ಕನ್ನಡ ಸುದ್ದಿ / ಮನರಂಜನೆ /
ಸಿನಿಮಾಗಳಲ್ಲೂ ದೇವ ಗಣಪತಿಗಿದೇ ವಿಶೇಷ ಸ್ಥಾನ; ಈ ಸಲದ ಚೌತಿಗೆ ಕೇಳಿ ಗಣಪನ 10 ಹಾಡುಗಳು
ಗಣಪತಿ ಹಬ್ಬ ಬಂದೇ ಬಿಡ್ತು. ಈ ಹಬ್ಬಕ್ಕೆ ಗಣಪತಿಯ ಹಾಡು ಕೇಳದಿದ್ದರೆ ಹೇಗೆ? ಕನ್ನಡದ ಹಲವು ಸಿನಿಮಾಗಳಲ್ಲಿ ಬಳಕೆಯಾದ ಮತ್ತು ಬಾಲಿವುಡ್ ಸಿನಿಮಾಗಳಲ್ಲಿನ ಆಯ್ದ 10 ಹಾಡುಗಳು ಇಲ್ಲಿವೆ.
ಸಿನಿಮಾಗಳಲ್ಲೂ ದೇವ ಗಣಪತಿಗಿದೇ ವಿಶೇಷ ಸ್ಥಾನ; ಈ ಸಲದ ಚೌತಿಗೆ ಕೇಳಿ ಕನ್ನಡ, ಹಿಂದಿ ಚಿತ್ರಗಳಲ್ಲಿನ ಆಯ್ದ 10 ಹಾಡುಗಳು
Ganesh Chaturthi 2023: ಸಿನಿಮಾ ಶುರುವಾಗುವುದಕ್ಕೂ ಮುನ್ನ ಮತ್ತು ಕೊನೆಯ ಕುಂಬಳಕಾಯಿ ಒಡೆಯುವಾಗಲೂ ಅಲ್ಲಿ ವಿಘ್ನ ನಿವಾರಕನ ಪೂಜೆ ನಡೆಯುತ್ತದೆ. ಸಿನಿಮಾಗಳಲ್ಲಿಯೂ ಗಣಪನ ಆರಾಧನೆಯನ್ನೂ ಕಾಣುತ್ತೇವೆ. ಅಷ್ಟೇ ಏಕೆ, ಗಣೇಶನ ಕುರಿತು ಸಿನಿಮಾಗಳಲ್ಲಿಯೇ ಎಷ್ಟೋ ಹಾಡುಗಳನ್ನೂ ಸೃಷ್ಟಿಸಲಾಗಿದೆ. ಒಟ್ಟಿನಲ್ಲಿ ಸಿನಿಮಾಕ್ಕೂ ದೇವ ಗಣೇಶನಿಗೂ ಅವಿನಾಭಾವ ನಂಟಂತೂ ಇದ್ದೇ ಇದೆ.
ಹಾಡುಗಳ ಮೂಲಕ ಆತನನ್ನು ನೆನಪಿಸಿಕೊಳ್ಳಲಾಗುತ್ತದೆ, ಗಣನಾಯಕನನ್ನೇ ಆಧರಿಸಿ ಈಗಾಗಲೇ ಸಿನಿಮಾಗಳನ್ನೂ ನಿರ್ಮಿಸಲಾಗಿದೆ. ಇದೀಗ ಈ ಸಲದ ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಬ್ಬಕ್ಕೆ ಗಣಪತಿಯ ಹಾಡು ಕೇಳದಿದ್ದರೆ ಹೇಗೆ? ಕನ್ನಡದ ಹಲವು ಸಿನಿಮಾಗಳಲ್ಲಿ ಬಳಕೆಯಾದ ಮತ್ತು ಬಾಲಿವುಡ್ ಸಿನಿಮಾಗಳಲ್ಲಿನ ಆಯ್ದ 10 ಹಾಡುಗಳು ವಿವರ ಮತ್ತು ಅವುಗಳ ವಿಡಿಯೋ ಲಿಂಕ್‌ಗಳನ್ನೂ ಇಲ್ಲಿ ನೀಡಲಾಗಿದೆ.
ಚಿತ್ರ: ಶಬರಿಮಲೆ ಸ್ವಾಮಿ ಅಯ್ಯಪ್ಪ; ನೀ ನಮ್ಮ ಗೆಲುವಾಗಿ ಬಾ
ಚಿತ್ರ: ಏಕದಂತ, ಗಣಪತಿ ಬಪ್ಪಾ ಮೋರಯಾ
ಚಿತ್ರ: ಅಸುರ, ಮಹಾ ಗಣಪತಿ
ಚಿತ್ರ: ಕುಟುಂಬ, ಜೈ ಗಣೇಶ
ಚಿತ್ರ: ಶ್ರೀ ಕಾಳಿಕಾಂಬ: ಗಣ ಗಣ ಗಣೇಶ
ಚಿತ್ರ: ಅಗ್ನಿಪಥ್ (ಹಿಂದಿ), ಹಾಡು: ದೇವ ಶ್ರೀಗಣೇಶ
ಚಿತ್ರ: ಎಬಿಸಿಡಿ (ಹಿಂದಿ), ಹಾಡು: ಸಾಡ್ಡಾ ದಿಲ್ ಹಿ ತೂ
ಚಿತ್ರ: ವಾಸ್ತವ್ (ಹಿಂದಿ) ಸಿಂಧೂರ್ ಲಾಲ್
ಚಿತ್ರ: ಡಾನ್ (ಹಿಂದಿ) ಮೋರಯಾ ರೇ
ಚಿತ್ರ: ಬಾಜಿರಾವ್ ಮಸ್ತಾನಿ (ಹಿಂದಿ), ಗಜಾನನ
ಕನ್ನಡ ಚಲನಚಿತ್ರ ಸುದ್ದಿ, ಟಿವಿ ಧಾರಾವಾಹಿಗಳು, ಒಟಿಟಿ, ವೆಬ್ ಸಿರೀಸ್, ಸಿನಿಮಾ ವಿಮರ್ಶೆ, ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್ ಲೋಕದ ತಾಜಾ ವಿದ್ಯಮಾನಗಳಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಮನರಂಜನೆ ವಿಭಾಗ ನೋಡಿ.