ಸ್ಪೈಡರ್‌ಮ್ಯಾನ್‌ 4 ಬಿಡುಗಡೆ ದಿನಾಂಕ ಖಚಿತವಾಯ್ತು; ಅವೇಂಜರ್ಸ್‌ ಡೂಮ್ಸ್‌ಡೇ, ಅವೇಂಜರ್ಸ್‌ ಸೀಕ್ರೆಟ್‌ ವಾರ್‌ ನಡುವೆ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ಸ್ಪೈಡರ್‌ಮ್ಯಾನ್‌ 4 ಬಿಡುಗಡೆ ದಿನಾಂಕ ಖಚಿತವಾಯ್ತು; ಅವೇಂಜರ್ಸ್‌ ಡೂಮ್ಸ್‌ಡೇ, ಅವೇಂಜರ್ಸ್‌ ಸೀಕ್ರೆಟ್‌ ವಾರ್‌ ನಡುವೆ ರಿಲೀಸ್‌

ಸ್ಪೈಡರ್‌ಮ್ಯಾನ್‌ 4 ಬಿಡುಗಡೆ ದಿನಾಂಕ ಖಚಿತವಾಯ್ತು; ಅವೇಂಜರ್ಸ್‌ ಡೂಮ್ಸ್‌ಡೇ, ಅವೇಂಜರ್ಸ್‌ ಸೀಕ್ರೆಟ್‌ ವಾರ್‌ ನಡುವೆ ರಿಲೀಸ್‌

ಟಾಮ್ ಹಾಲೆಂಡ್ ಅಭಿನಯದ ಸ್ಪೈಡರ್ ಮ್ಯಾನ್ 4 ಬಿಡುಗಡೆಗೆ ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ಇನ್ನೂ ಕಾಯಬೇಕು. ಸ್ಪೈಡರ್‌ಮ್ಯಾನ್‌ 4 ಜುಲೈ 2026ಕ್ಕೆ ಬಿಡುಗಡೆಯಾಗಲಿದೆಯಂತೆ.

ಸ್ಪೈಡರ್‌ಮ್ಯಾನ್‌ 4 ಬಿಡುಗಡೆ ದಿನಾಂಕ
ಸ್ಪೈಡರ್‌ಮ್ಯಾನ್‌ 4 ಬಿಡುಗಡೆ ದಿನಾಂಕ

ಮಾರ್ವೆಲ್‌ ಸಿನಿಮ್ಯಾಟಿಕ್‌ ಯೂನಿವರ್ಸ್‌ನ ಸ್ಪೈಡರ್‌ಮ್ಯಾನ್‌ ಸಿನಿಮಾಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರೇಕ್ಷಕ ವರ್ಗವಿದೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ಜೇಡ ಮನುಷ್ಯನ ಅಥವಾ ಜೇಡಪ್ಪನ ಸಾಹಸ ನೋಡಲು ಕಾತರರಾಗಿರುತ್ತಾರೆ. ಟಾಮ್ ಹಾಲೆಂಡ್ ಅಭಿನಯದ ಸ್ಪೈಡರ್ ಮ್ಯಾನ್ 4 ಬಿಡುಗಡೆ ಸುದ್ದಿಗಾಗಿಯೂ ಎಲ್ಲರೂ ಕಾಯುತ್ತಿದ್ದಾರೆ. ಈಗಾಗಲೇ ಮೂರು ಸ್ಪೈಡರ್‌ಮ್ಯಾನ್‌ ಸಿನಿಮಾಗಳು ಅಭೂತಪೂರ್ವ ಯಶಸ್ಸು ಕಂಡಿವೆ. ಇದೀಗ ಈ ಸಿನಿಮಾದ ಬಿಡುಗಡೆ ದಿನಾಂಕದ ಕುರಿತು ಸೋನಿ ಫಿಕ್ಚರ್ಸ್‌ ಮಾಹಿತಿ ನೀಡಿದೆ. ಈ ಸಿನಿಮಾ ಜುಲೈ 2026ರಲ್ಲ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ

ಸ್ಪೈಡರ್‌ ಮ್ಯಾನ್‌ 4 ಬಿಡುಗಡೆ ದಿನಾಂಕ

ಡಿಸ್ನಿಯ ಹಲವು ಪ್ರಾಜೆಕ್ಟ್‌ಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಇವುಗಳ ನಡುವೆ ಸ್ಪೈಡರ್‌ಮ್ಯಾನ್‌ 4 ಬಿಡುಗಡೆ ಮಾಡಬೇಕಿದೆ.ಜುಲೈ 26, 2026ರಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ಉದ್ದೇಿಸಲಾಗಿದೆ. ಅವೇಂಜರ್ಸ್‌ ಡೂಮ್ಸ್‌ಡೇ ಮತ್ತು ಅವೇಂಜರ್ಸ್‌ ಸೀಕ್ರೆಟ್‌ ವಾರ್‌ ಸಿನಿಮಾಗಳ ಬಿಡುಗಡೆಯ ನಡುವೆ ಇದಕ್ಕೆ ಸ್ಥಳಾವಕಾಶ ಮಾಡಿಕೊಡಲಾಗಿದೆ.

