ಕಮಲ್‌ ಹಾಸನ್‌ ಹುಟ್ಟುಹಬ್ಬ: ಆಳವಂದನ್‌ನಿಂದ ವಿಶ್ವರೂಪಂ ತನಕ ಕಮಲ್‌ ದಶಾವತಾರಗಳು; ಒಂದಕ್ಕಿಂತ ಒಂದು ಭಿನ್ನ, ಒಂದಕ್ಕಿಂತ ಒಂದು ಚೆನ್ನ
ಕನ್ನಡ ಸುದ್ದಿ  /  ಮನರಂಜನೆ  /  ಕಮಲ್‌ ಹಾಸನ್‌ ಹುಟ್ಟುಹಬ್ಬ: ಆಳವಂದನ್‌ನಿಂದ ವಿಶ್ವರೂಪಂ ತನಕ ಕಮಲ್‌ ದಶಾವತಾರಗಳು; ಒಂದಕ್ಕಿಂತ ಒಂದು ಭಿನ್ನ, ಒಂದಕ್ಕಿಂತ ಒಂದು ಚೆನ್ನ

ಕಮಲ್‌ ಹಾಸನ್‌ ಹುಟ್ಟುಹಬ್ಬ: ಆಳವಂದನ್‌ನಿಂದ ವಿಶ್ವರೂಪಂ ತನಕ ಕಮಲ್‌ ದಶಾವತಾರಗಳು; ಒಂದಕ್ಕಿಂತ ಒಂದು ಭಿನ್ನ, ಒಂದಕ್ಕಿಂತ ಒಂದು ಚೆನ್ನ

Happy Birthday Kamal Haasan: ಕಮಲ್‌ ಹಾಸನ್‌ ಭಾರತದ ಲೆಜೆಂಡರಿ ನಟ, ನಿರ್ದೇಶಕ, ಬರಹಗಾರ. ವಿವಿಧ ಸಿನಿಮಾಗಳಲ್ಲಿ ಅಭಿಮಾನಿಗಳು ಸದಾ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ಇವರು ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ 2898 ಎಡಿಯ ಯಾಸ್ಕಿನ್‌ ಅವತಾರದಿಂದ ಚಾಚಿ 420ಯವರೆಗೆ ಒಂದಕ್ಕಿಂತ ಒಂದು ಭಿನ್ನ ಅವತಾರಗಳಲ್ಲಿ ಕಾಣಿಸಿದ್ದಾರೆ.

ಕಮಲ್‌ ಹಾಸನ್‌ ಹುಟ್ಟುಹಬ್ಬ: ಆಳವಂದನ್‌ನಿಂದ ವಿಶ್ವರೂಪಂ ತನಕ ಕಮಲ್‌ ದಶಾವತಾರಗಳು
ಕಮಲ್‌ ಹಾಸನ್‌ ಹುಟ್ಟುಹಬ್ಬ: ಆಳವಂದನ್‌ನಿಂದ ವಿಶ್ವರೂಪಂ ತನಕ ಕಮಲ್‌ ದಶಾವತಾರಗಳು

Happy Birthday Kamal Haasan: ಭಾರತದ ಸಿನಿಮಾ ಜಗತ್ತು ಕಂಡ ಪ್ರಮುಖ ನಟ ಕಮಲ್‌ ಹಾಸನ್‌ಗೆ ಈಗ 70 ವರ್ಷ ವಯಸ್ಸು. ಇಂದು (ನವೆಂಬರ್‌ 7) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಇವರು ಹಲವು ದಶಕಗಳ ಕಾಲ ಸಿನಿರಂಗದಲ್ಲಿ ತನ್ನ ವಿಭಿನ್ನ, ನೆನಪಿನಲ್ಲಿಟ್ಟುಕೊಳ್ಳುವಂತಹ ಪಾತ್ರಗಳನ್ನು ಮಾಡಿದ್ದಾರೆ. ಇವರು ಪರದೆ ಮೇಲೆ ಕಾಣಿಸಿಕೊಂಡ ಹತ್ತು ಅದ್ಭುತ ಅವತಾರಗಳನ್ನು ನೆನಪಿಸಿಕೊಳ್ಳೋಣ ಬನ್ನಿ.

1. ಆಳವಂದನ್ (2001)

ಕಮಲ್‌ ಹಾಸನ್‌ ಡಬಲ್‌ ಆಕ್ಟಿಂಗ್‌ ಮಾಡಿರುವ ಸಿನಿಮಾವಿದು. ಇದರಲ್ಲಿ ನಂದು ಮತ್ತು ವಿಜಯ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರಲ್ಲಿ ಒಬ್ಬ ಸೈಕೋ ಕಿಲ್ಲರ್‌. ಮತ್ತೊಬ್ಬ ಗೌರವಾನ್ವಿತ ಸೇನಾಧಿಕಾರಿ. ಈ ಎರಡು ಪಾತ್ರಗಳಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುವಂತೆ ನಟಿಸಿದ್ದಾರೆ.

2. ಅನ್ಬೆ ಶಿವಂ (2003)

ಸುಂದರ್ ಸಿ ನಿರ್ದೇಶಿಸಿದ ಈ 2003ರ ಚಿತ್ರದಲ್ಲೂ ಕಮಲ್‌ ಹಾಸನ್‌ ಅವತಾರ ಗಮನ ಸೆಳೆಯುತ್ತದೆ. ಗಾಯಗೊಂಡ, ವಿರೂಪಗೊಂಡ ಸಮಾಜವಾದಿ ನಲ್ಲಶಿವಂ ಪಾತ್ರದಲ್ಲಿ ನಟಿಸಿದ್ದಾರೆ. ವಿಕಾರ, ಬುದ್ಧಿವಂತ, ಇತರರ ಬಗ್ಗೆ ಕಾಳಜಿಯುಳ್ಲ ನಲ್ಲಶಿವಂ ಆಗಿ ಕಮಲ್‌ ಹಾಸನ್‌ ಅದ್ಭುತವಾಗಿ ನಟಿಸಿದ್ದಾರೆ.

