Godzilla x Kong: ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಗಾಡ್ಜಿಲ್ಲಾ ಘರ್ಜನೆ; ಕನ್ನಡ ಮರೆತು ಬಹುಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  Godzilla X Kong: ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಗಾಡ್ಜಿಲ್ಲಾ ಘರ್ಜನೆ; ಕನ್ನಡ ಮರೆತು ಬಹುಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ

Godzilla x Kong: ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಗಾಡ್ಜಿಲ್ಲಾ ಘರ್ಜನೆ; ಕನ್ನಡ ಮರೆತು ಬಹುಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ

Godzilla x Kong: ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಮಾನೆಸ್ಟರ್‌ವರ್ಸ್‌ ಫ್ರಾಂಚೈಸ್‌ನ ಐದನೇ ಸಿನಿಮಾ "ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌- ದಿ ನ್ಯೂ ಎಂಪೈರ್‌"ವು ಅತ್ಯುತ್ತಮವಾಗಿ ಗಳಿಕೆ ಮಾಡುತ್ತಿದೆ. ಕ್ರ್ಯೂ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ಗಿಂತಲೂ ಗಾಡ್ಜಿಲ್ಲಾ ಗಳಿಕೆ ಹೆಚ್ಚಿದೆ. ಈ ಸಿನಿಮಾದ ಕನ್ನಡ ಆವೃತ್ತಿ ಬಿಡುಗಡೆಯಾಗಿಲ್ಲ.

ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌ ಬಾಕ್ಸ್‌ ಆಫೀಸ್‌ ವರದಿ
ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌ ಬಾಕ್ಸ್‌ ಆಫೀಸ್‌ ವರದಿ

ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌- ದಿ ನ್ಯೂ ಎಂಪೈರ್‌ ಘರ್ಜಿಸುತ್ತಿದೆ. ಮಾನ್‌ಸ್ಟರ್‌ವರ್ಸ್ ಫ್ರಾಂಚೈಸ್‌ನ ಐದನೇ ಚಿತ್ರವು ಕ್ರ್ಯೂನ ಬಾಕ್ಸ್‌ ಆಫೀಸ್‌ ಗಳಿಕೆಯನ್ನು ಹಿಂದಿಕ್ಕಿದೆ. ಕ್ರ್ಯೂ ಸಿನಿಮಾದಲ್ಲಿ ಕರೀನಾ ಕಪೂರ್, ಟಬು ಮತ್ತು ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಮಾಡಿರುವ ಅಪ್‌ಡೇಟ್‌ ಪ್ರಕಾರ ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌- ದಿ ನ್ಯೂ ಎಂಪೈರ್‌ ಸಿನಿಮಾವು ಭಾರತದಲ್ಲಿ ಕಳೆದ ಮೂರು ದಿನಗಳಲ್ಲಿ 30 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ.

ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌- ದಿ ನ್ಯೂ ಎಂಪೈರ್‌ ಬಾಕ್ಸ್‌ ಆಫೀಸ್‌ ವರದಿ

ತರುಣ್‌ ಆದರ್ಶ್‌ ಅವರು ಗಾಡ್ಜಿಲಾ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿಯನ್ನು ನೀಡಿದ್ದಾರೆ. "ಮೊದಲ ವಾರದಲ್ಲಿ ಗಾಡ್ಜಿಲಾ ಎಕ್ಸ್‌ ಕಾಂಗ್‌ ಸಿನಿಮಾ ಭಾರತದಲ್ಲಿ ಉತ್ತಮವಾದ ಗಳಿಕೆ ಮಾಡಿದೆ. ಮೊದಲ ದಿನ ಶುಕ್ರವಾರ 12.60 ಕೋಟಿ ರೂಪಾಯಿ, ಶನಿವಾರ 11.85 ಕೋಟಿ ರೂಪಾಯಿ, ಭಾನುವಾರ 13.15 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಗಾಡ್ಜಿಲಾ ಮೂರು ದಿನದಲ್ಲಿ 37.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕನ್ನಡದಲ್ಲಿ ಈ ಸಿನಿಮಾ ಬಿಡುಗಡೆಯಾಗಿಲ್ಲ.

