Friday Release: ಲಾಫಿಂಗ್‌ ಬುದ್ಧ, ಪೆಪೆ ಕೇಕೆ, ಚಿತ್ರಮಂದಿರಗಳಲ್ಲಿ ಈ ವಾರ 20+ ಸಿನಿಮಾಗಳು ರಿಲೀಸ್‌-friday august 30 release movies in kannada telugu tamil malayalam hindi pepe laughing buddha movies pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Friday Release: ಲಾಫಿಂಗ್‌ ಬುದ್ಧ, ಪೆಪೆ ಕೇಕೆ, ಚಿತ್ರಮಂದಿರಗಳಲ್ಲಿ ಈ ವಾರ 20+ ಸಿನಿಮಾಗಳು ರಿಲೀಸ್‌

Friday Release: ಲಾಫಿಂಗ್‌ ಬುದ್ಧ, ಪೆಪೆ ಕೇಕೆ, ಚಿತ್ರಮಂದಿರಗಳಲ್ಲಿ ಈ ವಾರ 20+ ಸಿನಿಮಾಗಳು ರಿಲೀಸ್‌

August 30 Movies Release: ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ವಿನಯ್‌ ರಾಜ್‌ಕುಮಾರ್‌ ನಟನೆಯ ಪೆಪೆ, ಲಾಫಿಂಗ್‌ ಬುದ್ಧ, ಟೇಕ್ವಾಂಡೋ ಗರ್ಲ್‌:, ಮೈ ಹೀರೋ, ಕೇದರ್‌ನಾಥ್‌ ಕುರಿಫಾರಂ, ದಿ ರೂಲರ್ಸ್‌, ಅಹೋ ವಿಕ್ರಮಾರ್ಕ, ಸರಿಪೋದ ಶನಿವಾರಂ, ಎ ವೆಡ್ಡಿಂಗ್‌ ಸ್ಟೋರಿ ಮುಂತಾದ ಸಿನಿಮಾಗಳು ಬಿಡುಗಡೆಯಾಗಲಿವೆ.

ಆಗಸ್ಟ್‌ 30ರಂದು ಬಿಡುಗಡೆಯಾಗಲಿರುವ ಸಿನಿಮಾಗಳು
ಆಗಸ್ಟ್‌ 30ರಂದು ಬಿಡುಗಡೆಯಾಗಲಿರುವ ಸಿನಿಮಾಗಳು

ಸ್ಯಾಂಡಲ್‌ವುಡ್‌, ಮಾಲಿವುಡ್‌, ಕಾಲಿವುಡ್‌, ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ಈ ಶುಕ್ರವಾರ (ಆಗಸ್ಟ್‌ 30)ರಂದು 20ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಲಿವೆ. ಭೀಮ, ಕೃಷ್ಣಂ ಪ್ರಣಯ ಸಖಿ, ಗೌರಿ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದ ಬಳಿಕ ಸ್ಯಾಂಡಲ್‌ವುಡ್‌ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಆಗಸ್ಟ್‌ ತಿಂಗಳ ಕೊನೆಯ ದಿನವೂ ಕೆಲವು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ವಿನಯ್‌ ರಾಜ್‌ಕುಮಾರ್‌ ನಟನೆಯ ಮಾಸ್‌ ಚಿತ್ರ "ಪೆಪೆ" ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ನಿರ್ಮಾಣದ ಪ್ರಮೋದ್‌ ಶೆಟ್ಟಿ ನಟನೆಯ ಲಾಫಿಂಗ್‌ ಬುದ್ಧವೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುವ ನಿರೀಕ್ಷೆಯಿದೆ. ಇದೇ ಸಮಯದಲ್ಲಿ ಟೇಕ್ವಾಂಡೋ ಗರ್ಲ್‌, ಮೈ ಹೀರೋ, ಕೇದರ್‌ನಾಥ್‌ ಕುರಿಫಾರಂ, ಕೇದರ್‌ನಾಥ್‌ ಕುರಿಫಾರಂ, ದಿ ರೂಲರ್ಸ್‌, ಅಹೋ ವಿಕ್ರಮಾರ್ಕ, ಸರಿಪೋದ ಶನಿವಾರಂ, ಎ ವೆಡ್ಡಿಂಗ್‌ ಸ್ಟೋರಿ ಮುಂತಾದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ.

ಪೆಪೆ ಸಿನಿಮಾ (ವಿನಯ್‌ ರಾಜ್‌ಕುಮಾರ್‌- ಕನ್ನಡ ಸಿನಿಮಾ)

ಪೆಪೆ ಸಿನಿಮಾ ಇದೇ ಆಗಸ್ಟ್‌ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಪೆಪೆ’.. ಈ ಚಿತ್ರದ ಮೇಲೆ ದೊಡ್ಮನೆ ಅಭಿಮಾನಿಗಳು ಮತ್ತು ಕನ್ನಡ ಪ್ರೇಕ್ಷಕರು ವಿಶೇಷವಾದ ನಿಗಾವನ್ನು ಇಟ್ಟಿದ್ದಾರೆ. ಕಾರಣ ‘ಒಂದು ಸರಳ ಪ್ರೇಮ ಕಥೆ‘ ಸಿನಿಮಾ ಹಿಟ್ ಆದ ನಂತರ ವಿನಯ್ ರಾಜ್ ಕುಮಾರ್ ಮಾಸ್‌ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಮಾಸ್‌ ಜತೆಗೆ ಕ್ಲಾಸ್‌ ಅಂಶಗಳು ಇರುವ ಸೂಚನೆಯನ್ನು ಜೇನು ಕುರುಬ ಹಾಡು ನೀಡಿದೆ.

