ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಫೇಮಸ್‌ ಆಗಿ ನಾನು ಬಿಗ್‌ ಬಾಸ್‌ ಶೋ ಹೋಗಿಲ್ಲ; ಆರೂರು ಜಗದೀಶ್‌ ಆರೋಪಕ್ಕೆ ಹಂಸ ಪ್ರತಾಪ್‌ ತಿರುಗೇಟು
ಕನ್ನಡ ಸುದ್ದಿ  /  ಮನರಂಜನೆ  /  ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಫೇಮಸ್‌ ಆಗಿ ನಾನು ಬಿಗ್‌ ಬಾಸ್‌ ಶೋ ಹೋಗಿಲ್ಲ; ಆರೂರು ಜಗದೀಶ್‌ ಆರೋಪಕ್ಕೆ ಹಂಸ ಪ್ರತಾಪ್‌ ತಿರುಗೇಟು

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಫೇಮಸ್‌ ಆಗಿ ನಾನು ಬಿಗ್‌ ಬಾಸ್‌ ಶೋ ಹೋಗಿಲ್ಲ; ಆರೂರು ಜಗದೀಶ್‌ ಆರೋಪಕ್ಕೆ ಹಂಸ ಪ್ರತಾಪ್‌ ತಿರುಗೇಟು

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ರಾಜಿ ಪಾತ್ರಧಾರಿ ಹಂಸ ಅವರು ನಮಗೆ ತಿಳಿಸದೆ 'ಬಿಗ್‌ ಬಾಸ್'‌ ಶೋಗೆ ಹೋದರು. ಆಮೇಲೆ ಕೂಡ ನಮ್ಮ‌ ಧಾರಾವಾಹಿಗೆ ಬರಲಿಲ್ಲ ಎಂದು ನಿರ್ದೇಶಕ ಆರೂರು ಜಗದೀಶ್‌ ಆರೋಪ ಮಾಡಿದ್ದರು. ಇದಕ್ಕೆ ಹಂಸ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. (ವರದಿ: ಪದ್ಮಶ್ರೀ ಭಟ್)

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಫೇಮಸ್‌ ಆಗಿ ನಾನು ಬಿಗ್‌ ಬಾಸ್‌ ಶೋ ಹೋಗಿಲ್ಲ ಎಂದು ಆರೂರು ಜಗದೀಶ್‌ ಆರೋಪದ ಕುರಿತು ಹಂಸ ಪ್ರತಾಪ್‌ ಹೇಳಿದ್ದಾರೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಫೇಮಸ್‌ ಆಗಿ ನಾನು ಬಿಗ್‌ ಬಾಸ್‌ ಶೋ ಹೋಗಿಲ್ಲ ಎಂದು ಆರೂರು ಜಗದೀಶ್‌ ಆರೋಪದ ಕುರಿತು ಹಂಸ ಪ್ರತಾಪ್‌ ಹೇಳಿದ್ದಾರೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ರಾಜಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದ ನಟಿ ಹಂಸ ನಾರಾಯಣಸ್ವಾಮಿ ಅವರು ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋನಲ್ಲಿ ಭಾಗವಹಿಸಿದ್ದರು. ನಮಗೆ ಮಾಹಿತಿ ಕೊಡದೆ ‘ಬಿಗ್‌ ಬಾಸ್ʼ ಶೋಗೆ ಹೋಗಿದ್ದಾರೆ ಎಂದು ನಿರ್ದೇಶಕ ಆರೂರು ಜಗದೀಶ್‌ ಅವರು ಆರೋಪ ಮಾಡಿದ್ದರು. ಈಗ ಈ ಬಗ್ಗೆ ಹಂಸ ನಾರಾಯಣಸ್ವಾಮಿ ಮಾತನಾಡಿದ್ದಾರೆ.

