Big Boss 18: ಎರಡು ಮದುವೆ, ಇಬ್ಬರಿಗೂ ಡಿವೋರ್ಸ್! ಇದು ಹಿಂದಿ ಬಿಗ್ ಬಾಸ್ ಸೀಸನ್ 18ರ ವಿಜೇತ ಕರಣ್ ವೀರ್ ಮೆಹ್ರಾ ವೃತ್ತಾಂತ
ಹಿಂದಿ ಬಿಗ್‌ಬಾಸ್ ಸೀಸನ್ 18ರ ವಿಜೇತರಾಗಿ ಕರಣ್ ವೀರ್ ಮೆಹ್ರಾ ಟ್ರೋಫಿ ಗೆಲ್ಲುವ ಜೊತೆಗೆ 50 ಲಕ್ಷ ನಗದು ಬಹುಮಾನವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಹಿಂದಿ ಕಿರುತೆರೆ, ಸಿನಿಮಾ ನಟನಾಗಿರುವ ಕರಣ್ ವೀರ್ ಕೆಲವು ವೆಬ್ ಸೀರಿಸ್‌ಗಳಲ್ಲೂ ನಟಿಸಿದ್ದಾರೆ. ಇವರು ಯಾರು, ಇವರ ಹಿನ್ನೆಲೆಯೇನು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹಿಂದಿಯಲ್ಲಿ ಸಲ್ಮಾನ್‌ಖಾನ್ ನಡೆಸಿಕೊಡುವ ಬಿಗ್‌ಬಾಸ್ ಕಾರ್ಯಕ್ರಮ ಸೀಸನ್ 18 ಮುಕ್ತಾಯವಾಗಿದ್ದು, ಇದೀಗ ಕರಣ್ ವೀರ್ ಮೆಹ್ರಾ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಇವರು ಸೀಸನ್ 18ರ ಟ್ರೋಪಿ ಗೆಲ್ಲುವ ಜೊತೆಗೆ 50 ಲಕ್ಷ ನಗದನ್ನು ಬಹುಮಾನವಾಗಿ ಪಡೆದುಕೊಂಡಿದ್ದಾರೆ. ವಿವಿಯನ್ ದ್ಸೇನಾ ಮೊದಲ ರನ್ನರ್ ಅಪ್ ಆಗಿದ್ದರೆ, ರಜತ್ ದಲಾಲ್ ಈ ಸೀಸನ್‌ನಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಕರಣ್ ವೀರ್ ಬಿಗ್‌ಬಾಸ್ ಟ್ರೋಫಿಗೆ ಮುತ್ತಿಕ್ಕಿದ್ದೇ ತಡ ಯಾರುವರು ಎಂಬ ಹುಡುಕಾಟ ಶುರುವಾಗಿದೆ. ಕರಣ್ ವೀರ್ ಮೆಹ್ರಾ ಯಾರು, ಅವರ ಹಿನ್ನೆಲೆಯೇನು, ಶೈಕ್ಷಣಿಕ ವಿವರ, ಅವರ ಆಸ್ತಿಯ ಮೌಲ್ಯ ಮುಂತಾದ ಹಲವು ವಿಚಾರಗಳು ಇಲ್ಲಿವೆ.
