Bigg Boss Winner: ಹನುಮಂತನೇ ಬಿಗ್ ಬಾಸ್ ವಿನ್ನರ್ ಆಗಬೇಕು; ಎಚ್‌ಟಿ ಕನ್ನಡ ಫೋಲ್‌ನಲ್ಲಿ ಓದುಗರ ಅಭಿಮತ
Bigg Boss winner: ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರಾಗಬಹುದು? ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪೋಲ್ ನಡೆಸಿತ್ತು. ಆ ಪೋಲ್ ಮೂಲಕ ಬಂದ ಮತಗಳ ಫಲಿತಾಂಶ ಇಲ್ಲಿದೆ.

ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು.. ಅದೇ ರೀತಿ ವಿನ್ನರ್ ಯಾರಾಗಬಹುದು ಎಂದು ಅಂದಾಜಿಸಲು ಸಾಮಾಜಿಕ ಜಾಲತಾಣಗಳಲ್ಲಿ ವೋಟಿಂಗ್ ಕೂಡ ನಡೆದಿದೆ. ಕಾಮೆಂಟ್ ಮಾಡುವ ಮೂಲಕ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಮುಕ್ತವಾಗಿ ವೀಕ್ಷಕರು ಹಂಚಿಕೊಳ್ಳುತ್ತಿದ್ದಾರೆ. ಇಂದು ಜನವರಿ 26ರಂದು ‘ಹಿಂದೂಸ್ತಾನ್ ಟೈಮ್ಸ್’ ಕನ್ನಡ ಯುಟ್ಯೂಬ್‌ನಲ್ಲಿ ಪೋಲ್ ರಚನೆ ಮಾಡಿ. ಫಿನಾಲೆಯವರೆಗೆ ಉಳಿದುಕೊಂಡಿದ್ದ ಸ್ಪರ್ಧಿಗಳ ಹೆಸರನ್ನು ನೀಡಿ ವೋಟಿಂಗ್ ಪ್ರಕ್ರಿಯೆ ನಡೆಸಲಾಯಿತು. ಈ ಪೋಲ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದು ಅಲ್ಲಿ ಬಂದ ಫಲಿತಾಂಶವನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಸ್ಪರ್ಧಿಗಳ ವಿವರ
ಮಂಜು
ಹನುಮಂತ
ಮೋಕ್ಷಿತಾ ಪೈ
ತ್ರಿವಿಕ್ರಂ
ರಜತ್
ಈ 5 ಸ್ಪರ್ಧಿಗಳು ಫಿನಾಲೆ ಮೆಟ್ಟಿಲೇರಿದ್ದಾರೆ.
ಜನವರಿ 26 ಸಂಜೆ 6ರವರೆಗೆ ಬಂದ ಮತಗಳ ಶೇಕಡಾವಾರು ಫಲಿತಾಂಶ ಇಲ್ಲಿದೆ.
ಇಲ್ಲಿದೆ ಫಲಿತಾಂಶದ ವಿವರ:
ಹನುಮಂತ: 74%
ತ್ರಿವಿಕ್ರಂ: 11%
ಮೋಕ್ಷಿತಾ ಪೈ: 10%
ಉಗ್ರಂ ಮಂಜು: 4%
ವಿಶ್ಲೇಷಣೆ
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ರೀತಿಯಲ್ಲೇ ಫಲಿತಾಂಶ ಲಭ್ಯವಾಗಿದೆ. ಸಾಮಾನ್ಯವಾಗಿ ಎಲ್ಲರ ಅಭಿಪ್ರಾಯದಲ್ಲೂ ಹನುಮಂತ ಗೆಲ್ಲುತ್ತಾನೆ ಎಂಬ ಭಾವನೆ ಇದೆ. ಹಿಂದೂಸ್ತಾನ್ ಟೈಮ್ಸ್ ನಡೆಸಿದ ಪೋಲ್‌ನಲ್ಲಿಯೂ ಹನುಮಂತ 74% ಮತ ಪಡೆಯುವ ಮೂಲಕ ಈ ಬಾರಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆಗುತ್ತಾರೆ ಎಂಬ ನಿರೀಕ್ಷೆ ಮೂಡಿಸಿದೆ. 11% ವೋಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನವನ್ನು ತ್ರಿವಿಕ್ರಂ ತಮ್ಮದಾಗಿಸಿಕೊಳ್ಳಬಹುದು ಎಂದೆನಿಸಿದೆ. 10% ಮತಪಡೆದ ಮೋಕ್ಷಿತಾ 3ನೇ ಸ್ಥಾನ ಕಾಯ್ದುಕೊಂಡರೆ, 4% ಉಗ್ರಂ ಮಂಜು 4ನೇ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇಂದಿನ ಫಲಿತಾಂಶದಲ್ಲಿದೆ.
ಬಿಗ್ ಬಾಸ್ ಫಿನಾಲೆ ಈಗಾಗಲೇ ಆರಂಭವಾಗಿದೆ. ಕಿಚ್ಚ ಸುದೀಪ್ ತಮ್ಮ ಹೊಸ ಲುಕ್‌ನೊಂದಿಗೆ ವೇದಿಕೆಗೆ ಆಗಮಿಸಿದ್ದಾರೆ. ಸ್ಪರ್ಧಿಗಳೆಲ್ಲರೂ ಕಾತರದಿಂದ ಯಾರಾಗಬಹುದು ಈ ಬಾರಿಯ ವಿನ್ನರ್ ಎಂದು ಕಾದು ಕುಳಿತಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಅಧೀಕೃತ ಮಾಹಿತಿ ಹೊರಬೀಳಲಿದೆ. ಹಳ್ಳಿಯ ಹಾಡು ಹಕ್ಕಿ ಹನುಂಮತನೇ ಈ ಬಾರಿ ಟ್ರೋಪಿ ತಮ್ಮದಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
