ಕೆಮಿಸ್ಟ್ರಿ ಟೆಸ್ಟಿಂಗ್ ಹೆಸರಲ್ಲಿ ದಿನಕ್ಕೆ 10 ಪುರುಷರಿಗೆ ಕಿಸ್ಸಿಂಗ್; ಥೂ, ಸುಮ್ನೆ ಇಂಟ್ರೆಸ್ಟ್ ತೋರಿಸಿದೆ ಅಂದ್ರು ಆಸ್ಕರ್ ವಿಜೇತೆ
Anne Hathaway: ಹಾಲಿವುಡ್‌ನ ಆ ದಿನಗಳಲ್ಲಿ ಅಡಿಷನ್ ಸಮಯದಲ್ಲಿ ಕೆಮಿಸ್ಟ್ರಿ ಟೆಸ್ಟಿಂಗ್ ಹೆಸರಿನ ವಿಲಕ್ಷಣ ಅಭ್ಯಾಸಗಳು ಇದ್ದವು. ನಾನೂ ದಿನದಲ್ಲಿ ಹತ್ತು ಜನರಿಗೆ ಚುಂಬಿಸುವಂತಹ ಸಂದರ್ಭದಲ್ಲಿ ಉತ್ಸುಕಳಾದಂತೆ ನಟಿಸಿದ್ದೆ ಎಂದು ಆಸ್ಕರ್ ವಿಜೇತೆ ನಟಿ ಅನ್ನಿ ಹ್ಯಾಥ್ವೇ ಹೇಳಿದ್ದಾರೆ.

ಬೆಂಗಳೂರು: ಅನ್ನಿ ಹ್ಯಾಥ್ವೇ ಹಾಲಿವುಡ್‌ನ ಜನಪ್ರಿಯ ನಟಿ. ಅಮೆರಿಕದ ಈ ನಟಿಯು ಅಕಾಡೆಮಿ ಅವಾರ್ಡ್, ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್, ಗೋಲ್ಡನ್ ಗ್ಲೋಬ್ ಅವಾರ್ಡ್, ಪ್ರೈಮ್‌ಟೈಮ್ ಎಮ್ಮಿ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2009ರಲ್ಲಿ ಫೋರ್ಬ್ಸ್ ನಿಯತಕಾಲಿಕೆಯ ಅಗ್ರ 100ರ ಪಟ್ಟಿಗೆ ಆಯ್ಕೆಯಾಗಿದ್ದರು. 2015ರಲ್ಲಿ ಇವರು ಜಗತ್ತಿನ ಅತ್ಯಧಿಕ ವೇತನ ಪಡೆಯುವ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಗೆಟ್ ರಿಯಲ್ ಟೆಲಿವಿಷನ್ ಸೀರಿಸ್, ದಿ ಪ್ರಿನ್ಸೆಸ್ ಡೈರೀಸ್, ಎಲಾ ಎನಚಾಂಟೆಡ್, ಬ್ರೋಕ್‌ಬ್ಯಾಕ್ ಮೌಂಟೇನ್, ದಿ ಡೆವಿಲ್ ವಿಯರ್ಸ್ ಪ್ರಡಾ, ರಚೆಲ್ ಗೆಟ್ಟಿಂಗ್ ಮ್ಯಾರೀಡ್ ಸೇರಿದಂತೆ ಹಲವು ಸಿನಿಮಾ, ಸೀರಿಸ್‌ಗಳ ಮೂಲಕ ಹೆಸರುವಾಸಿಯಾಗಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅನ್ನಿ ಹ್ಯಾಥ್ವೇ ಅವರು 2000ನೇ ಇಸವಿಯಲ್ಲಿ ಪ್ರಚಲಿತದಲ್ಲಿದ್ದ ವಿಲಕ್ಷಣ ಅಡಿಷನ್ ಅಭ್ಯಾಸಗಳ ಕುರಿತು ಮಾತನಾಡಿದ್ದಾರೆ. ಆ ಸಮಯದಲ್ಲಿ ನಟಿಯರು ಆಯ್ಕೆಯಾಗಲು ವಿಲಕ್ಷಣ ಅಡಿಷನ್‌ಗಳನ್ನು ಮಾಡಲಾಗುತ್ತಿತ್ತು ಎಂದಿದ್ದಾರೆ. ಒಂದೇ ದಿನ ಹತ್ತು ಪುರುಷರಿಗೆ ಕಿಸ್ ಮಾಡುವುದನ್ನು ಚಿತ್ರತಂಡ ನಿರೀಕ್ಷಿಸಿತ್ತು. ಈ ರೀತಿ ಮಾಡುವುದಕ್ಕೆ "ಕೆಮಿಸ್ಟ್ರಿ ಟೆಸ್ಟಿಂಗ್" ಎಂದು ಕರೆಯಲಾಗುತ್ತಿತ್ತು ಎಂದು ದಿ ಡೆವಿಲ್ ವಿಯರ್ಸ್ ಪ್ರಡಾ ನಟಿ ಬಹಿರಂಗಪಡಿಸಿದ್ದಾರೆ. ಇದು ವಿಚಿತ್ರವಾದ ಭಾವನೆಯಾಗಿತ್ತು. ಇದು ಅಗ್ನಿಪರೀಕ್ಷೆಯೂ ಹೌದು. ಉತ್ಸಾಹ ಇಲ್ಲದೆ ಇದ್ದರೂ ಇಂತಹದ್ದಕ್ಕೆ ಉತ್ಸಾಹಗೊಂಡಂತೆ ನಟಿಸಿದ್ದರಂತೆ.