ಲಾಫಿಂಗ್‌ ಬುದ್ಧ (ಪ್ರಮೋದ್‌ ಶೆಟ್ಟಿ - ಕನ್ನಡ ಸಿನಿಮಾ)

ಪ್ರಮೋದ್‌ ಶೆಟ್ಟಿ ನಟನೆಯ ಲಾಫಿಂಗ್‌ ಬುದ್ಧ ಎಂಬ ಸಿನಿಮಾ ಆಗಸ್ಟ್‌ 30ರಂದು ಬಿಡುಗಡೆಯಾಗಲಿದೆ. ಲಾಫಿಂಗ್‌ ಬುದ್ಧ ಸಿನಿಮಾದಲ್ಲಿ ನಗುವಿಗೆ ಬರವಿಲ್ಲ ಎನ್ನುವ ಸೂಚನೆಯನ್ನು ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ನೀಡಿದೆ. ಲಾಫಿಂಗ್‌ ಬುದ್ಧ ಎನ್ನುವುದು ಭರತ್‌ ರಾಜ್‌ ನಿರ್ದೇಶನದ ಮತ್ತು ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ. ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

  • ಟೇಕ್ವಾಂಡೋ ಗರ್ಲ್‌: ರುತು ಸ್ಪರ್ಶ, ಸುಮಿತಾ ಪ್ರವೀಣ್‌ ಮುಂತಾದವರು ನಟಿಸಿರುವ ಚಿತ್ರ.
  • ಮೈ ಹೀರೋ: ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಎರಿಕ್‌ ರೋಬಾರ್ಟ್ಸ್‌, ವೇದಿಕ್‌ ಕುಶಾಲ್‌, ಅಂಕಿತಾ ಅಮರ್‌, ಪ್ರಕಾಶ್‌ ಬೆಳವಾಡಿ, ಹರಿಹರ್‌ ಗುಂಡುರಾವ್‌ (ದತ್ತಣ್ಣ), ನಿರಂಜನ್‌ ದೇಶ್‌ಪಾಂಡೆ ಮುಂತಾದವರು ನಟಿಸಿದ್ದಾರೆ.
  • ಕೇದರ್‌ನಾಥ್‌ ಕುರಿಫಾರಂ
  • ದಿ ರೂಲರ್ಸ್‌: ವಿಶಲ್‌ ಕುಮಾರ್‌, ರಿತು ಅನಗ ಮುಂತಾದವರು ನಟಿಸಿರುವ ಕನ್ನಡ ಸಿನಿಮಾ.

ಅಹೋ ವಿಕ್ರಮಾರ್ಕ : ದೇವ್‌ ಗಿಲ್‌ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗಲಿದೆ.

  • ಕರಿಯಾ: ದರ್ಶನ್‌ ನಟನೆಯ ಕರಿಯಾ ಸಿನಿಮಾ ಮರುಬಿಡುಗಡೆಯಾಗಲಿದೆ
  • ಸೂರ್ಯ ಸಾಟರ್‌ಡೇ (ಸರಿಪೋದ ಶನಿವಾರಂ): ನಾನಿ, ಪ್ರಿಯಾಂಕ ಅರುಲ್‌ ಮೋಹನ್‌, ಸಾಯಿಕುಮಾರ್‌ ಮುಂತಾದವರು ನಟಿಸಿರುವ ಸಿನಿಮಾ.

ಬಾಲಿವುಡ್‌ ಸಿನಿಮಾ

  • ಎ ವೆಡ್ಡಿಂಗ್‌ ಸ್ಟೋರಿ

ತೆಲುಗು ಸಿನಿಮಾ

  • ಕಾವೇರಿ
  • ನೇನು ಕೀರ್ತನಾ
  • ಎಸ್‌ಐ ಕೋದಂಡಪಾನಿ
  • ಸೀತಾರಂ ಸಿತ್ರಲು
  • ಪಾರ್ಕ್‌

ತಮಿಳು

  • ಸೆಂಬಿಯನ್‌ ಮಾಧೇವಿ
  • ಕಾತಾನ

ಮಲಯಾಳಂ

  • ಪಟ್ಟಂ
  • ಕಟ್ಟಪ್ಪದಾತೆ ಮಾಂತ್ರಿಕನ್
  • ಚುರುಲ್‌
  • ಮನೋರಾಜ್ಯಂ
  • ಸಂಭವಸ್ಥಳತು ನಿನ್ನಂ

ಹೀಗೆ ಆಗಸ್ಟ್‌ 30ರಂದು ಚಿತ್ರಮಂದಿರಗಳಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಲಿವೆ. ವಿನಯ್‌ ರಾಜ್‌ ಕುಮಾರ್‌ ಅಭಿಮಾನಿಗಳು ಪೆಪೆ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಲಾಫಿಂಗ್‌ ಬುದ್ಧ ಸಿನಿಮಾದ ಶೋಗಳು ಗುರುವಾರ ಸಂಜೆಯಿಂದಲೇ ಆರಂಭವಾಗಿವೆ.