Ambani wedding: ಅನಂತ್ ಅಂಬಾನಿ ಮದುವೆಯಲ್ಲಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳ ದಂಡು, ಯಾರೆಲ್ಲ ಬಂದ್ರು? ಇಲ್ನೋಡಿ
- Ambani wedding Updates: ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಮಳೆ ನಿಂತರೂ ಮಳೆ ನಿಲ್ಲದು ಎನ್ನುವಂತೆ ಮದುವೆ ಮುಗಿದರೂ ಈ ಅದ್ಧೂರಿ ಮದುವೆ ಕುರಿತಾದ ಅಪ್‌ಡೇಟ್ ಇನ್ನೂ ಕಡಿಮೆಯಾಗಿಲ್ಲ.
- Ambani wedding Updates: ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಮಳೆ ನಿಂತರೂ ಮಳೆ ನಿಲ್ಲದು ಎನ್ನುವಂತೆ ಮದುವೆ ಮುಗಿದರೂ ಈ ಅದ್ಧೂರಿ ಮದುವೆ ಕುರಿತಾದ ಅಪ್‌ಡೇಟ್ ಇನ್ನೂ ಕಡಿಮೆಯಾಗಿಲ್ಲ.
(1 / 8)
ಜುಲೈ 12 ರಂದು ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಕಿಮ್ ಕಾರ್ದಶಿಯಾನ್, ಕ್ಲೋಯ್ ಕರ್ದಶಿಯಾನ್, ಜಾನ್ ಸೆನಾ, ರೆಮಾ, ನಿಕ್ ಜೊನಾಸ್ ಮತ್ತು ಇತರರು ಭಾಗವಹಿಸಿದ್ದರು.
(2 / 8)
ಕಿಮ್ ಕಾರ್ದಶಿಯಾನ್ ಮತ್ತು ಕ್ಲೋಯ್ ಕರ್ದಶಿಯಾನ್ ಮುಂಬೈನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ ತೆರಳುವಾಗ ಪೋಸ್ ನೀಡಿದ್ದಾರೆ. ಕಿಮ್ ಹೊಳೆಯುವ ಕೆಂಪು ಲೆಹೆಂಗಾ-ಸೀರೆಯನ್ನು ಧರಿಸಿದ್ದರೆ, ಕ್ಲೋಯ್ ಭಾರವಾದ ಅಲಂಕಾರ ಇರುವ ಲೆಹೆಂಗಾ-ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು.
(PTI)(3 / 8)
ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ದಿನದಂದು ನಿಕ್ ಜೊನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ರೆಡ್ ಕಾರ್ಪೆಟ್ ಮೇಲೆ ಫೋಟೋಗಳಿಗೆ ಪೋಸ್ ನೀಡಿದರು. (ಫೋಟೋ: ರಾಯಿಟರ್ಸ್)
(4 / 8)
ಶಾರೂಖ್ ಖಾನ್ ಜತೆ ಜಾನ್ ಸೆನಾ: ಈ ವಿವಾಹ ಕಾರ್ಯಕ್ರಮದಲ್ಲಿ ಯುಎಸ್ ನಟ ಮತ್ತು ಕುಸ್ತಿಪಟು ಜಾನ್ ಸೆನಾ ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೆ ಪೋಸ್ ನೀಡಿದರು. ಇದಾದ ಬಳಿಕ ಎಕ್ಸ್‌ನಲ್ಲಿ ನಟನಿಗೆ ಗೌರವ ಸಲ್ಲಿಸಿದರು "ಅಂಬಾನಿ ಕುಟುಂಬಕ್ಕೆ ಅವರ ಸಾಟಿಯಿಲ್ಲದ ಆತ್ಮೀಯತೆ ಮತ್ತು ಆತಿಥ್ಯಕ್ಕಾಗಿ ಕೃತಜ್ಞನಾಗಿದ್ದೇನೆ" ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
(5 / 8)
ನಮಸ್ತೇ ಎಲ್ಲರಿಗೂ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕಾಗಿ ಕುಸ್ತಿಪಟು ಮತ್ತು ನಟ ಜಾನ್ ಸೆನಾ ಶುಕ್ರವಾರ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ಗೆ ಆಗಮಿಸಿದಾಗ ಫೋಟೋಗೆ ಪೋಸ್ ನೀಡಿದರು. (ಎಎನ್ಐ ಫೋಟೋ)
(6 / 8)
ಹಾಡಲೆಂದು ಬಂದೆ: ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಕೆನಡಾದ ಗಾಯಕ ಮತ್ತು ರ್ಯಾಪರ್ ಎಪಿ ಧಿಲ್ಲಾನ್ ಭಾಗವಹಿಸಿದ್ದರು. (ಪಿಟಿಐ)
(7 / 8)
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಆಫ್ರೋಬೀಟ್ಸ್ ತಾರೆ ರೆಮಾ ಪ್ರದರ್ಶನ ನೀಡಿದರು.
ಇತರ ಗ್ಯಾಲರಿಗಳು