ಕನ್ನಡ ಸುದ್ದಿ  /  Entertainment  /  Ghost Movie Team Vijayadashami Wishes With New Poster

Ghost New Poster: ಹೊಸ ಪೋಸ್ಟರ್‌ ಮೂಲಕ ವಿಜಯದಶಮಿ ಶುಭ ಕೋರಿದ ಗೋಸ್ಟ್‌ ಚಿತ್ರತಂಡ

ಚಿತ್ರತಂಡವು ಇಂದು ಸಿನಿಮಾದ ಹೊಸ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ನಾಡಿನ ಜನತೆಗೆ ಶುಭ ಕೋರಿದೆ. ಕಟ್ಟಡದ ಮುಂದೆ ನಿಂತಿರುವ ಕಪ್ಪು ಕಾರಿನ ಮುಂಭಾಗದಲ್ಲಿ ಬಿಲ್ಲು ಬಾಣದ ಗುರುತು ಇದ್ದು ಈ ಆಕರ್ಷಕವಾದ ಪೋಸ್ಟರ್‌ ಗಮನ ಸೆಳೆಯುತ್ತಿದೆ.

ವಿಜಯದಶಮಿಗೆ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದ 'ಗೋಸ್ಟ್‌' ಚಿತ್ತತಂಡ
ವಿಜಯದಶಮಿಗೆ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದ 'ಗೋಸ್ಟ್‌' ಚಿತ್ತತಂಡ (PC: Srini Facebook)

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಈಗ 4-5 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅವುಗಳಲ್ಲಿ 'ಗೋಸ್ಟ್‌' ಕೂಡಾ ಒಂದು. ಈ ಸಿನಿಮಾ ಅನೌನ್ಸ್‌ ಆದಾಗಿನಿಂದ ಸಿನಿಪ್ರಿಯರು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದರು. ಗೋಸ್ಟ್‌ ಎಂದರೆ ಇದು ಹಾರರ್‌ ಸಿನಿಮಾ ಇರಬಹುದು ಎನ್ನಲಾಗಿತ್ತು. ಅದರೆ ಇದೊಂದು ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ಎಂದು ಚಿತ್ರತಂಡ ಹೇಳಿದೆ.

ಚಿತ್ರತಂಡವು ಇಂದು ಸಿನಿಮಾದ ಹೊಸ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ನಾಡಿನ ಜನತೆಗೆ ಶುಭ ಕೋರಿದೆ. ಕಟ್ಟಡದ ಮುಂದೆ ನಿಂತಿರುವ ಕಪ್ಪು ಕಾರಿನ ಮುಂಭಾಗದಲ್ಲಿ ಬಿಲ್ಲು ಬಾಣದ ಗುರುತು ಇದ್ದು ಈ ಆಕರ್ಷಕವಾದ ಪೋಸ್ಟರ್‌ ಗಮನ ಸೆಳೆಯುತ್ತಿದೆ. ಇದಕ್ಕೂ ಮುನ್ನ ಚಿತ್ರದ ಕೆಲವು ಪೋಸ್ಟರ್‌ಗಳು ಬಿಡುಗಡೆಯಾಗಿದ್ದು ಚಿತ್ರೀಕರಣ ಯಾವಾಗ ಆರಂಭವಾಗುವುದೋ, ಸಿನಿಮಾವನ್ನು ಎಂದು ನೋಡುತ್ತೇವೋ ಎಂದು ಶಿವಣ್ಣನ ಅಭಿಮಾನಿಗಳು ಕಾತರದಿಂದ ಎದುರುನೋಡುತ್ತಿದ್ದಾರೆ.

'ಗೋಸ್ಟ್‌' ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿದೆ. ಅಕ್ಟೋಬರ್‌ 12 ರಂದು ಸಿನಿಮಾ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗೋಸ್ಟ್‌ ಚಿತ್ರವನ್ನು ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಸಂದೇಶ್‌ ನಾಗರಾಜ್‌ ನಿರ್ಮಿಸುತ್ತಿದ್ದು ಶ್ರೀನಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಟಾಪ್ ತಂತ್ರಜ್ಞರೇ ಕೆಲಸ ಮಾಡುತ್ತಿದ್ದಾರೆ. ಗೋಸ್ಟ್‌ ಚಿತ್ರಕ್ಕೆ ಮಾಸ್ತಿ ಮತ್ತು ಪ್ರಸನ್ನ ವಿ.ಎಂ ಸಂಭಾಷಣೆ ಇದೆ. ಕೆಜಿಎಫ್ ಚಿತ್ರದ ಮೂಲಕ ದೇಶಾದ್ಯಂತ ಗುರುತಿಸಿಕೊಂಡಿದ್ದ ಕಲಾ ನಿರ್ದೇಶಕ ಶಿವಕುಮಾರ್ ಕೂಡಾ ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ 'ಗೋಸ್ಟ್‌' ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಅರ್ಜುನ್‌ ಜನ್ಯಾ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಹಾಗೂ ಉಪೇಂದ್ರ

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ನಿರ್ದೇಶನದ ಮೊದಲ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಹಾಗೂ ಉಪೇಂದ್ರ ಜೊತೆಯಾಗಿ ನಟಿಸುತ್ತಿದ್ದಾರೆ. ಅರ್ಜುನ್‌ ಜನ್ಯಾ ನಿರ್ದೇಶನದಲ್ಲಿ ನಾನು ನಟಿಸಲು ತಯಾರಿದ್ದೇನೆ ಎಂದು ಆಗಲೇ ಶಿವರಾಜ್‌ಕುಮಾರ್‌ ಹೇಳಿದ್ದರು. ಇದೀಗ ಉಪೇಂದ್ರ ಕೂಡಾ ಒಪ್ಪಿದ್ದಾರೆ. ಈ ಮೂಲಕ ಶಿವರಾಜ್‌ಕುಮಾರ್‌ ಹಾಗೂ ಉಪೇಂದ್ರ ಮೂರನೇ ಬಾರಿ ಜೊತೆಯಾಗಿ ನಟಿಸುತ್ತಿದ್ದಾರೆ. ಉಪೇಂದ್ರ ಹಾಗೂ ಶಿವರಾಜ್‌ಕುಮಾರ್‌ ಮೊದಲ ಬಾರಿಗೆ 2000 ರಲ್ಲಿ ಪ್ರೀತ್ಸೆ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ನಂತರ 2007 ರಲ್ಲಿ ಲವ-ಕುಶ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಅರ್ಜುನ್‌ ಜನ್ಯಾ ನಿರ್ದೇಶನದ ಚಿತ್ರದಲ್ಲಿ ಮತ್ತೆ ಒಂದಾಗುತ್ತಿರುವ ವಿಚಾರ ಕೇಳಿ ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಶಿವರಾಜ್ ಕುಮಾರ್ ಸದ್ಯಕ್ಕೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ತೆಲುಗಿನ ರವಿ ಧುಲಿಪುಡಿ ನಿರ್ದೇಶನದ ನೀ ಸಿಗೊವರೆಗೂ, ಎ. ಹರ್ಷ ನಿರ್ದೇಶನದ ವೇದಾ, ಯೋಗರಾಜ್ ಭಟ್ ಹಾಗೂ ರಿಷಬ್‌ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ರಜನಿಕಾಂತ್‌ ಅವರ ಜೈಲರ್‌ ಚಿತ್ರದಲ್ಲಿ ಕೂಡಾ ಶಿವರಾಜ್‌ಕುಮಾರ್‌ ನಟಿಸುತ್ತಿದ್ದಾರೆ.

IPL_Entry_Point