Deepavali 2024 Songs: ಹ್ಯಾಪಿ ದೀಪಾವಳಿ ಹಾಡುಗಳು ಬೇಕೆ? ಇದು ಬಾಲಿವುಡ್ ಕಲೆಕ್ಷನ್, ಬೆಳಕಿನ ಹಬ್ಬಕ್ಕೆ ಸಂಗೀತದ ಸ್ಪರ್ಶ
List of top Diwali 2024 songs: ದೀಪಾವಳಿ ಹಬ್ಬದ ಸಮಯದಲ್ಲಿ ಪಾರ್ಟಿ ಇರಬೇಕು, ಸಂಗೀತ ಇರಬೇಕು, ಒಳ್ಳೊಳ್ಳೆಯ ದೀಪಾವಳಿ ಹಾಡುಗಳು ಇರಬೇಕೆಂದು ಬಯಸುವವರಿಗೆ ಟಾಪ್ ಬಾಲಿವುಡ್ ದೀಪಾವಳಿ ಹಾಡುಗಳ ಸಂಗ್ರಹ ಇಲ್ಲಿದೆ.

List of top Diwali 2024 songs: ದೀಪಾವಳಿ ಹಬ್ಬದ ಸಮಯಕ್ಕೆ ಸೂಕ್ತವಾದ ಕನ್ನಡ ಹಾಡುಗಳ ಪಟ್ಟಿಯನ್ನು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ನೀಡಿದೆ. ಲಿಂಕ್ ಈ ಲೇಖನದ ಕೊನೆಗೆ ನೀಡಲಾಗಿದೆ. ನೀವು ಹಿಂದಿ ಹಾಡುಗಳನ್ನು ಇಷ್ಟಪಡುವವರಾದರೆ ಇಲ್ಲೊಂಅದಿಷ್ಟು ಅತ್ಯುತ್ತಮ ದೀಪಾವಳಿ ಹಾಡುಗಳನ್ನು ನೀಡಲಾಗಿದೆ. ಈ ಬಾರಿ ದೀಪಾವಳಿ ಹಬ್ಬ ಅಕ್ಟೋಬರ್ 31ರಂದು ಬಂದಿದೆ. ಬೆಳಕಿನ ಹಬ್ಬದ ರಂಗು ಹೆಚ್ಚಿಸಲು ಪಟಾಕಿಗಳನ್ನು ಸಿಡಿಸಬಹುದು. ಸಂಗೀತ ಕೇಳಬಹುದು. ಮನೆಯಲ್ಲಿ ಪಾರ್ಟಿ ಮಾಡಬಹುದು. ದೀಪಾವಳಿಗೆ ಸಂಬಂದಪಟ್ಟ ಆಚರಣೆಗಳನ್ನು ಮಾಡಬಹುದು. ದೀಪಾವಳಿ ಸಂದರ್ಭದಲ್ಲಿ ಕೇಳಲು ಒಂದಿಷ್ಟು ಹಾಡುಗಳು ಬೇಕು ಎನ್ನುವಿರಾ? ನಿಮಗಾಗಿ ನಾವು ಒಂದಿಷ್ಟು ಹಾಡುಗಳನ್ನು ಹುಡುಕಿ ಇಲ್ಲಿ ನೀಡಿದ್ದೇವೆ.
