ಮುಫಾಸಾ: ದಿ ಲಯನ್ ಕಿಂಗ್‌ - ಗಲ್ಲಾಪೆಟ್ಟಿಗೆಯಲ್ಲಿ ಘರ್ಜಿಸುತ್ತಿರುವ ಸಿಂಬಾ, ಒಂದು ವಾರದ ಕಲೆಕ್ಷನ್ ಎಷ್ಟು?
ಕನ್ನಡ ಸುದ್ದಿ  /  ಮನರಂಜನೆ  /  ಮುಫಾಸಾ: ದಿ ಲಯನ್ ಕಿಂಗ್‌ - ಗಲ್ಲಾಪೆಟ್ಟಿಗೆಯಲ್ಲಿ ಘರ್ಜಿಸುತ್ತಿರುವ ಸಿಂಬಾ, ಒಂದು ವಾರದ ಕಲೆಕ್ಷನ್ ಎಷ್ಟು?

ಮುಫಾಸಾ: ದಿ ಲಯನ್ ಕಿಂಗ್‌ - ಗಲ್ಲಾಪೆಟ್ಟಿಗೆಯಲ್ಲಿ ಘರ್ಜಿಸುತ್ತಿರುವ ಸಿಂಬಾ, ಒಂದು ವಾರದ ಕಲೆಕ್ಷನ್ ಎಷ್ಟು?

ಮುಫಾಸಾ: ದಿ ಲಯನ್ ಕಿಂಗ್ ಪ್ರಪಂಚದಾದ್ಯಂತ ಬಿಡುಗಡೆಯಾಗಿದ್ದು ಸಾಕಷ್ಟು ಜನರು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಡುಗಡೆಯಾಗಿ ಒಂದು ವಾರ ಕಳೆದರು ಬಾಕ್ಸ್‌ ಆಫೀಸ್‌ನಲ್ಲಿ ಸಿಂಬಾ ಘರ್ಜಿಸುತ್ತಲೇ ಇದ್ದಾನೆ.

ಗಲ್ಲಾಪೆಟ್ಟಿಗೆಯಲ್ಲಿ ಘರ್ಜಿಸುತ್ತಿರುವ ಸಿಂಬಾ
ಗಲ್ಲಾಪೆಟ್ಟಿಗೆಯಲ್ಲಿ ಘರ್ಜಿಸುತ್ತಿರುವ ಸಿಂಬಾ

ಮುಫಾಸಾ: ದಿ ಲಯನ್ ಕಿಂಗ್ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳಲು ಸಿನಿ ಪ್ರಿಯರು ಈ ಸಿನಿಮಾವನ್ನು ನೋಡಲೇಬೇಕು ಎಂದು ಕಾತರದಿಂದ ಕಾಯುತ್ತಿದ್ದರು. ಇನ್ನು ಥಿಯೇಟರ್‌ನಲ್ಲಿ ನೋಡಿದರೂ ಮತ್ತೊಮ್ಮೆ ನಾವು ಮನೆಯಲ್ಲಿ ನೋಡಬೇಕು ಎಂಬ ಆಸೆ ಹುಟ್ಟಿಸುವಂತ ಸಿನಿಮಾ ಇದು. ಇದರ ಹಿಂದಿನ ಸಿರೀಸ್‌ಗಳನ್ನು ನೋಡಿದವರೆಲ್ಲರೂ ಮುಂದಿನ ಭಾಗವನ್ನು ನೋಡಲು ಕಾತರದಿಂದ ಕಾದಿದ್ದರು. ಇನ್ನು ಈಗಾಗಲೇ ವಿಕ್ಷಕರು ಒಟಿಟಿ ಬಿಡುಗಡೆ ಯಾವಾಗ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಕಲೆಕ್ಷನ್ ವಿಚಾರದಲ್ಲೂ ಈ ಸಿನಿಮಾ ಮುಂದಡಿ ಇಟ್ಟಿದೆ.

ಬಾಕ್ಸ್‌ ಆಫೀಸ್‌ ಕಲೆಕ್ಷನ್

ಬಾಕ್ಸ್‌ ಆಫೀಸ್‌ ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾ ಉತ್ತಮ ಬೆಳವಣಿಗೆ ತೋರಿಸಿದೆ. ಮುಫಾಸಾ: ದಿ ಲಯನ್ ಕಿಂಗ್ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಆದರೂ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿಲ್ಲ. ಭಾರತೀಯ ಗಲ್ಲಾಪೆಟ್ಟಿಯಲ್ಲಿ ಇನ್ನೂ ಸಿಂಬಾ ಘರ್ಜಿಸುತ್ತಲೇ ಇದ್ದಾನೆ. ಇದುವರೆಗೆ ಒಟ್ಟು 80.85 ಕೋಟಿ ರೂ ಗಳಿಸಿದೆ ಎಂದು ಅಂದಾಜಿಸಲಾಗಿದೆ. 2019ರಲ್ಲಿ ಬಿಡುಗಡೆಯಾದ ಇದರದೇ ಆವೃತ್ತಿಯನ್ನೂ ಸಹ ಬೀಟ್‌ ಮಾಡುವ ಲಕ್ಷಣ ಕಾಣಿಸುತ್ತಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಘರ್ಜಿಸಿದ ಸಿಂಬಾ

