ಕನ್ನಡ ಸುದ್ದಿ  /  Entertainment  /  Ileana Dcruz Banned From Tamil Film Industry

Ileana Dcruz: ತಮಿಳು ಚಿತ್ರರಂಗದಿಂದ ಬ್ಯಾನ್‌ ಆದ್ರಂತೆ ಇಲಿಯಾನಾ!?; ಅಡ್ವಾನ್ಸ್‌ ಹಣ ಪಡೆದು ನಿರ್ಮಾಪಕರ ಕೈಗೆ ಸಿಗದೇ ಓಡಾಟ..

ತಮಿಳು ಚಿತ್ರರಂಗದಿಂದ ಇಲಿಯಾನಾ ಅವರನ್ನು ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ತಮಿಳು ಚಿತ್ರರಂಗದಿಂದ ಬ್ಯಾನ್‌ ಆದ್ರಂತೆ ಇಲಿಯಾನಾ!?; ಅಡ್ವಾನ್ಸ್‌ ಹಣ ಪಡೆದು ನಿರ್ಮಾಪಕರ ಕೈಗೆ ಸಿಗದೇ ಓಡಾಟ..
ತಮಿಳು ಚಿತ್ರರಂಗದಿಂದ ಬ್ಯಾನ್‌ ಆದ್ರಂತೆ ಇಲಿಯಾನಾ!?; ಅಡ್ವಾನ್ಸ್‌ ಹಣ ಪಡೆದು ನಿರ್ಮಾಪಕರ ಕೈಗೆ ಸಿಗದೇ ಓಡಾಟ..

Ileana Dcruz: ಬಹುಭಾಷಾ ನಟಿ ಇಲಿಯಾನಾ ಡಿಕ್ರೂಜ್‌ ಆಗೊಂದು ಈಗೊಂದು ಎಂಬಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೊದಲಿನಂತೆ ಸಕ್ರಿಯ ಸಿನಿಮಾಗಳಿಂದ ದೂರವೇ ಉಳಿದಿರುವ ಇಲಿಯಾನಾ, ಸೋಷಿಯಲ್‌ ಮೀಡಿಯಾಗಳಲ್ಲಿ ಹೆಚ್ಚು ಆಕ್ಟೀವ್‌ ಆಗಿದ್ದಾರೆ. ನಿತ್ಯ ಒಂದಲ್ಲ ಒಂದು ಪೋಸ್ಟ್‌ ಹಾಕಿಕೊಳ್ಳುವ ಮೂಲಕ ಅಭಿಮಾನಿವಲಯದಲ್ಲಿ ಸುದ್ದಿಯಲ್ಲಿರುತ್ತಾರೆ. ಈಗ ಇದೇ ನಟಿಯ ಬಗ್ಗೆ ಹೊಸದಾದ ಆರೋಪವೊಂದು ಕೇಳಿಬಂದಿದೆ. ಇಲಿಯಾನಾ ಅವರನ್ನು ತಮಿಳು ಚಿತ್ರೋದ್ಯಮದಿಂದ ನಿಷೇಧಿಸಲಾಗಿದೆಯಂತೆ!

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರೀಯರಾಗಿರುವ ಇಲಿಯಾನಾ, ಬೀಚ್‌ ಬಳಿ ಬಿಕಿನಿ ಧರಿಸಿ ನಿಂತ ಭಂಗಿಯ ಫೋಟೋಗಳನ್ನು ಆಗಾಗ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ ಕತ್ರಿನಾ ಕೈಫ್‌ ಸಹೋದರನ ಜತೆಗೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿಯೂ ತುಂಬ ದಿನಗಳಿಂದ ಹರಿದಾಡುತ್ತಿದೆ. ಕತ್ರಿನಾ ಕೈಫ್‌ ಸಹೋದರನ ಜತೆಗಿರುವ ಸಾಕಷ್ಟು ಫೋಟೋಗಳನ್ನೂ ಇಲಿಯಾನಾ ಶೇರ್‌ ಮಾಡಿಕೊಂಡಿದ್ದಾರೆ. ಇದೆಲ್ಲದರ ಜತೆಗೆ ಅನಾರೋಗ್ಯಕ್ಕೂ ತುತ್ತಾಗಿ ಆಸ್ಪತ್ರೆ ಪಾಲಾದ ಫೋಟೋಗಳನ್ನೂ ಇಲಿಯಾನಾ ಹಂಚಿಕೊಂಡಿದ್ದರು.

