ʻಹಿಟ್‌ 3ʼ ಸ್ಕ್ವಿಡ್‌ ಗೇಮ್‌ನ ಪ್ರತಿರೂಪವೇ? ಹೇಗಿದೆ ನಾನಿಯ ಮೋಸ್ಟ್‌ ವೈಲೆಂಟ್‌ ಕ್ರೈಂ ಥ್ರಿಲ್ಲರ್‌ ಸಿನಿಮಾ? ಹಿಟ್‌ 3 ಟ್ವಿಟ್ಟರ್‌ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  ʻಹಿಟ್‌ 3ʼ ಸ್ಕ್ವಿಡ್‌ ಗೇಮ್‌ನ ಪ್ರತಿರೂಪವೇ? ಹೇಗಿದೆ ನಾನಿಯ ಮೋಸ್ಟ್‌ ವೈಲೆಂಟ್‌ ಕ್ರೈಂ ಥ್ರಿಲ್ಲರ್‌ ಸಿನಿಮಾ? ಹಿಟ್‌ 3 ಟ್ವಿಟ್ಟರ್‌ ವಿಮರ್ಶೆ

ʻಹಿಟ್‌ 3ʼ ಸ್ಕ್ವಿಡ್‌ ಗೇಮ್‌ನ ಪ್ರತಿರೂಪವೇ? ಹೇಗಿದೆ ನಾನಿಯ ಮೋಸ್ಟ್‌ ವೈಲೆಂಟ್‌ ಕ್ರೈಂ ಥ್ರಿಲ್ಲರ್‌ ಸಿನಿಮಾ? ಹಿಟ್‌ 3 ಟ್ವಿಟ್ಟರ್‌ ವಿಮರ್ಶೆ

ನಾನಿ ಅವರ ವೃತ್ತಿಜೀವನದಲ್ಲೇ ಅತ್ಯಂತ ಹಿಂಸಾತ್ಮಕ ಚಿತ್ರ ಎಂಬ ವಿಶೇಷಣದೊಂದಿಗೆ ತೆರೆಕಂಡಿದೆ ಹಿಟ್ 3 ಸಿನಿಮಾ. ಈ ಚಿತ್ರ ಇಂದು (ಮೇ 1) ಪ್ರೇಕ್ಷಕರ ಮುಂದೆ ಬಂದಿದೆ. ವಿದೇಶಗಳಲ್ಲಿ ಪ್ರೀಮಿಯರ್‌ ಕಂಡಿರುವ ಈ ಸಿನಿಮಾದ ಟ್ವಿಟ್ಟರ್‌ ವಿಮರ್ಶೆ ಇಲ್ಲಿದೆ.

ʻಹಿಟ್‌ 3ʼ ಸ್ಕ್ವಿಡ್‌ ಗೇಮ್‌ನ ಪ್ರತಿರೂಪವೇ? ಹೇಗಿದೆ ನಾನಿಯ ಮೋಸ್ಟ್‌ ವೈಲೆಂಟ್‌ ಕ್ರೈಂ ಥ್ರಿಲ್ಲರ್‌ ಸಿನಿಮಾ? ಹಿಟ್‌ 3 ಟ್ವಿಟ್ಟರ್‌ ವಿಮರ್ಶೆ
ʻಹಿಟ್‌ 3ʼ ಸ್ಕ್ವಿಡ್‌ ಗೇಮ್‌ನ ಪ್ರತಿರೂಪವೇ? ಹೇಗಿದೆ ನಾನಿಯ ಮೋಸ್ಟ್‌ ವೈಲೆಂಟ್‌ ಕ್ರೈಂ ಥ್ರಿಲ್ಲರ್‌ ಸಿನಿಮಾ? ಹಿಟ್‌ 3 ಟ್ವಿಟ್ಟರ್‌ ವಿಮರ್ಶೆ

