ಕನ್ನಡದಲ್ಲಿ ಶ್ರೀ ಗಣೇಶನ ಶ್ಲೋಕಗಳು: ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ, ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ-ganesh sloka suklam baradharam vishnum vakratunda mahakaya koti surya samaprabha ganapati matra pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡದಲ್ಲಿ ಶ್ರೀ ಗಣೇಶನ ಶ್ಲೋಕಗಳು: ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ, ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ

ಕನ್ನಡದಲ್ಲಿ ಶ್ರೀ ಗಣೇಶನ ಶ್ಲೋಕಗಳು: ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ, ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ

ಕನ್ನಡದಲ್ಲಿ ಗಣೇಶನ ಶ್ಲೋಕಗಳು: ಯಾವುದೇ ಸಿನಿಮಾ ಆರಂಭವಾಗುವ ಮುನ್ನ ಗಣೇಶನ ಸ್ತುತಿಸಲಾಗುತ್ತದೆ. ಯಾವುದೇ ಕೆಲಸ ಆರಂಭಕ್ಕೂ ಮುನ್ನ ಗಣಪತಿಯನ್ನು ಪ್ರಾರ್ಥಿಸಲಾಗುತ್ತದೆ. "ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ, ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ" ಗಣೇಶ ಶ್ಲೋಕಗಳು ಇಲ್ಲಿವೆ.

ಕನ್ನಡದಲ್ಲಿ ಶ್ರೀ  ಗಣೇಶನ ಶ್ಲೋಕಗಳು: ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ, ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ಕನ್ನಡದಲ್ಲಿ ಶ್ರೀ ಗಣೇಶನ ಶ್ಲೋಕಗಳು: ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ, ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ

ಕನ್ನಡದಲ್ಲಿ ಶ್ರೀ ಗಣೇಶನ ಶ್ಲೋಕಗಳು: ಯಾವುದೇ ಸಿನಿಮಾ ಆರಂಭವಾಗುವ ಮುನ್ನ ಭಾರತೀಯರು ಗಣೇಶನ ಸ್ತುತಿಸುವುದು ಸಾಮಾನ್ಯ. ಸಿನಿಮಾದ ಆರಂಭದಲ್ಲಿ ಗಣೇಶನ ಶ್ಲೋಕ ಇದ್ದೇ ಇರುತ್ತದೆ. ಇದರೊಂದಿಗೆ ಸಿನಿಮಾ ಹೆಚ್ಚು ದುಡ್ಡು ಮಾಡಲಪ್ಪ ಎಂದು ತಿರುಪತಿ ತಿಮ್ಮಪ್ಪನ ಆಶೀರ್ವಾದವನ್ನೂ ಬೇಡುವ ಪರಿಪಾಠವಿದೆ. ಹಳೆಯ ಕನ್ನಡ ಸಿನಿಮಾಗಳನ್ನು ನೋಡಿದರೆ ಆರಂಭದಲ್ಲಿ "ವಕ್ರತುಂಡ ಮಹಾಕಾಯ..." ಎಂದೇ ಆರಂಭವಾಗುತ್ತವೆ. ಈಗ ಕನ್ನಡ ಸಿನಿಮಾಗಳಲ್ಲಿ ಶ್ಲೋಕಗಳು ಕಡಿಮೆಯಾಗುತ್ತಿವೆ. ಗಣೇಶ ಚತುರ್ಥಿ ಹತ್ತಿರದಲ್ಲಿದೆ. ಈ ಸಮಯದಲ್ಲಿ ಮಕ್ಕಳಿಗೆ ಗಣೇಶನ ಶ್ಲೋಕಗಳನ್ನು ಹೇಳಿಕೊಡಬಹುದು. ಗಣಪತಿ ಹಬ್ಬದ ಸಮಯದಲ್ಲಿ ಗಣೇಶನನ್ನು ಪ್ರಾರ್ಥಿಸಲು ಈ ಶ್ಲೋಕಗಳನ್ನು ಎಲ್ಲರೂ ಪಠಿಸಬಹುದು. ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ, ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ಶ್ಲೋಕಗಳನ್ನು ಇಲ್ಲಿ ನೀಡಲಾಗಿದೆ.

