ ಸದ್ಯದ ಮಟ್ಟಿಗೆ ಅನಿವಾರ್ಯ. ಲೈಂಗಿಕ ದೌರ್ಜನ್ಯ ಪ್ರಕರಣಗಳ ಕಡಿವಾಣಕ್ಕೆ ಇದು ಅನುಕೂಲವಾಗಲಿದೆ. ಜತೆಗೆ ಸಂಭಾವನೆ ವಿಚಾರದಲ್ಲಿರುವ ಅಸಮಾನತೆಯನ್ನೂ ಇದು ತೊಡೆದುಹಾಕಲಿದೆ ಎಂದು ನಿರ್ದೇಶಕ ಕೆ.ಎಂ ಚೈತನ್ಯ ಹೇಳಿದ್ದಾರೆ.

ಮನವಿ ಸ್ವೀಕರಿಸಿದ ಬಳಿಕ ಸಿಎಂ ಪೋಸ್ಟ್‌

ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಚೇತನ್ ನೇತೃತ್ವದ ಫೈರ್ ನಿಯೋಗದವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಮಲಯಾಳಂ ಸಿನೆಮಾ ರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ತನಿಖೆಗಾಗಿ ಸಮಿತಿ ರಚನೆ ಮಾಡಿದಂತೆ, ರಾಜ್ಯ ಸರ್ಕಾರವು ಸಮಿತಿ ರಚಿಸಿ, ಕನ್ನಡ ಚಿತ್ರರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಮಗ್ರ ತನಿಖೆ ಮಾಡುವಂತೆ ಮನವಿ ಸಲ್ಲಿಸಿದರು.

153 ಜನರಿಂದ ಸಹಿ..

ಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಉದ್ದೇಶಕ್ಕಾಗಿಯೇ FIRE ಸ್ಥಾಪಿತವಾಗಿತ್ತು. ಇದರ ಅಧ್ಯಕ್ಷೆಯಾಗಿ ಕವಿತಾ ಲಂಕೇಶ್‌ ಇದ್ದಾರೆ. ಕಾರ್ಯದರ್ಶಿಯಾಗಿ ನಟ, ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ ಸಕ್ರಿಯರಾಗಿದ್ದಾರೆ. ಇವರ ಜತೆಗೆ ಕನ್ನಡದ ಇತರ ಸಿನಿಮಾ ನಟಿಯರಾದ ಶ್ರುತಿ ಹರಿಹರನ್, ಐಂದ್ರಿತಾ ರೇ, ಆಶಿಕಾ ರಂಗನಾಥ್‌, ಚೈತ್ರಾ ಆಚಾರ್‌, ಸಂಯುಕ್ತಾ ಹೆಗಡೆ, ಪೂಜಾ ಗಾಂಧಿ, ನಿಶ್ವಿಕಾ ನಾಯ್ಡು, ಧನ್ಯಾ ರಾಮ್‌ಕುಮಾರ್‌, ಅಮೃತಾ ಅಯ್ಯಂಗಾರ್‌ ಸೇರಿ ನಟ ವಿನಯ್‌ ರಾಜ್‌ಕುಮಾರ್‌ ಸೇರಿ ಒಟ್ಟು 153 ಮಂದಿ ಈ ಅರ್ಜಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಸರ್ಕಾರಕ್ಕೂ ಸಮಿತಿ ರಚಿಸುವಂತೆ ಒತ್ತಾಯಿಸಿದ್ದರು.