ಪ್ರತಿದಿವೂ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಆಗುತ್ತಲೇ ಇದೆ. ಇಂಗ್ಲೀಷ್‌ ಆವೃತ್ತಿಯಲ್ಲಿ ಹೆಚ್ಚಿನ ಹಣ ಸಂದಾಯವಾಗಿದೆ. 29.15 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಹಿಂದಿ ಆವೃತ್ತಿಯು 27.1 ಕೋಟಿ ರೂ. ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಗಳು ಕ್ರಮವಾಗಿ 12.65 ಕೋಟಿ ಮತ್ತು 11.95 ಕೋಟಿ ರೂ. ಸಂಗ್ರಹಿಸಿದೆ. ಈ ಚಿತ್ರವು ಬಾಲಿವುಡ್ ಸಿನಿಮಾ ಬಿಡುಗಡೆಗೂ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. ಇದು ವರುಣ್ ಧವನ್ ಅವರ ಬೇಬಿ ಜಾನ್ ಕಲೆಕ್ಷನ್‌ ಅನ್ನು ಮೀರಿಸಿದೆ.

ಮುಫಾಸಾ: ದಿ ಲಯನ್ ಕಿಂಗ್ ಹೇಗಿದೆ?

ಸಿನಿಮಾ ಆರಂಭಿಕ ಹಂತಗಳಲ್ಲಿ ಉತ್ತಮವಾಗಿ ಕಾಣುತ್ತದೆ. ಎರಡು ಮರಿಗಳ ನಡುವಿನ ಸ್ನೇಹವನ್ನು ಹೃತ್ಪೂರ್ವಕ ಕ್ಷಣಗಳು ಚೆನ್ನಾಗಿ ತೋರಿಸಲಾಗಿದೆ. ವಿಶೇಷವಾಗಿ ಎಳೆಯ ಸಿಂಹಗಳ ತಮಾಷೆಯ ತುಂಟಾಟದ ಸಮಯದ ಕ್ಲೋಸ್-ಅಪ್ ಹಾಗೂ ತುಂಬಾ ಕೂಲ್ ಆಗಿ ಕಾಣುವಂತೆ ಮಾಡಲಾಗಿದೆ. ಆದರೆ ಕಥೆಯು ಮುಂದುವರೆದಂತೆ ಇಷ್ಟವಾಗುವುದಿಲ್ಲ ಎಂದು ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹಿಂದಿ ಆವೃತ್ತಿಗೆ ಧ್ವನಿಯಾದವರು

ಮುಫಾಸಾ - ಶಾರುಖ್ ಖಾನ್; ಸಿಂಬಾ - ಆರ್ಯನ್ ಖಾನ್; ಯುವ ಮುಫಾಸಾ - ಅಬ್ರಾಮ್ ಖಾನ್; ಟಿಮೊನ್ - ಶ್ರೇಯಸ್ ತಲ್ಪಾಡೆ; ಪುಂಬಾ - ಸಂಜಯ್ ಮಿಶ್ರಾ; ಟಕಾ - ಮೀಯಾಂಗ್ ಚಾಂಗ್; ರಫಿಕಿ - ಮಕರಂದ್ ದೇಶಪಾಂಡೆ

ಒಟಿಟಿಗೆ ಯಾವಾಗ ಬರಲಿದೆ?

ಇಂಡಿಯಾ ಟೈಮ್ಸ್ ಪ್ರಕಾರ ಅನಿಮೇಟೆಡ್ ಮೂವಿ ಮಾರ್ಚ್ 2025ರಲ್ಲಿ ಒಟಿಟಿಗೆ ಬರಬಹುದು ಎಂದು ಊಹಿಸಲಾಗಿದೆ. ಥಿಯೇಟರ್ ಮತ್ತು ಒಟಿಟಿಯ ನಡುವೆ ಮೂರು ತಿಂಗಳ ಅಂತರವನ್ನು ಕಾಯ್ದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

Whats_app_banner