Kannada News  /  Entertainment  /  Iifa 2023 Bollywood News Actor Vicky Kaushal Gets Pushed Due To Salman Khan S Huge Security Entourage At Iifa Mnk
ಎದುರು ಸಿಕ್ಕ ವಿಕ್ಕಿ ಕೌಶಾಲ್‌ನನ್ನೇ ತಳ್ಳಿದ ಸಲ್ಮಾನ್‌ ಭದ್ರತಾ ಸಿಬ್ಬಂದಿ; ಬ್ಯಾಡ್‌ ಬಾಯ್‌ ವರ್ತನೆಗೆ ನೆಟ್ಟಿಗರು ಕೆಂಡ
ಎದುರು ಸಿಕ್ಕ ವಿಕ್ಕಿ ಕೌಶಾಲ್‌ನನ್ನೇ ತಳ್ಳಿದ ಸಲ್ಮಾನ್‌ ಭದ್ರತಾ ಸಿಬ್ಬಂದಿ; ಬ್ಯಾಡ್‌ ಬಾಯ್‌ ವರ್ತನೆಗೆ ನೆಟ್ಟಿಗರು ಕೆಂಡ

Salman Vs Vicky: ಎದುರು ಸಿಕ್ಕ ವಿಕ್ಕಿ ಕೌಶಾಲ್‌ನನ್ನೇ ತಳ್ಳಿದ ಸಲ್ಮಾನ್‌ ಭದ್ರತಾ ಸಿಬ್ಬಂದಿ; ಬ್ಯಾಡ್‌ ಬಾಯ್‌ ವರ್ತನೆಗೆ ನೆಟ್ಟಿಗರು ಕೆಂಡ

26 May 2023, 17:12 ISTHT Kannada Desk
26 May 2023, 17:12 IST

ಸಲ್ಮಾನ್‌ ಖಾನ್‌ ಮತ್ತವರ ಭದ್ರತಾ ಸಿಬ್ಬಂದಿ ವಿರುದ್ಧ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಎದುರಿಗೆ ವಿಕ್ಕಿ ಕೌಶಾಲ್‌ ಸಿಕ್ಕರೂ ಅವರನ್ನೇ ತಳ್ಳಿ ಉದ್ಧಟತನ ಮೆರೆದಿದ್ದಕ್ಕೆ ಕೆಲವರು ಸಲ್ಲು ವಿರುದ್ಧ ಕಟು ಟೀಕೆ ಮಾಡುತ್ತಿದ್ದಾರೆ.

Salman Khan Vs Vicky Kaushal: ಬಾಲಿವುಡ್ ಸ್ಟಾರ್‌ ನಟ ಸಲ್ಮಾನ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತುಂಬ ಅಪರೂಪ. ಒಂದು ವೇಳೆ ಕಾಣಿಸಿಕೊಳ್ಳಲೇಬೇಕು ಎಂದಾದರೆ, ಅಲ್ಲಿ ಅವರನ್ನು ಕಾಯುವುದಕ್ಕೆಂದೇ ದೊಡ್ಡ ಭದ್ರತಾ ತಂಡವೇ ಅವರನ್ನು ಸುತ್ತುವರಿದಿರುತ್ತದೆ. ಅದ್ಯಾವ ಮಟ್ಟಿಗೆ ಎಂದರೆ, ಸಲ್ಮಾನ್‌ ಎದುರು ಬಾಲಿವುಡ್‌ ನಟನೋರ್ವ ಎದುರಾಗಿದ್ದಾರೆ. ಅವರನ್ನೂ ಮುಲಾಜಿಲ್ಲದೆ ಸಲ್ಮಾನ್‌ ಖಾನ್‌ ಅವರ ಭದ್ರತಾ ಸಿಬ್ಬಂದಿ ತಳ್ಳಿದ್ದಾರೆ.

ಆ ಬಾಲಿವುಡ್ ಹೀರೋ ಬೇರಾರೂ ಅಲ್ಲ, ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್. ಹೀಗೆ ನಟನನ್ನು ತಳ್ಳಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಸಲ್ಮಾನ್‌ ಖಾನ್‌ ಬಗ್ಗೆ ಕೆಲವರು ಕೆಟ್ಟದಾಗಿಯೂ ಕಮೆಂಟ್‌ ಮಾಡುತ್ತಿದ್ದಾರೆ.

