Munjya OTT: ಸದ್ದು ಗದ್ದಲವಿಲ್ಲದೆ, ಮುನ್ಸೂಚನೆ ನೀಡದೆ ಒಟಿಟಿಗೆ ಬಂತು ಬ್ಲಾಕ್‌ಬಸ್ಟರ್‌ ಹಾರರ್‌ ಕಾಮಿಡಿ ಸಿನಿಮಾ ಮುಂಜ್ಯಾ; ವೀಕ್ಷಣೆ ಎಲ್ಲಿ?-hindi ott news munjya ott release horror comedy munjya movie starts streaming online where and how to watch mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Munjya Ott: ಸದ್ದು ಗದ್ದಲವಿಲ್ಲದೆ, ಮುನ್ಸೂಚನೆ ನೀಡದೆ ಒಟಿಟಿಗೆ ಬಂತು ಬ್ಲಾಕ್‌ಬಸ್ಟರ್‌ ಹಾರರ್‌ ಕಾಮಿಡಿ ಸಿನಿಮಾ ಮುಂಜ್ಯಾ; ವೀಕ್ಷಣೆ ಎಲ್ಲಿ?

Munjya OTT: ಸದ್ದು ಗದ್ದಲವಿಲ್ಲದೆ, ಮುನ್ಸೂಚನೆ ನೀಡದೆ ಒಟಿಟಿಗೆ ಬಂತು ಬ್ಲಾಕ್‌ಬಸ್ಟರ್‌ ಹಾರರ್‌ ಕಾಮಿಡಿ ಸಿನಿಮಾ ಮುಂಜ್ಯಾ; ವೀಕ್ಷಣೆ ಎಲ್ಲಿ?

ಜೂನ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮುಂಜ್ಯಾ ಸಿನಿಮಾ, ಪಾಸಿಟಿವ್ ಟಾಕ್ ಪಡೆದುಕೊಂಡು ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 130 ಕೋಟಿ ಗಳಿಕೆ ಕಂಡಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸಿದೆ. ಇಲ್ಲಿದೆ ಸ್ಟ್ರೀಮಿಂಗ್‌ ವೇದಿಕೆಯ ವಿವರ.

ಜೂನ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮುಂಜ್ಯಾ ಸಿನಿಮಾ, ಪಾಸಿಟಿವ್ ಟಾಕ್ ಪಡೆದುಕೊಂಡು ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 130 ಕೋಟಿ ಗಳಿಕೆ ಕಂಡಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸಿದೆ. ಇಲ್ಲಿದೆ ಸ್ಟ್ರೀಮಿಂಗ್‌ ವೇದಿಕೆಯ ವಿವರ.
ಜೂನ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮುಂಜ್ಯಾ ಸಿನಿಮಾ, ಪಾಸಿಟಿವ್ ಟಾಕ್ ಪಡೆದುಕೊಂಡು ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 130 ಕೋಟಿ ಗಳಿಕೆ ಕಂಡಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸಿದೆ. ಇಲ್ಲಿದೆ ಸ್ಟ್ರೀಮಿಂಗ್‌ ವೇದಿಕೆಯ ವಿವರ.

Munjya OTT: ಯಾವುದೇ ನಿರೀಕ್ಷೆ, ಹೈಪ್‌ ಇಲ್ಲದೆ ಚಿತ್ರಮಂದಿರಕ್ಕೆ ಬಂದಿದ್ದ ಬಾಲಿವುಡ್‌ನ ಮುಂಜ್ಯ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಹಿಟ್‌ ಆಗಿತ್ತು. ಶಾರ್ವರಿ ವಾಘ್ ಮತ್ತು ಅಜಯ್ ವರ್ಮಾ ಮುಖ್ಯ ಭೂಮಿಕೆಯಲ್ಲಿರುವ ಈ ಕಡಿಮೆ ಬಜೆಟ್ ಹಾರರ್ ಕಾಮಿಡಿ ಚಿತ್ರ ಕಲೆಕ್ಷನ್‌ ವಿಚಾರದಲ್ಲಿ ಹೊಸ ದಾಖಲೆ ಬರೆಯಿತು. ಜೂನ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮುಂಜ್ಯಾ ಸಿನಿಮಾ, ಪಾಸಿಟಿವ್ ಟಾಕ್ ಪಡೆದುಕೊಂಡು ಬರೋಬ್ಬರಿ 130 ಕೋಟಿ ಗಳಿಕೆ ಕಂಡಿತ್ತು. ಇನ್ನೇನು ಒಟಿಟಿಯಲ್ಲಿಯೂ ಬರಬಹುದು ಎಂದು ಪ್ರೇಕ್ಷಕ ಕಾದಿದ್ದ ಆದರೆ, ಒಟಿಟಿ ಬದಲು ಟಿವಿಯಲ್ಲಿ ಪ್ರಸಾರ ಕಂಡಿತ್ತು. ಇದೀಗ ಒಟಿಟಿಗೆ ಆಗಮಿಸಿದೆ.