ಹಲವು ಮಾಧ್ಯಮ ವರದಿಗಳ ಪ್ರಕಾರ ಸೋನಿ ಫಿಕ್ಚರ್ಸ್‌ ಇದೀಗ ಬಿಡುಗಡೆ ದಿನಾಂಕದೊಂದಿಗೆ ನಿರ್ದೇಶಕರ ಮಾಹಿತಿಯನ್ನೂ ಖಚಿತಪಡಿಸಿದೆ. ಜಾನ್ ವಾಟ್ಸ್ ನಿರ್ಗಮನದ ನಂತರ ಶಾಂಗ್-ಚಿ ಮತ್ತು ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್‌ ಸಿನಿಮಾಗಳ ಖ್ಯಾತಿಯ ಡೆಸ್ಟಿನ್ ಡೇನಿಯಲ್ ಕ್ರೆಟನ್ ಅವರು ಈ ಸಿನಿಮಾಕ್ಕೆ ಆಕ್ಷನ್‌ಕಟ್‌ ಹೇಳಲಿದ್ದಾರೆ.ಸ್ಪೈಡರ್ ಮ್ಯಾನ್ 4 ನಿರ್ಮಾಣ ವೇಳಾಪಟ್ಟಿಯಲ್ಲಿ ಟಾಮ್ ಹಾಲೆಂಡ್ ಅವರು ಜಿಮ್ಮಿ ಫಾಲನ್ ಅವರೊಂದಿಗೆ ದಿ ಟುನೈಟ್ ಶೋನಲ್ಲಿ ಕಾಣಿಸಿಕೊಂಡಿದ್ದರು.

ಟಾಮ್ ಹಾಲೆಂಡ್ ಅವರು ಇದಕ್ಕೂ ಮುನ್ನ 221ರ ಸ್ಪೈಡರ್‌ಮ್ಯಾನ್‌: ನೋ ವೇ ಹೋಮ್‌ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದರು. ಇವರು ಅವೇಂಜರ್ಸ್‌: ಡೂಮ್ಸ್‌ಪ್ಲೇಯಲ್ಲೂ ನಟಿಸುವ ಸಾಧ್ಯತೆ ಇದೆ.

ಸ್ಪೈಡರ್‌ಮ್ಯಾನ್‌: ನೋ ವೇ ಹೋಮ್‌ ಕಥೆಯ ಮುಂದುವರೆದ ಭಾಗವಾಗಿ ಸ್ಪೈಡರ್‌ ಮ್ಯಾನ್‌ನ ಸ್ಕ್ರಿಪ್ಟ್‌ ಇರುವ ಸಾಧ್ಯತೆಯಿದೆ. ಅಲ್ಲಿ ಜಗತ್ತು ಪೀಟರ್‌ ಪಾರ್ಕರ್ ಎಂಬಾತ ಸ್ಪೈಡರ್‌ಮ್ಯಾನ್‌ ಎಂದು ಜಗತ್ತು ಮರೆತಿದೆ. ಎರಿಕ್‌ ಸೊಮ್ಮೆರ್ಸ್‌, ಕ್ರಿಸ್‌ಮೆಕಿನಾ ಅವರು ಇದರ ಸ್ಕ್ರಿಪ್ಟ್‌ ಬರೆಯಲಿದ್ದಾರೆ.

ಸ್ಪೈಡರ್‌ಮ್ಯಾನ್‌ 4ರಲ್ಲೂ ಸೋನಿ ಫಿಕ್ಚರ್ಸ್‌ ಮತ್ತು ಡಿಸ್ನಿ ಮಾಲೀಕತ್ವದ ಮಾರ್ವೆಲ್‌ ಸ್ಟುಡಿಯೋಸ್‌ನ ಸಹಭಾಗಿತ್ವ ಮುಂದುವರೆದಿದೆ. ಈ ಎರಡು ಸಂಸ್ಥೆಗಳು 2015ರಲ್ಲಿ ಪಾಲುದಾರಿಕೆ ಮಾಡಿಕೊಂಡಿದ್ದವು. ಸ್ಪೈಡರ್‌ ಮ್ಯಾನ್‌ ಸರಣಿ ಸಿನಿಮಾಗಳ ಬಿಡುಗಡೆಯಲ್ಲಿ ಈ ಮೈತ್ರಿ ಪ್ರಮುಖ ಪಾತ್ರವಹಿಸಿದೆ.