ಸಂಭಾವನೆಯಲ್ಲಿ ಶಾರೂಖ್ , ಸಲ್ಮಾನ್ ಖಾನ್, ಪ್ರಭಾಸ್ ಹಿಂದಿಕ್ಕಿದ 72 ವರ್ಷ ವಯಸ್ಸಿನ ಹಿರಿಯ ನಟ; ಒಂದು ಚಿತ್ರಕ್ಕೆ 270 ಕೋಟಿ ರೂ ವೇತನ
India's highest-paid actor: ಭಾರತದ ಹಿರಿಯ ನಟರೊಬ್ಬರು ಪಡೆಯುವ ವೇತನವು ಶಾರೂಖ್ ಖಾನ್, ಸಲ್ಮಾನ್ ಖಾನ್, ಪ್ರಭಾಸ್‌ಗಿಂತಲೂ ಹೆಚ್ಚಿದೆ. ಇವರು ಒಂದು ಸಿನಿಮಾಕ್ಕೆ 270 ಕೋಟಿ ರೂಗಿಂತಲೂ ಹೆಚ್ಚು ವೇತನ ಪಡೆಯುತ್ತಾರೆ.

India's highest-paid actor: ಭಾರತದಲ್ಲಿ ಅತ್ಯಧಿಕ ವೇತನ ಪಡೆಯುವ ನಟ ಯಾರು? ಅವರ ವಯಸ್ಸು 72 ವರ್ಷ. ಇವರ ವೇತನ ಶಾರೂಖ್ ಖಾನ್, ಸಲ್ಮಾನ್ ಖಾನ್, ಪ್ರಭಾಸ್‌ಗಿಂತಲೂ ಹೆಚ್ಚು. ನಿಮಗೀಗ ಆ ಹಿರಿಯ ನಟ ಯಾರೆಂದು ತಿಳಿದಿರಬಹುದು. ಅವರೇ ರಜನಿಕಾಂತ್. 90ರ ದಶಕದ ಅಂತ್ಯ ಮತ್ತು 2000ರ ಆರಂಭದಲ್ಲಿ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಕರಿಯರ್‌ನಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದರು. ಅವರ ಖ್ಯಾತಿ, ಜನಪ್ರಿಯತೆ ಕಡಿಮೆಯಾಗಿದೆ ಎಂದೇ ಕೆಲವರು ಅಂದಾಜಿಸಿದ್ದರು. ಏಕೆಂದರೆ ಅವರ ಚಿತ್ರಗಳು ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದವು. ಆದರೆ ಅವರ 50ರ ದಶಕದಲ್ಲಿ ಚಂದ್ರಮುಖಿ ಮತ್ತು ಎಂಥಿರನ್ ಚಿತ್ರಗಳ ಯಶಸ್ಸಿನೊಂದಿಗೆ ನಟನಿಗೆ ಎರಡನೇ ಅವಕಾಶ ಸಿಕ್ಕಿತು. 2010ರ ದಶಕದ ಅಂತ್ಯವು ನಿಜವಾಗಿಯೂ ಸೂಪರ್‌ಸ್ಟಾರ್‌ನ ಎರಡನೇ ಆಗಮನ ಎನ್ನಬಹುದು. ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆಯಿತು. ಬಾಲಿವುಡ್ ದಿಗ್ಗಜರ ಸಿನಿಮಾಗಳೊಂದಿಗೆ ಸ್ಪರ್ಧಿಸಿದವು. ಇದರಿಂದ ರಜನಿಕಾಂತ್ ಸಂಭಾವನೆಯೂ ಹೆಚ್ಚಾಯಿತು. ಪ್ರಮುಖ ಯುವ ಸೂಪರ್‌ಸ್ಟಾರ್‌ಗಳ ಸಂಭಾವನೆಗಿಂತಲೂ ಹೆಚ್ಚು ವೇತನವನ್ನು ರಜನಿಕಾಂತ್ ಪಡೆದರು.
