ಹ್ಯಾಪಿ ಬರ್ತ್‌ಡೇ ಸಾಯಿ ಪಲ್ಲವಿ: ಒಟಿಟಿಯಲ್ಲಿ ಈ 5 ಸಿನಿಮಾ ನೋಡಿ, ಸಹಜ ಸುಂದರಿಯ ಅಭಿನಯಕ್ಕೆ ಮರುಳಾಗಿ
ಸಹಜ ಸುಂದರಿ ಖ್ಯಾತಿಯ ಸಾಯಿ ಪಲ್ಲವಿ ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ. ಇಂದು (ಮೇ 9) ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರ ಹುಟ್ಟುಹಬ್ಬ. ಸಾಯಿ ಪಲ್ಲವಿ ಅಭಿಮಾನಿಗಳು ಒಟಿಟಿಯಲ್ಲಿ ನೋಡಬಹುದಾದ ಸಹಜ ಸುಂದರಿಯ ಇತರೆ ಸಿನಿಮಾಗಳ ವಿವರ ಇಲ್ಲಿದೆ.

ಇಂದು (ಮೇ 9) ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರ ಹುಟ್ಟುಹಬ್ಬ. ಪ್ರೇಮಂ ಸಿನಿಮಾದಲ್ಲಿ ಮಲಯಾಳಂ ಟೀಚರ್ ಆಗಿ ನಟಿಸಿರುವುದು ನಿಮಗೆ ನೆನಪಿಗೆ ಬರಬಹುದು. ಮಾರಿ 2ನಲ್ಲಿ ರೌಡಿ ಬೇಬಿಯಾಗಿ ಈಕೆ ನಟಿಸಿದ್ದರು. ಸಾಯಿ ಪಲ್ಲವಿ ಹಲವು ವೈವಿದ್ಯಮಯ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಈಕೆಯನ್ನು ಸೀತೆಯಾಗಿ ನೋಡುವ ಮುನ್ನ ಅಭಿಮಾನಿಗಳು ಈಕೆ ನಟಿಸಿದ ವಿವಿಧ ಸಿನಿಮಾಗಳನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.
ಸಾಯಿ ಪಲ್ಲವಿ ನಟಿಸಿದ ಬೆಸ್ಟ್ ಸಿನಿಮಾಗಳು
ಗಾರ್ಗಿ
ಇದು ತಮಿಳು ಕೋರ್ಟ್ ರೂಂ ಡ್ರಾಮಾ. ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅಭೂತಪೂರ್ವವಾಗಿ ನಟಿಸಿದ್ದಾರೆ. ಬಡ ಕುಟುಂಬದಿಂದ ಬರುವ ಸ್ಕೂಲ್ ಟೀಚರ್ ಪಾತ್ರದಲ್ಲಿ ನಟಿಸಿದ್ದಾರೆ. ಈಕೆಯ ತಂದೆ ವಾಚ್‌ಮೆನ್ ಮೇಲೆ ಶಾಲಾ ಬಾಲಕಿಯೊಬ್ಬಳು ಲೈಂಗಿಕ ಕಿರುಕುಳ ದೂರು ನೀಡುತ್ತಾಳೆ. ಕೋರ್ಟ್‌ನಲ್ಲಿ ತಂದೆಯನ್ನು ರಕ್ಷಿಸಲು ನಾಯಕಿ ಹೋರಾಡುತ್ತಾಳೆ. ಈ ಚಿತ್ರದಲ್ಲಿ ಆರ್‌ಎಸ್ ಶಿವಾಜಿ, ಶರವಣನ್, ಕಾಳಿ ವೆಂಕಟ್ ಮುಂತಾದವರು ನಟಿಸಿದ್ದಾರೆ.
ಲವ್ ಸ್ಟೋರಿ
ಇದು ತೆಲುಗು ಮ್ಯೂಸಿಕಲ್ ಡ್ರಾಮಾ ಸಿನಿಮಾ. ಶೇಖರ್ ಕಮ್ಮುಳ ನಿರ್ದೇಶನದ ಈ ಸಿನಿಮಾದಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನ್ಯಜಾತಿಯ ಇಬ್ಬರು ಪ್ರೇಮಿಗಳ ಕಥೆಯನ್ನು ಈ ಸಿನಿಮಾ ಹೊಂದಿದೆ. ರಾಜೀವ್ ಕಣಕಾಲ, ದೇವಯಾನಿ, ಈಶ್ವರಿ ರಾವ್ ಮತ್ತು ಉತ್ತೇಜ್ ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ.
ದಿಯಾ
ಇದು ಎಎಲ್ ವಿಜಯ್ ನಿರ್ದೇಶನದ 2018ರ ಹಾರರ್ ಸಿನಿಮಾ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸಾಯಿ ಪಲ್ಲವಿ, ನಾಗ ಶೌರ್ಯ ಮತ್ತು ವೆರೋನಿಕಾ ಅರೋರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಗೋಚರ ಘಟನೆಗಳು, ನಿಗೂಢ ಸಾವುಗಳು ಇವೆ.
ಎನ್‌ಜಿಕೆ
ಎನ್‌ಜಿಕೆ ಎಂದರೆ ನಂದ ಗೋಪಾಲನ್ ಕುಮಾರನ್. ಇದು ತಮಿಳು ರಾಜಕೀಯ ಸಾಹಸ ಸಿನಿಮಾ. ಸೆಲ್ವರಾಘವನ್ ನಿರ್ದೇಶನದ 2019ರ ಈ ಚಿತ್ರದಲ್ಲಿ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ, ರಾಹುಲ್ ಪ್ರೀತ್ ಸಿಂಗ್, ದೇವರಾಜ್, ಪೊನ್ವಣ್ಣನ್, ನಿಜಗಲ್ ರವಿ ಮತ್ತು ರಾಜಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಾವಯವ ಕೃಷಿಕನ ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ.
ಶ್ಯಾಮ್ ಸಿಂಗ್ ರಾಯ್
ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ. ಇದು ತೆಲುಗು ಸಿನಮಾ. ನಾನಿ, ಸಾಯಿ ಪಲ್ಲವಿ, ಕೃತಿ ಶೆಟ್ಟಿ, ಮಡೋನಾ ಸೆಬಾಸ್ಟಿಯನ್ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ದೇವದಾಸಿ ಪಾತ್ರದಲ್ಲಿ ನಟಿಸಿದ್ದಾರೆ.
ಶ್ಯಾಮ್ ಸಿಂಗ್ ರಾಯ್ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಮೇಲೆ ತಿಳಿಸಿದ ಇತರೆ ಸಿನಿಮಾಗಳನ್ನು ಒಟಿಟಿ ಪ್ಲೇನಲ್ಲಿ ನೋಡಬಹುದು. ಸಾಯಿ ಪಲ್ಲವಿ ಅಭಿಮಾನಿಗಳು ಈ ಸಿನಿಮಾಗಳನ್ನು ನೋಡುತ್ತಾ ಸಹಜ ಸುಂದರಿಯ ನಗುವಿಗೆ, ನಟನೆಗೆ ಮರಳಾಗಬಹುದು.