ಅಬುಧಾಬಿಯಲ್ಲಿ ನಡೆಯುತ್ತಿರುವ IIFA 2023 (International Indian Film Academy Awards) ಇವೆಂಟ್‌ನಲ್ಲಿ ಬಾಲಿವುಡ್‌ನ ಹಲವು ತಾರೆಯರು ಭಾಗವಹಿಸಿದ್ದಾರೆ. ಹೀಗಿರುವಾಗ ಅಭಿಮಾನಿಯೊಬ್ಬ ನಟ ವಿಕ್ಕಿ ಕೌಶಾಲ್‌ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಈ ವೇಳೆ ಅವರ ಎದುರಲ್ಲಿಯೇ ಸಲ್ಮಾನ್‌ ಖಾನ್‌ ಮತ್ತವರ ಭದ್ರತಾ ಸಿಬ್ಬಂದಿ ಆಗಮಿಸಿದ್ದಾರೆ. ವಿಕ್ಕಿ ಕೌಶಾಲ್‌ ಅವರನ್ನು ಗುರುತಿಸದ ಸಿಬ್ಬಂದಿ ಅವರನ್ನು ಪಕ್ಕಕ್ಕೆ ತಳ್ಳಿದೆ. ಬಳಿಕ ಸಲ್ಮಾನ್‌ ಖಾನ್‌ ಸಹ ವಿಕ್ಕಿಯನ್ನು ನೋಡಿದರೂ ನೋಡದಂತೆ ವರ್ತಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಸಲ್ಮಾನ್ ಅವರನ್ನು ನೋಡಿದ ವಿಕ್ಕಿ ಕೌಶಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಕೈ ಕುಲುಕಲು ಮುಂದೆ ಬಂದಿದ್ದಾರೆ. ಆಗ ಆತನ ಹಿಂದೆ ಇದ್ದ ಭದ್ರತಾ ಸಿಬ್ಬಂದಿ ವಿಕ್ಕಿಯನ್ನು ಹಿಂದಕ್ಕೆ ತಳ್ಳಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಸಲ್ಮಾನ್ ಹಾಗೂ ಅವರ ಭದ್ರತಾ ಸಿಬ್ಬಂದಿಯ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕ್ಕಿ ಇಷ್ಟೊಂದು ಸೌಜನ್ಯದಿಂದ ವರ್ತಿಸುತ್ತಿದ್ದರೂ ಸಲ್ಮಾನ್ ಯಾಕೆ ಮಾತನಾಡುತ್ತಿಲ್ಲ ಎಂದು ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ.

ಇದೆಲ್ಲ ಒಂದೆಡೆಯಾದರೆ, ಒಂದು ಕಾಲದಲ್ಲಿ ಕತ್ರಿನಾ ಕೈಫ್‌ ಸಲ್ಮಾನ್‌ ಖಾನ್‌ ಅವರ ಪ್ರೇಯಸಿಯಾಗಿದ್ದರು. ಕೆಲ ವರ್ಷ ಡೇಟಿಂಗ್‌ ನಡೆಸಿದ್ದಲ್ಲದೆ, ಇನ್ನೇನು ಮದುವೆ ಆಗಲಿದ್ದಾರೆ ಎಂದೇ ಪುಕಾರು ಹಬ್ಬಿತ್ತು. ಆದರೆ ಆ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಈ ಜೋಡಿ ಒಟ್ಟಿಗೆ ಪಾರ್ಟನರ್, ಮೈನೆ ಪ್ಯಾರ್ ಕ್ಯೂ ಕಿಯಾ, ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಮದುವೆ ಮಾತ್ರ ಆಗಲಿಲ್ಲ. ಕೊನೆಗೆ ನಟ ವಿಕ್ಕಿ ಕೌಶಾಲ್‌ ಜತೆಗೆ ಕತ್ರಿನಾ ಮದುವೆಯಾದರು.