Nawazuddin Siddiqui: ಖ್ಯಾತ ನಟನ ಪತ್ನಿ ವಿರುದ್ಧ ವಂಚನೆ ಪ್ರಕರಣ ಆರೋಪ...ಆಕೆ ಮಾಡಿದ್ದಾದ್ರೂ ಏನು..?
ಕನ್ನಡ ಸುದ್ದಿ  /  ಮನರಂಜನೆ  /  Nawazuddin Siddiqui: ಖ್ಯಾತ ನಟನ ಪತ್ನಿ ವಿರುದ್ಧ ವಂಚನೆ ಪ್ರಕರಣ ಆರೋಪ...ಆಕೆ ಮಾಡಿದ್ದಾದ್ರೂ ಏನು..?

Nawazuddin Siddiqui: ಖ್ಯಾತ ನಟನ ಪತ್ನಿ ವಿರುದ್ಧ ವಂಚನೆ ಪ್ರಕರಣ ಆರೋಪ...ಆಕೆ ಮಾಡಿದ್ದಾದ್ರೂ ಏನು..?

ನವಾಜುದ್ದೀನ್ ಸಿದ್ದಿಕಿ 'ಹೋಲಿ ಕೌ' ಸಿನಿಮಾದಲ್ಲಿ ನಟಿಸುತ್ತಿರುವುದು ತಿಳಿದಿರುವ ವಿಚಾರ. ಈ ಚಿತ್ರವನ್ನು ಅವರ ಪತ್ನಿ ಆಲಿಯಾ ಸಿದ್ದಿಕಿ ನಿರ್ಮಿಸುತ್ತಿದ್ದಾರೆ. ''ಸಿನಿಮಾ ನಿರ್ಮಾಣಕ್ಕಾಗಿ ಆಲಿಯಾ ನನ್ನ ಬಳಿ 31 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಹೇಳಿದ ಸಮಯಕ್ಕೆ ಅವರು ಹಣವನ್ನು ಹಿಂತಿರುಗಿಸಿಲ್ಲ'' ಎಂದು ಯುವತಿಯೊಬ್ಬರು ಆರೋಪಿಸಿದ್ದಾರೆ.

<p>ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ವಿರುದ್ಧ ವಂಚನೆ ಆರೋಪ</p>
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ವಿರುದ್ಧ ವಂಚನೆ ಆರೋಪ

ಸಮಾಜಕ್ಕೆ ಮಾದರಿಯಾಗಿರಬೇಕಾದ ಸೆಲಬ್ರಿಟಿಗಳೇ ವಂಚನೆ ಪ್ರಕರಣ ಸಿಲುಕುವುದು ನಿಜಕ್ಕೂ ಬೇಸರದ ಸಂಗತಿ, ಇದೀಗ ಬಾಲಿವುಡ್​​​​ನಲ್ಲಿ ಇಂತಹ ಮತ್ತೊಂದು ಪ್ರಕರಣ ವರದಿಯಾಗಿದೆ. ಬಾಲಿವುಡ್​​​ನಲ್ಲಿ ವಿಶಿಷ್ಟ ಪಾತ್ರಗಳ ಮೂಲಕ ಹೆಸರಾಗಿದ್ದ ನವಾಜುದ್ದೀನ್ ಸಿದ್ದಿಕಿ ಹೆಸರು ವಂಚನೆ ಪ್ರಕರಣದಲ್ಲಿ ಕೇಳಿಬಂದಿದೆ. ಆದರೆ ಇಲ್ಲಿ ವಂಚನೆ ಆರೋಪ ಎದುರಿಸುತ್ತಿರುವುದು ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ಸಿದ್ದಿಕಿ.

ನವಾಜುದ್ದೀನ್ ಸಿದ್ದಿಕಿ ಹಿಂದಿ ಚಿತ್ರರಂಗದಲ್ಲಿ ವಿಶಿಷ್ಟ ಪಾತ್ರಗಳ ಮೂಲಕ ಸ್ಟಾರ್ ಇಮೇಜ್ ಪಡೆದುಕೊಂಡಿರುವ ನಟ. ಪಾಸಿಟಿವ್ ಇರಲಿ, ನೆಗೆಟಿವ್ ಇರಲಿ, ಎಲ್ಲಾ ರೀತಿಯ ಪಾತ್ರಗಳ ಮೂಲಕ ಅವರು ಸಿನಿಪ್ರಿಯರಿಗೆ ಮನರಂಜನೆ ನೀಡುತ್ತಾ ಬಂದಿದ್ದಾರೆ. ಠಾಕ್ರೆ, ಮಾಂಟೊ, ಗ್ಯಾಂಗ್ಸ್ ಆಫ್ ವಾಸಿಪುರ್, ಬಜರಂಗಿ ಭಾಯಿಜಾನ್, ಬದಲಾಪುರ್, ಮಾನ್ಸೂನ್ ಶೂಟ್ ಔಟ್ ಮುಂತಾದ ಚಿತ್ರಗಳಲ್ಲಿ ಅವರ ಪಾತ್ರವನ್ನು ಎಂದಿಗೂ ಮರೆಯಲಾಗುವುದಿಲ್ಲ. ನವಾಜುದ್ದೀನ್ ಸಿದ್ದಿಕಿ 'ಹೋಲಿ ಕೌ' ಸಿನಿಮಾದಲ್ಲಿ ನಟಿಸುತ್ತಿರುವುದು ತಿಳಿದಿರುವ ವಿಚಾರ. ಈ ಚಿತ್ರವನ್ನು ಅವರ ಪತ್ನಿ ಆಲಿಯಾ ಸಿದ್ದಿಕಿ ನಿರ್ಮಿಸುತ್ತಿದ್ದಾರೆ. ''ಸಿನಿಮಾ ನಿರ್ಮಾಣಕ್ಕಾಗಿ ಆಲಿಯಾ ನನ್ನ ಬಳಿ 31 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಹೇಳಿದ ಸಮಯಕ್ಕೆ ಅವರು ಹಣವನ್ನು ಹಿಂತಿರುಗಿಸಿಲ್ಲ. ಕೊಟ್ಟ ಸಾಲ ವಾಪಸ್ ಕೇಳುತ್ತಿದ್ದರೂ ಆಕೆ ಮಾತ್ರ ನನಗೆ ಸ್ಪಂದಿಸುತ್ತಿಲ್ಲ'' ಎಂದು ಮಂಜು ಅಗರ್​​ವಾಲ್ ಎಂಬ ಯುವತಿ ಆರೋಪಿಸಿದ್ದು, ಈ ಸಂಬಂಧ ಜೂನ್ 20 ರಂದು ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು ಆಲಿಯಾ ಸಿದ್ದಿಕಿ ವಂಚನೆ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ.

