ಈ ವಿಚಾರದಲ್ಲಿ ಯಶ್ ರೆಕಾರ್ಡ್ ಮುರಿದ ರಾಮ್ ಚರಣ್; ಗೇಮ್ ಚೇಂಜರ್ ಚಿತ್ರಕ್ಕಾಗಿ ದಾಖಲೆಯ 256 ಅಡಿ ಎತ್ತರದ ಕಟೌಟ್
ರಾಮ್‌ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾ ಜನವರಿ 10ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆ ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಬೃಂದಾವನ ಕಾಲೋನಿಯ ವಜ್ರ ಗ್ರೌಂಡ್ಸ್‌ನಲ್ಲಿ ರಾಮ್‌ಚರಣ್ ಅವರ 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದು ಭಾರತದ ಅತೀ ದೊಡ್ಡ ಕಟೌಟ್ ಎನ್ನುವ ದಾಖಲೆಯನ್ನು ಬರೆದಿದೆ.
Game Changer Record: ಟಾಲಿವುಡ್ ನಟ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಗೇಮ್ ಚೇಂಜರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಮೆರಿಕಾ ನೆಲದಲ್ಲಿ ಅದ್ಧೂರಿ ಪ್ರೀ- ರಿಲೀಸ್ ಇವೆಂಟ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯಾವ ಚಿತ್ರತಂಡ ಮಾಡದ ದಾಖಲೆ ಮಾಡಿದೆ ಈ ಸಿನಿಮಾ. ಇದೀಗ ರಾಮ್‌ಚರಣ್ ಅಭಿಮಾನಿಗಳು, ಗೇಮ್ ಚೇಂಜರ್ ಸಿನಿಮಾ ಮೂಲಕ ಹೊಸ ದಾಖಲೆ ಮಾಡಿದ್ದಾರೆ.
ರಾಮ್‌ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾ ಜನವರಿ 10ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆ ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಬೃಂದಾವನ ಕಾಲೋನಿಯ ವಜ್ರ ಗ್ರೌಂಡ್ಸ್‌ನಲ್ಲಿ ರಾಮ್‌ಚರಣ್ ಅವರ 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದು ಭಾರತದ ಅತೀ ದೊಡ್ಡ ಕಟೌಟ್ ಎನ್ನುವ ದಾಖಲೆಯನ್ನು ಬರೆದಿದೆ.
ಎರಡನೇ ಸ್ಥಾನದಲ್ಲಿ ಯಶ್..
ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ನಟ ಯಶ್ ಅಭಿಮಾನಿಗಳು, ರಾಕಿಂಗ್ ಸ್ಟಾರ್ ಯಶ್ ಅವರ 236 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸಿದ್ದರು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಸೂರ್ಯ ಅವರ ಅಭಿಮಾನಿಗಳು 215 ಅಡಿ ಎತ್ತರದ ಅವರ ಕಟೌಟ್ ನಿಲ್ಲಿಸಿ ದಾಖಲೆ ಬರೆದಿದ್ದರು. ಕಳೆದ ವರ್ಷ ಪ್ರಭಾಸ್ ಅಭಿಮಾನಿಗಳು 230 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದು ಕೂಡ ದಾಖಲೆಯಾಗಿತ್ತು. ಇದೀಗ ರಾಮ್‌ಚರಣ್ ಅಭಿಮಾನಿಗಳು ಈ ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ. ಬರೋಬ್ಬರಿ 256 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದಾರೆ.
ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾ
'ಆರ್‌ಆರ್‌ಆರ್' ಬಳಿಕ ರಾಮ್‌ಚರಣ್ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಮೆಗಾ ಫ್ಯಾನ್ಸ್ 'ಗೇಮ್ ಚೇಂಜರ್' ದರ್ಶನಕ್ಕೆ ಕಾಯುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ದಿಲ್ ರಾಜು ಮತ್ತು ಸಿರಿಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ತೇಜ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಕಿಯಾರಾ ಅಡ್ವಾಣಿ, ಅಂಜಲಿ, ಎಸ್ ಜೆ ಸೂರ್ಯ, ಶ್ರೀಕಾಂತ್, ಸುನಿಲ್, ಸಮುದ್ರಕನಿ ಮತ್ತು ಜಯರಾಮ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ಕಥೆ ಬರೆದರೆ, ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ. ಎಸ್ ತಿರುನಾವುಕ್ಕರಸು ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರಭುದೇವ, ಗಣೇಶ್ ಆಚಾರ್ಯ, ಪ್ರೇಮ್ ರಕ್ಷಿತ್, ಬಾಸ್ಕೊ ಮಾರ್ಟಿನ್, ಜಾನಿ ಮತ್ತು ಸ್ಯಾಂಡಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವು ತೆಲುಗು, ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಜನವರಿ 10 ರಿಲೀಸ್ ಆಗಲಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope