Goat OTT Update: ಯಾವಾಗ, ಯಾವ ಒಟಿಟಿಗೆ ಬರುತ್ತೆ ದಳಪತಿ ವಿಜಯ್‌ The Greatest of All Time ಸಿನಿಮಾ-goat ott release update when and where to watch thalapathy vijay s goat movie the greatest of all time ott mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Goat Ott Update: ಯಾವಾಗ, ಯಾವ ಒಟಿಟಿಗೆ ಬರುತ್ತೆ ದಳಪತಿ ವಿಜಯ್‌ The Greatest Of All Time ಸಿನಿಮಾ

Goat OTT Update: ಯಾವಾಗ, ಯಾವ ಒಟಿಟಿಗೆ ಬರುತ್ತೆ ದಳಪತಿ ವಿಜಯ್‌ The Greatest of All Time ಸಿನಿಮಾ

Goat OTT Release Update: ಕಾಲಿವುಡ್‌ ನಟ ದಳಪತಿ ವಿಜಯ್‌ ನಟನೆಯ ಗೋಟ್‌ ಸಿನಿಮಾ ಕಳೆದ ವಾರವಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಇದೀಗ ಇದೇ ಚಿತ್ರದ ಒಟಿಟಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಲ್ಲಿದೆ ನೋಡಿ ವಿವರ.

ಅಕ್ಟೋಬರ್‌ನಲ್ಲಿ ದಳಪತಿ ವಿಜಯ್‌ The Greatest of All Time ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ
ಅಕ್ಟೋಬರ್‌ನಲ್ಲಿ ದಳಪತಿ ವಿಜಯ್‌ The Greatest of All Time ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ

GOAT OTT Release Date: ಕಾಲಿವುಡ್‌ ನಟ ದಳಪತಿ ವಿಜಯ್ ಅವರ ಗ್ರೇಟೆಸ್ಟ್ ಆಫ್ ಆಲ್ ಟೈಮ್ (Goat) ಚಿತ್ರ ಸೆಪ್ಟೆಂಬರ್ 5 ರಂದು ಥಿಯೇಟರ್‌ಗಳಿಗೆ ಅಪ್ಪಳಿಸಿತ್ತು. ತಮಿಳಿನ ಜತೆಗೆ ತೆಲುಗು, ಹಿಂದಿಯಲ್ಲಿ ಮಾತ್ರ ತೆರೆಕಂಡಿದ್ದ ಈ ಸಿನಿಮಾ, ಮೊದಲ ದಿನವೇ ದೊಡ್ಡ ಮಟ್ಟದ ಗಳಿಕೆ ಕಂಡಿತ್ತು. ತಮಿಳುನಾಡಿನಲ್ಲಿ ಈ ಸಿನಿಮಾಕ್ಕೆ ದೊಡ್ಡ ಮಟ್ಟದ ಓಪನಿಂಗ್‌ ಸಿಕ್ಕಿತ್ತು. ಇದೀಗ ಚಿತ್ರ ಬಿಡುಗಡೆಯಾಗಿ ಒಂದು ವಾರದ ಮೇಲಾಗಿದೆ. ಇಂದಿಗೂ ಆ ಕಲೆಕ್ಷನ್‌ ಬೇಟೆ ಮುಂದುವರಿಸಿದೆ. ಈ ನಡುವೆ ಇದೇ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ ಎಂಬ ಚರ್ಚೆಯೂ ಶುರುವಾಗಿದೆ.

ದಳಪತಿ ವಿಜಯ್ ಅವರ ಗೋಟ್ ಚಿತ್ರದ ಮೇಲೆ ಮೊದಲಿನಿಂದಲೂ ದೊಡ್ಡ ನಿರೀಕ್ಷೆ ಇತ್ತು. ಅದರಂತೆ ಕಲೆಕ್ಷನ್‌ ವಿಚಾರದಲ್ಲಿ ಈ ಸಿನಿಮಾ ಹಲವು ದಾಖಲೆಗಳನ್ನೂ ಮುರಿದಿದೆ. ತಲಾ ಅಜಿತ್ ಕುಮಾರ್ ಅವರ ತುನಿವು ಚಿತ್ರದ ಸಾರ್ವಕಾಲಿಕ ಕಲೆಕ್ಷನ್‌ ದಾಟಿ ಮುನ್ನಡೆದಿದೆ ಗೋಟ್.‌ ರಾಜಕೀಯ ಸಲುವಾಗಿ ಚಿತ್ರರಂಗ ತೊರೆಯುವ ಹಿನ್ನೆಲೆಯಲ್ಲಿ ಗೋಟ್‌ ಸಿನಿಮಾಕ್ಕೆ ದೊಡ್ಡ ಮಟ್ಟದ ಹೈಪ್‌ ಸಿಕ್ಕಿತ್ತು. ಅದರಂತೆ ಸಿನಿಮಾ ಕಲೆಕ್ಷನ್‌ ಮುಂದುವರಿಸಿದೆ.