''ಆಲಿಯಾ ಸಿದ್ದಿಕಿ, ನನಗೆ 2005 ರಿಂದ ಗೊತ್ತು. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಅವರು ನಿರ್ಮಾಪಕಿಯಾಗಲು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಹಾಗೇ ಅವರಿಗೆ 'ಹೋಲಿ ಕೌ' ಚಿತ್ರವನ್ನು ನಿರ್ಮಾಣ ಮಾಡುವ ಅವಕಾಶ ಒದಗಿ ಬಂತು. ಈ ಚಿತ್ರಕ್ಕೆ ಸಂಬಂಧಿಸಿದ ಕ್ರಿಯೇಟಿವ್ ಕೆಲಸಗಳನ್ನು ನೋಡಿಕೊಳ್ಳಲು ನನಗೆ ಜವಾಬ್ದಾರಿ ವಹಿಸಿದ ಆಕೆ ಹಣಕಾಸಿನ ವಿಚಾರವನ್ನು ತಾವೇ ನೋಡಿಕೊಳ್ಳುವುದಾಗಿ ಹೇಳಿದ್ದರು. ಹಾಗಾಗಿ ನಾನು ನಟ-ನಟಿಯರ ಮೇಲ್ವಿಚಾರಣೆ ವಹಿಸಿಕೊಂಡಿದ್ದೇನೆ. ಆದರೆ ಅವರಿಗೆ ನೀಡಿರುವ ಚೆಕ್‌ಗಳು ಸ್ವಲ್ಪ ಸಮಯದ ನಂತರ ಬೌನ್ಸ್ ಆಗಿವೆ. ಇದರಿಂದ ಹಣದ ಅವಶ್ಯಕತೆ ಇದ್ದಿದ್ದರಿಂದ ಅವರು ನನ್ನನ್ನು ಕೇಳಿದರು. ನಾನು ತಮ್ಮ ತಂದೆಯ ಬಳಿ ಹಣ ಕೇಳುವಂತೆ ಸೂಚಿಸಿದೆ. ನನ್ನ ತಂದೆ ಉಜ್ಜಯಿನಿಯಲ್ಲಿರುವ ಒಂದು ಮನೆಯನ್ನು ಮಾರಿ ಬಂದ ಹಣದಲ್ಲಿ ಆಲಿಯಾಗೆ ಸ್ವಲ್ಪ ಹಣ ನೀಡಿದರು. ತಿಂಗಳ ಒಳಗೆ ಹಣವನ್ನು ವಾಪಸ್ ನೀಡುತ್ತೇನೆ ಎಂದು ಹೇಳಿದ್ದ ಅವರು ಇದುವರೆಗೂ ನೀಡಿಲ್ಲ. ಎಷ್ಟು ಬಾರಿ ಕೇಳಿದರೂ ಸ್ಪಂದಿಸುತ್ತಿಲ್ಲ'' ಎಂದು ಮಂಜು ಅಗರ್​​ವಾಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ತಮ್ಮ ಮೇಲಿನ ಆರೋಪಗಳಿಗೆ ಆಲಿಯಾ ಸಿದ್ದಿಕಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬಾಲಿವುಡ್​​​​​ ನಟಿ ಶಿಲ್ಪಾ ಶೆಟ್ಟಿಯನ್ನೂ ಕಾಡಿದ್ದ ವಂಚನೆ ಪ್ರಕರಣ

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನವಾಗುತ್ತಿದ್ದಂತೆ ಇತ್ತ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ತಾಯಿ ವಿರುದ್ಧ ದೆಹಲಿ ಮೂಲದ ಉದ್ಯಮಿಯೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದರು. ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ಮುಂಬೈನಲ್ಲಿ ಫಿಟ್ನೆಸ್ ಸೆಂಟರ್ ತೆರೆಯುವುದಾಗಿ ನಮ್ಮ ಬಳಿ ಹಣ ಪಡೆದು ಮೋಸ ಮಾಡಿದ್ದಾರೆ. ಅತ್ತ ಫಿಟ್ನೆಸ್ ಸೆಂಟರನ್ನೂ ತೆರೆದಿಲ್ಲ, ಇತ್ತ ಕೊಟ್ಟ ಹಣವನ್ನು ವಾಪಸ್ ನೀಡುತ್ತಿಲ್ಲ ಎಂದು ದೂರು ದಾಖಲಿಸಿದ್ದರು.

Whats_app_banner