Heatwave Movies: ಬಿಸಿಲಿಗೆ ಬೆಂದು ಹೋಗುತ್ತಿದ್ದೀರಾ? ಹೀಟ್‌ವೇವ್‌ನಲ್ಲಿ ನೋಡಬಹುದಾದ 5 ಕ್ಲಾಸಿಕ್ ಸೂಪರ್‌ಹಿಟ್ ಸಿನಿಮಾಗಳಿವು
Top 5 heatwave movies: ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಕಲಬುರಗಿ ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಹೀಟ್‌ವೇವ್ ಹೆಚ್ಚಾಗಿದೆ. ಈ ಸಮಯದಲ್ಲಿ ಹೀಟ್‌ವೇವ್ ಇರುವ ಕ್ಲಾಸಿಕ್ ಹಾಲಿವುಡ್ ಸಿನಿಮಾಗಳನ್ನು ನೋಡಲು ನೀವು ಬಯಸಿದರೆ ಇಲ್ಲಿ ಕೆಲವು ಸಿನಿಮಾಗಳ ವಿವರ ನೀಡಲಾಗಿದೆ.
ಬೆಂಗಳೂರು, ಮಂಗಳೂರು, ಮೈಸೂರು, ಹಾಸನ ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಬೆಂಕಿಯಂತಹ ಬಿಸಿಲು. ಎಷ್ಟು ಫ್ಯಾನ್ ಇದ್ದರೂ ಸಾಲದೆಂದು ಕೂಲರ್ ಖರೀದಿಗಸಲು ಹಿಂಜರಿಯುತ್ತಿಲ್ಲ. ಈ ಸಮಯದಲ್ಲಿ ಸಾಕಷ್ಟು ಜನರು ಮನೆಗೆ ಏಸಿ ಅಳವಡಿಸಬಹುದು. ಮಧ್ಯಾಹ್ನದ ವೇಳೆ ಮನೆಯಿಂದ ಹೊರಕ್ಕೆ ಹೋಗಬಾರದೆಂಬ ಎಚ್ಚರಿಕೆಯೂ ಇದೆ. ಅಯ್ಯೋ ಎಷ್ಟೊಂದು ಬಿಸಿಲು ಎಂದು ದೂರುತ್ತ ಮನೆಯೊಳಗೆ ಕೂಲ್ ಆಗಿರುವ ಸಿನಿಮಾ ನೋಡಲು ಕೆಲವರು ಬಯಸಬಹುದು. ಕೂಲ್ ಆಗಿರುವ ಸಿನಿಮಾಗಳ ಬದಲು ಹೀಟ್ ಆಗಿರುವ ಸಿನಿಮಾ ನೋಡಲು ಬಯಸಿದರೆ ಇಲ್ಲಿ ಐದಾರೂ ಹೀಟ್‌ವೇವ್ ಸಿನಿಮಾಗಳ ವಿವರ ನೀಡಿದ್ದೇವೆ. ಇದರಲ್ಲಿ ಕ್ಲಾಸಿಕ್ ಸಿನಿಮಾಗಳೂ ಇವೆ.
ರಿಯರ್ ವಿಂಡೋ
1954ರ ಸಿನಿಮಾವಿದು. ಸಿನಿಮಾ ಅಧ್ಯಯನ ಮಾಡುವವರು ತಪ್ಪದೇ ಈ ಸಿನಿಮಾ ನೋಡಿರುತ್ತೀರಿ. ಆಲ್‌ಫ್ರಡ್ ಹಿಚ್‌ಕಾಕ್ ನಿರ್ದೇಶನದ ಅಮೆರಿಕದ ಮಿಸ್ಟ್ರಿ ಥ್ರಿಲ್ಲರ್ ಸಿನಿಮಾವಿದು. ಕಾಲು ಮುರಿದುಕೊಂಡು ಗಾಲಿಕುರ್ಚಿಯಲ್ಲಿಯೇ ಬದುಕು ಸವೆಸುತ್ತಿರುವ ಜೇಮ್ಸ್ ಸ್ಟಿವರ್ಟ್ ಕಿಟಕಿ ಮೂಲಕ ನೆರೆಮನೆಯವರ ಬದುಕಿನ ಕುರಿತು ನೋಡುತ್ತ ಕಾಲ ಕಳೆಯುತ್ತಾನೆ. ಈತ ಒಂದು ಮರ್ಡರ್‌ಗೆ ಸಾಕ್ಷಿಯಾಗಬೇಕಾಗುತ್ತದೆ. ಈ ಹಳೆ ಸಿನಿಮಾ ತುಂಬಾ ಕುತೂಹಲಕರವಾಗಿದೆ.