ದಿಲ್ ಧಡಕ್ನೆ ದೋ ಚಿತ್ರದ ಗಲ್ಲನ್ ಗುಡಿಯಾನ್ ಹಾಡು ಕೇಳಿ
ಯಶಿತಾ ಶರ್ಮಾ, ಮನೀಶ್ ಕುಮಾರ್ ಟಿಪ್ಪು, ಫರ್ಹಾನ್ ಅಖ್ತರ್, ಶಂಕರ್ ಮಹಾದೇವನ್, ಸುಖ್ವಿಂದರ್ ಸಿಂಗ್ ಹಾಡಿದ್ದಾರೆ. ಶಂಕಾ-ಎಹ್ಸಾನ್-ಲೋಯ್ ಸಂಗೀತ ಸಂಯೋಜಿಸಿದ್ದಾರೆ.ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ರಣವೀರ್ ಸಿಂಗ್ ಮುಂತಾದವರು ಪಾರ್ಟಿ ಮೂಡ್ನಲ್ಲಿ ಕುಣಿದಿದ್ದಾರೆ. ನಿಮ್ಮ ದೀಪಾವಳಿ ಪಾರ್ಟಿಯನ್ನು ಪ್ರಾರಂಭಿಸಲು ಇದು ಪರಿಪೂರ್ಣ ಹಾಡು ಎಂದರೆ ತಪ್ಪಾಗದು.
ಕಭಿ ಖುಷಿ ಕಭಿ ಘಮ್ ಸಿನಿಮಾದ ಬೋಲೆ ಚೂಡಿಯನ್ ಹಾಡು
ಬೋಲೆ ಚೂಡಿಯನ್ ಬಾಲಿವುಡ್ ನೃತ್ಯ ಗೀತೆಗಳಲ್ಲಿ ಒಂದಾಗಿದೆ. ಫರಾ ಖಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡಿನಲ್ಲಿ ಚಿತ್ರದ ಎಲ್ಲಾ ತಾರಾಗಣವಿದೆ. ಕರೀನಾ ಕಪೂರ್ ಮತ್ತು ಹೃತಿಕ್ ರೋಷನ್, ಶಾರುಖ್ ಖಾನ್ ಮತ್ತು ಕಾಜೋಲ್ ಮತ್ತು ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ವರೆಗೆ ಎಲ್ಲರೂ ಇದ್ದಾರೆ. ಅಮಿತ್ ಕುಮಾರ್, ಸೋನು ನಿಗಮ್, ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್ ಮತ್ತು ಕವಿತಾ ಕೃಷ್ಣಮೂರ್ತಿ ಹಾಡಿರುವ ಈ ಹಾಡನ್ನು ಜತಿನ್-ಲಲಿತ್ ಸಂಯೋಜಿಸಿದ್ದಾರೆ.
ಖೂಬ್ಸುರತ್ ಸಿನಿಮಾದ ಅಭಿ ತೋ ಪಾರ್ಟಿ ಶುರು ಹುಯಿ
ಎಲ್ಲಾ ವಯಸ್ಸಿನ ಜನರಿಗೆ ಸಾರ್ವಕಾಲಿಕ ನೆಚ್ಚಿನ ಗೀತೆ ಇದಾಗಿದೆ. ಸೋನಮ್ ಕಪೂರ್ ಮತ್ತು ಫವಾದ್ ಖಾನ್ ನಟಿಸಿದ ಖೂಬ್ಸೂರತ್ ಸಿನಿಮಾದ ಈ ಹಾಡನ್ನು ಬಾದ್ಶಾ ಹಾಡಿದ್ದಾರೆ.
ಬಜರಂಗಿ ಭಾಯಿಜಾನ್ ಸಿನಿಮಾದ ಆಜ್ ಕಿ ಪಾರ್ಟಿ ಹಾಡು
ಮಿಕಾ ಸಿಂಗ್ ಜತೆಗೆ ಸುನ್ಬ್ ಮತ್ತು ಪ್ರೀತಮ್ ಅವರು ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಈ ಹಬ್ಬದ ಹಾಡು ಮದುವೆಯಿಂದ ದೀಪಾವಳಿವರೆಗೆ ಯಾವುದೇ ರೀತಿಯ ಹಬ್ಬ ಕಾರ್ಯಕ್ರಮಗಳಿಗೆ ಸರಿಹೊಂದುತ್ತದೆ. ಕಬೀರ್ ಖಾನ್ ನಿರ್ದೇಶನದ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಅವರ 2015 ರ ಚಲನಚಿತ್ರದ ಪೆಪ್ಪಿ ಹಾಡು ಇದಾಗಿದೆ.
