OTT Horror Movies: ಒಟಿಟಿಗೆ ಬಂತು 1727 ಕೋಟಿ ಬಜೆಟ್‌ನ ಹೆಲ್‌ಬಾಯ್: ದಿ ಕ್ರೂಕ್ಡ್ ಮ್ಯಾನ್ ಹಾರರ್ ಸಿನಿಮಾ
Hellboy The Crooked Man OTT: ಹೆಲ್‌ಬಾಯ್ 4 ಸರಣಿಯಾಗಿ ಹೆಲ್‌ಬಾಯ್: ದಿ ಕ್ರೂಕ್ಡ್ ಮ್ಯಾನ್ ಸಿನಿಮಾ ಕಳೆದ ವರ್ಷ ತೆರೆಕಂಡಿತು. ಜಾಕ್ ಕೇಸಿ ಈ ಚಿತ್ರದಲ್ಲಿ ಹೆಲ್‌ಬಾಯ್ ಪಾತ್ರದಲ್ಲಿ ನಟಿಸಿದ್ದರು. ಆದರೆ, ಬಹು ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತು ಸುಣ್ಣವಾಯ್ತು. ಈಗ ಇದೇ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

Hellboy The Crooked Man OTT: ಹಾಲಿವುಡ್‌ನ ಹಾರರ್ ಸಿನಿಮಾ ಹೆಲ್‌ಬಾಯ್: ದಿ ಕ್ರೂಕ್ಡ್ ಮ್ಯಾನ್ ಸಿನಿಮಾ ಒಟಿಟಿಗೆ ಆಗಮಿಸಿದೆ. ಹೆಲ್‌ಬಾಯ್ ಫ್ರಾಂಚೈಸಿಯ ನಾಲ್ಕನೇ ಸಿನಿಮಾ ಇದಾಗಿದ್ದು, 2004ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಇದರಲ್ಲಿ ರಾನ್ ಪರ್ಲ್‌ಮನ್ ಮುಖ್ಯ ಪಾತ್ರ ನಿರ್ವಹಿಸಿದರು. ಸೂಪರ್ ಹೀರೋ ಪರಿಕಲ್ಪನೆಯ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತ್ತು. ಈ ಸಿನಿಮಾ ಹಿಟ್ ಆಗುತ್ತಿದ್ದಂತೆ, 2008ರಲ್ಲಿ ಹೆಲ್‌ಬಾಯ್ 2; ದಿ ಗೋಲ್ಡನ್ ಆರ್ಮಿ ಸಹ ಬಿಡುಗಡೆ ಆಗಿ ಯಶಸ್ಸು ಗಳಿಸಿತು.
ಮೊದಲ ಚಿತ್ರದ ಮುಂದುವರಿದ ಭಾಗವಾಗಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಪಟ್ಟ ಪಡೆದುಕೊಂಡಿತು. ಮೊದಲ ಭಾಗಕ್ಕಿಂತ ಹೆಚ್ಚು ಮೆಚ್ಚುಗೆ ಪಡೆಯಿತು. ಎರಡನೇ ಭಾಗದಲ್ಲಿಯೂ ರಾನ್ ಪರ್ಲ್‌ಮನ್ ಮುಖ್ಯಭೂಮಿಕೆಯಲ್ಲಿದ್ದರು. ಅಲ್ಲಿಂದಾಚೆಗೆ ಸುದೀರ್ಘ 10 ವರ್ಷಗಳ ಬಳಿಕ ಅಂದರೆ 2019ರಲ್ಲಿ ಹೆಲ್‌ಬಾಯ್ ಹೆಸರಿನೊಂದಿಗೆ ಮೂರನೇ ಭಾಗ ಬಿಡುಗಡೆ ಆಗಿತ್ತು.
