OTT Action Movies: ಮ್ಯಾಕ್ಸ್ ಚಿತ್ರದಿಂದ ಮಾರ್ಕೊವರೆಗೆ; ಒಟಿಟಿಯಲ್ಲಿ ಆಕ್ಷನ್ ಸಿನಿಮಾಗಳ ಅಬ್ಬರ
OTT Action Movies: ಕಳೆದ ವಾರ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾಗಳು, ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಆ ಪೈಕಿ ಆಕ್ಷನ್ ಸಿನಿಮಾಗಳೇ ಹೈಲೈಟ್. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

OTT Action Movies: ಒಟಿಟಿಯಲ್ಲಿ ಆಕ್ಷನ್ ಸಿನಿಮಾ ವೀಕ್ಷಕರಿಗೆ ಇದೀಗ ಧಮಾಕಾ ಶುರುವಾಗಿದೆ. ಸಾಲು ಸಾಲು ಮಾಸ್ ಆಕ್ಷನ್ ಸಿನಿಮಾಗಳ ಆಗಮನವಾಗಿವೆ. ಆ ಪೈಕಿ ಈ ಮೂರು ಚಿತ್ರಗಳು, ಈಗಾಗಲೇ ಒಟಿಟಿಯಲ್ಲಿ ಪ್ರಸಾರವಾಗುತ್ತಿವೆ. ಅದರಲ್ಲಿ ಕನ್ನಡದ ಒಂದು ಸಿನಿಮಾ ಸಹ ಸೇರಿದೆ. ಆ ಸಿನಿಮಾಗಳು ಯಾವವು? ಅವುಗಳ ವೀಕ್ಷಣೆ ಯಾವ ಒಟಿಟಿಯಲ್ಲಿ ಎಂಬಿತ್ಯಾದಿ ವಿವರ ಇಲ್ಲಿದೆ.
ಮಾರ್ಕೊ
ಮಲಯಾಳಂನ ಆಕ್ಷನ್ ಸಿನಿಮಾ ಮಾರ್ಕೊ ಕಳೆದ ವಾರ ಅಂದರೆ ಫೆಬ್ರವರಿ 14ರಿಂದ ಸೋನಿ ಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಇದು ಮಲಯಾಳಂ ಜತೆಗೆ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಉನ್ನಿ ಮುಕುಂದನ್ ಅಭಿನಯದ ಮಾರ್ಕೊ ಡಿಸೆಂಬರ್ 20 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಅಲ್ಲಿಂದ ಕನ್ನಡ ಸೇರಿ ತೆಲುಗಿನಲ್ಲಿಯೂ ಬಿಡುಗಡೆಯಾಯಿತು. ಇದೀಗ ಒಟಿಟಿಯಲ್ಲಿ ಈ ಆಕ್ಷನ್ ಸಿನಿಮಾ ಹೆಚ್ಚೆಚ್ಚು ವೀಕ್ಷಣೆಯಾಗುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ.
ಮ್ಯಾಕ್ಸ್
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಫೆಬ್ರವರಿ 15 ರಂದು ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಕನ್ನಡದ ಜತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಈ ಚಿತ್ರವು ಡಿಸೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಕಲೆಕ್ಷನ್ ವಿಚಾರದಲ್ಲಿ ಡಿಸೇಂಟ್ ಗಳಿಕೆ ಕಂಡ ಈ ಸಿನಿಮಾವನ್ನು ಕಾರ್ತಿಕೇಯನ್ ನಿರ್ದೇಶನ ಮಾಡಿದ್ದಾರೆ. ಕಲೈಪುಲಿ ಎಸ್ ಧಾನು ಈ ಚಿತ್ರದ ನಿರ್ಮಾಪಕರು.
ಮದ್ರಾಸ್ಕರನ್
ತಮಿಳು ಆಕ್ಷನ್ ಚಿತ್ರ ಮದ್ರಾಸ್ಕರನ್ ಫೆಬ್ರವರಿ 7 ರಂದು ಆಹಾ ತಮಿಳು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶೇನ್ ನಿಗಮ್ ಮತ್ತು ಮೆಗಾ ರಾಜಕುಮಾರಿ ನಿಹಾರಿಕಾ ಕೊನಿಡೆಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಜನವರಿ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಗಳಿಕೆ ವಿಚಾರದಲ್ಲಿ ಮೋಡಿ ಮಾಡದ ಈ ಸಿನಿಮಾ, ಹೇಳಿಕೊಳ್ಳುವಂಥ ಕಲೆಕ್ಷನ್ ಮಾಡಲಿಲ್ಲ. ಆದರೆ ಆಕ್ಷನ್ ವಿಚಾರದಲ್ಲಿ ಸಿನಿಮಾ ಸದ್ದು ಮಾಡಿತ್ತು.