ಟಾಲಿವುಡ್‌ ನಟ, ನ್ಯಾಚುರಲ್‌ ಸ್ಟಾರ್‌ ನಾನಿ ನಟನೆಯ ʻಹಿಟ್‌ 3ʼ ಸಿನಿಮಾ ಇಂದು (ಮೇ 1) ಬಿಡುಗಡೆ ಆಗಿದೆ. ಹಿಟ್‌ ಫ್ರಾಂಚೈಸಿಯ ಮೂರನೇ ಸಿನಿಮಾ ಇದಾಗಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಹಿಟ್‌ 3 ಸಿನಿಮಾ, ನಾನಿ ವೃತ್ತಿ ಬದುಕಿನ ಅತ್ಯಂತ ಹಿಂಸಾತ್ಮಕ ಚಿತ್ರ ಎಂಬ ವಿಶೇಷಣದ ಜೊತೆಗೆ ತೆರೆಗೆ ಬಂದಿದೆ. ಹಿಟ್‌ 3 ಸಿನಿಮಾದಲ್ಲಿ ಅರ್ಜುನ್‌ ಸರ್ಕಾರ್‌ ಎಂಬ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಾನಿ ಅಬ್ಬರಿಸಿದ್ದಾರೆ. ಹಿಟ್ ಸಿನಿಮಾದ ಮೊದಲ ಭಾಗದಲ್ಲಿ ವಿಶ್ವಕ್ ಸೇನ್ ನಾಯಕನಾಗಿ ನಟಿಸಿದ್ದರೆ, ಎರಡನೇ ಭಾಗದಲ್ಲಿ ಅಡವಿ ಶೇಷ್ ನಾಯಕನಾಗಿದ್ದರು. ಇದೀಗ ಮೂರನೇ ಕೇಸ್‌ನಲ್ಲಿ ನಾನಿ ಎಂಟ್ರಿಕೊಟ್ಟಿದ್ದಾರೆ. ಶೈಲೇಶ್‌ ಕೊಲನು ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ.

ಗುರುವಾರ ಬಿಡುಗಡೆಯಾಗಿರುವ ಹಿಟ್‌ 3 ಸಿನಿಮಾ, ಈಗಾಗಲೇ ತೆಲುಗು ರಾಜ್ಯಗಳಷ್ಟೇ ಅಲ್ಲದೆ, ಕರ್ನಾಟಕ ಮತ್ತು ವಿದೇಶಗಳಲ್ಲಿಯೂ ಪ್ರೀಮಿಯರ್ ಶೋ ಪ್ರದರ್ಶನ ಕಂಡಿದೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಈ ಸಿನಿಮಾದ ಬಗ್ಗೆ ಚಿತ್ರ ವೀಕ್ಷಿಸಿದವರು ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಹಿಟ್‌ 3 ಸಿನಿಮಾ ಹೇಗಿದೆ? ಮೂರನೇ ಕೇಸ್‌ನ ಹೈಲೈಟ್ಸ್‌ ಏನು? ಈ ವರೆಗೂ ಲವರ್‌ ಬಾಯ್‌ ಅವತಾರದಲ್ಲಿ ಕಂಡಿದ್ದ ನಾನಿ, ಇದೀಗ ರಕ್ತಸಿಕ್ತ ಲುಕ್‌ನಲ್ಲಿ ಮತ್ತೆ ಕಮಾಲ್‌ ಮಾಡಿದ್ರಾ? ಇಲ್ಲಿದೆ ಟ್ವಿಟ್ಟರ್‌ ರಿವ್ಯೂವ್.‌

ಈಗಾಗಲೇ ವಿದೇಶದಲ್ಲಿ ಹಿಟ್ 3 ಸಿನಿಮಾ‌ ಪ್ರದರ್ಶನ ಕಂಡಿದೆ. ಈ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು, ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆ ಕಾಮೆಂಟ್‌ಗಳ ಮೂಲಕ ಸಿನಿಮಾ ವಿಮರ್ಶೆ ಮಾಡುತ್ತಿದ್ದಾರೆ. ಪರದೆಯ ಮೇಲೆ ರಕ್ತದ ಹೊಳೆಯೇ ಹರಿಯಲಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಮಕ್ಕಳು ಮತ್ತು ಕುಟುಂಬದೊಂದಿಗೆ ಈ ಚಿತ್ರವನ್ನು ನೋಡುವುದು ತುಸು ಕಷ್ಟ ಎಂದಿದ್ದಾರೆ. ಚಿತ್ರದಲ್ಲಿನ ರಕ್ತಪಾತ ಮತ್ತು ಹಿಂಸೆಯನ್ನು ಸಹಿಸಿಕೊಳ್ಳುವುದು ಕಷ್ಟ ಕಷ್ಟ ಎಂದೂ ತಮ್ಮ ವಿಮರ್ಶೆ ನೀಡಿದ್ದಾರೆ.