ಅನ್ನಿ ಹ್ಯಾಥ್‌ವೇಗೆ ಕೆಮಿಸ್ಟ್ರಿ ಟೆಸ್ಟ್ ಅನುಭವ
2000ನೇ ಇಸವಿಗೂ ಮುನ್ನ ನನ್ನ ಬದುಕಿನಲ್ಲೂ ವಿಲಕ್ಷಣ ಕೆಮಿಸ್ಟ್ರಿ ಟೆಸ್ಟ್ ಅನುಭವವಾಯಿತು. ನಟಿಯರೊಬ್ಬರು ನಟರ ಬಳಿ ಔಟ್‌ಗೆ ಹೋಗಲು ಕೇಳುವುದು ಸಾಮಾನ್ಯ ಎಂದು ಪರಿಗಣಿಸಲಾಗುತ್ತಿತ್ತು. ಇದಕ್ಕೆ ಕೆಮಿಸ್ಟ್ರಿ ಟೆಸ್ಟ್ ಎನ್ನಲಾಗುತ್ತಿತ್ತು. ಆದರೆ, ಇದು ಅತ್ಯಂತ ಕೆಟ್ಟ ಮಾರ್ಗವಾಗಿದೆ ಎಂದು ಅನ್ನಿ ಹ್ಯಾಥ್ವೇ ಹೇಳಿದ್ದಾರೆ.
ಅನ್ನಿ ಹ್ಯಾಥ್ವೇ ಅವರು ಸದ್ಯ ದಿ ಐಡಿಯಾ ಆಫ್ ಯು ಎಂಬ ಹೊಸ ರೋಮಾನ್ಸ್ ಮೂವಿಯಲ್ಲಿ ನಟಿಸುತ್ತಿದ್ದಾರೆ. ಹಿರಿಯ ಮಹಿಳೆ ಯುವಕನೊಬ್ಬನ ಜತೆ ಪ್ರೀತಿಗೆ ಬೀಳುವ ಕಥೆ ಇದಾಗಿದೆ. ಯುವ ನಟನಾಗಿ ನಿಕೋಲಸ್ ಗ್ಯಾಲಿಟೆಜೈನ್ ನಟಿಸಿದ್ದಾರೆ.
ದಿನದಲ್ಲಿ ಹತ್ತು ಪುರುಷರಿಗೆ ಚುಂಬಿಸುವ ವಿಲಕ್ಷಣ ವಿನಂತಿ
ನನಗೆ ಹೇಳಿದ್ರು, ಇಂದು ಹತ್ತು ಪುರುಷರು ಬರುತ್ತಾರೆ. ನೀನು ನಟಿಸಬೇಕು. ಅಷ್ಟು ಜನರೊಟ್ಟಿಗೆ ಕಿಸ್ ಮಾಡಲು ನೀನು ಉತ್ಸುಕಳಾಗಿರುವೆ ಅಲ್ವ? ಎಂದು ನನ್ನಲ್ಲಿ ಕೇಳಿದ್ರು. ನನ್ನ ಮನಸ್ಸು ಬೇರೆ ರೀತಿ ಯೋಚಿಸುತ್ತಿತ್ತು. "ನನ್ನಲ್ಲಿ ಏನಾದರೂ ತಪ್ಪಿದೆಯೇ? ನನಗೆ ನಿಜಕ್ಕೂ ಇದು ಉತ್ಸುಕವಾಗುವಂತಹ ವಿಷಯವಲ್ಲ" ಎಂದು ಆಸ್ಕರ್ ವಿಜೇತೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹಾಲಿವುಡ್‌ನ ಆ ಕಾಲದ ಅಭ್ಯಾಸಗಳ ಕುರಿತು ಅನ್ನಿ ಹ್ಯಾಥ್‌ವೇ ಮಾತನಾಡಿದ್ದಾರೆ. ಇದು ಕಷ್ಟವಾದ ಒತ್ತಡವಾಗಿತ್ತು. ಆದರೆ, ಎಲ್ಲರ ಮುಂದೆ ನಾನು ಉತ್ಸುಕಳಾಗಿದ್ದೇನೆ ಎಂದು ತೋರಿಸಿಕೊಳ್ಳಬೇಕಿತ್ತು. ನಾನು ಹಾಗೆಯೇ ನಟಿಸಿದೆ. ಇದು ಪವರ್ ಪ್ಲೇ ಆಗಿರಲಿಲ್ಲ. ಯಾರೂ ನನ್ನನ್ನು ನೋಯಿಸಲು ಅಥವಾ ಭೀಕರವಾಗಿ ಬಳಸಿಕೊಳ್ಳಲು, ನೋಯಿಸಲು ಪ್ರಯತ್ನಿಸಲಿಲ್ಲ. ಆ ಸಮಯ ಹಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ದಿ ಐಡಿಯಾ ಆಫ್ ಯು ಎಲ್ಲಿ ನೋಡಬಹುದು?
ದಿ ಐಡಿಯಾ ಆಫ್ ಯು ಎನ್ನುವುದು ರೊಮ್ಯಾಂಟಿಕ್ ಕಾಮಿಡಿ. ಹಿರಿಯ ಮಹಿಳೆಯೊಬ್ಬರು ತನ್ನ ಹರೆಯದ ಮಗಳ ಪ್ರೀತಿಯ ಪಾಪ್‌ಸ್ಟಾರ್ (ನಿಕೋಲಸ್)ನ ಮೇಲೆ ಮೋಹಗೊಳ್ಳುವ ಕಥೆಯನ್ನು ಇದು ಹೊಂದಿದೆ. ಮೇ 2ರಂದು ಅಮೆಜಾನ್‌ಪೈಮ್ ವಿಡಿಯೋದಲ್ಲಿ ಇದು ರಿಲೀಸ್ ಆಗಲಿದೆ.