ಒಟಿಟಿಯಲ್ಲಿ ನೋಡಿ ಗೋಟ್‌ ಅನ್‌ಕಟ್‌ ವರ್ಷನ್‌

ದಳಪತಿ ವಿಜಯ್ ಅವರ ಗೋಟ್‌ ಸಿನಿಮಾದ ಮೂಲ ರನ್‌ಟೈಮ್‌ 3 ಗಂಟೆ 40 ನಿಮಿಷ. ಆದರೆ, ಚಿತ್ರಮಂದಿರದ ಸಲುವಾಗಿ 40 ನಿಮಿಷ ಟ್ರಿಮ್‌ ಮಾಡಲಾಗಿತ್ತು. ಇದೀಗ ಒಟಿಟಿಯಲ್ಲಿ ಈ ಸಿನಿಮಾ ಪ್ರಸಾರ ಆರಂಭವಾದರೆ, ಪೂರ್ಣ ಪ್ರಮಾಣದ ಅಂದರೆ 3.40 ನಿಮಿಷದ ಸಿನಿಮಾ ವೀಕ್ಷಣೆ ಮಾಡಬಹುದು ಎಂದು ನ್ಯೂಸ್‌ 18 ಇಂಗ್ಲಿಷ್‌ ವರದಿ ಮಾಡಿದೆ. ಒಟಿಟಿಯಲ್ಲಿ ಅನ್‌ಕಟ್‌ ವರ್ಷನ್‌ನಲ್ಲಿ ಪೂರ್ಣ ಸಿನಿಮಾ ನೋಡಬಹುದು ಎಂದು ನಿರ್ದೇಶಕ ವೆಂಕಟ್‌ ಪ್ರಭು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಿನಿಮಾ ಒಟಿಟಿಗೆ ಬಂದ ಬಳಿಕವಷ್ಟೇ ಗೊತ್ತಾಗಲಿದೆ.

ಯಾವಾಗ, ಯಾವ ಒಟಿಟಿಯಲ್ಲಿ ಗೋಟ್‌?

ಚಿತ್ರಮಂದಿರಗಳಲ್ಲಿ 4 ವಾರಗಳ ಕಾಲ ಪ್ರದರ್ಶನ ಕಂಡ ಬಳಿಕವಷ್ಟೇ ಸಿನಿಮಾಗಳು ಒಟಿಟಿಗೆ ಆಗಮಿಸುತ್ತವೆ. ಅದೇ ರೀತಿ ಗೋಟ್‌ ಸಿನಿಮಾ ಸಹ ಇತ್ತೀಚೆಗಷ್ಟೇ ಅಂದರೆ ಸೆ. 5ರಂದು ತೆರೆಕಂಡಿತ್ತು. ಇದೀಗ ಇದೇ ಗೋಟ್‌ ಸಿನಿಮಾ ಅಕ್ಟೋಬರ್‌ 3ರ ರೊಳಗೆ ಒಟಿಟಿ ಅಂಗಳ ಪ್ರವೇಶಿಸಲಿದೆ. ಸದ್ಯದ ಮಾಹಿತಿ ಪ್ರಕಾರ ಗೋಟ್‌ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ.

ಗೋಟ್‌ ಬಾಕ್ಸ್ ಆಫೀಸ್ ಕಲೆಕ್ಷನ್

ಗೋಟ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಇಂದಿಗೆ 8 ದಿನಗಳ ಕಳೆದಿವೆ. ಈ ಅವಧಿಯಲ್ಲಿ ಭಾರತದಲ್ಲಿ 180 ಕೋಟಿ ವಿಶ್ವದಾದ್ಯಂತ 300 ಕೋಟಿಗೂ ಅಧಿಕ ಮೊತ್ತ ಸಂಗ್ರಹಿಸಿದೆ. ಈ ಚಿತ್ರವು 2024ರ ಅತಿದೊಡ್ಡ ತಮಿಳು ಓಪನರ್ ಎಂಬ ದಾಖಲೆಯನ್ನೂ ಮಾಡಿದೆ.

mysore-dasara_Entry_Point