ಆರೂರು ಜಗದೀಶ್‌ ಅವರು Panchami Talks ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡುತ್ತಾ, “ಹಂಸ ನಾರಾಯಣಸ್ವಾಮಿ ಅವರ ಜೊತೆ ನಾನು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಗುಪ್ತಗಾಮಿನಿ ಧಾರಾವಾಹಿ ಸಮಯದಿಂದಲೂ ನನಗೆ ಅವರ ಪರಿಚಯ ಇದೆ. ಅವರು ಅದ್ಭುತ ಕಲಾವಿದೆ. ಆದರೆ ಹಂಸ ಅವರು ಏಕಾಏಕಿ ಬಂದು ನನಗೆ ನಲವತ್ತು ದಿನಗಳ ರಜೆ ಬೇಕು, ನಾನು ಸಿನಿಮಾ ಶೂಟಿಂಗ್‌ಗೋಸ್ಕರ ವಿದೇಶಕ್ಕೆ ಹೋಗುತ್ತಿರುವೆ ಎಂದರು. ಪೋಷಕ ಪಾತ್ರಧಾರಿಗಳಿಗೆ ನಲವತ್ತು ದಿನ ವಿದೇಶದಲ್ಲಿ ಶೂಟಿಂಗ್‌ ಇರುತ್ತಾ ಅಂತ ನನಗೆ ಅನುಮಾನ ಬಂತು. ನಾನು ಏನೂ ಹೇಳದೆ ಸುಮ್ಮನಾದೆ. ಆಮೇಲೆ ಅವರು ಬಿಗ್‌ ಬಾಸ್‌ ಶೋಗೆ ಹೋಗಿದ್ದು ಗೊತ್ತಾಯ್ತು. ಚಾನೆಲ್‌ನವರು ನನಗೆ ಫೋನ್‌ ಮಾಡಿ ಏನೂ ಹೇಳಿಲ್ಲ ಅಂತ ಹೇಳಿದರು. ನನಗೆ ವಿಷಯವೇ ಗೊತ್ತಿಲ್ಲದೆ ಏನು ಹೇಳಲಿ?” ಎಂದಿದ್ದಾರೆ.

ಪುಟ್ಟಕ್ಕನ ಮಕ್ಕಳು ಕೂಡ ಒಂದು ಧಾರಾವಾಹಿ!

“ಬಿಗ್‌ ಬಾಸ್‌ ಶೋನಿಂದ ಅವರು ಹೊರಗಡೆ ಬಂದಮೇಲೆಯೂ ಕೂಡ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಮತ್ತೆ ಬನ್ನಿ ಅಂತ ಹೇಳಿದಾಗಲೂ ಕೂಡ ಅವರು ಆಗೋದಿಲ್ಲ, ಚಾನೆಲ್‌ ಜೊತೆ ಆರು ತಿಂಗಳು ಅಗ್ರಿಮೆಂಟ್‌ ಇರುತ್ತದೆ ಎಂದರು. ಜಗದೀಶ್‌ ಅವರು ಡಿಕೆಡಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ನೀವು ಯಾಕೆ ನಟಿಸಬಾರದು ಅಂತ ನಾನು ಪ್ರಶ್ನೆ ಮಾಡಿದಾಗಲೂ ಅವರು ನಾನು ಕಲಾವಿದೆ, ಅವರು ವಕೀಲರು ಎಂದರು.‌ ನಾನು ರಾಜಿ ಪಾತ್ರಕ್ಕೆ ಬೇರೆ ಕಲಾವಿದರನ್ನು ಹಾಕಿಕೊಳ್ಳೋದು ಕೂಡ ಕಷ್ಟದ ಕೆಲಸವೇ. ಹೇಗೆ ಬಿಗ್‌ ಬಾಸ್ ಎನ್ನೋದು ಒಂದು ಶೋನೋ ಹಾಗೆ ಪುಟ್ಟಕ್ಕನ ಮಕ್ಕಳು ಕೂಡ ಒಂದು ಶೋ” ಎಂದು ಆರೂರು ಜಗದೀಶ್‌ ಅವರು ಹೇಳಿದ್ದಾರೆ.

ಹಂಸ ಪ್ರತಿಕ್ರಿಯೆ ಏನು?