3. ಅಪೂರ್ವ ಸಾಗೋಧರರ್ಗಲ್ (1989)

ಅಪ್ಪು ಮತ್ತು ರಾಜ ಎಂಬ ಎರಡು ಪಾತ್ರಗಳಲ್ಲಿ ಕಮಲ್‌ ಹಾಸನ್‌ ನಟಿಸಿದ್ದಾರೆ. ಇವರಿಬ್ಬರು ಹುಟ್ಟಿದಾಗಲೇ ಬೇರ್ಪಟ್ಟು ಎರಡು ಭಿನ್ನ ಕುಟುಂಬದಲ್ಲಿ ಬೆಳೆಯುವ ಸಹೋದರರ ಕಥೆಯಾಗಿದೆ.ಈ ಚಿತ್ರದಲ್ಲಿ ಆಗಿನ ಕಾಲದ ತಾಂತ್ರಿಕ ಮಿತಿಗಳ ನಡುವೆಯೂ ಅಪ್ಪು ಎಂಬ ಕುಬ್ಜ ಕೋಡಂಗಿ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಅರ್ಧದಷ್ಟು ಎತ್ತರದ ಪಾತ್ರದಲ್ಲಿ ನಟಿಸಿ ಇತಿಹಾಸ ಸೃಷ್ಟಿಸಿದರು.

4. ಚಾಚಿ 420 (1997)

90ರ ದಶಕದ ಅನೇಕ ಮಕ್ಕಳು ಕಮಲ್ ಹಾಸನ್ ಅವರನ್ನು ನೆನಪಿಸಿಕೊಳ್ಳುವ ಅತ್ಯಂತ ಅಪ್ರತಿಮ ಪಾತ್ರವೆಂದರೆ ಚಾಚಿ 420. 1997ರಲ್ಲಿ ತಬು ನಟಿಸಿದ ಹಾಸ್ಯ ಚಲನಚಿತ್ರದಲ್ಲಿ ನಟ ಶ್ರೀಮತಿ ಲಕ್ಷ್ಮಿ ಗೋಡ್ಬೋಲೆ ಎಂಬ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ.

5. ದಶಾವತಾರಂ (2008)

ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ 10 ಪಾತ್ರಗಳಲ್ಲಿ ನಟಿಸಿದ್ದಾರೆ. 12ನೇ ಶತಮಾನದ ವೈಷ್ಣವ ಪಾದ್ರಿಯಾಗಿ ನಟಿಸುವುದರಿಂದ ಹಿಡಿದು ಮಾಜಿ ಯುಎಸ್ ಅಧ್ಯಕ್ಷ ಜಾರ್ಜ್ ಬುಷ್ ರೀತಿಯೂ ಕಾಣಿಸಿಕೊಡಿದ್ದಾರೆ.

6. ಹೇ ರಾಮ್ (2000)

ಹೇ ರಾಮ್‌ ಸಿನಿಮಾದಲ್ಲಿ ಕಮಲ್ ಹಾಸನ್ ಸಾಕೇತ್ ರಾಮ್ ಎಂಬ 89 ವರ್ಷದ ಮರಣಶಯ್ಯೆಯಲ್ಲಿ ಮಲಗಿರುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಅವನ ಹೆಂಡತಿ ಅಪರ್ಣಾ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಶಾಂತ ವ್ಯಕ್ತಿಯು ಸೇಡು ತೀರಿಸಿಕೊಳ್ಳುವ ವ್ಯಕ್ತಿಯಾಗಿ ಬದಲಾಗುತ್ತಾನೆ. ಈ ಅವತಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

7. ಇಂಡಿಯನ್‌

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಪಾತ್ರದಲ್ಲಿ ನಟಿಸಿದ್ದರು.

8. ಇಂದ್ರುಡು ಚಂದ್ರುಡು (1989)

ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕಪ್ಪು ಬಿಳುಪು ಹಾಸ್ಯ ಸಿನಿಮಾ.

9. ಕಲ್ಕಿ 2898 ಎಡಿ (2024)

ಈ ವರ್ಷ ತೆರೆಕಂಡ ಕಲ್ಕಿ ಸಿನಿಮಾದಲ್ಲಿ ಕಮಲ್‌ ಹಾಸನ್‌ ಅವರು ಸುಪ್ರೀಂ ಯಾಸ್ಕಿನ್‌ ಎಂಬ ಪವರ್‌ಫುಲ್‌ ಪಾತ್ರದಲ್ಲಿ ನಟಿಸಿದ್ದಾರೆ.

10. ವಿಶ್ವರೂಪಂ (2013)

ಈ ಸಿನಿಮಾದಲ್ಲಿ ಎರಡು ಪಾತ್ರಗಳಲ್ಲಿ ಕಮಲ್‌ ಹಾಸನ್‌ ನಟಿಸಿದ್ದಾರೆ. ವಿಶ್ವನಾಥನ್‌ ಎಂಬ ಅಂಜುಬುರುಕ ಶಾಸ್ತ್ರೀಯ ನೃತ್ಯಪಟು ಮತ್ತು ಉಗ್ರರ ವಿರುದ್ಧ ಹೋರಾಡುವ ರಹಸ್ಯ ರಾ ಏಜೆಂಟ್‌ ಪಾತ್ರದಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಥ್ರಿಲ್‌ ನೀಡಿದ್ದರು.

Whats_app_banner