ಇಡೀ ಸಿನಿಮಾದ ಹೈಲೈಟ್ಸ್‌. ಚಿತ್ರದ ಆಕ್ಷನ್‌ ದೃಶ್ಯಗಳು. ಚಿತ್ರದ ಪ್ರತಿ ಸಾಹಸ ದೃಶ್ಯ ಕ್ಲೈಮ್ಯಾಕ್ಸ್‌ನಂತೆ ಕಾಣಿಸುತ್ತದೆ ಎಂದು ಸಿನಿಮಾ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಚಿತ್ರ ಊಹೆಗೆ ನಿಲುಕುವ ಕಥಾನಕ ಎಂದರೆ, ಮೊದಲಾರ್ಧಕ್ಕೆ ಇನ್ನೊಂದಿಷ್ಟು ವೇಗ ಬೇಕಿತ್ತು ಎಂದಿದ್ದಾರೆ. ಎರಡನೇ ಭಾಗದ ರೋಚಕತೆ ನೋಡುಗನನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಎಂದೂ ಚಿತ್ರದ ಬಗ್ಗೆ ಪಾಸಿಟಿವ್‌ ಪ್ರತಿಕ್ರಿಯೆಗಳು ಸಂದಾಯವಾಗ್ತಿದೆ.

ಸ್ಕ್ವಿಡ್ ಗೇಮ್‌ನಿಂದ ಸ್ಫೂರ್ತಿ ಪಡೆದು…

ಹಿಟ್ 3ರ ಎರಡನೇ ಅರ್ಧದಲ್ಲಿ ಬರುವ ಹಲವು ದೃಶ್ಯಗಳು ಕೊರಿಯನ್ ಸರಣಿ ಸ್ಕ್ವಿಡ್ ಗೇಮ್‌ನಿಂದ ಸ್ಫೂರ್ತಿ ಪಡೆದಂತೆ ಕಾಣುತ್ತವೆ ಎಂದು ಒಬ್ಬ ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ. ಟ್ವಿಸ್ಟ್‌ಗಳಿಗಿಂತ ಹೆಚ್ಚಾಗಿ ಕೌತುಕಭರಿತ ಸನ್ನಿವೇಷಗಳು ಮತ್ತು ನಾನಿಯ ಪ್ರಭಾವಳಿಯನ್ನೇ ಗಮನದಲ್ಲಿಟ್ಟುಕೊಂಡು ನಿರ್ದೇಶಕ ಶೈಲೇಶ್‌ ಕೊಲನು ಈ ಸಿನಿಮಾ ಮಾಡಿದಂತಿದೆ ಎಂದಿದ್ದಾರೆ ನೆಟ್ಟಿಗರು. ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ಗೂಸ್‌ಬಂಪ್ಸ್ ಸೃಷ್ಟಿಸುತ್ತವೆ. ಚಿತ್ರದಲ್ಲಿನ ಗೆಸ್ಟ್‌ ರೋಲ್‌ಗಳು ನೋಡುಗನ್ನು ಅಚ್ಚರಿಗೆ ದೂಡುತ್ತವೆ ಎಂಬ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗುತ್ತಿವೆ.

ಅರ್ಜುನ್ ಸರ್ಕಾರ್ ಪಾತ್ರದಲ್ಲಿ ನಾನಿ ಅದ್ಭುತವಾಗಿ ಕಂಡರೆ, ಆಕ್ಷನ್ ಪಾತ್ರದಲ್ಲಿ ಒಂದು ಕೈ ಮೇಲೆ ಎನಿಸಿದ್ದಾರೆ. ನಾನಿ ಮತ್ತು ಶ್ರೀನಿಧಿ ಶೆಟ್ಟಿ ಅವರ ಕೆಮಿಸ್ಟ್ರಿ ವರ್ಕೌಟ್‌ ಆಗಿದೆ. ಸಿನಿಮಾ ಮೇಕಿಂಗ್‌ ಗುಣಮಟ್ಟ ಚಿತ್ರದ ಪ್ಲಸ್‌ ಪಾಯಿಂಟ್.‌ ಆದರೆ, ಸಂಗೀತದ ವಿಚಾರದಲ್ಲಿ ಸಿನಿಮಾ ಕೊಂಚ ಹಿಂದಿದೆ ಎಂದೂ ನೆಟ್ಟಿಗರು ಗಮನಿಸಿದ್ದಾರೆ. ಒಟ್ಟಾರೆ, ಪಾಸಿಟಿವ್‌ ಪ್ರತಿಕ್ರಿಯೆಗಳೇ ನಾನಿ ಚಿತ್ರಕ್ಕೆ ಸಂದಾಯವಾಗ್ತಿವೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.