ಕನ್ನಡ ಸುದ್ದಿ  /  Entertainment  /  Hollywood News Oscars 2024 When And Where To Watch The 96th Academy Awards In India Watch Live Telecast Pcp

Oscars 2024: ಸಿನಿಪ್ರೇಮಿಗಳೇ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೋಡಬಯಸುವಿರಾ? 96ನೇ ಅಕಾಡೆಮಿ ಅವಾರ್ಡ್‌ ನೇರ ಪ್ರಸಾರ ಹೀಗೆ ನೋಡಿ

96th Academy Awards: ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ನ ಹಾಲಿವುಡ್‌ ಡೋಲ್ಬಿ ಥಿಯೇಟರ್‌ನಲ್ಲಿ ಈ ಬಾರಿ 96ನೇ ಅಕಾಡೆಮಿ ಅವಾರ್ಡ್‌ ಸಮಾರಂಭ ನಡೆಯಲಿದೆ. ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಭಾರತೀಯರು ಎಲ್ಲಿ ಮತ್ತು ಯಾವಾಗ ಲೈವ್‌ ನೋಡಬಹುದು ಎಂಬ ವಿವರ ಇಲ್ಲಿದೆ.

96ನೇ ಅಕಾಡೆಮಿ ಅವಾರ್ಡ್‌
96ನೇ ಅಕಾಡೆಮಿ ಅವಾರ್ಡ್‌

Oscars 2024: ಈ ವರ್ಷದ ಬಹುನಿರೀಕ್ಷಿತ ಸಿನಿರಾತ್ರಿ " 96ನೇ ಅಕಾಡೆಮಿ ಅವಾರ್ಡ್‌ ಸಮಾರಂಭ" ಕಾರ್ಯಕ್ರಮ ಸನಿಹದಲ್ಲಿದೆ. ಜಗಮಗಿಸುವ ಬೆಳಕಿನ ವೇದಿಕೆಯಲ್ಲಿ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾರ್ಚ್‌ 10, 2024ರಂದು ನಡೆಯಲಿದೆ. ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ನ ಹಾಲಿವುಡ್‌ ಡೋಲ್ಬಿ ಥಿಯೇಟರ್‌ನಲ್ಲಿ ನಡೆಯುವ ಈ ರೆಡ್‌ಕಾರ್ಪೆಟ್‌ ಕಾರ್ಯಕ್ರಮವನ್ನು ಹಾಸ್ಯ ಕಲಾವಿದ ಜಿಮ್ಮಿ ಕಿಮೆಲ್‌ ನಡೆಸಿಕೊಡಲಿದ್ದಾರೆ.. ಅಮೆರಿಕದ ಭಾನುವಾರ ರಾತ್ರಿಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಭಾರತದ ಜನರು ಸೋಮವಾರ ಬೆಳಗ್ಗೆ ವೀಕ್ಷಿಸಬಹುದು. ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದ ನೇರ ಪ್ರಸಾರವನ್ನು ಭಾರತೀಯರು ಎಲ್ಲಿ ನೋಡಬಹುದು ಎಂಬ ವಿವರ ಇಲ್ಲಿದೆ.

ಭಾರತೀಯರು ಎಲ್ಲಿ ವೀಕ್ಷಿಸಬಹುದು?

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯುತ್ತದೆ. ಭಾರತೀಯ ವೀಕ್ಷಕರು ಆಸ್ಕರ್ 2022 ಸಮಾರಂಭವನ್ನು ಸೋಮವಾರ, ಮಾರ್ಚ್ 11 ರಂದು ಬೆಳಿಗ್ಗೆ 4:00 ಗಂಟೆಗೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ವೀಕ್ಷಿಸಬಹುದು. ಈ ಕುರಿತು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. "ಆಸ್ಕರ್‌ 2024 ನೇರ ಪ್ರಸಾರವು ಮಾರ್ಚ್‌ 11ರಂದು ಆರಂಭವಾಗಲಿದೆ. ಡಿಸ್ನಿಪ್ಲಸ್‌ಹಾಟ್‌ಸ್ಟಾರ್‌ನಲ್ಲಿ ಆಸ್ಕರ್‌ ವೀಕ್ಷಣೆಗೆ ರೆಡಿಯಾಗಿ" ಎಂದು ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ ಬರೆದಿದೆ.

ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್, ಓಪನ್‌ಹೈಮರ್, ಬಾರ್ಬಿ, ಮೆಸ್ಟ್ರೋ, ಪೂರ್ ಥಿಂಗ್ಸ್ ಮತ್ತು ಅಮೇರಿಕನ್ ಫಿಕ್ಷನ್ ಸೇರಿದಂತೆ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಹಲವು ಸಿನಿಮಾಗಳ ತುಣುಕುಗಳನ್ನು ಹಾಟ್‌ಸ್ಟಾರ್‌ ರೀಲ್‌ನಲ್ಲಿ ತೋರಿಸಲಾಗಿದೆ.

ಅಲ್ ಪಸಿನೊ, ಬ್ಯಾಡ್ ಬನ್ನಿ, ಬ್ರೆಂಡನ್ ಫ್ರೇಸರ್, ಕ್ರಿಸ್ ಹೆಮ್ಸ್‌ವರ್ತ್, ಡ್ವೇನ್ ಜಾನ್ಸನ್, ಮೈಕೆಲ್ ಕೀಟನ್, ಮಿಚೆಲ್ ಫೈಫರ್, ಮಿಚೆಲ್ ಯೋಹ್, ರೆಜಿನಾ ಕಿಂಗ್, ಜೇಮೀ ಲೀ ಕರ್ಟಿಸ್, ಜೆನ್ನಿಫರ್ ಲಾರೆನ್ಸ್, ಕೇಟ್ ಮೆಕಿನ್ನನ್, ರೀಟಾ ಮೊರೆನೋ, ಜಾನ್ ಓಲೆನಿ, ಸಿ, ಜಾನ್ ಓಲೆನಿ, ಸಿ. , ರಮಿ ಯೂಸೆಫ್, ಕೆ ಹುಯ್ ಕ್ವಾನ್, ಮಹೆರ್ಶಾಲಾ ಅಲಿ, ನಿಕೋಲಸ್ ಕೇಜ್, ಜೆಸ್ಸಿಕಾ ಲ್ಯಾಂಗೆ, ಮ್ಯಾಥ್ಯೂ ಮೆಕ್‌ಕೊನೌಘೆ, ಲುಪಿಟಾ ನ್ಯೊಂಗೊ, ಸ್ಯಾಮ್ ರಾಕ್‌ವೆಲ್ ಮತ್ತು ಝೆಂಡಾಯಾ ಅವರು ಈ ಬಾರಿ ಆಸ್ಕರ್‌ ಪ್ರಶಸ್ತಿ ಕಾರ್ಯಕ್ರಮದ ನಿರೂಪಕರಾಗಿದ್ದಾರೆ.

ಒಟಿಟಿ ವೇದಿಕೆಯಲ್ಲಿ ನೇರ ಪ್ರಸಾರ ಮಾತ್ರವಲ್ಲದೆ ಎಕ್ಸ್‌ (ಟ್ವಿಟ್ಟರ್‌ ಹ್ಯಾಂಡಲ್‌)ನಲ್ಲೂ ಅಕಾಡೆಮಿ ಅವಾರ್ಡ್‌ನ ಮಾಹಿತಿಯನ್ನು ತಕ್ಷಣ ಪಡೆಯಬಹದುಉ. ಅಕಾಡೆಮಿ ಆಫ್‌ ಮೋಷನ್‌ ಫಿಕ್ಚರ್‌ ಆರ್ಟ್ಸ್‌ ಆಂಡ್‌ ಸೈನ್ಸ್‌ (@TheAcademy)ನಲ್ಲಿ ಆಸ್ಕರ್‌ ಪ್ರಶಸ್ತಿ ಮಾಹಿತಿ ಪಡೆಯಬಹುದಾಗಿದೆ.

ಈ ಬಾರಿ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಬ್ಲಾಕ್‌ಬಸ್ಟರ್ ಬಯೋಪಿಕ್ "ಓಪನ್‌ಹೈಮರ್" ಅನೇಕ ಆಸ್ಕರ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಸಿನಿಮಾವಾಗಿದೆ. ಸಿಲಿಯನ್ ಮರ್ಫಿ ನೇತೃತ್ವದ ಈ ಡ್ರಾಮವು ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಸೇರಿದಂತೆ 13 ನಾಮನಿರ್ದೇಶನಗಳಲ್ಲಿ ಮುಂಚೂಣಿಯಲ್ಲಿದೆ. ಬಾರ್ಬಿ, ಪೂರ್ ಥಿಂಗ್ಸ್ ಮತ್ತು ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ ಕೂಡ ಆಸ್ಕರ್‌ ರೇಸ್‌ನಲ್ಲಿವೆ.

IPL_Entry_Point