ಕನ್ನಡ ಮರೆತ ಗಾಡ್ಜಿಲ್ಲಾ

ಭಾರತದಲ್ಲಿ ಗಾಡ್ಜಿಲಾ ಸಿನಿಮಾವು 2865 ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹಿಂದಿ, ಇಂಗ್ಲಿಷ್‌, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಗಾಡ್ಜಿಲ್ಲಾದಂತಹ ಹಾಲಿವುಡ್‌ ಸಿನಿಮಾಗಳು ಬೆಂಗಳೂರಿನಲ್ಲಿಯೇ ಬೃಹತ್‌ ಸಂಖ್ಯೆಯ ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಆದರೆ, ಕನ್ನಡ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಿಲ್ಲ. ಮಲಯಾಳಂನಲ್ಲೂ ಆಗಿಲ್ಲ. ಇದೇ ರೀತಿ ಒಟಿಟಿಗಳಲ್ಲಿಯೂ ಹಲವು ಸಿನಿಮಾಗಳು ಕನ್ನಡ ಹೊರತುಪಡಿಸಿ ಭಾರತದ ಇತರೆ ಭಾಷೆಗಳಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಸದ್ಯದ ವಾಸ್ತವವಾಗಿದೆ.

ಕ್ರ್ಯೂ ಬಾಕ್ಸ್‌ ಆಫೀಸ್‌ ವರದಿ

ಭಾರತದ ಕಾಮಿಡಿ ಸಿನಿಮಾ ಕ್ರ್ಯೂ ಗಳಿಕೆ ತುಸು ಕಡಿಮೆಯಾಗಿದೆ. "2024ರ ಮೊದಲ ತ್ರೈ ಮಾಸಿಕದಲ್ಲಿ ದೊಡ್ಡಮಟ್ಟದಲ್ಲಿ ಕ್ರ್ಯೂ ಗಳಿಕೆ ಮಾಡಿದೆ. ಹಾಲಿವುಡ್‌ನ ಗಾಡ್ಜಿಲ್ಲಾ ಎಕ್ಸ್‌ ಕಾಂಗ್‌ ಜತೆ ಬಿಡುಗಡೆಯಾದ ಈ ಸಿನಿಮಾ ಮೊದಲ ಮೂರು ದಿನಗಳಲ್ಲಿ ಭರ್ಜರಿ ಗಳಿಕೆ ಮಾಡಿದೆ. ಆದರೆ, ಗಾಡ್ಜಿಲ್ಲಾಕ್ಕಿಂತ ಗಳಿಕೆ ತುಸು ಕಡಿಮೆಯಾಗಿದೆ. "ಶುಕ್ರವಾರ 10.28 ಕೋಟಿ ರೂಪಾಯು, ಶನಿವಾರ 10.87 ಕಿ.ಮೀ., ಭಾನುವಾರ 11.45 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಒಟ್ಟು ಭಾರತದಲ್ಲಿ ಮೂರು ದಿನಗಳಲ್ಲಿ 32.60 ಕೋಟಿ ರೂಪಾಯಿ ಗಳಿಕೆ ಮಾಡಿದೆ.

"ಅದ್ಭುತವಾದ ಟ್ರೇಲರ್‌ ನೆರವಿನಿಂದ ಕ್ರ್ಯೂ ಸಿನಿಮಾ ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದೆ. ಸಿನಿಮಾ ನೋಡಿರುವವರ ಮೆಚ್ಚುಗೆಯ ವಿಮರ್ಶೆಯ ನೆರವಿನಿಂದ ಶನಿವಾರ ಮತ್ತು ಭಾನುವಾರದ ಗಳಿಕೆ ಏರಿಕೆ ಕಂಡಿದೆ. ಆರ್ಟಿಕಲ್‌ 370 ಬಳಿಕ ಕ್ರ್ಯೂ ಸಿನಿಮಾವು ಉತ್ತಮವಾಗಿ ಗಳಿಕೆ ಮಾಡುತ್ತಿದೆ. ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೊರಕಿದ ಎರಡನೇ ಯಶಸ್ಸು ಇದಾಗಿದೆ" ಎಂದು ಬಾಕ್ಸ್‌ ಆಫೀಸ್‌ ವರದಿ ತರುಣ್‌ ಆದರ್ಶ್‌ ಟ್ವೀಟ್‌ ಮಾಡಿದ್ದಾರೆ.

Whats_app_banner