ಡಾಗ್ ಡೇ ಆಫ್ಟರ್‌ನೂನ್
1975ರ ಸಿನಿಮಾವಿದು. ಹಾಲಿವುಡ್‌ನ ಅತ್ಯುತ್ತಮ ಲೇಖಕರಲ್ಲಿ ಒಬ್ಬರಾದ ಸಿಡ್ನಿ ಲ್ಯೂಮೆಟ್, ಇಬ್ಬರು ಶ್ರೇಷ್ಠ ಉದಯೋನ್ಮುಖ ಬರಹಗಾರರಾದ ಅಲ್ ಪಸಿನೊ ಮತ್ತು ಜಾನ್ ಕಾಜಲೆ ಜತೆ ಸೇರಿ ಈ ಸಿನಿಮಾ ಮಾಡಿದ್ದಾರೆ. ಇದು ಬೇಸಿಗೆಯಲ್ಲಿ ಬೆವರು ಹೆಚ್ಚಿಸುವಂತಹ ಕ್ರೈಮ್ ಥ್ರಿಲ್ಲರ್. ತನ್ನ ಸಂಗಾತಿಯ ಲಿಂಗ ಸರ್ಜರಿಗೆ ಹಣ ಹೊಂದಿಸುವ ಸಲುವಾಗಿ ಬ್ಯಾಂಕ್ ದರೋಡೆಗೆ ಮುಂದಾಗುವ ವ್ಯಕ್ತಿಯೊಬ್ಬನ ರೋಚಕ ಕಥೆಯಿದು.
ಡು ದಿ ರೈಟ್ ಥಿಂಗ್
1989ರೀ ಸಿನಿಮಾವು ಒಂದು ಸಣ್ಣ ಬ್ರೂಕ್ಲಿನ್ ಸಮುದಾಯದಲ್ಲಿ ಅತ್ಯಂತ ಬಿಸಿಯಾದ ಹೀಟ್‌ವೇವ್ ಇರುವಂತಹ ಸಮಯದಲ್ಲಿ ಜನಾಂಗೀಯ ಉದ್ವಿಗ್ನತೆ ಹೆಚ್ಚುವ ಕಥೆಯನ್ನು ಹೊಂದಿದೆ. ಒಂದು ಕಡೆ ಬಿಸಿಲಿನ ಶಾಖ, ಇನ್ನೊಂದೆಡೆ ನಮ್ಮ ಸ್ವಂತ ಮನೋಧರ್ಮಗಳ ಉರಿ, ಗಲಭೆಯು ಇದೆ.
ಫಾಲಿಂಗ್ ಡೌನ್
1993ರ ಈ ಸಿನಿಮಾದಲ್ಲೂ ಹೀಟ್‌ವೇವ್ ಇದೆ. 35-40 ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡುವಾಗ ಅಂಗೈಗಳು ಬೆವರುತ್ತದೆಯೇ? ನೀಲಿ ಕಾಲರ್ ಕೆಲಸದ ಕಷ್ಟದ ಜತೆಗೆ ದೈನಂದಿನ ಜೀವನದ ಒತ್ತಡದವರೆಗೆ ಫೌಲಿಂಗ್ ಡೌನ್ ಎಂಬಾತನ ಬದುಕಿನ ಕಥೆಯನ್ನು ಈ ಸಿನಿಮಾ ಹೊಂದಿದೆ.
ಪ್ರಿಡೇಟರ್ 2
ಶಾಖದ ಅಲೆಯ ನಡುವೆ ನಡೆಯುವ ಪ್ರಿಡೇಟರ್‌ಗಳ ಹೋರಾಟದ ಕಥೆಯಾಗಿರುವುದರಿಂದ ಈ ಬೇಸಿಗೆ ಬಿಸಿಗೆ ತಪ್ಪದೆ ನೋಡಬಹುದಾದ ಸಿನಿಮಾದ ಪಟ್ಟಿಗೆ ಪ್ರಿಡೇಟರ್ 2 ನೋಡಬಹುದು.
ಈ ಹಳೆ ಸಿನಿಮಾಗಳನ್ನು ನೋಡುವುದು ನಿಮಗೆ ಇಷ್ಟವಿಲ್ಲದೆ ಇದ್ದರೆ ಒಟಿಟಿಯಲ್ಲಿರುವ ಭೀಮಾ, ಟಿಲ್ಲು ಸ್ಕ್ವೇರ್, ಕಾಂತಾರ, ರಣನೀತಿ, ಲಪತಾ ಲೇಡಿಸ್ ಮುಂತಾದ ಸಿನಿಮಾಗಳನ್ನು ನೋಡಬಹುದು.