Hollywood News: ಓಪೆನ್ ಹೈಮರ್ ಸಿನಿಮಾ ಇಂಟಿಮೇಟ್‌ ದೃಶ್ಯದ ವೇಳೆ ಭಗವದ್ಗೀತೆ; ಸಿಬಿಎಫ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಾರತೀಯರು
ಕನ್ನಡ ಸುದ್ದಿ  /  ಮನರಂಜನೆ  /  Hollywood News: ಓಪೆನ್ ಹೈಮರ್ ಸಿನಿಮಾ ಇಂಟಿಮೇಟ್‌ ದೃಶ್ಯದ ವೇಳೆ ಭಗವದ್ಗೀತೆ; ಸಿಬಿಎಫ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಾರತೀಯರು

Hollywood News: ಓಪೆನ್ ಹೈಮರ್ ಸಿನಿಮಾ ಇಂಟಿಮೇಟ್‌ ದೃಶ್ಯದ ವೇಳೆ ಭಗವದ್ಗೀತೆ; ಸಿಬಿಎಫ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಾರತೀಯರು

‍'ಓಪೆನ್‌ ಹೈಮರ್‌', ಅಣುಬಾಂಬ್‌ ಸಂಶೋಧಿಸಿರುವ ಪರಮಾಣು ವಿಜ್ಞಾನಿಯ ಕಥೆಯನ್ನು ಒಳಗೊಂಡ ಸಿನಿಮಾ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಇಂಟಿಮೇಟ್‌ ಸೀನ್‌ಗೆ ಭಗವದ್ಗೀತೆ ಓದುವ ದೃಶ್ಯಕ್ಕೆ ಭಾರತೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಜುಲೈ 21 ರಂದು ತೆರೆ ಕಂಡ  'ಓಪೆನ್ ಹೈಮರ್' ಹಾಲಿವುಡ್‌ ಸಿನಿಮಾ
ಜುಲೈ 21 ರಂದು ತೆರೆ ಕಂಡ 'ಓಪೆನ್ ಹೈಮರ್' ಹಾಲಿವುಡ್‌ ಸಿನಿಮಾ

ಜುಲೈ 21 ರಂದು ತೆರೆ ಕಂಡ ಹಾಲಿವುಡ್‌ ಸಿನಿಮಾ 'ಓಪೆನ್ ಹೈಮರ್' ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಿನಿಮಾದ ಇಂಟಿಮೇಟ್‌ ದೃಶ್ಯದ ಸಮಯದಲ್ಲಿ ಭಗವದ್ಗೀತೆ ಓದುವ ದೃಶ್ಯಕ್ಕೆ ಭಾರತೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ದೃಶ್ಯಕ್ಕೆ ಭಗವದ್ಗೀತೆಯನ್ನು ಬಳಸಲು ಸಿಬಿಎಫ್‌ಸಿ ಹೇಗೆ ಅನುಮತಿ ನೀಡಿತು ಎಂಬ ಪ್ರಶ್ನೆ ಎದುರಾಗಿದೆ.

‍'ಓಪೆನ್‌ ಹೈಮರ್‌', ಅಣುಬಾಂಬ್‌ ಸಂಶೋಧಿಸಿರುವ ಪರಮಾಣು ವಿಜ್ಞಾನಿಯ ಕಥೆಯನ್ನು ಒಳಗೊಂಡ ಸಿನಿಮಾ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಇಂಟಿಮೇಟ್‌ ಸೀನ್‌ಗೆ ಭಗವದ್ಗೀತೆ ಓದುವ ದೃಶ್ಯಕ್ಕೆ ಭಾರತೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭಗವದ್ಗೀತೆ, ನಮಗೆ ಪವಿತ್ರ ಗ್ರಂಥ ಅಂತದ್ದರಲ್ಲಿ ಅದನ್ನು ಅಂತಹ ದೃಶ್ಯಗಳಿಗೆ ಬಳಕೆ ಮಾಡಬಾರದು. ಆದರೆ ಸಿನಿಮಾ ಸೆನ್ಸಾರ್‌ಗೆ ಹೋದಾಗ ಆ ದೃಶ್ಯವನ್ನು ಕಟ್‌ ಮಾಡದೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಸಿನಿಮಾಗೆ ಹೇಗೆ ಅನುಮೋದನೆ ನೀಡಿತು ಎಂದು ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್ ಸ್ಥಾಪಕ ಭಾರತ ಸರ್ಕಾರದ ಮಾಹಿತಿ ಅಧಿಕಾರಿ ಉದಯ್ ಮಹೂರ್ಕರ್ ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಸಿನಿಮಾ ಮೊದಲ ದಿನವೇ 14 ಕೋಟಿ ರೂಪಾಯಿ ಲಾಭ ಮಾಡಿದೆ. ಕೆಲವೆಡೆ ಟಿಕೆಟ್‌ ಬಹಳ ದುಬಾರಿ ಆಗಿದೆ. ಜನರು 2 ಸಾವಿರ ಕೊಟ್ಟು ಸಿನಿಮಾ ನೋಡುತ್ತಿದ್ದಾರೆ. ಇದೇ ವರ್ಷ ತೆರೆ ಕಂಡಿದ್ದ ಬೇರೆ ಯಾವ ಹಾಲಿವುಡ್‌ ಸಿನಿಮಾಗಳು ಕೂಡಾ ಇಷ್ಟು ದೊಡ್ಡ ಮಟ್ಟಿನ ಲಾಭ ಮಾಡಿಲ್ಲ. ಈ ಸಿನಿಮಾ ಇತರ ಎಲ್ಲಾ ಚಿತ್ರಗಳಿಗೂ ಹೆಚ್ಚು ಲಾಭ ಮಾಡಿ ದಾಖಲೆ ಬರೆದಿದೆ. 2ನೇ ಮಹಾಯುದ್ಧದ ಸಮಯದಲ್ಲಿ ಜಪಾನ್‌ ಮೇಲೆ ಅಮೆರಿಕ 2 ಬಾರಿ ಆಟಂ ಬಾಂಬ್‌ ಪ್ರಯೋಗಿಸಿದ್ದ ವಿವರಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಬೆಂಗಳೂರು, ದೆಹಲಿ, ಮುಂಬೈನಂಥ ನಗರಗಳಲ್ಲಿ ಈ ಚಿತ್ರದ ಕ್ರೇಜ್‌ ಜೋರಾಗಿದೆ.

ಸಿಂಕೋಪಿ ಇಂಕ್. ಹಾಗೂ ಅಟ್ಲಾಸ್ ಎಂಟರ್ಟೈನ್ಮೆಂಟ್ ಬ್ಯಾನರ್‌ ಅಡಿ ಕ್ರಿಸ್ಟೋಫರ್‌ ನೂಲನ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಿಲ್ಲಿಯನ್‌ ಮುರ್ಫಿ, ಎಮಿಲಿ ಬ್ಲಂಟ್‌, ಮಟ್‌ ಡಮೊನ್‌, ರಾಬರ್ಟ್‌ ಡೌನೆ, ಕೆನಿತ್‌ ಬನಘ್‌ ಹಾಗೂ ಇನ್ನಿತರರು ನಟಿಸಿದ್ದಾರೆ.

Whats_app_banner