ಕರಣ್ ವೀರ್ ಮೆಹ್ರಾ ಪರಿಚಯ
ಕರಣ್ ವೀರ್ ದೆಹಲಿ ಮೂಲದವರು. ಮಸ್ಸೂರಿಯ ವೈನ್‌ಬರ್ಗ್ ಅಲೆನ್ ಶಾಲೆಯಲ್ಲಿ 10ನೇ ತರಗತಿವರೆಗೆ ಓದುತ್ತಾರೆ. ನಂತರ ದೆಹಲಿಗೆ ಮರಳಿ ಅಲ್ಲಿನ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಪಿಯುಸಿ ಮುಗಿಸುತ್ತಾರೆ. ದೆಹಲಿ ಕಾಲೇಜ್ ಆಫ್ ಆರ್ಟ್ಸ್ & ಕಾಮರ್ಸ್‌ನಿಂದ ಜಾಹೀರಾತು ಮತ್ತು ಮಾರಾಟ ಪ್ರಚಾರ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಕರಣ್ ತನ್ನ ಅಜ್ಜಿಯ ಆಸೆಯಂತೆ ತಮ್ಮ ಹೆಸರಿನೊಂದಿಗೆ ವೀರ್ ಎಂದು ಸೇರಿಸಿಕೊಳ್ಳುತ್ತಾರೆ. ಇದು ಅವರ ಅಗಲಿದೆ ಅಜ್ಜನ ಹೆಸರಾಗಿತ್ತು. ಕರಣ್ ತಂದೆ ರಾಜೀವ್ ಮೆಹ್ರಾ. ಕರಣ್ 2009ರಲ್ಲಿ ದೇವಿಕಾ ಮೆಹ್ರಾ ಅವರನ್ನು ಮದುವೆಯಾಗಿ 2018 ರಲ್ಲಿ ವಿಚ್ಛೇದನ ಪಡೆಯುತ್ತಾರೆ. 2021ರಲ್ಲಿ ಅವರು ನಿಧಿ ಸೇಥ್ ಅವರನ್ನು ವಿವಾಹವಾಗಿ, 2023ರಲ್ಲಿ ಈ ಜೋಡಿ ಬೇರೆಯಾಗುತ್ತಾರೆ.
2005ರಿಂದ ಹಲವು ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಾರೆ. ಇವರು ನಟಿಸಿದ ಮೊದಲ ಷೋ ಹಿಂದಿಯ ರಿಮಿಕ್ಸ್. ಅಭಿಷೇಕ್ ಬಚ್ಚನ್, ಪ್ರಿಯಾಂಕ ಚೋಪ್ರಾ ನಟನೆಯ ದ್ರೋಣ ಸಿನಿಮಾದಲ್ಲಿ ಇವರು ಮೊದಲ ಬಾರಿಗೆ ಬಣ್ಣ ಹಚ್ಚುತ್ತಾರೆ.
ಕರಣ್ ವೀರ್ ಆಸ್ತಿ ವಿವರ
ಕರಣ್ ವೀರ್ ಪ್ರತಿಷ್ಠಿತ ಬಿಗ್‌ಬಾಸ್ ಟ್ರೋಪಿಯೊಂದಿಗೆ 50 ಲಕ್ಷ ನಗದನ್ನು ಪಡೆದಿದ್ದಾರೆ. ಇದರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಕ್ಕಾಗಿಯೂ ಉತ್ತಮ ಮೊತ್ತವನ್ನು ಪಡೆದಿದ್ದರು, ಇವರು ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದಕ್ಕೆ ವಾರಕ್ಕೆ 2 ಲಕ್ಷ ರೂ ಪಡೆದಿದ್ದಾರೆ. ಬಿಗ್ ಬಾಸ್ 18 ರಿಂದ ಅವರ ಒಟ್ಟು ಗಳಿಕೆ 30 ಲಕ್ಷ ರೂಪಾಯಿ ಎಂದು ವರದಿಗಳು ಹೇಳುತ್ತಿವೆ.
2005ರ ರೀಮಿಕ್ಸ್ ಮೂಲಕ ಪದಾರ್ಪಣೆ ಮಾಡಿದ ಕರಣ್, ಹಲವಾರು ಪ್ರಸಿದ್ಧ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ಅವರು ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 14 ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. ಫಿಲ್ಮಿಬೀಟ್ ವರದಿ ಮಾಡಿದಂತೆ ಅವರ ಅಂದಾಜು ನಿವ್ವಳ ಮೌಲ್ಯ ಸುಮಾರು 12 ಕೋಟಿ ರೂ., ಇದು ದೂರದರ್ಶನ ಮತ್ತು ಚಲನಚಿತ್ರಗಳಲ್ಲಿನ ಅವರ ಕೆಲಸದಿಂದ ಬಂದಿದೆ.