72ನೇ ವಯಸ್ಸಿನಲ್ಲಿ ಅತಿಹೆಚ್ಚು ಸಂಭಾವನೆ ಪಡೆದ ನಟ
2023ರಲ್ಲಿ ರಜನಿಕಾಂತ್ ತನ್ನ 72 ನೇ ವಯಸ್ಸಿನಲ್ಲಿ ನೆಲ್ಸನ್ ದಿಲೀಪ್ ಕುಮಾರ್ ಅವರ ಜೈಲರ್ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿಗಿಂತಲೂ ಹೆಚ್ಚು ಗಳಿಸಿತು. ಈ ಸಿನಿಮಾದ ನಟನೆಗಾಗಿ ರಜನಿಕಾಂತ್ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಚಿತ್ರದ ಯಶಸ್ಸಿನ ನಂತರ, ಚಿತ್ರದ ನಿರ್ಮಾಪಕ - ಕಲಾನಿಧಿ ಮಾರನ್ ರಜನಿಕಾಂತ್‌ಗೆ 100 ಕೋಟಿ ರೂಪಾಯಿ ಬೋನಸ್ ನೀಡಿದರು. ಒಂದೇ ಚಿತ್ರದಿಂದ 210 ಕೋಟಿ ಗಳಿಕೆ ಮಾಡಿದ ರಜನಿಕಾಂತ್ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿ ಹೊರಹೊಮ್ಮಿದರು. ಈ ಮೊತ್ತವು ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಪ್ರಭಾಸ್ ಮುಂತಾದ ಯುವ ನಟರ ಸಂಭಾವನೆಯನ್ನು ಮೀರಿಸಿದೆ. ಈ ನಟರು ಬಾಕ್ಸ್ ಆಫೀಸ್ ಯಶಸ್ಸು ಆಧರಿಸಿ ಒಂದು ಚಿತ್ರಕ್ಕೆ 150-200 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
74ನೇ ವಯಸ್ಸಿನಲ್ಲಿ ರಜನಿಕಾಂತ್ ಸಂಭಾವನೆ
ರಜನಿಕಾಂತ್‌ಗೆ ಇತ್ತೀಚೆಗೆ ಜೈಲರ್ ಚಿತ್ರದಷ್ಟು ಯಶಸ್ಸು ಬೇರೆ ಯಾವುದೇ ಸಿನಿಮಾಗಳಲ್ಲಿ ದೊರಕದೆ ಇದ್ದರೂ ಕಳೆದ ಎರಡು ವರ್ಷಗಳಿಂದ ತಮ್ಮ ಚಿತ್ರಗಳಿಗೆ ಹೆಚ್ಚು ಸಂಭಾವನೆ ಪಡೆಯುತ್ತಲೇ ಇದ್ದಾರೆ. ವರದಿಗಳ ಪ್ರಕಾರ ಕೂಲಿ ಸಿನಿಮಾಕ್ಕೆ ಇವರು 270 ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಿರೀಕ್ಷೆಯಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಯಾವುದೇ ನಟನಿಗೆ ಸಿಕ್ಕ ಅತಿ ಹೆಚ್ಚು ಸಂಭಾವನೆಯಾಗಲಿದೆ. ಆದರೆ, ಭಾರತದಲ್ಲಿ ರಜನಿಕಾಂತ್ ಸಂಭಾವನೆಗಿಂತಲೂ ಹೆಚ್ಚು ಮೊತ್ತ ಪಡೆಯುವ ನಟರಿದ್ದಾರೆ. ನಟ ವಿಜಯ್ (ಕೊನೆಯ ಚಿತ್ರಕ್ಕೆ 275 ಕೋಟಿ ರೂಪಾಯಿ) ಮತ್ತು ಅಲ್ಲು ಅರ್ಜುನ್ (ಪುಷ್ಪ 2 ಸಿನಿಮಾಕ್ಕೆ 300 ಕೋಟಿ ರೂ) ಹೆಚ್ಚು ಸಂಭಾವನೆ ಪಡೆದಿದ್ದಾರೆ.