ಶ್ರೀ ಗಣೇಶ (ಗಣಪತಿ) ಶ್ಲೋಕ: ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ

ಇದು ಗಣೇಶನನ್ನು ಸ್ತುತಿಸುವ ಶ್ಲೋಕವಾಗಿದೆ. ಯಾರು ಬಾಗಿದ ಕಾಂಡವನ್ನು (ದಂತ) ಹೊಂದಿದ್ದಾರೆ. ಯಾರು ದೊಡ್ಡ ದೇಹವನ್ನು ಹೊಂದಿದ್ದಾರೆ. ಯಾರ ತೇಜಸ್ಸು ಮಿಲಿಯನ್‌ ಸೂರ್ಯರಷ್ಟು ಇರುತ್ತದೆ, ಓ ದೇವ ನನ್ನ ಕಾರ್ಯಗಳನ್ನು ಅಡೆತಡೆಗಳಿಂದ ಮುಕ್ತಗೊಳಿಸು. ನನ್ನ ಎಲ್ಲಾ ಕೆಲಸಗಳಲ್ಲಿ ನಿಮ್ಮ ಆಶೀರ್ವಾದ ಇರಲಿ ಎಂದು ಗಣೇಶನಲ್ಲಿ ಕೇಳಿಸುವಂತಹ ಸ್ತೋತ್ರ ಇದಾಗಿದೆ.

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ

ಓಂ ಏಕದಂತಾಯ ವಿಧ್ಮಹೆ ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್

ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

(ಇದು ಕೂಡ ನಮ್ಮೆಲ್ಲ ಅಡೆತಡೆಗಳನ್ನು ನಿವಾರಿಸು ಎಂದು ಗಣೇಶನಲ್ಲಿ ಪ್ರಾರ್ಥಿಸುವಂತಹ ಶ್ಲೋಕ. ಶ್ವೇತ ವಸ್ತ್ರವನ್ನು ಧರಿಸಿದವನು, ಸರ್ವವ್ಯಾಪಕನೂ, ಚಂದ್ರನಂತಿರುವ (ಪ್ರಕಾಶಮಾನವಾದ) ಮೈಬಣ್ಣವುಳ್ಳವನೂ, ನಾಲ್ಕು ಕೈಗಳನ್ನು ಹೊಂದಿದವನು, ಪ್ರಫುಲ್ಲವಾದ ಮುಖವುಳ್ಳವನೂ, ಎಲ್ಲ ಅಡೆತಡೆಗಳ ನಿವಾರಣೆಗಾಗಿ ನಾನು (ಗಣೇಶನನ್ನು) ಧ್ಯಾನಿಸುತ್ತೇನೆ.)

ಅಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್

ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ.

ಗಣಾನಾಂ ತ್ವಂ ಗಣಪತಿ ಗಂ ಹವಾಮಹೇ
ಕವಿಂ ಕವೀನಾಂ ಉಪಮಸ್ರ ವಸ್ತಮಂ
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ

ಆನಶ್ರುನ್ವನ್ನ ಊತಿಭಿ ಸೀದ ಸಾದನಂ

ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ

ಜನಕ: ಶಂಕರೋ ದೇವಃ, ತಮ್ ವಂದೇ ಕುಂಜರಾನನಂ

ಗಜವಕ್ತ್ರಂ ಸುರ-ಶ್ರೇಷ್ಟಂ

ಕರ್ಣ ಚಾಮರ ಭೂಷಿತಾಂ

ಪಾಶಾಂಕುಶ ಧರಂ ದೇವಂ

ವಂದೆಹಂ ಗಣನಾಯಕಂ

ಏಕದಂತಂ ಮಹಾಕಾಯಂ ತಪ್ತಕಾಜ್ಞ್ಚಂಸಂನಿಭಮ್

ಲಂಬೋದರಂ ವಿಶಾಲಾಕ್ಷಂ ವಂದೆಹಂ ಗಣನಾಯಕಂ

ಏಕದಂತಂ ಮಹಕಾಯಂ

ಲಂಬೋದರ ಗಜಾನನಂ

ವಿಘ್ನ ನಾಶಕರ್ಮ ದೇವಂ

ಹೇರಮ್ಬಂ ಪ್ರಾಣ ಮಾಮ್ಯಹಂ

ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ

ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ

ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ

ಲಂಬೋದರಾಯ ಸಕಲಾಯ ಜಗದ್ವಿತಾಯ

ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ

ಗೌರಿ-ಸುತಾಯ ಗಣನಾಥ ನಮೋ ನಮಸ್ತೆ