ಕನ್ನಡ ಸುದ್ದಿ  /  Entertainment  /  Huge Crowd Near Rocking Star Yash S Bengaloru House

Huge Crowd near Yash's house: ಯಶ್‌ ಮನೆ ಮುಂದೆ ಅಭಿಮಾನಿಗಳ ಜಾತ್ರೆ; ಕಿಲೋಮೀಟರ್‌ ಲೆಕ್ಕದಲ್ಲಿ ಜನಸಾಗರ..

ಏರ್‌ಪೋರ್ಟ್‌ ರಸ್ತೆಯಲ್ಲಿನ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನ ಪ್ಲಾಟ್‌ನಲ್ಲಿ ನಟ ಯಶ್‌ ಕುಟುಂಬ ವಾಸವಿದೆ. ಈಗ ಅದೇ ಅಪಾರ್ಟ್‌ಮೆಂಟ್‌ ಬಳಿ ನಿತ್ಯ ಸಾವಿರಾರು ಮಂದಿ ಫ್ಯಾನ್ಸ್ ಆಗಮಿಸುತ್ತಿದ್ದಾರೆ.

ಯಶ್‌ ಮನೆಮುಂದೆ ಅಭಿಮಾನಿಗಳ ಜಾತ್ರೆ; ಕಿಲೋಮೀಟರ್‌ ಲೆಕ್ಕದಲ್ಲಿ ಜನಸಾಗರ..
ಯಶ್‌ ಮನೆಮುಂದೆ ಅಭಿಮಾನಿಗಳ ಜಾತ್ರೆ; ಕಿಲೋಮೀಟರ್‌ ಲೆಕ್ಕದಲ್ಲಿ ಜನಸಾಗರ..

Huge Crowd near Yash's house: ಇನ್ನೇನು ಹತ್ರತ್ರ ಒಂದು ವರ್ಷವಾಗುತ್ತ ಬಂತು, ರಾಕಿಂಗ್‌ ಸ್ಟಾರ್‌ ಯಶ್‌ ಈ ವರೆಗೂ ಒಂದೇ ಒಂದು ಸಿನಿಮಾ ಘೋಷಣೆ ಮಾಡಿಲ್ಲ. ಇತ್ತ ಅಭಿಮಾನಿಗಳು ಮಾತ್ರ ಕಾದಿದ್ದು ಬಂತೇ ವಿನಃ ಏನೂ ದಕ್ಕಿಲ್ಲ. ಸಿನಿಮಾ ಘೋಷಿಸದಿದ್ದರೆ ಏನಂತೆ, ಅವರನ್ನಾದರೂ ನೋಡಿ ಬರೋಣ ಎಂದು ನೇರವಾಗಿ ಅವರ ಮನೆಗೆ ಹೋಗುತ್ತಿದ್ದಾರೆ. ಅದೂ ಒಬ್ಬಿಬ್ಬರಲ್ಲ; ಸಾವಿರಾರು ಅಭಿಮಾನಿಗಳು!

ಏರ್‌ಪೋರ್ಟ್‌ ರಸ್ತೆಯಲ್ಲಿನ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನ ಪ್ಲಾಟ್‌ನಲ್ಲಿ ನಟ ಯಶ್‌ ಕುಟುಂಬ ವಾಸವಿದೆ. ಯಶ್‌ ಅಲ್ಲಿರುವುದು ತಿಳಿಯುತ್ತಿದ್ದಂತೆ, ನಿತ್ಯ ಅವರನ್ನು ನೋಡಲು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಅಪಾರ್ಟ್‌ಮೆಂಟ್‌ ಬಳಿ ಆಗಮಿಸುತ್ತಿದ್ದಾರೆ. ನೆಚ್ಚಿನ ನಟನ ಜತೆ ಒಂದೇ ಒಂದು ಸೆಲ್ಫಿ ಸಿಕ್ಕರೆ ಸಾಕಪ್ಪ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಹಾಗಂತ ನಟ ಯಶ್‌ ಹಾಗೆ ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ತಾಳ್ಮೆಯಿಂದಲೇ ಸಾವಿರಾರು ಅಭಿಮಾನಿಗಳಿಗೆ ಫೋಟೋ ನೀಡಿದ್ದರು. ಇದೀಗ ಅದರಂತೆಯೇ ಮನೆ ಬಳಿ ಬಂದ ಫ್ಯಾನ್ಸ್‌ ಜತೆ ಫೋಟೋ ನೀಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಗಳು ಯಶ್‌ ಅವರನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಹಾಗೆ ಆಗಮಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕೈಯಲ್ಲಿ ಕಟೌಟ್‌ ಹಿಡಿದು, ಜೈಕಾರ ಕೂಗುತ್ತ ಸರತಿ ಸಾಲಿನಲ್ಲಿ ನಿಂತ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಬರ್ತ್‌ಡೇಗೆ ಅಭಿಮಾನಿಗಳ ನಿರಾಸೆ

ಜ. 8ರಂದು ನಟ ಯಶ್‌ ಅವರ ಬರ್ತ್‌ಡೇ. ಆವತ್ತಾದರೂ ಯಶ್‌ ಕಡೆಯಿಂದ ಸಿನಿಮಾ ಅಪ್‌ಡೇಟ್‌ ಹೊರಬರಲಿದೆ. ಫ್ಯಾನ್ಸ್‌ ಜತೆಗೆ ಬರ್ತ್‌ಡೇ ಆಚರಿಸಿಕೊಳ್ಳಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಅಭಿಮಾನಿಗಳ ಆ ಆಸೆ ಈಡೇರಲಿಲ್ಲ. ಕಾರಣಾಂತರಗಳಿಂದ ತಮ್ಮ ಆಪ್ತ ಸ್ನೇಹಿತರ ಜತೆಗೆ ನೇರವಾಗಿ ದುಬೈಗೆ ಹಾರಿ ಅಲ್ಲಿಯೇ ಬರ್ತ್‌ಡೇ ಆಚರಿಸಿಕೊಂಡಿದ್ದರು. ಈ ನಡುವೆ ಅಭಿಮಾನಿಗಳಿಗೆ ಬೇಸರ ಮಾಡಬಾರದೆಂಬ ಕಾರಣಕ್ಕೆ ಮುಂಚಿತವಾಗಿಯೇ ಪತ್ರದ ಮೂಲಕ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲ ಎಂಬ ಮಾಹಿತಿ ರವಾನಿಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