30 ಕೋಟಿ ಬಜೆಟ್, 132 ಕೋಟಿ ಕಲೆಕ್ಷನ್

ಆದಿತ್ಯ ಸರ್ಪೋತದಾರ್ ನಿರ್ದೇಶನದ ಮುಂಜ್ಯಾ ಸಿನಿಮಾವನ್ನು ಕೇವಲ 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಟ್ರೇಲರ್‌ ಮೂಲಕ ಕುತೂಹಲ ಮೂಡಿಸಿದ್ದ ಈ ಸಿನಿಮಾ, ಬಾಯಿಮಾತಿನ ಪ್ರಚಾರದಿಂದ ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 132 ಕೋಟಿ ಕಮಾಯಿ ಮಾಡಿತು. ಮೊದಲ ವಾರ ಹೇಳಿಕೊಳ್ಳುವಂಥ ಕಲೆಕ್ಷನ್‌ ಈ ಚಿತ್ರಕ್ಕೆ ಸಿಕ್ಕಿರಲಿಲ್ಲ. ಆದರೆ, ಎರಡನೇ ವಾರದಿಂದ ಕಲೆಕ್ಷನ್‌ ಏರುಗತಿಯಲ್ಲಿ ಸಾಗಿತು. ಹೆಚ್ಚು ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಈ ಸಿನಿಮಾ ಒಟ್ಟಾರೆಯಾಗಿ 132 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟ ಪಡೆಯಿತು.

ಏನಿದು ಮುಂಜ್ಯಾ ಕಥೆ?

ಮುಂಜ್ಯಾ ಕಥೆ ಮಹಾರಾಷ್ಟ್ರದ ಕೊಂಕಣ ಎಂಬ ಹಳ್ಳಿಯಲ್ಲಿ ಪ್ರಾರಂಭವಾಗುತ್ತದೆ. ಚಿಕ್ಕವಯಸ್ಸಿನಲ್ಲೇ ವಾಮಾಚಾರಕ್ಕೆ ಮಗು ಬಲಿಯಾಗುತ್ತದೆ. ಆಕಸ್ಮಿಕವಾಗಿ ಸಾಯುವ ಮಗು, ಮುಂಜ್ಯ ಎಂಬ ಭೂತವಾಗಿ ಬದಲಾಗುತ್ತದೆ. ಅದಾದ ಬಳಿಕ ಆ ಮುಂಜ್ಯಾ ಭೂತ ಹೇಗೆಲ್ಲ ಕಾಟ ಕೊಡುತ್ತದೆ ಎಂಬುದೇ ಈ ಸಿನಿಮಾದ ಕಥೆ. ಮೇಕಿಂಗ್‌ ಮೂಲಕವೇ ಸಿನಿಮಾ ನೋಡುಗರಿಗೆ ಇಷ್ಟವಾಗಿದೆ. ಆ ಒಂದು ಕಾರಣಕ್ಕೆ ಇದೇ ಚಿತ್ರದ ಸೀಕ್ವೆಲ್‌ ಮಾಡುವುದಕ್ಕೂ ಮೇಕರ್ಸ್‌ ನಿರ್ಧರಿಸಿದ್ದಾರೆ.

ಯಾವ ಒಟಿಟಿಯಲ್ಲಿ ನೋಡಬಹುದು?

ಮುಂಜ್ಯಾ ಸಿನಿಮಾ ಇಂದು (ಆಗಸ್ಟ್ 25) ಡಿಸ್ನಿ+ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸುಮಾರು 11 ವಾರಗಳ ನಂತರ, ಮುಂಜ್ಯಾ ಡಿಸ್ನಿ+ ಹಾಟ್‌ಸ್ಟಾರ್ OTTಯಲ್ಲಿ ಪ್ರದರ್ಶನ ಕಾಣುತ್ತಿದೆ. ಕಳೆದ ವಾರ ಈ ಸಿನಿಮಾ ಸ್ಟಾರ್ ಗೋಲ್ಡ್ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಸದ್ಯ ಈ ಸಿನಿಮಾ ಹಿಂದಿಯಲ್ಲಿ ಮಾತ್ರ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಕನ್ನಡ ಅವತರಣಿಕೆ ಬರುತ್ತೋ ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರದ ತಾರಾಬಳಗದಲ್ಲಿ ಯಾರೆಲ್ಲ ನಟಿಸಿದ್ದಾರೆ..

ಮುಂಜ್ಯ ಚಿತ್ರವನ್ನು ಆದಿತ್ಯ ಸರ್ಪೋತದಾರ್ ನಿರ್ದೇಶಿಸಿದ್ದಾರೆ. ಕಾಮಿಡಿ ಜೊತೆಗೆ ಹಾರರ್ ಅಂಶಗಳೊಂದಿಗೆ ಈ ಚಿತ್ರ ಮೂಡಿಬಂದಿದೆ. ಶರ್ವರಿ ಮತ್ತು ಅಭಯ್ ವರ್ಮಾ ಜೊತೆಗೆ, ಮುಂಜ್ಯಾದಲ್ಲಿ ಸೌತ್‌ ನಟ ಸತ್ಯರಾಜ್, ಮೋನಾ ಸಿಂಗ್, ಸುಹಾಸ್ ಜೋಶಿ, ತರಂಜ್ಯೋತಿ ಸಿಂಗ್, ಅಜಯ್ ಪುರ್ಕರ್, ಆಯುಷ್ ಉಳಗಡೆ ಮತ್ತು ಭಾಗ್ಯಶ್ರೀ ಲಿಮಾಯೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂಜ್ಯಾ ಚಿತ್ರವನ್ನು ದಿನೇಶ್ ವಿಜನ್ ಮತ್ತು ಅಮರ್ ಕೌಶಿಕ್ ತಮ್ಮ ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಸಚಿನ್- ಜಿಗರ್ ಮತ್ತು ಜಸ್ಟಿನ್ ವರ್ಗೀಸ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸೌರಭ್ ಗೋಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ. ಮೋನಿಶಾ ಆರ್ ಬಲ್ದವ ಸಂಕಲನವಿದೆ.