ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಈ ವಾರ ಮೂವರು ಸ್ಟಾರ್ ಹೀರೋಗಳ ಮೂರು ಚಿತ್ರಗಳ ಆಗಮನ, ಅದರಲ್ಲೊಂದು ಬ್ಲಾಕ್ ಬಸ್ಟರ್
ನೆಟ್‌ಫ್ಲಿಕ್ಸ್ ಉತ್ತಮ ಚಾಲನೆಯಲ್ಲಿದೆ. ಈ ವಾರ ಮಾತ್ರ ಈ ಒಟಿಟಿ ಮೂರು ಸ್ಟಾರ್ ಹೀರೋಗಳ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡಲಿದೆ. ಒಂದು ಸಿನಿಮಾ ಈಗಾಗಲೇ ಸ್ಟ್ರೀಮಿಂಗ್ ಆರಂಭಿಸಿದ್ದು, ಇನ್ನೆರಡು ಬರಲಿವೆ. ಆ ಸಿನಿಮಾಗಳು ಯಾವುವು ಎಂದು ನೋಡಿ.

ಇನ್ನೇನು ಮೇ ತಿಂಗಳು ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಆ ಐದು ದಿನಗಳಲ್ಲಿ ಘಟಾನುಘಟಿ ಸ್ಟಾರ್ ನಟರ ಸಿನಿಮಾಗಳು ಒಟಿಟಿ ಅಂಗಳಕ್ಕೆ ಆಗಮಿಸಲಿವೆ. ತಮಿಳು ನಟ ಸೂರ್ಯ ಅಭಿನಯದ ʻರೆಟ್ರೋʼ, ಸಲ್ಮಾನ್ ಖಾನ್ ನಟನೆಯ ʻಸಿಕಂದರ್ʼ, ತೆಲುಗು ನಟ ನಾನಿ ನಟನೆಯ ʻಹಿಟ್ 3ʼ ಸಿನಿಮಾಗಳು ಈ ವಾರ ಒಟಿಟಿಗೆ ಬರಲಿವೆ. ಈ ಮೂಲಕ ಒಂದೇ ವಾರದಲ್ಲಿ ಮೂವರು ಸ್ಟಾರ್ ನಟರ ಸಿನಿಮಾಗಳು ಒಟಿಟಿಗೆ ಬಂದಂತಾಗಲಿವೆ.
ಬಾಲಿವುಡ್, ಕಾಲಿವುಡ್, ಟಾಲಿವುಡ್‌ನ ಮೂರು ಸ್ಟಾರ್ ಹೀರೋಗಳ ಬಿಗ್ ಬಜೆಟ್‌ನ ಮೂರು ಸಿನಿಮಾಗಳು ನೆಟ್‌ಫ್ಲಿಕ್ಸ್ ಒಟಿಟಿಗೆ ಆಗಮಿಸಲಿವೆ. ಇವುಗಳಲ್ಲಿ ನಾನಿ ಅಭಿನಯಿಸಿದ ಹಿಟ್ 3 ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದರೆ, ʻರೆಟ್ರೋʼ, ʻಸಿಕಂದರ್ʼ ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸಿವೆ. ಇದೀಗ ಈ ಸಿನಿಮಾಗಳಿಗೆ ಒಟಿಟಿಯಲ್ಲಿ ಅದ್ಯಾವ ರೀತಿಯ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸಿಕಂದರ್ ಒಟಿಟಿ ಸ್ಟ್ರೀಮಿಂಗ್
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ ಸಿನಿಮಾ ಸಿಕಂದರ್. ಈ ವರ್ಷ ರಂಜಾನ್ ಸಂದರ್ಭದಲ್ಲಿ ಬಿಡುಗಡೆಯಾದ ಈ ಸಿನಿಮಾ ದೊಡ್ಡ ನಿರೀಕ್ಷೆಗಳ ನಡುವೆ ಬಿಡುಗಡೆಯಾದರೂ, ಪ್ರೇಕ್ಷಕರನ್ನು ಹೆಚ್ಚಾಗಿ ಆಕರ್ಷಿಸಲಿಲ್ಲ. ಈ ಸಿನಿಮಾ ಈಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಭಾನುವಾರ (ಮೇ 25) ದಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭವಾಗಿದೆ. ಎ.ಆರ್. ಮುರುಗದಾಸ್ ನಿರ್ದೇಶಿಸಿದ ಈ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳೇ ಹರಿದುಬಂದಿವೆ. ನೆಗೆಟಿವ್ ವಿಮರ್ಶೆಗಳ ನಡುವೆಯೇ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಹಿಟ್ 3 ಒಟಿಟಿ ರಿಲೀಸ್ ದಿನಾಂಕ
ತೆಲುಗು ಸ್ಟಾರ್ ನಟ ನಾನಿ ಅಭಿನಯಿಸಿದ ಬ್ಲಾಕ್‌ಬಸ್ಟರ್ ಸಿನಿಮಾ ಹಿಟ್ 3 ಈ ವಾರ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಈ ಸಿನಿಮಾ ಗುರುವಾರ (ಮೇ 29) ದಿಂದ ಸ್ಟ್ರೀಮಿಂಗ್ ಆಗಲಿದೆ. ಮೂಲ ತೆಲುಗಿನ ಹಿಟ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ಇದೀಗ ಇದೇ ಸಿನಿಮಾ ತೆಲುಗು ಜತೆಗೆ, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ವಿಶ್ವದಾದ್ಯಂತ ಹಿಟ್ 3 ಸಿನಿಮಾ 120 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಹಿಟ್ ಯೂನಿವರ್ಸ್‌ನಿಂದ ಬಂದ ಈ ಮೂರನೇ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಯಶಸ್ಸು ಕಂಡಿತು. ಅರ್ಜುನ್ ಸರ್ಕಾರ್ ಎಂಬ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ನಾನಿ ಅಭಿನಯಿಸಿದ್ದಾರೆ.
ರೆಟ್ರೋ ಒಟಿಟಿ ರಿಲೀಸ್ ದಿನಾಂಕ
ತಮಿಳು ಸ್ಟಾರ್ ಹೀರೋ ಸೂರ್ಯ ಅಭಿನಯಿಸಿದ ʻರೆಟ್ರೋʼ ಸಿನಿಮಾ ಒಂದು ತಿಂಗಳೊಳಗೆ ಒಟಿಟಿಗೆ ಬರುತ್ತಿದೆ. ಮೇ 1ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಮೇ 31 ರಂದು ನೆಟ್‌ಫ್ಲಿಕ್ಸ್‌ಗೆ ಬರುತ್ತಿದೆ. ಈ ಸಿನಿಮಾ ದೊಡ್ಡ ನಿರೀಕ್ಷೆಗಳ ನಡುವೆ ಬಿಡುಗಡೆಯಾದರೂ, ನೆಗೆಟಿವ್ ವಿಮರ್ಶೆಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸಿತು. ಇದೇ ʻರೆಟ್ರೋʼ ಸಿನಿಮಾ ಎದುರು ತೆರೆಕಂಡ ʻಟೂರಿಸ್ಟ್ ಫ್ಯಾಮಿಲಿʼ ಬಾಕ್ಸ್ ಆಫೀಸ್‌ನಲ್ಲಿ ಮುನ್ನಡೆ ಸಾಧಿಸಿತು. ಈ ಹಿಂದಿನ ಸೂರ್ಯ ನಟನೆಯ ʻಕಂಗುವಾʼ ಸಿನಿಮಾ ಸಹ ಸೋಲನುಭವಿಸಿತ್ತು.