ಹೀಗೆ ಪ್ರತಿಯೊಂದು ವಿಚಾರವನ್ನು ಅಪ್‌ಡೇಟ್‌ ಮಾಡುತ್ತಲೇ ಇರುವ ಇದೇ ಇಲಿಯಾನಾ ವಿರುದ್ಧವೀಗ ಹೊಸ ಆರೋಪವೊಂದು ಕೇಳಿಬಂದಿದೆ. ಅದೇನೆಂದರೆ, ತಮಿಳು ಚಿತ್ರರಂಗದಿಂದ ಇಲಿಯಾನಾ ಅವರನ್ನು ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ತಮಿಳುನಾಡಿನಲ್ಲಿನ ಹಲವು ವೆಬ್‌ಸೈಟ್‌ಗಳು ಈ ಸುದ್ದಿಯನ್ನು ಪ್ರಕಟ ಮಾಡಿವೆ. ಇದು ಅಧಿಕೃತವೋ ಅಥವಾ ಸುಳ್ಳು ಸುದ್ದಿಯೋ ಎಂಬ ಅಸಲಿಯತ್ತು ಮಾತ್ರ ಹೊರಬಿದ್ದಿಲ್ಲ. ಹಾಗಾದರೆ ಈ ಬ್ಯಾನ್‌ಗೆ ಕಾರಣವಾದರೂ ಏನು?

ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ನಟಿ ಇಲಿಯಾನಾ ಕೆಲವು ತಮಿಳು ನಿರ್ಮಾಪಕರಿಂದ ಚಿತ್ರಕ್ಕಾಗಿ ಮುಂಗಡ ಹಣವನ್ನು ಪಡೆದುಕೊಂಡಿದ್ದಾರೆ. ಹಾಗೆ ಹಣ ಪಡೆದ ಅವರು, ಒಪ್ಪಿದ ಸಿನಿಮಾ ಚಿತ್ರೀಕರಣಕ್ಕೆ ಆಗಮಿಸುತ್ತಿಲ್ಲವಂತೆ ಎಂದು ಕೆಲ ನಿರ್ಮಾಪಕರು ಆರೋಪ ಮಾಡಿದ್ದಾರೆ. ಇದರಿಂದ ಸಾಕಷ್ಟು ಸಿನಿಮಾಗಳಿಗೆ ಸಮಸ್ಯೆ ಎದುರಾಗಿದ್ದು, ನಿರ್ಮಾಪಕರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದೆಲ್ಲವೂ ಒಂದೆಡೆಯಾದರೆ, ಇತ್ತ ಅನಾರೋಗ್ಯದ ಸರಣಿ ಪೋಸ್ಟ್‌ಗಳನ್ನು ಇಲಿಯಾನಾ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಲೇ ಇದ್ದಾರೆ. ಅದೂ ಸಹ ಶೂಟಿಂಗ್‌ಗೆ ಹಾಜರಾಗಲು ಕಾರಣ ಇರಬಹುದೇ? ಸದ್ಯ ಈ ಆರೋಪ ಮಾಡಿರುವ ನಿರ್ಮಾಪಕ ಯಾರು? ಒಪ್ಪಿಕೊಂಡ ಸಿನಿಮಾ ಯಾವುದು? ಇದ್ಯಾವುದರ ಮಾಹಿತಿಯೂ ಹೊರಬಿದ್ದಿಲ್ಲ. ಈ ಬಗ್ಗೆ ಇನ್ನಷ್ಟೇ ನಿರ್ಮಾಪಕರು ಮತ್ತು ನಟಿಯಿಂದ ಸ್ಪಷ್ಟನೆ ಬರಬೇಕಿದೆ.

IPL_Entry_Point