ಈ ಬಗ್ಗೆ ಇನ್ನೊಂದು ಯುಟ್ಯೂಬ್‌ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿರುವ ಹಂಸ ಅವರು, “ಬಿಗ್‌ ಬಾಸ್‌ ಟೀಮ್ ಜೊತೆ ಮಾತನಾಡುವಾಗಲೂ ಅವರು ಕೊನೆ ದಿನದ ತನಕ ನಿಮ್ಮ ಗಂಡನಿಗೂ ಹೇಳಬೇಡಿ ಅಂತ ಹೇಳಿದ್ದರು. ನಾನು ನನ್ನ ಗಂಡನಿಗೆ ಹೇಳದೆ ಹೇಗೆ ಬಿಗ್‌ ಬಾಸ್‌ ಶೋಗೆ ಹೋಗಲಿ? ಬಿಗ್‌ ಬಾಸ್‌ ಶೋನಲ್ಲಿ ಸ್ಪರ್ಧಿಗಳು ಯಾರು ಎನ್ನೋದನ್ನು ಅಲ್ಲಿದ್ದವರು ಹೇಳುವಂತಿಲ್ಲ. ಅಷ್ಟು ರಹಸ್ಯವನ್ನು ಕಾಪಾಡಿಕೊಳ್ಳಬೇಕು. ಬಿಗ್‌ ಬಾಸ್‌ ನಿಯಮ ಆರೂರು ಜಗದೀಶ್‌ ಅವರಿಗೆ ಗೊತ್ತಿದೆ. ನಲವತ್ತು ದಿನ ಇರೋದಿಲ್ಲ, ಬ್ಯಾಂಕಿಂಗ್‌ ಮಾಡಿಕೊಳ್ಳಿ ಅಂತ ಹೇಳಿದ್ದರೂ ಕೂಡ ಅವರು ಮಾಡಿಕೊಳ್ಳಲಿಲ್ಲ. ನಿಮಗೋಸ್ಕರ ಕಥೆ ಮಾಡೋಕೆ ಆಗೋದಿಲ್ಲ ಎಂದರು. ಒಂದೇ ಸಂಭಾವನೆಗೆ ಕೆಲಸ ಮಾಡಿದ್ದೀನಿ. ಆರಂಭದಲ್ಲಿ ತಿಂಗಳಿನಲ್ಲಿ 5-6 ದಿನ ಶೆಡ್ಯೂಲ್‌ ಕೊಡ್ತಿದ್ದರು, ಆಮೇಲೆ ಎರಡು ದಿನಕ್ಕೆ ಬಂತು” ಎಂದು ಹೇಳಿದ್ದಾರೆ.

“ನನಗೂ ಸಮಸ್ಯೆಯಿದೆ, ನಾನು ಆರ್ಥಿಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕು. ನಾನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೆಸರು ಮಾಡಿಕೊಂಡಿಲ್ಲ. ಈ ಹಿಂದೆ ಹೆಸರು ಮಾಡಿದ್ದಕ್ಕೆ ನನಗೆ ರಾಜಿ ಪಾತ್ರ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ರಾಜಿ ಹೈಲೈಟ್‌ ಆಗಿದ್ದಕ್ಕೆ ನಾನೇ ಕಾರಣ. ನನಗೆ ಪ್ರೊಫೆಶನಲಿಸಂ ಇದ್ದಿದ್ದಕ್ಕೆ ನಾನು ಮೂರು ವರ್ಷ ಧಾರಾವಾಹಿಯಲ್ಲಿ ನಟಿಸಿದೆ. ಆರೂರು ಜಗದೀಶ್‌ ಅವರ ಈ ಮಾತು ನನಗೆ ಬೇಸರ ತಂದಿದೆ. ನಾನು ಮೂರು ವರ್ಷಗಳ ಕಾಲ ಜೀ ಕನ್ನಡ ವಾಹಿನಿಯಲ್ಲಿದ್ದೆ. ಬೇರೆ ಎಲ್ಲಿಯೂ ಹೋಗಿಲ್ಲ. ನನಗೆ ಅವಾರ್ಡ್‌ ಕೂಡ ಕೊಟ್ಟಿಲ್ಲ” ಎಂದು ಹೇಳಿದ್ದಾರೆ.

ಆರೂರು ಜಗದೀಶ್‌ ಅವರು Panchami Talks ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದು, “ಎಲ್ಲ ಪೇಮೆಂಟ್‌ ಕ್ಲಿಯರ್‌ ಆಗಿದೆ” ಎಂದು ಹೇಳಿದ್ದಾರೆ.

Whats_app_banner