ನಿರೀಕ್ಷೆ ಮಟ್ಟ ಮುಟ್ಟದ ಹೆಲ್‌ಬಾಯ್ 3
20219ರಲ್ಲಿ ಹೆಲ್‌ಬಾಯ್ ಸಿನಿಮಾ ರಿಲೀಸ್ ಆದರೂ, ಮೊದಲ ಎರಡು ಭಾಗಗಳಿಗೆ ಸಿಕ್ಕಷ್ಟು ಮೆಚ್ಚುಗೆ ಸಿಗಲಿಲ್ಲ. ರಾನ್ ಪರ್ಲ್‌ಮನ್ ಬದಲಿಗೆ, ಡೇವಿಡ್ ಹಾರ್ಬರ್ ಹೆಲ್‌ಬಾಯ್ 3ರಲ್ಲಿ ನಟಿಸಿದರು. ಹಾಲಿವುಡ್ ಆಕ್ಷನ್ ನಾಯಕಿ ಮಿಲ್ಲಾ ಜೊವೊವಿಚ್ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ಚಿತ್ರವು ನಿರೀಕ್ಷಿಸಿದಷ್ಟು ಪಾಸಿಟಿವ್ ಟಾಕ್‌ಮ ಪಡೆದುಕೊಳ್ಳಲಿಲ್ಲ. ಈ ಕಾರಣಕ್ಕೆ ಬಾಕ್ಸ್ ಆಫೀಸ್‌ನಲ್ಲಿಯೂ ಸೋಲನುಭವಿಸಿತು. ಇದೀಗ ಐದು ವರ್ಷಗಳ ಬಳಿಕ, ಹೆಲ್‌ಬಾಯ್: ದಿ ಕ್ರೂಕ್ಡ್ ಮ್ಯಾನ್ 2024ರಲ್ಲಿ ಸರಣಿಯ ನಾಲ್ಕನೇ ಚಿತ್ರವಾಗಿ ಬಿಡುಗಡೆಯಾಯಿತು.
ಹೆಲ್‌ಬಾಯ್ ದಿ ಕ್ರಾಕ್ಡ್ ಮ್ಯಾನ್ ದುರಂತ ಸೋಲು
ಹೆಲ್‌ಬಾಯ್ 4 ಸರಣಿಯಾಗಿ ಹೆಲ್‌ಬಾಯ್: ದಿ ಕ್ರೂಕ್ಡ್ ಮ್ಯಾನ್ ಸಿನಿಮಾ ಕಳೆದ ವರ್ಷ ತೆರೆಕಂಡಿತು. ಜಾಕ್ ಕೇಸಿ ಈ ಸಿನಿಮಾದಲ್ಲಿ ಹೆಲ್‌ಬಾಯ್ ಪಾತ್ರದಲ್ಲಿ ಕಂಡಿದ್ದರು. ಆದರೆ, ಬಹು ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತು ಸುಣ್ಣವಾಯ್ತು. ಬಜೆಟ್ ಲೆಕ್ಕದಲ್ಲಿ ನೋಡುವುದಾದರೆ, ಈ ಚಿತ್ರವನ್ನು ಬರೋಬ್ಬರಿ 20 ಮಿಲಿಯನ್ ಡಾಲರ್ ಬಜೆಟ್‌ನಲ್ಲಿ ಅಂದರೆ ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ, ಸುಮಾರು 1,731.53 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಯಿತು. ಆದರೆ ಇದೇ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡಿತು.
ಒಟಿಟಿಗೆ ಬಂದ ಹೆಲ್‌ಬಾಯ್ 4
ಹೆಲ್‌ಬಾಯ್ ಫ್ರ್ಯಾಂಚೈಸ್‌ನ ನಾಲ್ಕನೇ ಹೆಲ್‌ಬಾಯ್: ದಿ ಕ್ರೂಕ್ಡ್ ಮ್ಯಾನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದುರಂತ ಸೋಲನುಭವಿಸಿತು. ಈಗ ಇದೇ ಸಿನಿಮಾ ಎರಡು ಒಟಿಟಿಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಬಾಡಿಗೆ ರೂಪದಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಇಂಗ್ಲಿಷ್ ಭಾಷೆಯ ಜತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿದೆ. ಇದರ ಜತೆಗೆ ಲಯನ್ ಗೇಟ್‌ಪ್ಲೇ ಒಟಿಟಿಯಲ್ಲಿಯೂ ವೀಕ್ಷಣೆ ಮಾಡಬಹುದು.