ಪದ್ಮಾವತ್ ಸಿನಿಮಾದ ಘೂಮರ್ ಹಾಡು
ಸ್ವಲ್ಪ ಹೆಚ್ಚು ಸಾಂಪ್ರದಾಯಿಕವಾದ ಹಾಡಿದು. ಇದು ದೀಪಿಕಾ ಪಡುಕೋಣೆ ನಟನೆಯ ಪದ್ಮಾವತ್ನ ಹಾಡು. ಈ ಹಾಡನ್ನು ಶ್ರೇಯಾ ಘೋಷಾಲ್ ಮತ್ತು ಸ್ವರೂಪ್ ಖಾನ್ ಹಾಡಿದ್ದಾರೆ. ಇದರಲ್ಲಿರುವ ರಾಜಸ್ಥಾನಿ ಸಾಹಿತ್ಯವನ್ನು ಸ್ವರೂಪ್ ಖಾನ್ ಹಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಒಳಗೊಂಡಿರುವ ಈ ಹಾಡಿಗೆ ಕೃತಿ ಮಹೇಶ್ ಮಿದ್ಯಾ ನೃತ್ಯ ನಿರ್ದೇಶನವಿದೆ.
ಬಾರ್ ಬಾರ್ ದೇಖೋ ಸಿನಿಮಾದ ಕಾಲಾ ಚಶ್ಮಾ ಹಾಡು
ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಪಾರ್ಟಿ ಹಾಡಿನ ಹೈಲೈಟ್ ಕತ್ರಿನಾ ಕೈಫ್ ಅವರ "ಮುಖದ" ನೃತ್ಯವಾಗಿದೆ. ಕಾಲಾ ಚಷ್ಮಾಗೆ ಪ್ರೇಮ್-ಹರ್ದೀಪ್ ಸಂಗೀತ ನೀಡಿದ್ದಾರೆ. ಮತ್ತು ಅಮರ್ ಅರ್ಶಿ, ಬಾದ್ಶಾ ಮತ್ತು ನೇಹಾ ಕಕ್ಕರ್ ಹಾಡಿದ್ದಾರೆ.
ಧಡಕ್ ಸಿನಿಮಾದ ಜಿಂಗಾತ್ ಹಾಡು
ಇಶಾನ್ ಖಟ್ಟರ್ ಮತ್ತು ಜಾನ್ವಿ ಕಪೂರ್ ಅವರ ಆಕರ್ಷಕ ಹೆಜ್ಜೆಗಳು ಈ ಹಬ್ಬದ ಮೂಡ್ ಹೆಚ್ಚಿಸಬಹುದು.
ಈ ಹಾಡುಗಳು ನಿಮ್ಮ ದೀಪಾವಳಿ ಹಬ್ಬದ ಖುಷಿ ಹೆಚ್ಚಿಸಬಹುದು. ಕನ್ನಡ ರಾಜ್ಯೋತ್ಸವ 2024 ಹತ್ತಿರದಲ್ಲಿರುವ ಸಮಯದಲ್ಲಿ ನೀವು ಕನ್ನಡ ದೀಪಾವಳಿ ಹಾಡುಗಳನ್ನು ಕೇಳಲು ಬಯಸಬಹುದು. ಹಾಗಾದರೆ, ನೀವು ಕನ್ನಡ ದೀಪಾವಳಿ ಹಾಡುಗಳ ಕಲೆಕ್ಷನ್ ನೋಡಬೇಕು. ಆ ಹಾಡುಗಳ ಸಂಗ್ರಹ ಎಲ್ಲಿದೆ ಎಂದು ಕೇಳುವಿರಾ? ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ. ದೀಪದಿಂದ ದೀಪವ, ಪಟ ಪಟ ಪಟಾಕಿ, ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಮುಂತಾದ ಹಾಡುಗಳನ್ನು ಕೇಳೋಣ ಬನ್ನಿ.