ಕರಣ್ ವೀರ್ ಅವರ ವೃತ್ತಿಜೀವನ
ಕರಣ್ ವೀರ್ ಮೆಹ್ರಾ ಧಾರಾವಾಹಿಗಳು, ವೆಬ್ ಸರಣಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿ, ಜನಮನ್ನಣೆ ಗಳಿಸಿದ್ದಾರೆ. ಅವರು 2005ರ ಜನಪ್ರಿಯ ಟಿವಿ ಕಾರ್ಯಕ್ರಮ ರೀಮಿಕ್ಸ್ ಮೂಲಕ ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸಿದರು. ಅಲ್ಲಿ ಅವರು ಆದಿತ್ಯ ಪಾತ್ರವನ್ನು ನಿರ್ವಹಿಸಿದರು. ಸಾಥ್ ರಹೇಗಾ ಆಲ್ವೇಸ್, ಸತಿ... ಸತ್ಯ ಕಿ ಶಕ್ತಿ, ವಿರುದ್ಧ್, ಹಮ್ ಲಡ್ಕಿಯಾನ್, ಬೆಹೆನೇನ್, ಮತ್ತು ಪವಿತ್ರ ರಿಶ್ತಾ ಸೇರಿದಂತೆ ಹಲವಾರು ಧಾರಾವಾಹಿಗಳಿಗೆ ಇವರು ಬಣ್ಣ ಹಚ್ಚಿದ್ದಾರೆ. ಪವಿತ್ರ ರಿಶ್ತಾದಲ್ಲಿ ನರೇನ್ ಕರ್ಮಾರ್ಕರ್ ಅವರ ಪಾತ್ರವು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿತ್ತು.
ನಂತರ ವೆಬ್‌ಸರಣಿಗೂ ಬಣ್ಣ ಹಚ್ಚಲು ಆರಂಭಿಸಿದ್ದರು ಕರಣ್, ಅವರು 2018 ರ ಸರಣಿ ಇಟ್ಸ್ ನಾಟ್ ದಟ್ ಸಿಂಪಲ್‌ನಲ್ಲಿ ಕಾಣಿಸಿಕೊಂಡರು. ಸ್ವರಾ ಭಾಸ್ಕರ್ ಮತ್ತು ಪುರಬ್ ಕೊಹ್ಲಿ ನಟನೆಯ ಈ ಸೀರಿಸ್‌ನಲ್ಲಿ ಜಯೇಶ್ ಪಾತ್ರವನ್ನು ನಿರ್ವಹಿಸಿದರು. ಪಾಯ್ಸನ್ 2 (2020) ವೆಬ್ ಸರಣಿಯಲ್ಲಿ ಜೈವೀರ್ ಆಗಿ ಕಾಣಿಸಿಕೊಂಡಿದ್ದಾರೆ ಮತ್ತು ಮುಂಬರುವ ಕಪಲ್ ಆಫ್ ಮಿಸ್ಟೇಕ್ಸ್‌ನಲ್ಲಿ ಅಶ್ವಿನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದ್ರೋಣ, ಆಗೇ ಸೆ ರೈಟ್, ಮೇರೆ ದಾದ್ ಕಿ ಮಾರುತಿ, ರಾಗಿಣಿ ಎಂಎಂಎಸ್ 2, ಮತ್ತು ಬದ್ಮಾಶಿಯಾನ್ ಮುಂತಾದ ಸಿನಿಮಾಗಳಲ್ಲೂ ಕರಣ್ ನಟಿಸಿದ್ದಾರೆ. ಅವರು ಸಂಗೀತ ವೀಡಿಯೊಗಳಲ್ಲಿಯೂ ಕೆಲಸ ಮಾಡಿದ್ದಾರೆ, ಇತ್ತೀಚೆಗೆ ಬಿಡುಗಡೆಯಾದವುಗಳಲ್ಲಿ 2024 ರಲ್ಲಿ ಬಿಡುಗಡೆಯಾದ ಕೆಹ್ನಾ ಗಲಾತ್ ಗಲಾತ್ ಒಂದು. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಕರಣ್ ಇತ್ತೀಚೆಗೆ ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 14 ಅನ್ನು ಗೆದ್ದರು ಮತ್ತು ಈಗ ಬಿಗ್ ಬಾಸ್ 18 ರ ವಿಜೇತರಾಗಿದ್ದಾರೆ.
